ಪಾಟ್ನಾ: ಗೆಳತಿ ತನ್ನ ಫೋನ್ ಕರೆಗಳಿಗೆ ಉತ್ತರಿಸುತ್ತಿಲ್ಲ ಎಂದು ಕೋಪಗೊಂಡ ಯುವಕನೊಬ್ಬ ಗ್ರಾಮದ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ತಾನು ಪ್ರೀತಿಸಿದ ಹುಡುಗಿಯ ಫೋನ್ ಬ್ಯುಸಿ ಬರುತ್ತಿದೆ, ತಾನು ಫೋನ್ ಮಾಡಿದರೆ ಅದಕ್ಕೆ ಆಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಬೇಸರಗೊಂಡ ಯುವಕ ವಿದ್ಯುತ್ ಕಂಬ ಏರಿ ವಿದ್ಯುತ್ ಲೈನ್ ಕಡಿತಗೊಳಿಸಿ ಸಂಪೂರ್ಣ ಗ್ರಾಮವೇ ಕತ್ತಲಾಗುವಂತೆ ಮಾಡಿದ್ದಾನೆ. ಇದರಿಂದ ಇಡೀ ಗ್ರಾಮವೇ ಕತ್ತಲೆಯಲ್ಲಿ ಮುಳುಗಬೇಕಾಯಿತು. ಈ ಕುರಿತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral) ಆಗಿದೆ..
ಈ ವಿಡಿಯೊ ಬಗ್ಗೆ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಈಗ ವೈರಲ್ ಆಗಿರುವ ಕ್ಲಿಪ್‌ನಲ್ಲಿ, ಆ ವ್ಯಕ್ತಿಯೊಬ್ಬ ಇಕ್ಕಳ ಹಿಡಿದು ವಿದ್ಯುತ್ ಕಂಬದ ಮೇಲೆ ಏರಿರುವುದನ್ನು ಕಾಣಬಹುದು. ಕೆಲವು ಕ್ಷಣಗಳ ನಂತರ, ಆತ ತಂತಿಗಳನ್ನು ಕತ್ತರಿಸಿ, ಆ ಪ್ರದೇಶದಲ್ಲಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದನೆಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಯುವಕ ತನ್ನ ಸಂಗಾತಿ ತನ್ನ ಕರೆಗಳಿಗೆ ಉತ್ತರಿಸದ ಕಾರಣ ನಿರಾಶೆಗೊಂಡಿ ಹೀಗೆ ಮಾಡಿದ್ದಾನೆ.
ಇದು ಬಿಹಾರದಲ್ಲಿ ನಡೆದ ಈ ತರಹದ ಪ್ರಕರಣವಲ್ಲ. 2022 ರಲ್ಲಿ, ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಗಣೇಶಪುರ ಗ್ರಾಮದ ಒಬ್ಬ ವ್ಯಕ್ತಿ ಕತ್ತಲೆಯ ಹೊದಿಕೆಯಡಿಯಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಪ್ರತಿದಿನ ಸಂಜೆ ಆ ಸ್ಥಳದ ವಿದ್ಯುತ್ ಕಡಿತಗೊಳಿಸುತ್ತಿದ್ದ. ನೆರೆಯ ಪ್ರದೇಶಗಳಲ್ಲಿ ವಿದ್ಯುತ್ ಇರುತ್ತಿದ್ದವು. ಸ್ಥಳೀಯರು ಅವನ ರಹಸ್ಯ ಬಯಲಾಗುವವರೆಗೂ ವಿದ್ಯುತ್ ಕಡಿತವನ್ನು ಸಹಿಸಿಕೊಂಡಿದ್ದರು. ಅಂತಿಮವಾಗಿ ಗ್ರಾಮಸ್ಥರಿಗೆ ಈ ವಿಚಾರ ತಿಳಿಯಿತು.
.


ನಿಮ್ಮ ಕಾಮೆಂಟ್ ಬರೆಯಿರಿ