
ನವದೆಹಲಿ: 2025ರ ಜುಲೈ ತಿಂಗಳ ಪ್ರಕಾರ ಫೋರ್ಬ್ಸ್‌ನ ವಿಶ್ವದ ಬಿಲಿಯನೇರ್‌ಗಳ ಪಟ್ಟಿ 3,028 ಕ್ಕೆ ಏರಿದೆ. ಮತ್ತು 2025 ರಲ್ಲಿ ಜಾಗತಿಕ ವ್ಯಾಪಾರ ಪ್ರಮುಖರು ಮತ್ತು ಉದ್ಯಮಿಗಳು ತಮ್ಮ ಸಂಪತ್ತಿನಲ್ಲಿ ಏರಿಕೆ ಕಂಡಿದ್ದಾರೆ.
$393.1 ಬಿಲಿಯನ್ ಅಂದಾಜು ನಿವ್ವಳ ಮೌಲ್ಯವನ್ನು ಹೊಂದಿರುವ ಎಲೋನ್ ಮಸ್ಕ್, 2025ರ ಜುಲೈ ತಿಂಗಳಲ್ಲೂ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರಿದಿದ್ದಾರೆ; ಆದಾಗ್ಯೂ, ಜೂನ್‌ನಲ್ಲಿ ಅವರ ನಿವ್ವಳ ಮೌಲ್ಯವು ಅಂದಾಜು $407 ಬಿಲಿಯನ್ ಇದ್ದಿದ್ದು $393.1 ಬಿಲಿಯನ್‌ಗೆ ಇಳಿದಿದೆ.
ಮೇ 2024 ರಿಂದಲೂ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ಸ್ಥಾನ ಅಬಾಧಿತವಾಗಿದೆ ಮತ್ತು ಕಳೆದ ವರ್ಷ $400 ಬಿಲಿಯನ್ ನಿವ್ವಳ ಸಂಪತ್ತನ್ನು ದಾಟಿದ ವಿಶ್ವದ ಮೊದಲ ಬಿಲಿಯನೇರ್ ಆಗಿದ್ದಾರೆ. ಮುಖ್ಯವಾಗಿ ಸ್ಪೇಸ್‌ಎಕ್ಸ್‌ನ $350 ಬಿಲಿಯನ್‌ನ ದಿಗ್ಭ್ರಮೆಗೊಳಿಸುವ ಮೌಲ್ಯಮಾಪನದಿಂದಾಗಿ ಅವರ ಸಂಪತ್ತು ಹೆಚ್ಚಳವಾಗಿದೆ.

ಜುಲೈನಲ್ಲಿ, ಒರಾಕಲ್‌ನ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷ ಲ್ಯಾರಿ ಎಲಿಸನ್, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಿಂದ ಎರಡು ಸ್ಥಾನ ಮೇಲಕ್ಕೇರಿ ಈಗ ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಅವರ ನಿವ್ವಳ ಮೌಲ್ಯ ಸುಮಾರು $275.9 ಬಿಲಿಯನ್ ತಲುಪಿದೆ. ಜೂನ್ ಆರಂಭದಿಂದ ಎಲಿಸನ್ ತಮ್ಮ ಸಂಪತ್ತಿನಲ್ಲಿ $56 ಬಿಲಿಯನ್‌ನ ಗಮನಾರ್ಹ ಏರಿಕೆ ಕಂಡರು. ಇದು ಹೆಚ್ಚಾಗಿ ಒರಾಕಲ್‌ನ ಷೇರು ಬೆಲೆಗಳಲ್ಲಿ 32% ಏರಿಕೆಯಿಂದ ಹೆಚ್ಚಳವಾಗಿದೆ.
ಈ ಗಮನಾರ್ಹ ಏರಿಕೆಯಿಂದ ಅವರು ಸಂಪತ್ತಿನಲ್ಲಿ ಮೆಟಾದ ಮಾರ್ಕ್ ಜುಕರ್‌ಬರ್ಗ್ ಮತ್ತು ಅಮೆಜಾನ್‌ನ ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿದರು. ಮೆಟಾದ ಮಾರ್ಕ್ ಜುಕರ್‌ಬರ್ಗ್ ಮತ್ತು ಅಮೆಜಾನ್‌ನ ಜೆಫ್ ಬೆಜೋಸ್ ಈಗ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಶ್ರೀಮಂತ ವ್ಯಕ್ತಿಗಳಾಗಿ ಸ್ಥಾನ ಪಡೆದಿದ್ದಾರೆ.
ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಯಾದ ನಿವಿಡಿಯಾ (NVIDIA ಸಿಇಒ ಮತ್ತು ಸಹ-ಸಂಸ್ಥಾಪಕ ಜೆನ್ಸನ್ ಹುವಾಂಗ್ ಅವರ ಸಂಪತ್ತಿನಲ್ಲಿಯೂ ಗಮನಾರ್ಹ ಏರಿಕೆಯಾಗಿದೆ. ಅವರ ಸಂಪತ್ತಿನಲ್ಲಿ ಅಂದಾಜು $20 ಬಿಲಿಯನ್ ಹೆಚ್ಚಳವಾಗಿದ್ದು ಅವರ ಒಟ್ಟು ನಿವ್ವಳ ಮೌಲ್ಯವು $137 ಬಿಲಿಯನ್‌ಗೆ ಏರಿದೆ.
ಈ ಏರಿಕೆಯು ಹುವಾಂಗ್ 10 ನೇ ಸ್ಥಾನಕ್ಕೆ ಏರಲು ಕಾರಣವಾಯಿತು, ಜರಾ ಬ್ರ್ಯಾಂಡ್‌ಗೆ ಹೆಸರುವಾಸಿಯಾದ ಇಂಡಿಟೆಕ್ಸ್‌ನ ಅಮಾನ್ಸಿಯೊ ಒರ್ಟೆಗಾ ಅವರನ್ನು 12 ನೇ ಸ್ಥಾನಕ್ಕೆ ತಳ್ಳಿತು.
ಫೋರ್ಬ್ಸ್ ಬಿಲಿಯನೇರ್ ಪಟ್ಟಿ : ವಿಶ್ವದ ಟಾಪ್ 10 ಶ್ರೀಮಂತ ವ್ಯಕ್ತಿಗಳು
ವಿಶ್ವದ 10 ಶ್ರೀಮಂತ ಜನರಲ್ಲಿ 9 ಜನರು ಅಮೆರಿಕನ್ನರು, ಬರ್ನಾರ್ಡ್ ಅರ್ನಾಲ್ಟ್ ಟಾಪ್ 10ರಲ್ಲಿ ಸ್ಥಾನ ಪಡೆದ ಫ್ರಾನ್ಸ್ ವ್ಯಕ್ತಿಯಾಗಿದ್ದಾರೆ.
ಫೋರ್ಬ್ಸ್ ಪ್ರಕಾರ, ಜುಲೈ 8ರ ಹೊತ್ತಿಗೆ ಭೂಮಿಯ ಮೇಲಿನ 10 ಶ್ರೀಮಂತ ವ್ಯಕ್ತಿಗಳು.
1 ಎಲೋನ್ ಮಸ್ಕ್ – $393.1 ಬಿಲಿಯನ್ ನಿವ್ವಳ ಸಂಪತ್ತು (ಅಮೆರಿಕ)
2 ಲ್ಯಾರಿ ಎಲಿಸನ್ -$275.9 ಬಿಲಿಯನ್ ನಿವ್ವಳ ಸಂಪತ್ತು (ಅಮೆರಿಕ)
3 ಮಾರ್ಕ್ ಜುಕರ್‌ಬರ್ಗ್-$247.9 ಬಿಲಿಯನ್ ನಿವ್ವಳ ಸಂಪತ್ತು (ಅಮೆರಿಕ)
4 ಜೆಫ್ ಬೆಜೋಸ್ $236.8 ಬಿಲಿಯನ್ (ಅಮೆರಿಕ)
5 ಬರ್ನಾರ್ಡ್ ಅರ್ನಾಲ್ಟ್ ಮತ್ತು ಕುಟುಂಬ -$147.7 ಬಿಲಿಯನ್ (ಫ್ರಾನ್ಸ್)
6 ಲ್ಯಾರಿ ಪುಟ್- $146.2 ಬಿಲಿಯನ್ (ಅಮೆರಿಕ)
7 ವಾರೆನ್ ಬಫೆಟ್-$143.1 ಬಿಲಿಯನ್ (ಅಮೆರಿಕ)
8 ಸ್ಟೀವ್ ಬಾಲ್ಮರ್ -$141.3 ಬಿಲಿಯನ್ (ಅಮೆರಿಕ)
9 ಸೆರ್ಗೆ ಬ್ರಿನ್ -$139.7 ಬಿಲಿಯನ್ (ಅಮೆರಿಕ)
10 ಜೆನ್ಸನ್ ಹುವಾಂಗ್ -$137.9 ಬಿಲಿಯನ್ (ಅಮೆರಿಕ)
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?
ಜುಲೈ 2025 ರ ಹೊತ್ತಿಗೆ ಸುಮಾರು $116 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ಮುಖೇಶ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮುಂದುವರೆದಿದ್ದಾರೆ. ಫೋರ್ಬ್ಸ್ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರು ಜಾಗತಿಕವಾಗಿ 15 ನೇ ಸ್ಥಾನದಲ್ಲಿದ್ದಾರೆ ಮತ್ತು $100 ಬಿಲಿಯನ್ ವಿಶೇಷ ಕ್ಲಬ್‌ನ ಏಕೈಕ ಏಷ್ಯನ್ ಸದಸ್ಯರಾಗಿದ್ದಾರೆ.
ಗಮನಾರ್ಹವಾಗಿ, ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಮಹಿಳಾ ಬಿಲಿಯನೇರ್ ನೇತೃತ್ವದ ಸಾವಿತ್ರಿ ಜಿಂದಾಲ್ ಮತ್ತು ಕುಟುಂಬವು $37.3 ಬಿಲಿಯನ್ ನಿವ್ವಳ ಮೌಲ್ಯದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ