ಅಮೆರಿಕ ನಂತರ ಭಾರತದ ಮೇಲೆ ಶೇ.50 ರಷ್ಟು ಸುಂಕ ಹೇರಿದ ಮೆಕ್ಸಿಕೋ

ನವದೆಹಲಿ: ಭಾರತದ ಮೇಲೆ ಅಮೆರಿಕ ಹೆಚ್ಚಿನ ಸರಕುಗಳಿಗೆ ಶೇ.50 ರಷ್ಟು ಸುಂಕ ವಿಧಿಸಿದ ನಾಲ್ಕು (Mexico Tax) ತಿಂಗಳ ನಂತರ, ಈಗ ಮೆಕ್ಸಿಕೊ ಸಹ ಸುಂಕ ವಿಧಿಸಿದೆ. ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾದ ಕೆಲವು ದೇಶಗಳ ಆಯ್ದ ಉತ್ಪನ್ನಗಳ ಆಮದಿನ ಮೇಲೆ ಶೇ.50 ರಷ್ಟು ಸುಂಕ ವಿಧಿಸಲು ಅನುಮೋದನೆ ನೀಡಿದೆ.
ಈ ಸುಂಕಗಳು ಜನವರಿ 1, 2026 ರಿಂದ ಜಾರಿಗೆ ಬರಲಿವೆ. ವಾಹನ ಬಿಡಿಭಾಗಗಳು, ಲಘು ಕಾರುಗಳು, ಬಟ್ಟೆ, ಪ್ಲಾಸ್ಟಿಕ್‌ಗಳು, ಉಕ್ಕು, ಗೃಹೋಪಯೋಗಿ ವಸ್ತುಗಳು, ಆಟಿಕೆಗಳು, ಜವಳಿ, ಪೀಠೋಪಕರಣಗಳು, ಪಾದರಕ್ಷೆಗಳು, ಚರ್ಮದ ವಸ್ತುಗಳು, ಕಾಗದ, ಕಾರ್ಡ್‌ಬೋರ್ಡ್, ಮೋಟಾರ್‌ಸೈಕಲ್‌ಗಳು, ಅಲ್ಯೂಮಿನಿಯಂ, ಟ್ರೇಲರ್‌ಗಳು, ಗಾಜು, ಸೋಪುಗಳು, ಸುಗಂಧ ದ್ರವ್ಯಗಳು ಮತ್ತು ಸೌಂದರ್ಯವರ್ಧಕಗಳಂತಹ ಸರಕುಗಳ ಮೇಲೆ ಮೆಕ್ಸಿಕೋ ಸುಂಕ ವಿಧಿಸಿದೆ ಎಂದು ಹೇಳಲಾಗಿದೆ.

ಭಾರತ, ದಕ್ಷಿಣ ಕೊರಿಯಾ, ಚೀನಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ಮೆಕ್ಸಿಕೋ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳದ ದೇಶಗಳ ಮೇಲೆ ಈ ಸುಂಕ ನೀತಿ ಪ್ರಭಾವ ಬೀರಲಿದೆ. ಮೆಕ್ಸಿಕನ್ ಸರ್ಕಾರವು ಏಷ್ಯಾದ ದೇಶಗಳಿಂದ, ವಿಶೇಷವಾಗಿ ಚೀನಾದಿಂದ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಈ ಪ್ರಸ್ತಾವಿತ ಸುಂಕಗಳು 3.8 ಬಿಲಿಯನ್ ಅಮೆರಿಕನ್ ಡಾಲರ್ (ಸುಮಾರು 33,910 ಕೋಟಿ ರೂ.) ಹೆಚ್ಚುವರಿ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಆದಿತ್ಯ ಎಲ್‌1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು

ಇದು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ವರದಿಯ ಪ್ರಕಾರ, ಮೆಕ್ಸಿಕನ್ ಸುಂಕಗಳು ಭಾರತದ ಪ್ರಮುಖ ಕಾರು ರಫ್ತುದಾರರಾದ ವೋಕ್ಸ್‌ವ್ಯಾಗನ್, ಹುಂಡೈ, ನಿಸ್ಸಾನ್ ಮತ್ತು ಮಾರುತಿ ಸುಜುಕಿಯಂತಹ ಕಾರು ತಯಾರಕ ಕಂಪನಿಗಳ 1 ಬಿಲಿಯನ್ ಡಾಲರ್ ಮೌಲ್ಯದ ಸಾಗಣೆಯ ಮೇಲೆ ಪರಿಣಾಮ ಬೀರುತ್ತವೆ. ಕಾರುಗಳ ಮೇಲಿನ ಆಮದು ಸುಂಕವು 20% ರಿಂದ 50% ಕ್ಕೆ ಏರಿಕೆಯಾಗಲಿರುವುದರಿಂದ ಭಾರತದ ಅತಿದೊಡ್ಡ ವಾಹನ ರಫ್ತುದಾರರಿಗೆ ಗಮನಾರ್ಹ ಹೊಡೆತ ಬೀಳಲಿದೆ. ಸುಂಕ ಹೆಚ್ಚಳವು ಮೆಕ್ಸಿಕೊಗೆ ಆಟೋಮೊಬೈಲ್ ರಫ್ತಿನ ಮೇಲೆ ನೇರ ಪರಿಣಾಮ ಬೀರುವ ನಿರೀಕ್ಷೆಯಿದೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement