ಹಿರಿಯ ನಟ, ಜನಪ್ರಿಯ ಧಾರಾವಾಹಿ ‘ಮಹಾಭಾರತ’ದಲ್ಲಿ ಕರ್ಣನ ಪಾತ್ರಧಾರಿ ಪಂಕಜ ಧೀರ್ ನಿಧನ

ಮುಂಬೈ: ಬಿ.ಆರ್. ಚೋಪ್ರಾ ಅವರ 1988 ರ ಟಿವಿ ಸರಣಿ ‘ಮಹಾಭಾರತ’ದಲ್ಲಿ ‘ಕರ್ಣ’ನ ಪಾತ್ರದ ಮೂಲಕ ಮನೆ ಮಾತಾಗಿದ್ದ ನಟ ಪಂಕಜ ಧೀರ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಕಳೆದ ಕೆಲವು ತಿಂಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಂಕಜ ಧೀರ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಪಂಕಜ ಧೀರ್ ಅವರು ‘ಚಂದ್ರಕಾಂತಾ’, ‘ಬಡೋ ಬಹು’, ‘ಝೀ ಹಾರರ್ ಶೋ’, ‘ಕಾನೂನ್’, ಮತ್ತು ಇತ್ತೀಚೆಗೆ ‘ಸಸುರಾಲ್ ಸಿಮರ್ ಕಾ’ ದಂತಹ ಟಿವಿ ಧಾರಾವಾಹಿಗಳಲ್ಲಿ ಹಾಗೂ ‘ಸೋಲ್ಜರ್’, ‘ಅಂದಾಜ್’, ‘ಬಾಷಾ’, ಮತ್ತು ‘ತುಮ್ಕೋ ನಾ ಭೂಲ್ ಪಾಯೇಂಗೆ’ ಮುಂತಾದ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ.ಅವರು ಕನ್ನಡ ಸಿನೆಮಾಗಳಾದ ‘ವಿಷ್ಣು-ವಿಜಯ’ ‘ವಿಷ್ಣುಸೇನೆ’ ಸಿನೆಮಾದಲ್ಲಿ ಕನ್ನಡದ ಖ್ಯಾತ ನಟ ವಿಷ್ಣುವರ್ಧನ್‌ ಜೊತೆ ನಟಿಸಿದ್ದರು.

ಪಂಜಾಬ್ ಮೂಲದ ಪಂಕಜ ಧೀರ್ ಅವರು, ಗೀತಾ ಬಾಲಿ ನಟಿಸಿದ ‘ಬಹು ಬೇಟಿ’ ಮತ್ತು ‘ಜಿಂಧಗಿ’ ಯಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ ಚಲನಚಿತ್ರ ನಿರ್ಮಾಪಕ ಸಿ.ಎಲ್. ಧೀರ್ ಅವರ ಪುತ್ರ. ಅವರ ಪತ್ನಿ ಅನಿತಾ ಧೀರ್ ಅವರು ವಸ್ತ್ರ ವಿನ್ಯಾಸಕಿ. ಅವರ ಮಗ ನಿಕಿತಿನ್ ಧೀರ್ ಕೂಡ ನಟರಾಗಿದ್ದು, ‘ಚೆನ್ನೈ ಎಕ್ಸ್‌ಪ್ರೆಸ್’, ‘ಜೋಧಾ ಅಕ್ಬರ್’, ಮತ್ತು ‘ಸೂರ್ಯವಂಶಿ’ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಸೊಸೆ ‘ಏಕ್ ವೀರ್ ಸ್ತ್ರೀ ಕಿ ಕಹಾನಿ – ಝಾನ್ಸಿ ಕಿ ರಾಣಿ’ ಖ್ಯಾತಿಯ ನಟಿ ಕೃತಿಕಾ ಸೆಂಗಾರ್.

ಪ್ರಮುಖ ಸುದ್ದಿ :-   ಮೊದಲು ಹಾಲಿನಲ್ಲಿ ನಿದ್ದೆ ಮಾತ್ರೆ...ನಂತರ ಹಾಸಿಗೆ ಮೇಲೆ ವಿಷದ ಹಾವು ! ಗಂಡನ ಕೊಲೆಗೆ ಪತ್ನಿಯ ಭಯಾನಕ ಸಂಚು...!

ನಟನೆಯ ಜೊತೆಗೆ, ಪಂಕಜ ಧೀರ್ ಅವರು ತಮ್ಮ ಸಹೋದರ ಸತ್ಲುಜ್ ಧೀರ್ ಅವರೊಂದಿಗೆ ಸೇರಿ ಮುಂಬೈನಲ್ಲಿ ‘ವಿಸೇಜ್ ಸ್ಟುಡಿಯೋಜ್’ ಎಂಬ ಶೂಟಿಂಗ್ ಸ್ಟುಡಿಯೊವನ್ನು ಸಹ-ಸ್ಥಾಪಿಸುವ ಮೂಲಕ ನಿರ್ಮಾಣದಲ್ಲಿಯೂ ತೊಡಗಿದ್ದರು. 2010 ರಲ್ಲಿ, ಅವರು ನಟನಾ ಆಕಾಂಕ್ಷಿಗಳಿಗಾಗಿ ‘ಅಭಿನ್ನಯ್ ಆಕ್ಟಿಂಗ್ ಅಕಾಡೆಮಿ’ಯನ್ನು ಸ್ಥಾಪಿಸಿದರು.
ಅವರು 1980 ರ ದಶಕದಲ್ಲಿ ಅನೇಕ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು, ಆದರೆ ಬಿ.ಆರ್‌.ಚೋಪ್ರಾ ಅವರ ‘ಮಹಾಭಾರತ’ ಧಾರವಾಹಿಯಲ್ಲಿ ಕರ್ಣನ ಪಾತ್ರದಲ್ಲಿನ ಅವರ ನಟನೆ ಅವರನ್ನು ಭಾರತದಾದ್ಯಂತ ಮನೆ ಮಾತಾಗುವಂತೆ ಮಾಡಿತು.

‘ಮಹಾಭಾರತದ’ ಕರ್ಣನಾಗಿ, ಅವರು ಭಾರತೀಯ ದೂರದರ್ಶನದಲ್ಲಿ ಮೊದಲ ಎಂಟಿ-ಹೀರೋ ಪೈಕಿ ಒಬ್ಬರಾಗಿದ್ದರು.
ಕರ್ಣನ ಪಾತ್ರದ ನೆರಳು ಅವರ ವೃತ್ತಿಜೀವನದಲ್ಲಿ ದೊಡ್ಡದಾಗಿದ್ದರೂ, ಪಂಕಜ ಧೀರ್ ಅವರು ಮತ್ತೊಂದು ಯಶಸ್ವಿ ಪಾತ್ರವೆಂದರೆ ದೇವಕಿ ನಂದನ್ ಖತ್ರಿ ಅವರ 1888 ರ ಕಾದಂಬರಿ ಆಧಾರಿತ 1994 ರ ಧಾರಾವಾಹಿ ‘ಚಂದ್ರಕಾಂತಾ’ದಲ್ಲಿನ ಚುನ್ನಾರ್‌ಗಢದ ರಾಜ ಶಿವದತ್ ಪಾತ್ರ. ಕರ್ಣನಂತೆಯೇ, ಅವರ ರಾಜ ಶಿವದತ್ ಕೂಡ ಒಬ್ಬ ಎಂಟಿ-ಹೀರೋ ಆಗಿದ್ದ, ಆತ ಒಬ್ಬ ವಿಷಪುರುಷನಾಗಿದ್ದ), ಅವನ ಸ್ಪರ್ಶ, ಮುತ್ತು, ಅಥವಾ ಗೀರು ಸಹ ಇತರರಿಗೆ ಮಾರಕವಾಗಬಹುದಾಗಿತ್ತು.
ಟಿವಿ ಯಲ್ಲಿ ಅವರ ಕೊನೆಯ ಪಾತ್ರ ‘ಧ್ರುವ ತಾರಾ – ಸಮಯ ಸದಿ ಸೆ ಪರೆ’ (2024) ಆಗಿತ್ತು. ಅವರು 2019 ರ ವೆಬ್ ಸರಣಿ ‘ಪಾಯ್ಸನ್’ ನಲ್ಲಿಯೂ ಕಾಣಿಸಿಕೊಂಡಿದ್ದರು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement