5.2 ಕೆ.ಜಿ ತೂಕದ ‘ಛೋಟಾ ಭೀಮ’ನ ಜನನ…ಇದು ಅಪರೂಪದ ಹೆರಿಗೆ

ಜಬಲ್ಪುರ : ಮಧ್ಯಪ್ರದೇಶದ ಜಬಲ್ಪುರದಲ್ಲಿ ಶುಭಾಂಗಿ ಯಾದವ್ ಎಂಬ ಮಹಿಳೆ ಬರೋಬ್ಬರಿ 5.2 ಕೆಜಿ ತೂಕದ ಆರೋಗ್ಯವಂತ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ.
ಸಾಮಾನ್ಯವಾಗಿ ನವಜಾತ ಶಿಶು 2.8ರಿಂದ 3.2 ಕೆಜಿ ತೂಕವಿರುತ್ತವೆ. ಆದರೆ ಈ ಮಹಿಳೆ 5.2 ಕೆಜಿ ತೂಕದ ಮಗುವಿಗೆ ಜನ್ಮಕೊಟ್ಟಿದ್ದಾರೆ. ಕುಟುಂಬದವರೆಲ್ಲರೂ ಇದು ಗಣೇಶನ ಆಶೀರ್ವಾದ ಎಂದು ಹೇಳುತ್ತಿದ್ದಾರೆ.
ನವಜಾತ ಶಿಶುವಿನ ಗಾತ್ರವು ದೊಡ್ಡದಾಗಲು ಒಂದು ಕಾರಣವೆಂದರೆ ಗರ್ಭಾವಸ್ಥೆಯಲ್ಲಿ ಶುಭಾಂಗಿ ಸೇವಿಸಿದ ಪೌಷ್ಟಿಕ ಆಹಾರ. ಆರೋಗ್ಯಕರ ಜೀವನಶೈಲಿಯು ಸಕಾರಾತ್ಮಕವಾಗಿ ಸಹಾಯ ಮಾಡಿದೆ ಎನ್ನಲಾಗುತ್ತಿದೆ.

ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಭಾವನಾ ಮಿಶ್ರಾ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದಾರೆ. ಮಗುವಿನ ತೂಕ 3 ಕೆಜಿಗಿಂತ ಹೆಚ್ಚಾದಾಗ ಹೆರಿಗೆ ಸವಾಲಿನದಾಗುತ್ತದೆ. 5 ಕೆಜಿಗಿಂತ ಹೆಚ್ಚಾದ ಮಗುವನ್ನು ಹೊರಗೆ ತರೋದು ತುಂಬಾ ಕಷ್ಟ. ಇಂಥ ಪ್ರಸಂಗಗಳು ಸಾವಿರಾರು ಹೆರಿಗೆಗಳಲ್ಲಿ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಇಂತಹದ್ದು ಕಂಡುಬರುತ್ತವೆ. ಗರ್ಭಾವಸ್ಥೆಯಲ್ಲಿ ತಾಯಿ ಉತ್ತಮ ಆಹಾರ ಮತ್ತು ಸಾಕಷ್ಟು ಪೋಷಣೆಯಿಂದಾಗಿ ಮಗು ಅಧಿಕ ತೂಕ ಹೊಂದಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರು ತಾಯಿ ಮತ್ತು ಮಗುವಿಗೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶಸ್ತ್ರಚಿಕಿತ್ಸೆಯನ್ನು ತೀರಾ ಎಚ್ಚರಿಕೆಯಿಂದ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ನೀಟ್ 2026 ಮರುಪರೀಕ್ಷೆ ; ಟೆಲಿಗ್ರಾಂ ತಾತ್ಕಾಲಿಕ ನಿರ್ಬಂಧ : ಕೇಂದ್ರದ ನಿರ್ಧಾರ ಎತ್ತಿ ಹಿಡಿದ ದೆಹಲಿ ಹೈಕೋರ್ಟ್

ಗಣೇಶ ಹಬ್ಬದಂದೇ ಸುರಕ್ಷಿತವಾಗಿ ಹೆರಿಗೆಯಾಗಿರುವುದರಿಂದ ಇದು ತಮ್ಮ ಕುಟುಂಬಕ್ಕೆ ಗಣೇಶನ ಆಶೀರ್ವಾದ ಎಂದು ಭಾವಿಸುವುದಾಗಿ ಶುಭಾಂಗಿ ಹೇಳಿದ್ದಾರೆ.
ಜುಲೈನಲ್ಲಿ ಇಂದೋರ್‌ನ ಪಿಸಿ ಸೇಥಿ ಸಿವಿಲ್ ಆಸ್ಪತ್ರೆಯಲ್ಲಿ 5.43 ಕಿಲೋಗ್ರಾಂಗಳಷ್ಟು ತೂಕದ ಆರೋಗ್ಯವಂತ ಹೆಣ್ಣು ಮಗು ಜನಿಸಿತ್ತು.ಇದು ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ದಾಖಲಾದ ಅತ್ಯಂತ ಭಾರವಾದ ನವಜಾತ ಶಿಶು ಎಂದು ಹೇಳಲಾಗಿದೆ. ಈ ಜನನವು 2021 ರಲ್ಲಿ ಮಾಂಡ್ಲಾ ಜಿಲ್ಲೆಯಲ್ಲಿ ಜನಿಸಿದ 5.1 ಕೆಜಿ ಮಗುವಿನ ಹಿಂದಿನ ದಾಖಲೆಯನ್ನು ಮೀರಿಸಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement