ಅಚ್ಚರಿಯ ಘಟನೆ..| ಸಮೀಪ ಬಂದ ನಾಗರಹಾವನ್ನು ಹಿಡಿದು ಕಚ್ಚಿ ಕೊಂದ ಒಂದು ವರ್ಷದ ಮಗು…!

ಪಾಟ್ನಾ: ಬಿಹಾರದ ಹಳ್ಳಿಯೊಂದರಲ್ಲಿ ಒಂದು ವರ್ಷದ ಮಗುವೊಂದು ಹಾವನ್ನು ಕಚ್ಚಿದ ನಂತರ ಅದು ಸಾವಿಗೀಡಾದ ವಿಚಿತ್ರ ಘಟನೆ ನಡೆದಿದೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಮೊಹಚ್ಚಿ ಬಂಕಟ್ವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಂತರ ಪ್ರಜ್ಞೆ ತಪ್ಪಿದ್ದ ಗೋವಿಂದಕುಮಾರ ಎಂದು ಗುರುತಿಸಲಾದ ಒಂದು ವರ್ಷದ ಮಗುವನ್ನು ಚಿಕಿತ್ಸೆಗಾಗಿ ಆತನ ಕುಟುಂಬ ಸದಸ್ಯರು ಬೆಟ್ಟಿಯಾ ಪಟ್ಟಣದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತಂದಿದ್ದಾರೆ.
ಆಸ್ಪತ್ರೆಯ ಸೂಪರಿಂಟೆಂಡೆಂಟ್ ದುವಾಕಾಂತ ಮಿಶ್ರಾ ಅವರ ಪ್ರಕಾರ, ಜೀವಂತ ನಾಗರಹಾವನ್ನು ಬಾಯಿಂದ ಅಗಿದ ನಂತರ ಬಾಲಕ ಮೂರ್ಛೆ ಹೋಗಿದ್ದು, ಆತನನ್ನು ಆತನನ್ನು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶನಿವಾರ ಬೆಟ್ಟಿಯಾ ಪಟ್ಟಣದ ಆಸ್ಪತ್ರೆಗೆ ಕರೆತಂದಿದ್ದಾರೆ.

ಕುಟುಂಬದ ಸದಸ್ಯರು ತಮ್ಮ ಮನೆಯಲ್ಲಿ ಒಂದು ವರ್ಷದ ಮುಗು ಹಾವನ್ನು ಹಿಡಿದುಕೊಂಡಿದ್ದನ್ನು ನೋಡಿರುವುದಾಗಿ ಹೇಳಿದ್ದಾರೆ. ಮಗುವಿನ ಅಜ್ಜಿ ಆತ ಹಾವು ಹಿಡುಕೊಂಡಿದ್ದನ್ನು ನೋಡಿದರ. ಅವರು ತಕ್ಷಣವೇ ಬರುವಷ್ಟರಲ್ಲಿ ಮಗು ಹಾವನ್ನು ಕಚ್ಚಿತು. ನಂತರ ನಾಗರಹಾವು ನೆಲದ ಮೇಲೆ ಸತ್ತು ಬಿದ್ದಿತ್ತು ಮತ್ತು ಕೆಲ ಹೊತ್ತಿನಲ್ಲಿ ಮಗು ಆರೋಗ್ಯ ಕೂಡ ಹದಗೆಟ್ಟಿತು ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಮಗು ವೈದ್ಯರ ಆರೈಕೆಯಲ್ಲಿದೆ ಮತ್ತು ಬಾಲಕನ ದೇಹದಲ್ಲಿ ಯಾವುದೇ ವಿಷ ಇರುವ ಲಕ್ಷಣಗಳು ಕಂಡುಬಂದರೆ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ವರದಿಯ ಪ್ರಕಾರ, ಎರಡು ಅಡಿ ಉದ್ದದ ನಾಗರಹಾವು ಮನೆಯೊಳಗೆ ಪ್ರವೇಶಿಸಿತು. ಅದು ಮಗುವಿನ ಹತ್ತಿರ ಬಂದಾಗ ಮಗು ಆಟಿಕೆ ಎಂದು ತಪ್ಪಾಗಿ ಭಾವಿಸಿ ಅದನ್ನು ಕಚ್ಚಿರಬಹುದು ಎಂದು ಅಜ್ಜಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement