ಕಾರವಾರ : ಕೈಗಾ-ಬಾರೆ ರಸ್ತೆಯಲ್ಲಿ ಆರಾಮವಾಗಿ ನಡೆದುಕೊಂಡು ಹೋದ ಹುಲಿ; ವೀಡಿಯೊ ವೈರಲ್‌

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ-ಬಾರೆ ರಸ್ತೆಯಲ್ಲಿ ಹುಲಿಯೊಂದು ಆರಾಮವಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾರವಾರ ತಾಲೂಕಿನ ಕೈಗಾ-ಬಾರೆ ರಸ್ತೆಯಲ್ಲಿ ಶನಿವಾರ ಬೆಳಗ್ಗೆ 11ರ ಸುಮಾರು ಹುಲಿ ಶಾಂತವಾಗಿ ನಡೆದುಕೊಂಡು ಹೋಗಿರುವ ವೀಡಿಯೊ ವೈರಲ್‌ ಆಗಿದೆ. ಇದೇ ರಸ್ತೆಯ ಮೂಲಕ ಸಂಚಾರ ಮಾಡುವ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ಮೂಲಕ ಈ ದೃಶ್ಯವನ್ನು ಚಿತ್ರೀಕರಣ ಮಾಡಿದ್ದಾರೆ.

ರಾಜ್ಯ ಹೆದ್ದಾರಿಯಲ್ಲಿ ಹುಲಿ ಆರಾಮವಾಗಿ ನಡೆದುಕೊಂಡು ಹೋಗಿದೆ. ಅದು ನಡೆದುಕೊಂಡು ಹೋಗುತ್ತಿದ್ದಾಗ ನಿಧಾನವಾಗಿ ಕಾರಿನಲ್ಲಿ ಹಿಂಬಾಲಿಸಲಾಗಿದೆ.ಕಾರಿನಲ್ಲಿದ್ದವರು ಸುಮಾರು ಐದು ನಿಮಿಷಗಳ ಕಾಲ ಹುಲಿ ನಡೆದುಕೊಂಡು ಹೋಗುತ್ತಿರುವ ವೀಡಿಯೊ ಮಾಡಿದ್ದಾರೆ. ಹುಲಿ ಒಮ್ಮೆ ಕಾರಿನತ್ತ ತಿರುಗಿ ಮುಂದಕ್ಕೆ ಹೋಗಿದೆ. ಶಬ್ದ ಮಾಡಿ ಹುಲಿಯನ್ನು ಹೆದರಿಸುವುದು ಬೇಡ, ಕಾರನ್ನು ನಿಲ್ಲಿಸು ಎಂದು ಹೇಳುವುದು ವೀಡಿಯೊದಲ್ಲಿ ಕೇಳಿಸುತ್ತದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement