
ಪಾಕಿಸ್ತಾನದಲ್ಲಿ ಭಿಕ್ಷಾಟನೆ ಒಂದು ಪ್ರಮುಖ ವೃತ್ತಿಯಾಗಿ ಪರಿಣಮಿಸಿದೆ. ಪಾಕಿಸ್ತಾನದ ಒಟ್ಟು ಜನಸಂಖ್ಯೆ 23 ಕೋಟಿ, ಮತ್ತು ಇದರಲ್ಲಿ ಸುಮಾರು 4 ಕೋಟಿ ಜನರು ಭಿಕ್ಷಾಟನೆ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಅಂದರೆ ಪಾಕಿಸ್ತಾನದಲ್ಲಿ ಪ್ರತಿ ಆರನೇ ವ್ಯಕ್ತಿ ಭಿಕ್ಷಾಟನೆ ಮಾಡುತ್ತಾನೆ. ಪಾಕಿಸ್ತಾನಿಗಳು ತಮ್ಮ ದೇಶದಲ್ಲಿ ಭಿಕ್ಷಾಟನೆ ಮಾಡುವುದಲ್ಲದೆ, ವಿದೇಶಗಳಲ್ಲಿಯೂ ಈ ‘ವೃತ್ತಿ’ಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಭಿಕ್ಷುಕರಿಂದಾಗಿ ಪಾಕಿಸ್ತಾನ ಸರ್ಕಾರವು ತನ್ನ ಜಾಗತಿಕ ಇಮೇಜ್ ಹಾಳಾಗುವುದನ್ನು ತಪ್ಪಿಸಲು ಕಷ್ಟಪಡುತ್ತಿದೆ.
ಡಾನ್ ವರದಿಯ ಪ್ರಕಾರ, ಪಾಕಿಸ್ತಾನದ ಜನಸಂಖ್ಯೆ 23 ಕೋಟಿ, ಅದರಲ್ಲಿ 3.8 ಕೋಟಿ ಜನರಿಗೆ ಭಿಕ್ಷಾಟನೆಯೇ ವೃತ್ತಿ. ಪಾಕಿಸ್ತಾನದ ಭಿಕ್ಷುಕನ ರಾಷ್ಟ್ರೀಯ ಸರಾಸರಿ ಆದಾಯ ದಿನಕ್ಕೆ 850 ಪಾಕಿಸ್ತಾನಿ ರೂಪಾಯಿಗಳು. ಈ ಭಿಕ್ಷುಕರು ಪ್ರತಿದಿನ 32 ಶತಕೋಟಿ ರೂಪಾಯಿಗಳನ್ನು ಭಿಕ್ಷೆಯಾಗಿ ಪಡೆಯುತ್ತಾರೆ ಎಂದು ವರದಿಯಾಗಿದೆ, ಇದು ವಾರ್ಷಿಕವಾಗಿ 117 ಟ್ರಿಲಿಯನ್ ರೂಪಾಯಿಗಳು. ಅಮೆರಿಕ ಡಾಲರ್‌ಗಳಲ್ಲಿ ಪಾಕಿಸ್ತಾನಿ ಭಿಕ್ಷುಕರ ವಾರ್ಷಿಕ ಆದಾಯ 42 ಶತಕೋಟಿ ಡಾಲರ್‌ಗಳು….! ಇದನ್ನು ಭಾರತದ ರೂಪಾಯಿಗಲಲ್ಲಿ ಹೇಳುವುದಾದರೆ 36,78,28,44,00,000 ರೂ.ಗಳು ಅಂದರೆ ಸುಮಾರು 3.68 ಲಕ್ಷ ಕೋಟಿ ರೂ.ಗಳಾಗಿವೆ.

ಪಾಕಿಸ್ತಾನಿ ಭಿಕ್ಷುಕರು ಎಷ್ಟು ಗಳಿಸುತ್ತಾರೆ?
ಡಾನ್ ವರದಿ ಹೇಳುವಂತೆ 3.8 ಕೋಟಿ ಜನರು ಏನನ್ನೂ ಮಾಡದೆ ವಾರ್ಷಿಕವಾಗಿ $42 ಶತಕೋಟಿ ಗಳಿಸುತ್ತಿದ್ದಾರೆ. ಇದು ದೇಶದ ಉಳಿದ ಜನಸಂಖ್ಯೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ ಮತ್ತು ಹಣದುಬ್ಬರ ಏರಿಕೆಗೆ ಕಾರಣವಾಗಿದೆ. ಪಾಕಿಸ್ತಾನದ ಬಿಸಿನೆಸ್ ಅಂಡ್ ಸೊಸೈಟಿ ಸೆಂಟರ್ ವರದಿಯ ಪ್ರಕಾರ, ದೇಶದಲ್ಲಿ ಭಿಕ್ಷಾಟನೆ ಪ್ರವೃತ್ತಿ ಹೆಚ್ಚುತ್ತಿದೆ ಏಕೆಂದರೆ ಈ ವೃತ್ತಿಯು ಇತರ ಕೌಶಲ್ಯರಹಿತ ಕಾರ್ಮಿಕರಿಗಿಂತ ಹೆಚ್ಚು ಗಳಿಸುತ್ತಿದೆ. ಹೀಗಾಗಿ ಇದರಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ.
ಏಷ್ಯನ್ ಮಾನವ ಹಕ್ಕುಗಳ ಆಯೋಗ (AHRC) ಪ್ರಕಾರ, ಪಾಕಿಸ್ತಾನದ ಜನಸಂಖ್ಯೆಯ ಶೇಕಡಾ 2.5 ರಿಂದ 11 ರಷ್ಟು ಜನರು ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ. ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಅಂಕಿಅಂಶಗಳ ಪ್ರಕಾರ, ದೇಶದ ಪ್ರಮುಖ ನಗರ ಕೇಂದ್ರಗಳ ಬೀದಿಗಳಲ್ಲಿ ಸುಮಾರು 12 ಲಕ್ಷ ಮಕ್ಕಳು ಅಲೆದಾಡುತ್ತಿದ್ದಾರೆ.
ವಿದೇಶಗಳಿಂದ ಬಂದ ದೂರುಗಳು….
ಪಾಕಿಸ್ತಾನ ಸರ್ಕಾರವು ಬೀದಿಗಳಲ್ಲಿ ಭಿಕ್ಷೆ ಬೇಡಲು ವಿದೇಶಕ್ಕೆ ಪ್ರಯಾಣಿಸುವ ಜನರ ಅಂಕಿ-ಅಂಶಗಳನ್ನು ಸಂಗ್ರಹಿಸಿದೆ. ವಿದೇಶಗಳಲ್ಲಿ ಹಿಡಿಯಲ್ಪಡುವ ಭಿಕ್ಷುಕರಲ್ಲಿ ಶೇ. 90 ರಷ್ಟು ಪಾಕಿಸ್ತಾನಿ ಮೂಲದವರಾಗಿರುವುದರಿಂದ ಈ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತಿದೆ. ಇರಾಕಿ ಮತ್ತು ಸೌದಿ ರಾಯಭಾರಿಗಳು ಈ ಬಗ್ಗೆ ಪಾಕಿಸ್ತಾನ ಸರ್ಕಾರಕ್ಕೆ ಈಗಾಗಲೇ ದೂರು ಸಲ್ಲಿಸಿದ್ದಾರೆ.
ಧಾರ್ಮಿಕ ತೀರ್ಥಯಾತ್ರೆ ನೆಪದಲ್ಲಿ ಸೌದಿ ಅರೇಬಿಯಾ, ಇರಾಕ್ ಮತ್ತು ಇರಾನ್‌ನಂತಹ ದೇಶಗಳಿಗೆ ಹೋಗುವ ಸಾವಿರಾರು ಭಿಕ್ಷುಕರ ಪಾಸ್‌ಪೋರ್ಟ್‌ಗಳನ್ನು ಪಾಕಿಸ್ತಾನ ಸರ್ಕಾರ ಅಮಾನತುಗೊಳಿಸಿದೆ. ಕಳೆದ ಎರಡೂವರೆ ವರ್ಷಗಳಲ್ಲಿ, ಸೌದಿ ಅರೇಬಿಯಾ ಮತ್ತು ಇತರ ಗಲ್ಫ್ ದೇಶಗಳಿಂದ 44,000 ಭಿಕ್ಷುಕರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ