ಪೈಶಾಚಿಕ ಕೃತ್ಯ | ಪಂಚಾಯತ ಚುನಾವಣೆ ಸ್ಪರ್ಧಿಸಲು ಮಗಳನ್ನೇ ಕಾಲುವೆಗೆ ಎಸೆದು ಕೊಂದ ತಂದೆ…!

ಹೈದರಾಬಾದ್: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಹಪಾಹಪಿಗೆ ಬಿದ್ದ ವ್ಯಕ್ತಿಯೊಬ್ಬ, ತನ್ನ ಆಸೆಗೆ ಅಡ್ಡಿಯಾಗಿದ್ದ ಆರು ವರ್ಷದ ಮಗಳನ್ನೇ ತೆಲಂಗಾಣದ ಕಾಲುವೆಯೊಂದಕ್ಕೆ ಎಸೆದು ಹತ್ಯೆ ಮಾಡಿರುವ ಘೋರ ಘಟನೆ ನಡೆದಿದೆ.
ಮಹಾರಾಷ್ಟ್ರದ ಚುನಾವಣಾ ನಿಯಮದ ಪ್ರಕಾರ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂಬ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ ತಾಲೂಕಿನ ಕೇರೂರ ಗ್ರಾಮದ 28 ವರ್ಷದ ವ್ಯಕ್ತಿ ಪಾಂಡುರಂಗ ಈ ಕೃತ್ಯದ ಆರೋಪಿ. ವೃತ್ತಿಯಲ್ಲಿ ಸಲೂನ್ ನಡೆಸುತ್ತಿದ್ದ ಈತನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನಿದ್ದಾನೆ. ಮುಂಬರುವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸರಪಂಚ (ಅಧ್ಯಕ್ಷ) ಸ್ಥಾನಕ್ಕೆ ಸ್ಪರ್ಧಿಸಲು ಈತ ಯೋಜಿಸಿದ್ದ.
ಆದರೆ ಮಹಾರಾಷ್ಟ್ರದಲ್ಲಿ ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಪ್ರಸ್ತುತ ಅಧಿಕಾರದಲ್ಲಿರುವ ಸರಪಂಚ, ಚುನಾವಣೆಗೆ ಸ್ಪರ್ಧಿಸಲು ಒಂದು ಮಗುವನ್ನು ದತ್ತು ನೀಡುವಂತೆ ಈತನಿಗೆ ಸಲಹೆ ನೀಡಿದ್ದ. ಇದಕ್ಕೂ ಈತ ಮೊದಲು ತನ್ನ ಮಗನ ಜನ್ಮ ಪ್ರಮಾಣಪತ್ರವನ್ನು ಬದಲಿಸಲು ಪುಣೆ ಕಾರ್ಪೊರೇಶನ್ ಕಚೇರಿಗೂ ಹೋಗಿದ್ದನು. ಆದರೆ ಅದು ಸಾಧ್ಯವಾಗದಿದ್ದಾಗ, ಒಂದು ಮಗುವನ್ನು ಕೊಂದು ‘ಮಗು ನಾಪತ್ತೆಯಾಗಿದೆ’ ಎಂದು ಬಿಂಬಿಸಲು ಸಂಚು ರೂಪಿಸಿದ್ದ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

ನಡೆದಿದ್ದೇನು?
ಜನವರಿ 29 ರಂದು ಆರೋಪಿಯು ತನ್ನ ಆರು ವರ್ಷದ ಮಗಳನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸುಮಾರು 90 ಕಿ.ಮೀ ದೂರದಲ್ಲಿರುವ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ನಿರ್ಜನ ಪ್ರದೇಶದ ಕಾಲುವೆಯೊಂದಕ್ಕೆ ಮಗಳನ್ನು ಎಸೆದು ಪರಾರಿಯಾಗಿದ್ದಾನೆ. ಮಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾಳೆ.
ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆಯಾದ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಿಜಾಮಾಬಾದ್ ಪೊಲೀಸ್ ಕಮಿಷನರ್ ಪಿ. ಸಾಯಿ ಚೈತನ್ಯ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪೊಲೀಸರು ಹಂಚಿಕೊಂಡಿದ್ದ ಬಾಲಕಿಯ ಫೋಟೋ ನೋಡಿ ಮುಖೇಡ್ ನಿವಾಸಿಗಳು ಬಾಲಕಿಯನ್ನು ಗುರುತಿಸಿದ್ದರು.
ಕೇರೂರ ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಬಾಲಕಿಯ ವಿವರಗಳನ್ನು ಖಚಿತಪಡಿಸಿಕೊಂಡರು. ಮುಖೇಡದಲ್ಲಿ ಸಲೂನ್ ನಡೆಸುತ್ತಿರುವ ವ್ಯಕ್ತಿಯೊಬ್ಬನ ಮೂವರು ಮಕ್ಕಳಲ್ಲಿ ಮೃತ ಬಾಲಕಿಯೂ ಒಬ್ಬಳಾಗಿದ್ದಾಳೆ. ಮತ್ತು ಆತ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ (ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ) ವಾಸಿಸುತ್ತಿದ್ದಾನೆ ಎಂದು ಪೊಲೀಸರಿಗೆ ಮತ್ತಷ್ಟು ವಿವರಗಳು ಕಂಡುಬಂತು.

ಮಹಾರಾಷ್ಟ್ರದಲ್ಲಿ ಮುಂಬರುವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸರಪಂಚ ಹುದ್ದೆಗೆ ಸ್ಪರ್ಧಿಸುವ ಯೋಜನೆ ಆತನಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಎರಡು ಮಕ್ಕಳ ಕಾನೂನು ಮಿತಿ ಇತ್ತು. ಇದು ಆತನನ್ನು ಸ್ಪರ್ಧಿಸಲು ಅನರ್ಹರನ್ನಾಗಿ ಮಾಡುವುದರಿಂದ, ಹಾಲಿ ಸರಪಂಚ ತಮ್ಮ ಮಕ್ಕಳಲ್ಲಿ ಒಬ್ಬರನ್ನು ದತ್ತು ನೀಡಲು ಸೂಚಿಸಿದ್ದ.
ಆ ವ್ಯಕ್ತಿ ನಂತರ ತನ್ನ ಮಗನ ಜನನ ಪ್ರಮಾಣಪತ್ರವನ್ನು ಬದಲಾಯಿಸಲು ಪ್ರಯತ್ನಿಸಿದ್ದಾನೆ ಮತ್ತು ಅದನ್ನು ಬದಲಾಯಿಸಲು ಪುಣೆ ಮಹಾನಗರ ಪಾಲಿಕೆ ಕಚೇರಿಗೆ ಸಹ ಹೋಗಿದ್ದ. ಆದರೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ.

ಪ್ರಮುಖ ಸುದ್ದಿ :-   ಉಪವಾಸ ಸತ್ಯಾಗ್ರಹದ 21ನೇ ದಿನ : ಜಂತರ್ ಮಂತರ್‌ನಿಂದ ಸೋನಂ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ನಂತರ ಆರೋಪಿಯು ತನ್ನ ಮಕ್ಕಳಲ್ಲಿ ಒಬ್ಬರನ್ನು ಕೊಲ್ಲಲು ನಿರ್ಧರಿಸಿದ. ನಂತರ ಜನರ ಮುಂದೆ ಮಗು ಕಾಣೆಯಾಗಿದೆ ಎಂದು ಬಿಂಬಿಸುವ ಮಾಡಲು ಸಂಚು ರೂಪಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಚಿನ ಭಾಗವಾಗಿ, ಆರೋಪಿಯು ತನ್ನ ಮಗಳನ್ನು ತನ್ನ ಗ್ರಾಮದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ತನ್ನ ಬೈಕ್‌ನಲ್ಲಿ ನಿಜಾಮಾಬಾದ್ ಕಡೆಗೆ ಕರೆತಂದು ಕಾಲುವೆಗೆ ಅವಳನ್ನು ಕಾಲುವೆಗೆ ಎಸೆದಿದ್ದ. ಬಾಲಕಿ ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ವೇಳೆ ಕೊಲೆಯ ರಹಸ್ಯ ಬಯಲಾಗಿದ್ದು, ಆರೋಪಿ ತಂದೆ ಮತ್ತು ಪ್ರಚೋದನೆ ನೀಡಿದ ಸರಪಂಚ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಗಳ ಮೇಲೆ ಅಪಹರಣ, ಕೊಲೆ ಸೇರಿದಂತೆ ಬಿಎನ್‌ಎಸ್ (BNS) ಅಡಿಯಲ್ಲಿ ವಿವಿಧ ಸೆಕ್ಷನ್‌ಗಳ ಮೂಲಕ ಪ್ರಕರಣ ದಾಖಲಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement