ಮನಕಲಕುವ ವೀಡಿಯೊ : ವಾಹನ ಡಿಕ್ಕಿಯಾಗಿ ಒದ್ದಾಡುತ್ತಿದ್ದ ಮರಿಯನ್ನು ಕಾಪಾಡಲು ಪ್ರಯತ್ನಿಸಿ ಗೋಳಾಡಿದ ತಾಯಿ ಕರಡಿ

ಶಹದೋಲ್ : ತಾಯಿಯ ಪ್ರಪಂಚ ಮಕ್ಕಳು ಮತ್ತು ಮನುಷ್ಯ ಅಥವಾ ಪ್ರಾಣಿ ಇರಲಿ ಯಾವುದೇ ತಾಯಿ ಮಕ್ಕಳನ್ನು ಕಳೆದುಕೊಳ್ಳುವುದನ್ನು ಸಹಿಸಿಕೊಳ್ಳಲುವುದಿಲ್ಲ…
ಇಂಥದ್ದೇ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಿಂದ ತಾಯಿ ಕರಡಿಯೊಂದು ವಾಹನ ಬಡಿದು ತನ್ನ ಗಾಯಗೊಂಡ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಹೃದಯವಿದ್ರಾವಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ವೀಡಿಯೊದಲ್ಲಿ, ತಾಯಿ ಕರಡಿ ತೀವ್ರ ಆತಂಕದಿಂದಲೇ ತನ್ನ ಮರಿಯನ್ನು ರಸ್ತೆಯ ಬದಿಗೆ ಒಯ್ಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಇದೇವೇಳೆ ತಾಯಿ ಕರಡಿಯು ತನ್ನ ಇನ್ನೊಂದು ಮರಿಯನ್ನು ಅದರ ಬೆನ್ನಿನ ಮೇಲೆ ಹೊತ್ತುಕೊಂಡಿದೆ.

ವಾಹನ ಡಿಕ್ಕಿ ಹೊಡೆದಿದ್ದರಿಂದ ಗಾಯಗೊಂಡಿದ್ದ ಕರಡಿ ಮರಿಯು ಒದ್ದಾಡುತ್ತಲೇ ಇತ್ತು. ತನ್ನ ಮರಿಗೆ ನೋವಾಗುತ್ತಿರುವುದನ್ನು ನೋಡಿದ ತಾಯಿ ಕರಡಿ ಅದಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಲೇ ಇತ್ತು. ಗಾಯಗೊಂಡ ಮರಿ ಚಲಿಸಲು ಸಾಧ್ಯವಾಗದೆ ರಸ್ತೆಯಲ್ಲಿ ಅರ್ಧ ಪ್ರಜ್ಞಾಹೀನವಾಗಿ ಬಿದ್ದು, ಒದ್ದಾಡುತ್ತಿತ್ತು. ತಾಯಿ ಕರಡಿ ಸುಮಾರು ಒಂದು ಗಂಟೆಗಳ ಕಾಲ ಪಕ್ಕದಲ್ಲಿಯೇ ಇತ್ತು.
ಮತ್ತೊಂದು ಮರಿ ತನ್ನ ಬೆನ್ನಿಗೆ ಅಂಟಿಕೊಂಡಿದ್ದರಿಂದ, ಕರಡಿ ಮರಿಯನ್ನು ಮತ್ತಷ್ಟು ಗಾಯಗಳಿಂದ ರಕ್ಷಿಸಲು ರಸ್ತೆಯ ಬದಿಗೆ ಎಳೆದುಕೊಂಡು ಹೋಯಿತು. ಹಾಗೂ ಅದನ್ನು ಬಿಟ್ಟುಹೋಗಲು ನಿರಾಕರಿಸಿತು. ಕೊನೆಗೆ ಮತ್ತೊಂದು ವಾಹನದಲ್ಲಿ ಬರುತ್ತಿದ್ದವರು ಆ ದೃಶ್ಯ ನೋಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಅವರು ತಕ್ಷಣವೇ ಬಂದು ತಾಯಿ ಕರಡಿಯನ್ನು ಅಲ್ಲಿಂದ ದೂರ ಹೋಗುವಂತೆ ಮಾಡಿ ಮರಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಅದು ಬದುಕಿ ಉಳಿಯಲಿಲ್ಲ. ತೀವ್ರ ರಕ್ತಸ್ರಾವದಿಂದ ಆ ಮರಿ ಮೃತಪಟ್ಟಿತು ಎಂದು ಹೇಳಲಾಗಿದೆ. ಈ ಘಟನೆಯು ಅರಣ್ಯ ಪ್ರದೇಶಗಳಲ್ಲಿ ವೇಗವಾಗಿ ಚಲಿಸುವ ವಾಹನಗಳು ಮತ್ತು ಅವು ವನ್ಯಜೀವಿಗಳಿಗೆ ಅವುಗಳು ಒಡ್ಡುವ ಅಪಾಯಗಳ ಬಗ್ಗೆ ಆತಂಕಕ್ಕೆ ಕಾರಣವಾಗಿದೆ.
ಈ ವೀಡಿಯೊ ಭಾರಿ ಪ್ರತಿಕ್ರಿಯೆಗೆ ಕಾರಣವಾಗಿದ್ದು, ಅನೇಕರು ಪ್ರಾಣಿಗಳ ಬಗೆಗಿನ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ ಮತ್ತು ಸುರಕ್ಷಿತ ಚಾಲನೆಗೆ ಕರೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement