8 ಜನರ ಜೊತೆ ಮದುವೆ…ಲಕ್ಷ ಲಕ್ಷ ಹಣ ಸುಲಿಗೆ…9ನೇ ಮದುವೆ ಪ್ರಯತ್ನದಲ್ಲಿದ್ದಾಗ ಪೊಲೀಸರ ಬಲೆಗೆ ಬಿದ್ದ ಮಹಿಳೆ…!

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಎಂಟು ಜನರನ್ನು ಮದುವೆಯಾಗಿ ಒಂಬತ್ತನೇ ವ್ಯಕ್ತಿಯನ್ನು ಮದುವೆಯಾಗುವ ಸಿದ್ಧತೆಯಲ್ಲಿದ್ದಾಗ ಮದುವೆಯಾದವರಿಂದ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ ಆರೋಪದ ಮೇಲೆ 35 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಸಮೀರಾ ಫಾತಿಮಾ ಎಂದು ಗುರುತಿಸಲ್ಪಟ್ಟವಳನ್ನು ಜುಲೈ 29 ರಂದು ಬಂಧಿಸಲಾಯಿತು. ಪೊಲೀಸರ ಪ್ರಕಾರ, ಫಾತಿಮಾ ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದು, 12 ವರ್ಷದ ಮಗುವನ್ನು ಹೊಂದಿದ್ದಾಳೆ, ಆದರೆ ಅವಳು ಮದುವೆ ನೆಪದಲ್ಲಿ ಬೇರೆ ಬೇರೆ ವ್ಯಕ್ತಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ನ ಸದಸ್ಯೆಯಾಗಿದ್ದಳು. ಅವಳು ತಿಂಗಳುಗಟ್ಟಲೆ ತಲೆಮರೆಸಿಕೊಂಡಿದ್ದಳು ಮತ್ತು ಒಂಬತ್ತನೇ ವ್ಯಕ್ತಿಯನ್ನು ಹುಡುಕುತ್ತಿದ್ದಳು, ಆದರೆ ಪೊಲೀಸರು ಅವಳನ್ನು ಬಂಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಫಾತಿಮಾ ವೈವಾಹಿಕ ತಾಣಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನಿರ್ದಿಷ್ಟ ಸಮುದಾಯದ ಪುರುಷರನ್ನು ಗುರಿಯಾಗಿಸಿಕೊಳ್ಳುತ್ತಿದ್ದಳು. ಕಟ್ಟುಕಥೆಗಳ ಮೂಲಕ ಅವರ ಭಾವನಾತ್ಮಕವಾಗಿ ಅವರನ್ನು ಮರುಳು ಮಾಡಲು ಈ ಮಹಿಳೆ ತನ್ನನ್ನು ವಿಧವೆ ಶಾಲಾ ಶಿಕ್ಷಕಿ ಎಂದು ಬಂಬಿಸಿಕೊಳ್ಳುತ್ತಿದ್ದಳು. ಮತ್ತು ರೆಜಿಸ್ಟರ್‌ ಮದುವೆಗೆ ಒತ್ತಾಯಿಸುತ್ತಿದ್ದಳು.
ಮದುವೆಯ ನಂತರ, 35 ವರ್ಷದ ಮಹಿಳೆ ತಾನು ಮದುವೆಯಾದವನಿಗೆ ಕಿರುಕುಳ ನೀಡಲು ಪ್ರಾರಂಭಿಸುತ್ತಿದ್ದಳು, ಅವರೊಂದಿಗೆ ತನ್ನ ಸಂಭಾಷಣೆಗಳನ್ನು ರೆಕಾರ್ಡ್ ಮಾಡುತ್ತಿದ್ದಳು. ನಂತರ, “ತಪ್ಪು ತಿಳುವಳಿಕೆ” ಮೂಡಿಸುವ ಪ್ರಯತ್ನದಲ್ಲಿ ಅವಳು ರೆಕಾರ್ಡಿಂಗ್‌ಗಳನ್ನು ಎಡಿಟ್‌ ಮಾಡುತ್ತಿದ್ದಳು. ವ್ಯಭಿಚಾರ ಮತ್ತು ಕಿರುಕುಳದ ಆರೋಪದ ಮೇಲೆ ಅವಳು ಇಂತಹ ಪುರುಷರ ವಿರುದ್ಧ ಪ್ರಕರಣಗಳನ್ನು ಸಹ ದಾಖಲಿಸುತ್ತಿದ್ದಳು. ಇದಾದ ನಂತರ, ಅವರಿಂದ ಹಣವನ್ನು ಸುಲಿಗೆ ಮಾಡಲು ಪ್ರಾರಂಭಿಸುತ್ತಿದ್ದಳು.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ವರದಿ ಪ್ರಕಾರ, ಗುಲಾಮ್ ಪಠಾಣ್ ಎಂಬ ವ್ಯಕ್ತಿ 2024 ರಲ್ಲಿ ಅವಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾನೆ. 2022 ರಲ್ಲಿ ಫಾತಿಮಾಳನ್ನು ಮದುವೆಯಾದ ಪಠಾಣ್, ಫಾತಿಮಾ ತನ್ನ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಿ ತನ್ನಿಂದ 10 ಲಕ್ಷ ರೂ.ಗಳ ಚೆಕ್ ಪಡೆದಿದ್ದಾಳೆ ಎಂದು ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾನೆ. ಅವನ ದೂರಿನ ಆಧಾರದ ಮೇಲೆ, ಪೊಲೀಸರು ಫಾತಿಮಾಳ ಮೇಲೆ ಕಣ್ಣಿಟ್ಟು ನಾಗ್ಪುರದ ಸಿವಿಲ್ ಲೈನ್ಸ್‌ನಲ್ಲಿರುವ ಡಾಲಿ ಕಿ ಟ್ಯಾಪ್ರಿಯಲ್ಲಿ ಅವಳನ್ನು ಸೆರೆ ಹಿಡಿದಿದ್ದಾರೆ.
ಬಂಧನದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಫಾತಿಮಾ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದಳು, ಆದರೆ ಅಂತಿಮವಾಗಿ ಪೊಲೀಸರಿಂದ ಸಿಕ್ಕಿಬಿದ್ದಿದ್ದಳು. ಮಹಾರಾಷ್ಟ್ರ ಪೊಲೀಸರು ಈಗ ಆಕೆಯ ಸಹಚರರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement