ತಮೀಮ್ ಇಕ್ಬಾಲ್‌ ರನ್ನು ‘ಭಾರತದ ಏಜೆಂಟ್’ ಎಂದಿದ್ದ ಬಾಂಗ್ಲಾ ಕ್ರಿಕೆಟ್ ಮಂಡಳಿ ಹಣಕಾಸು ಸಮಿತಿ ಅಧ್ಯಕ್ಷ ವಜಾ

ಢಾಕಾ : ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ವಿಶ್ವಕಪ್ ಪಂದ್ಯದ ಸ್ಥಳದ ವಿವಾದದ ನಡುವೆ ಸರಣಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಹಣಕಾಸು ಸಮಿತಿ ಅಧ್ಯಕ್ಷ ಎಂ. ನಜ್ಮುಲ್ ಇಸ್ಲಾಂ ಅವರನ್ನು ಗುರುವಾರ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರನ್ನು “ಭಾರತದ ಏಜೆಂಟ್” ಎಂದು ಕರೆದಿದ್ದ ನಜ್ಮುಲ್ ನಡೆಯನ್ನು ಖಂಡಿಸಿ ಬಾಂಗ್ಲಾದೇಶದ ಕ್ರಿಕೆಟಿಗರ ಕಲ್ಯಾಣ ಸಂಸ್ಥೆ (CWAB) ದೇಶಾದ್ಯಂತ ಪಂದ್ಯಗಳನ್ನು ಬಹಿಷ್ಕರಿಸುವ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ತುರ್ತು ಆನ್‌ಲೈನ್ ಸಭೆಯ ನಂತರ ಬಿಡುಗಡೆಯಾದ ಹೇಳಿಕೆಯಲ್ಲಿ, “ಮಂಡಳಿಯ ಹಿತದೃಷ್ಟಿಯಿಂದ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಅಧ್ಯಕ್ಷರು ನಜ್ಮುಲ್ ಇಸ್ಲಾಂ ಅವರನ್ನು ಹಣಕಾಸು ಸಮಿತಿಯ ಅಧ್ಯಕ್ಷ ಸ್ಥಾನದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡಿದ್ದಾರೆ. ಅಲ್ಲಿಯವರೆಗೆ ಅಧ್ಯಕ್ಷರೇ ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

ವಿವಾದಕ್ಕೆ ಕಾರಣವೇನು?
ನಜ್ಮುಲ್ ಇಸ್ಲಾಂ ಇತ್ತೀಚೆಗೆ ಭಾರತದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಭಾರತದೊಂದಿಗಿನ ಬಿಕ್ಕಟ್ಟನ್ನು ಸಂಯಮದಿಂದ ನಿಭಾಯಿಸುವಂತೆ ಸಲಹೆ ನೀಡಿದ್ದ ಮಾಜಿ ನಾಯಕ ತಮೀಮ್ ಇಕ್ಬಾಲ್‌ ಅವರನ್ನು “ಭಾರತದ ಏಜೆಂಟ್” ಎಂದು ನಜ್ಮುಲ್ ಕರೆದಿದ್ದರು. “ಬಾಂಗ್ಲಾದೇಶ ತಂಡ ವಿಶ್ವಕಪ್ ಆಡದಿದ್ದರೂ ಮಂಡಳಿಗೆ ಯಾವುದೇ ಲಾಭ ಅಥವಾ ನಷ್ಟವಿಲ್ಲ,” ಎಂದು ಹೇಳುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದರು.
ಆಟಗಾರರಿಗೆ ಹಣ ಮರುವಪಾವತಿ ಕುರಿತ ಪ್ರಶ್ನೆಗೆ ಉತ್ತರಿಸಿದ್ದ ಅವರು, “ಆಟಗಾರರು ವಿಫಲವಾದಾಗ ನಾವು ಕೊಟ್ಟ ಕೋಟ್ಯಂತರ ರೂಪಾಯಿಗಳನ್ನು ವಾಪಸ್ ಕೇಳುತ್ತೇವೆಯೇ? ಮಂಡಳಿಯೇ ಇಲ್ಲದಿದ್ದರೆ ಆಟಗಾರರಿಗೆ ಅಸ್ತಿತ್ವ ಎಲ್ಲಿದೆ?” ಎಂದು ಕಿಡಿಕಾರಿದ್ದರು.
ಭಾರತದೊಂದಿಗಿನ ಬಿಕ್ಕಟ್ಟನ್ನು ಸಂಯಮದಿಂದ ನಿಭಾಯಿಸಲು ಸಲಹೆ ನೀಡಿದ ಮಾಜಿ ನಾಯಕ ತಮೀಮ್ ಇಕ್ಬಾಲ್ ಇಂದು ತೆಗೆದುಕೊಳ್ಳುವ ನಿರ್ಧಾರಗಳು 10 ವರ್ಷಗಳ ನಂತರ ಪರಿಣಾಮ ಬೀರುತ್ತವೆ ಎಂದು ಎಚ್ಚರಿಸಿದ್ದರು

ಪ್ರಮುಖ ಸುದ್ದಿ :-   ಅಂತ್ಯಸಂಸ್ಕಾರ ನಡೆದು 15 ದಿನಗಳ ಬಳಿಕ ‘ನಿಮ್ಮ ಮಗ ಜೀವಂತವಾಗಿದ್ದಾನೆ’ ಎಂದು ಪೊಲೀಸರಿಂದ ಬಂತು ಫೋನ್‌ ಕಾಲ್‌...!

. ಇದರ ನಂತರ ನಜ್ಮುಲ್‌ ಅವರು, ತಮೀಮ್ ಇಕ್ಬಾಲ್ ಅವರನ್ನು “ಭಾರತದ ಏಜೆಂಟ್” ಎಂದು ನಜ್ಮುಲ್ ಕರೆದಿದ್ದರು. ಇದರ ನಂತರ, ಬಾಂಗ್ಲಾದೇಶದ ಕ್ರಿಕೆಟಿಗರ ಕಲ್ಯಾಣ ಸಂಘ (CWAB) ನಜ್ಮುಲ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕುವಂತೆ ಒತ್ತಾಯಿಸಿತು. ಬಾಂಗ್ಲಾದೇಶ ಆಟಗಾರರು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯವನ್ನು ಸಹ ಬಹಿಷ್ಕರಿಸಿದರು.
ಬಾಂಗ್ಲಾದೇಶದ ಟೆಸ್ಟ್ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಕೂಡ ಈ ವಿಚಾರದಲ್ಲಿ ಪ್ರಾಯೋಗಿಕ ವಿಧಾನಕ್ಕಾಗಿ ಒತ್ತಾಯಿಸಿದ್ದಾರೆ ಮತ್ತು ಪ್ರಸ್ತುತ ಪರಿಸ್ಥಿತಿಯಿಂದಾಗಿ ಆಟಗಾರರು ಅಪಾರ ಒತ್ತಡದಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ನಜ್ಮುಲ್ ಇಸ್ಲಾಂ ಅವರ ಪದಚ್ಯುತಿಯು ಆಟಗಾರರ ಹಿತರಕ್ಷಣೆಯ ದೃಷ್ಟಿಯಿಂದ ಬಿಬಿಸಿ ತೆಗೆದುಕೊಂಡ ಮಹತ್ವದ ನಿರ್ಧಾರ ಎಂದು ಪರಿಗಣಿಸಲಾಗಿದೆ.
ಭಾರತ-ಬಾಂಗ್ಲಾ ಕ್ರಿಕೆಟ್ ಸಂಘರ್ಷ
ಐಪಿಎಲ್‌ನಿಂದ ಬಾಂಗ್ಲಾ ಆಟಗಾರ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟ ನಂತರ, ಭದ್ರತೆಯ ಕಾರಣ ನೀಡಿ ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರವಾಸ ಮಾಡಲು ನಿರಾಕರಿಸುತ್ತಿದೆ. ಭಾರತದಲ್ಲಿ ನಡೆಯಬೇಕಿರುವ ಬಾಂಗ್ಲಾದೇಶದ ನಾಲ್ಕು ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಿಸಿಬಿ ಕೋರಿದ್ದರೂ, ಐಸಿಸಿ (ICC) ಇದಕ್ಕೆ ಹಿಂಜರಿಕೆ ವ್ಯಕ್ತಪಡಿಸಿದೆ.

ಪ್ರಮುಖ ಸುದ್ದಿ :-   ಡ್ಯಾನ್ಸ್ ಕ್ಲಾಸ್‌ಗೆ ಹೋಗುವುದಿದೆ, ಅಡುಗೆ ಮಾಡ್ಲಿಕ್ಕೆ ಆಗಲ್ಲ ಎಂದಿದ್ದಕ್ಕೆ ಹೆಂಡತಿಯನ್ನೇ ಕೊಲೆ ಮಾಡಿದ ಗಂಡ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement