ದೆಹಲಿ ಕೆಂಪು ಕೋಟೆ ಸ್ಫೋಟದಲ್ಲಿ ಭಾಗಿಯಾಗಿರುವ ವೈದ್ಯನಿಂದ ಶಂಕಿತ ಆತ್ಮಹತ್ಯಾ ಬಾಂಬರ್ ಆಗಿ ಬದಲಾದ ಡಾ. ಉಮರ್ ನಬಿ ಯಾರು…?

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ವೈದ್ಯಕೀಯ ವೃತ್ತಿಯಿಂದ ಭಯೋತ್ಪಾದಕನಾಗಿ ಬದಲಾದ ಡಾ. ಉಮರ್ ಯು ನಬಿ ಎಂಬ ವ್ಯಕ್ತಿಯೇ ಸ್ಫೋಟಿಸಿರುವ ಸಾಧ್ಯತೆ ಇದೆ ಎಂದು ಸಂಕಿಸಲಾಗಿದೆ.
ಮಂಗಳವಾರ ಬೆಳಗ್ಗೆ, ದೆಹಲಿ ಸ್ಫೋಟ ಪ್ರಕರಣದ ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಲಾದ ಡಾ. ಉಮರ್ ಮೊದಲ ಫೋಟೋ ಹೊರಬಿದ್ದಿದೆ. ಸೋಮವಾರ ಸಂಜೆ ಕೆಂಪುಕೋಟೆ ಬಳಿ ಸ್ಫೋಟಗೊಂಡ ಬಿಳಿ ಬಣ್ಣದ ಹ್ಯುಂಡೈ ಐ20 ಕಾರನ್ನು ಈತನೇ ಚಲಾಯಿಸುತ್ತಿದ್ದ ಎಂದು ಊಹಿಸಲಾಗಿದೆ. ಈ ಘಟನೆಯಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿದೆ ಎಂದು ವರದಿಯಾಗಿದೆ.
ಯಾರು ಈ ಡಾ. ಉಮರ್ ಯು ನಬಿ?
ಮೂಲಗಳ ಪ್ರಕಾರ, ಘಿ ನಬಿ ಭಟ್ ಎಂಬವರ ಪುತ್ರ ಡಾ. ಉಮರ್ ಯು ನಬಿ ಫರಿದಾಬಾದ್‌ನ ಅಲ್-ಫಲಾ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಈತನ ತಾಯಿ ಶಮೀಮಾ ಬಾನೂ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ಕೊಯಿಲ್ ನಿವಾಸಿ.
1989ರ ಫೆಬ್ರವರಿ 24ರಂದು ಜನಿಸಿದ ಡಾ. ಉಮರ್ ಶ್ರೀನಗರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿಭಾಗದಲ್ಲಿ ಎಂಡಿ (MD in Medicine) ಪೂರ್ಣಗೊಳಿಸಿ, ಜಿಎಂಸಿ ಅನಂತನಾಗ್‌ನಲ್ಲಿ ಹಿರಿಯ ಹೌಸ್‌ ಸರ್ಜನ್‌ ಆಗಿ ಕೆಲಸ ಮಾಡಿದ್ದ. ನಂತರ ದೆಹಲಿಗೆ ತೆರಳಿದ್ದ ಮತ್ತು ಫರಿದಾಬಾದ್‌ನ ಅಲ್-ಫಲಾ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ. ಉಮರ್ ಪ್ರಸ್ತುತ ಭಯೋತ್ಪಾದಕ ಜಾಲದ ತನಿಖೆಯಲ್ಲಿರುವ ಮತ್ತೊಬ್ಬ ಶಂಕಿತ ಡಾ. ಆದಿಲ್ ಆಪ್ತನಾಗಿದ್ದ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

‘ಫರಿದಾಬಾದ್ ಮಾಡ್ಯೂಲ್’ ಭಾಗವಾಗಿದ್ದ ಉಮರ್…!
ಅಧಿಕಾರಿಗಳ ಪ್ರಕಾರ, ಡಾ. ಉಮರ್ ಎನ್‌ಕ್ರಿಪ್ಟೆಡ್ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ತೀವ್ರವಾದಿಗಳಾದ ವೈದ್ಯಕೀಯ ವೃತ್ತಿಪರರ ಗುಂಪಿನ ಭಾಗವಾಗಿದ್ದ. ತನಿಖಾಧಿಕಾರಿಗಳು ಈ ಗುಂಪನ್ನು “ಫರಿದಾಬಾದ್ ಮಾಡ್ಯೂಲ್” ಎಂದು ಕರೆಯುತ್ತಿದ್ದಾರೆ.
ಡಾ. ಉಮರ್ ತಂದೆ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದು, ಮಾನಸಿಕವಾಗಿ ಅಸ್ವಸ್ಥರಾದ ಕಾರಣ 10-15 ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದಾರೆ. ಉಮರ್‌ಗೆ ಇಬ್ಬರು ಸಹೋದರರು ಮತ್ತು ಒಬ್ಬ ಹಿರಿಯ ಸಹೋದರಿ ಇದ್ದಾರೆ. ಪೊಲೀಸರು ವಿಚಾರಣೆಗಾಗಿ ಆತನ ಇಬ್ಬರು ಸಹೋದರರು ಮತ್ತು ತಾಯಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಸ್ಫೋಟದ ಸ್ಥಳದಲ್ಲಿ ಮಂಗಳವಾರ ಪತ್ತೆಯಾದ ದೇಹದ ಭಾಗಗಳೊಂದಿಗೆ ಡಿಎನ್‌ಎ ಹೊಂದಾಣಿಕೆ ಮಾಡಲು ಪುಲ್ವಾಮಾ ಜಿಲ್ಲೆಯಲ್ಲಿ ಡಾ. ಉಮರ್ ತಾಯಿಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಡಿಎನ್‌ಎ ಪರೀಕ್ಷೆಗೆ ಕರೆದೊಯ್ದಿದ್ದಾರೆ.
ಸ್ಫೋಟದ ಹಿಂದಿನ ಕಾರಣ
ಸೋಮವಾರ ಬೆಳಗ್ಗೆ ಹರಿಯಾಣ ಪೊಲೀಸರು, ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸೇರಿ “ವೈಟ್ ಕಾಲರ್” ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿ ಡಾ. ಉಮರ್ ಆಪ್ತರಾದ ಡಾ. ಆದಿಲ್ ಅಹ್ಮದ್ ರಥೆರ್ ಮತ್ತು ಡಾ. ಮುಜಮ್ಮಿಲ್ ಶಕೀಲ್ ಎಂಬವರನ್ನು ಬಂಧಿಸಿದ್ದರು. ಅಲ್ಲದೆ, 2,900 ಕೆಜಿ ಸ್ಫೋಟಕಗಳು ಮತ್ತು ಎಕೆ ರೈಫಲ್, ಪಿಸ್ತೂಲ್‌ಗಳಂತಹ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ಮೂಲಗಳ ಪ್ರಕಾರ, ಇದೇ ವಿಷಯವು ಡಾ. ಉಮರ್ ಮೊಹಮ್ಮದ್ ಸ್ಫೋಟ ನಡೆಸಲು ಪ್ರಚೋದನೆ ನೀಡಿದೆ ಎಂದು ಶಂಕಿಸಲಾಗಿದೆ.

ಪ್ರಮುಖ ಸುದ್ದಿ :-   ಮತದಾರರ ಪಟ್ಟಿಯಿಂದ ಹೆಸರು ತೆಗೆದ ಮಾತ್ರಕ್ಕೆ ಪೌರತ್ವ ರದ್ದಾಗುವುದಿಲ್ಲ : ಸುಪ್ರೀಂ ಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement