ಭಾರತೀಯ ವಿವಾಹಗಳು ಅವುಗಳ ವೈಭವ, ಸಂಭ್ರಮ, ವರ್ಣರಂಜಿತ ಸಂಪ್ರದಾಯಗಳು ಮತ್ತು ಭಾವನೆಗಳಿಗೆ ಹೆಸರುವಾಸಿಯಾಗಿವೆ. ಕುಟುಂಬಗಳು ಸಾಮಾನ್ಯವಾಗಿ ಅದ್ದೂರಿ ಖರ್ಚು ಮಾಡಿ, ನೂರಾರು ಜನರನ್ನು ಆಹ್ವಾನಿಸಿ ವಿವಾಹವನ್ನು ನಡೆಸುವುದರಿಂದ ಇಲ್ಲಿ ಯಾವುದೂ ಸಣ್ಣ ಮಟ್ಟದಲ್ಲಿ ಇರುವುದಿಲ್ಲ. ಮದುವೆಯಲ್ಲಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಮತ್ತು ಪ್ರಮುಖ ಭಾಗವಾಗಿದೆ, ಇದರಲ್ಲಿ ಅನೇಕರು ನಗದನ್ನು ಲಕೋಟೆಯಲ್ಲಿ ನೀಡಲು ಬಯಸುತ್ತಾರೆ.
ಆದರೆ, ಅತಿಥಿಗಳಿಗೆ ಈ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲು, ಕೇರಳದ ವ್ಯಕ್ತಿಯೊಬ್ಬರು ತಮ್ಮ ಮಗಳ ಮದುವೆಯಲ್ಲಿ ಹೊಸ ಪ್ರಯತ್ನ ಮಾಡಿದ್ದಾರೆ. ವಧುವಿನ ತಂದೆಯು ನಗದು ಉಡುಗೊರೆ ಕೊಡುವವರಿಗಾಗಿ ತಮ್ಮ ಶರ್ಟ್ ಮೇಲೆ ಪೇಟಿಎಂ ಕ್ಯೂಆರ್ ಕೋಡ್ (PayTM QR Code) ಸ್ಟಿಕ್ಕರ್ ಅಂಟಿಸಿಕೊಂಡು ಬಂದಿದ್ದಾರೆ…!
ಡಿಜಿಟಲ್ ರೂಪದಲ್ಲಿ ‘ನಗದು ಉಡುಗೊರೆ’
ಇದು ಹೊಸ ವಿವಾಹದ ಟ್ರೆಂಡ್ ಎಂದು ಕರೆಯಲ್ಪಡುತ್ತಿದೆ. ಈ ವಿಡಿಯೋದಲ್ಲಿ, ಅತಿಥಿಗಳು ನವ ವಿವಾಹಿತ ಜೋಡಿಗೆ ಡಿಜಿಟಲ್ ರೂಪದಲ್ಲಿ ‘ಶಗುನ್’ (ಆಶೀರ್ವಾದದ ಉಡುಗೊರೆ) ಹಣವನ್ನು ವರ್ಗಾಯಿಸುವುದು ಕಂಡುಬಂದಿದೆ. ಇದು ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಮೇಲಿನ ಹೆಚ್ಚುತ್ತಿರುವ ಅವಲಂಬನೆಯನ್ನು ಎತ್ತಿ ತೋರಿಸುತ್ತದೆ.
ವೈರಲ್ ಆಗಿರುವ ಈ ವೀಡಿಯೊ ವರ್ಣರಂಜಿತ ವಿವಾಹ ಸಮಾರಂಭದ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ನಂತರ ಕ್ಯಾಮರಾವು ಶರ್ಟ್ನ ಪಾಕೆಟ್ ಮೇಲೆ ಕ್ಯೂಆರ್ ಕೋಡ್ ಅಂಟಿಸಿಕೊಂಡು ನಿಂತಿರುವ ವ್ಯಕ್ತಿಯ ಕಡೆಗೆ ತಿರುಗುತ್ತದೆ. ಆ ವ್ಯಕ್ತಿಯು ನಗುತ್ತಾ, ಅತಿಥಿಗಳು ಹತ್ತಿರ ಬಂದಾಗ ಕ್ಯೂಆರ್ ಕೋಡ್ ಕಡೆಗೆ ಕೈತೋರಿಸುತ್ತಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಕೆಲವರು ಈ ಹೊಸ ಹೆಜ್ಜೆಯನ್ನು ಶ್ಲಾಘಿಸಿ ನಕ್ಕರೆ, ಇತರರು ಟೀಕಿಸಿದ್ದಾರೆ.ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ತಮಾಷೆ ಮಾಡಿ, “ಭಾಯ್, ಈಗ ಲಕೋಟೆಯಲ್ಲಿ ₹100 ಕೂಡ ಕೊಡಲು ಸಾಧ್ಯವಿಲ್ಲ,” ಎಂದು ಬರೆದಿದ್ದಾರೆ. “ಭಾಯ್, ಇದು ಎಲ್ಲಾ ವೈಟ್ ಮನಿ,” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಶಿಸ್ತಿನ ಜನರು ಇದನ್ನು ಬೇರೆಯದೇ ರೀತಿ ಯೋಚಿಸುತ್ತಾರೆ… ಈ ಜನರು ಎಂದಿಗೂ ಬದಲಾಗುವುದಿಲ್ಲ,” ಎಂದು ಟೀಕಿಸಿದ್ದಾರೆ.
ಆದರೆ, ಈ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿರುವ ಮತ್ತೊಬ್ಬ ಬಳಕೆದಾರರು, “ಇದು ವಧುವಿನ ಚಿಕ್ಕಪ್ಪ ಮಾಡಿದ ತಮಾಷೆ, ಮತ್ತು ಹಣ ವರ್ಗಾಯಿಸುತ್ತಿರುವವರು ಕುಟುಂಬ ಸದಸ್ಯರು,” ಎಂದು ತಿಳಿಸಿದ್ದಾರೆ.
?


ನಿಮ್ಮ ಕಾಮೆಂಟ್ ಬರೆಯಿರಿ