ವೀಡಿಯೊ…| ತಿರುಪತಿ : ಚಲಿಸುತ್ತಿರುವ ಬೈಕ್ ಮೇಲೆ ಹಾರಿದ ಚಿರತೆ ; ಕೂದಲೆಳೆ ಅಂತರದಿಂದ ಪಾರಾದ ಬೈಕ್‌ ಹಿಂಬದಿ ಸವಾರ…

ತಿರುಪತಿ: ಚಲಿಸುತ್ತಿದ್ದ ವಾಹನದ ಮೇಲೆ ಚಿರತೆಯೊಂದು ನುಗ್ಗಿದ್ದರಿಂದ ಬೈಕ್ ಸವಾರ ಮತ್ತು ಹಿಂಬದಿ ಸವಾರ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ತಡರಾತ್ರಿ ನಡೆದ ಆಂಧ್ರಪ್ರದೇಶದ ತಿರುಪತಿ ಬಳಿ ನಡೆದಿದೆ. ಈ ಘಟನೆ ತಡರಾತ್ರಿ ನಡೆದಿದ್ದು, ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ.
ಈ ಘಟನೆ ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ಅಲಿಪಿರಿಯ ಜೂ ಪಾರ್ಕ್ ರಸ್ತೆಯಲ್ಲಿ ಸಂಭವಿಸಿದ್ದು, ಇದರ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಚಿರತೆ ಎಸ್‌ವಿ ಮೃಗಾಲಯ ಪಾರ್ಕ್ ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನದತ್ತ ನುಗ್ಗಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ವೀಡಿಯೊ ಕ್ಲಿಪ್‌ನಲ್ಲಿ ಚಿರತೆ ಇದ್ದಕ್ಕಿದ್ದಂತೆ ರಸ್ತೆಬದಿಯಿಂದ ಹೊರಬಂದು ಬೈಕ್‌ನತ್ತ ಹಾರುತ್ತಿರುವುದನ್ನು ತೋರಿಸಲಾಗಿದೆ.

ಚಿರತೆಯಿಂದ ಇಂಚುಗಳಷ್ಟು ಅಂತರದಿಂದ ತಪ್ಪಿಸಿಕೊಂಡು ಬೈಕ್‌ ಹಿಂದಿನ ಸವಾರ ಪಾರಾಗಿದ್ದಾರೆ. ಚಿರತೆಗೂ ಯಾವುದೇ ಅಪಾಯವಾದಂತೆ ಕಂಡುಬಂದಿಲ್ಲ. ಕತ್ತಲೆಯಲ್ಲಿ ಅದು ಬೈಕಿಗೆ ಗುದ್ದಿದ ನಂತರ ವಾಪಸ್‌ ಹೋಗಿರುವುದು ಕಂಡುಬಂದಿದೆ. ಕೊನೆಯ ಕ್ಷಣದವರೆಗೂ ಈ ಅಪಾಯದ ಅರಿವಿಲ್ಲದ ಬೈಕ್ ಸವಾರರು, ನಂತರ ವಾಹನ ನಿಲ್ಲಿಸದೆ ಅಲ್ಲಿಂದ ವೇಗವಾಗಿ ಪಾರಾಗಿದ್ದಾರೆ.
ತಿರುಪತಿ ಸುತ್ತಮುತ್ತ, ವಿಶೇಷವಾಗಿ ತಿರುಮಲಕ್ಕೆ ಹೋಗುವ ಮಾರ್ಗಗಳಲ್ಲಿ ಮತ್ತು ಅಲಿಪಿರಿ ಕಾಲ್ನಡಿಗೆ ಮಾರ್ಗದ ಬಳಿ ಚಿರತೆಗಳ ಚಟುವಟಿಕೆಯ ಬಗ್ಗೆ ಈ ಘಟನೆ ಮತ್ತೊಮ್ಮೆ ಆತಂಕ ವ್ಯಕ್ತಪಡಿಸಿದೆ.

ಮಾರ್ಚ್ ಆರಂಭದಲ್ಲಿ, ತಿರುಪತಿಯ ಅಲಿಪಿರಿ ಪಾದಚಾರಿ ಮಾರ್ಗದಲ್ಲಿ ಚಿರತೆಯೊಂದು ಕಾಣಿಸಿಕೊಂಡಿತ್ತು. ಬೆಳಗಿನ ಜಾವ 1 ಗಂಟೆ ಸುಮಾರಿಗೆ ಗಾಳಿಗೋಪುರದ ಅಂಗಡಿಗಳ ಬಳಿ ಚಿರತೆ ಓಡಾಡುತ್ತಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿತ್ತು. ಅದೃಷ್ಟವಶಾತ್, ಆ ಸಮಯದಲ್ಲಿ ಯಾವುದೇ ಭಕ್ತರು ಇರಲಿಲ್ಲ.
ಈ ಘಟನೆಯ ನಂತರ ರಾತ್ರಿ ಸಮಯದಲ್ಲಿ, ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಯಾತ್ರಿಕರಿಗೆ ಗುಂಪುಗಳಲ್ಲಿ ಮಾತ್ರ ಕಾಲ್ನಡಿಗೆಯಲ್ಲಿ ಹೋಗಲು ಅವಕಾಶ ನೀಡುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿತ್ತು.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement