ವೀಡಿಯೊ..| ರೈಲಿನ ಹವಾನಿಯಂತ್ರಣದ ಬಗ್ಗೆ ದೂರು ನೀಡಿದ್ರೆ ತಪಾಸಣೆ ವೇಳೆ ಎಸಿ ಡಕ್ಟ್‌ನಲ್ಲಿ ಮದ್ಯದ ಬಾಟಲಿಗಳು ಪತ್ತೆ…!

ನವದೆಹಲಿ: ಲಕ್ನೋ-ಬರೌನಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಹವಾನಿಯಂತ್ರಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ದಿನನಿತ್ಯದ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆಗೆ ಹೋದಾಗ ಎಸಿ-2 ಟೈರ್ ಕೋಚ್‌ನ ಎಸಿ ಡಕ್ಟ್‌ನಲ್ಲಿ ಅಡಗಿಸಿಟ್ಟಿದ್ದ ನೂರಾರು ವಿಸ್ಕಿ ಬಾಟಲಿಗಳು ಪತ್ತೆಯಾಗಿವೆ.
ಪ್ರಯಾಣಿಕರು ಕೂಲಿಂಗ್ ವ್ಯವಸ್ಥೆಯಲ್ಲಿನ ತೊಂದರೆ ಇರುವ ವರದಿ ಮಾಡಿದಾಗ ಇದು ಬೆಳಕಿಗೆ ಬಂದಿದೆ. ದೂರಿನ ನಂತರ ತಾಂತ್ರಿಕ ತಪಾಸಣೆ ನಡೆಸಿದಾಗ 32 ಮತ್ತು 34 ಬರ್ತ್‌ಗಳ ಮೇಲಿನ ಡಕ್ಟ್ ಅನ್ನು ಪರಿಶೀಲಿಸುವಾಗ ವಿಸ್ಕಿ ಬಾಟಲಿಗಳು ಪತ್ರಿಕೆಯಲ್ಲಿ ಸುತ್ತಿ ಇಡಲಾಗಿತ್ತು, ಇದು ಗಾಳಿಯ ಹರಿವಿಗೆ ಅಡ್ಡಿಯಾಗುತ್ತಿತ್ತು ಎಂದು ಕಂಡುಬಂದಿದೆ. ರೈಲ್ವೆ ಅಧಿಕಾರಿಗಳು ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ ಮತ್ತು ನಂತರ ಕೋಚ್‌ನಲ್ಲಿ ಸಂಪೂರ್ಣ ಶೋಧ ನಡೆಸಿದರು.

X ನಲ್ಲಿ, ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ರೈಲ್ವೆಸೇವಾ ಬಳಕೆದಾರರ ವೀಡಿಯೊಕ್ಕೆ ಉತ್ತರಿಸಿದೆ. ಹಾಗೂ “ಅಗತ್ಯ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ” ಎಂದು ಬರೆದಿದೆ. ಎರಡನೇ ಟ್ವೀಟ್‌ನಲ್ಲಿ, ಅವರು, “ಈ ಘಟನೆಗೆ ಸಂಬಂಧಿಸಿದಂತೆ, ಜಿಆರ್‌ಪಿ ಬಸ್ತಿ ಅಬಕಾರಿ ಕಾಯ್ದೆಯ ಸೆಕ್ಷನ್ 60 ರ ಅಡಿಯಲ್ಲಿ ಅಪರಾಧ ಸಂಖ್ಯೆ 34/2025 ಅನ್ನು ದಾಖಲಿಸಲಾಗಿದೆ ಎಂದು ತಿಳಿಸಿದೆ.
ಸೋನಪುರದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು(ಡಿಆರ್‌ಎಂ) ಈ ಬಗ್ಗೆ ಕ್ಷಮೆಯಾಚಿಸಿದ್ದು, “ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ಅಕ್ರಮ ಮದ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಮತ್ತು ತಂಪಾಗಿಸುವಿಕೆಯ ಸಮಸ್ಯೆಯನ್ನು ಪರಿಹರಿಸಲಾಗಿದೆ. ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಿದ್ದಕ್ಕಾಗಿ ನಾವು ಕೃತಜ್ಞರಾಗಿದ್ದೇವೆ” ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

ಘಟನೆ ಬೆಳಕಿಗೆ ಬಂದ ನಂತರ ರೈಲ್ವೆ ಕ್ರಮ ಕೈಗೊಂಡರೂ, ಪ್ರಯಾಣಿಕರು, ರೈಲ್ವೆ ಅಧಿಕಾರಿಗಳು ಅಥವಾ ಕೋಚ್‌ಗೆ ಪ್ರವೇಶ ಹೊಂದಿರುವ ಅನಧಿಕೃತ ವ್ಯಕ್ತಿಗಳು ಮದ್ಯ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾರೆಯೇ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸಿದ್ದಾರೆ.
ಬಿಹಾರದಲ್ಲಿ ಏಪ್ರಿಲ್ 2016 ರಿಂದ ಮದ್ಯ ಮಾರಾಟ ಮತ್ತು ಸೇವನೆಯ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಉಲ್ಲಂಘನೆಗಳಿಗೆ ಕಠಿಣ ದಂಡ ವಿಧಿಸಲಾಗುತ್ತದೆ. ಮದ್ಯದ ದುರುಪಯೋಗ ಮತ್ತು ಸಂಬಂಧಿತ ಅಪರಾಧಗಳನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದ್ದರೂ, ನಿಷೇಧವು ಕಳ್ಳಸಾಗಣೆ ಹೆಚ್ಚಿಸಿದೆ. ರಾಜ್ಯಕ್ಕೆ ಮದ್ಯವನ್ನು ಕಳ್ಳಸಾಗಣೆ ಮಾಡಲು ಕಳ್ಳಸಾಗಣೆದಾರರು ವಾಹನಗಳು, ಸರಕು ಮತ್ತು ಪ್ರಯಾಣಿಕ ರೈಲುಗಳಲ್ಲಿ ಸಾರಾಯಿ ಬಾಟಲಿಗಳನ್ನು ಅಡಗಿಸಿ ತೆಗೆದುಕೊಂಡು ಹೋಗಲು ನಾನಾ ವಿಧಾನಗಳನ್ನು ಬಳಸುತ್ತಾರೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement