ನೀರಿನ ಟ್ಯಾಂಕ್‌ಗೆ ಬಿದ್ದಿದ್ದ ಆನೆಯನ್ನು ರಕ್ಷಿಸಿದ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡ 29 ಸೆಕೆಂಡುಗಳ ಕ್ಲಿಪ್‌ನಲ್ಲಿ ತಮಿಳುನಾಡು ಅರಣ್ಯ ಇಲಾಖೆ ಸಿಬ್ಬಂದಿ ನೀರಿನ ಟ್ಯಾಂಕ್ ನಲ್ಲಿ ಬಿದ್ದಿದ್ದ ಆನೆಯನ್ನು ಪಾರು ಮಾಡಲು ಟ್ಯಾಂಕ್ ಒಡೆದು ಆನೆಗೆ ಹೊರಬರಲು ದಾರಿ ಮಾಡಿಕೊಡಲು ಪ್ರಯತ್ನಿಸಿರುವುದನ್ನು ವೀಡಿಯೊ ತೋರಿಸುತ್ತದೆ.
ಆನೆ ದೊಡ್ಡ ನೀರಿನ ಟ್ಯಾಂಕ್ ಒಳಗೆ ಬಿದ್ದು ತೊಂದರೆಗೀಡಾಗಿದ್ದು, ಹೊರಬರಲು ದಾರಿ ಹುಡುಕಲು ಪ್ರಯತ್ನಿಸುತ್ತಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಸುಪ್ರಿಯಾ ಸಾಹು ಅವರ ಪ್ರಕಾರ, ಅಧಿಕಾರಿಗಳಿಗೆ ಸುದ್ದಿ ತಲುಪಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಯಿತು.
“ನೀಲಗಿರಿಯ ಕೂನೂರಿನ ಬುಡಕಟ್ಟು ಗ್ರಾಮದಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದ ಹೆಣ್ಣು ಆನೆ ರಕ್ಷಣೆಗೆ ತಮಿಳುನಾಡು ಅರಣ್ಯ ಇಲಾಖೆ ತ್ವರಿತ ಕ್ರಮ ಕೈಗೊಂಡಿತು” ಎಂದು ಸುಪ್ರಿಯಾ ಸಾಹು ಎಕ್ಸ್ ನಲ್ಲಿ ಬರೆದಿದ್ದಾರೆ. ಟ್ಯಾಂಕ್ ಒಡೆದು ಆನೆ ಸುರಕ್ಷಿತವಾಗಿ ಕಾಡಿಗೆ ಮರಳಿತು. ಸಮಯಕ್ಕೆ ಸರಿಯಾಗಿ ರಕ್ಷಣೆ ನೀಡಿದ ಊಟಿ ಡಿಎಫ್‌ಒ, ರೇಂಜ್ ಆಫೀಸರ್ ಕೂನೂರ್ ಮತ್ತು ಇಡೀ ತಂಡಕ್ಕೆ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ.
ಕಳೆದ ತಿಂಗಳು, ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡ ಮತ್ತೊಂದು ವೈರಲ್ ವೀಡಿಯೊ ಪಶ್ಚಿಮ ಬಂಗಾಳದಲ್ಲಿ ರೈಲು ಹಳಿ ಬಳಿ ಅಲೆದಾಡುತ್ತಿದ್ದ ಆನೆಯನ್ನು ತೋರಿಸಿತ್ತು. ಕ್ಲಿಪ್‌ನಲ್ಲಿ, ಲೋಕೋಮೋಟಿವ್ ಪೈಲಟ್ ಸನ್ನಿವೇಶವನ್ನು ತಕ್ಷಣವೇ ಗ್ರಹಿಸಿ, ಆನೆಯಿಂದ ದೂರ ರೈಲನ್ನು ನಿಲ್ಲಿಸಿದರು, ಆನೆ ಸದ್ದಿಲ್ಲದೆ ಕಾಡಿನ ಕಡೆಗೆ ಹೋಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ