ರೋಟರಿ ಕ್ಲಬ್ ಕುಮಟಾಕ್ಕೆ 15 ಪ್ರತಿಷ್ಠಿತ ಪ್ರಶಸ್ತಿಗಳು

ಕುಮಟಾ: ಇತ್ತೀಚೆಗೆ ಕೊಲ್ಲಾಪುರದಲ್ಲಿ ನಡೆದ ರೋಟರಿ ಜಿಲ್ಲೆ 3170ದ 67ನೆಯ ರೋಟರಿ ಜಿಲ್ಲಾ ಸಮಾರಂಭ ‘ಋಣಾನುಬಂಧ’ದಲ್ಲಿ ರೋಟರಿ ಕ್ಲಬ್‌ನ ನಿರಂತರ ಸೇವಾ ಚಟುವಟಿಕೆಗಳು, ಸಮರ್ಪಣೆ ಹಾಗೂ ತಂಡಬದ್ಧ ಕಾರ್ಯಪಟುತನಕ್ಕೆ ರೋಟರಿ ಜಿಲ್ಲಾಡಳಿತದಿಂದ ಮಹತ್ವದ ಗೌರವ ಲಭಿಸಿದೆ. ರೋಟರಿ ಕ್ಲಬ್ ಕುಮಟಾ ಮೂಲಕ ಸಲ್ಲಿಸಲಾದ ಅತ್ಯುತ್ತಮ ಸೇವೆಯನ್ನು ಗುರುತಿಸಿ, ಅದಕ್ಕೆ ಒಟ್ಟು 15 ಪ್ರತಿಷ್ಠಿತ ಪ್ರಶಸ್ತಿಗಳು ಹಾಗೂ ಗೌರವಗಳು ಲಭಿಸಿವೆ.
2024-25ನೆಯ ಸಾಲಿನ ಈ ಪ್ರಶಸ್ತಿಗಳಲ್ಲಿ ಉತ್ತಮ ಕ್ಲಬ್ ಪ್ರಶಸ್ತಿಯನ್ನು ರೋಟರಿ ಕ್ಲಬ್ ಕುಮಟಾ ಪಡೆದುಕೊಂಡಿದೆ. ಉತ್ತಮ ರೋಟರಿ ಅಧ್ಯಕ್ಷ ಪ್ರಶಸ್ತಿಗೆ ರೋಟೇರಿಯನ್ ಅತುಲ್ ಕಾಮತ್ ಆಯ್ಕೆಯಾಗಿದ್ದಾರೆ. ಉತ್ತಮ ಕಾರ್ಯದರ್ಶಿ ಪ್ರಶಸ್ತಿಯನ್ನು ರೋಟೇರಿಯನ್ ಸಿಎ ವಿನಾಯಕ ಹೆಗಡೆ ಪಡೆದಿದ್ದಾರೆ. ಜಿಲ್ಲಾ ಸೇವಾ ಪ್ರಶಸ್ತಿಯನ್ನು ರೋಟೇರಿಯನ್ ಜಯಶ್ರೀ ಕಾಮತ್ ಅವರಿಗೆ ನೀಡಲಾಗಿದೆ. ಇದಲ್ಲದೆ, ಕ್ಲಬ್‌ನ ಮೊದಲ ಎಂಡೋವ್ಮೆಂಟ್ ಗಿಫ್ಟ್‌ಗೆ ವಿಶೇಷ ಗೌರವ ಲಭಿಸಿದ್ದು, ಪ್ರಮುಖ ದಾನಿಗಳನ್ನು ಜಿಲ್ಲಾಡಳಿತ ಅಭಿನಂದಿಸಿದೆ.

ಮೇಜರ್ ಡೋನರ್ ಲೆವೆಲ್ 1 ವಿಭಾಗದಲ್ಲಿ, ರೋಟೇರಿಯನ್ ಸಿಎ ವಿನಾಯಕ ಹೆಗಡೆ, ರೋಟೇರಿಯನ್ ಜಯವಿಠ್ಠಲ ಕುಬಾಲ, ರೋಟೇರಿಯನ್ ವಸಂತ್ ರಾವ್, ರೋಟೇರಿಯನ್ ಕಿರಣ ನಾಯಕ ಅವರಿಗೆ ಗೌರವ ಸಲ್ಲಿಸಲಾಯಿತು.
ಮೇಜರ್ ಡೋನರ್ ಲೆವೆಲ್ 2 ವಿಭಾಗದಲ್ಲಿ ರೋಟೇರಿಯನ್ ಜಯಶ್ರೀ ಕಾಮತ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕ್ಲಬ್‌ನ ಎಲ್ಲಾ ಸದಸ್ಯರ ಸಹಕಾರ, ಮಾರ್ಗದರ್ಶನ ಹಾಗೂ ಉತ್ತೇಜನದಿಂದ ಎರಡು ಗ್ಲೋಬಲ್ ಗ್ರಾಂಟ್ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಎಂಡೋವ್ಮೆಂಟ್ ಫಂಡ್ಗೆ ಕೊಡುಗೆ ನೀಡುವುದರ ಜೊತೆಗೆ ಅನೇಕ ಅರ್ಥಪೂರ್ಣ ಹಾಗೂ ಪರಿಣಾಮಕಾರಿ ಸೇವಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

ಪ್ರಮುಖ ಸುದ್ದಿ :-   ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ; ಕಕ್ಷೆ ತಲುಪಿದ ಸ್ಕೈರೂಟ್‌ನ ಖಾಸಗಿ ರಾಕೆಟ್ ‘ವಿಕ್ರಂ-1’

ಈ ಸಂದರ್ಭದಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷರಾಗಿದ್ದ ಅತುಲ್ ಕಾಮತ, ಕ್ಲಬ್‌ನ ಪ್ರತಿಯೊಬ್ಬ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿ, ಈ ಸಾಧನೆ ಎಲ್ಲರ ಒಗ್ಗಟ್ಟಿನ ಫಲವಾಗಿದೆ ಎಂದು ತಿಳಿಸಿದರು.
ಜಿಲ್ಲಾ ಗವರ್ನರ್ ರೋಟೇರಿಯನ್ ಶರದ್ ಪೈ ಅವರ ಉತ್ತಮ ನಾಯಕತ್ವ ಹಾಗೂ ನಿರಂತರ ಬೆಂಬಲಕ್ಕೆ, ಮತ್ತು ಅಸಿಸ್ಟೆಂಟ್ ಗವರ್ನರ್ ರೋಟೇರಿಯನ್ ಸ್ಟೀಫನ್ ರೊಡ್ರಿಗ್ಸ್ ಅವರ ಮಾರ್ಗದರ್ಶನ ಹಾಗೂ ಉತ್ತೇಜನಕ್ಕೆ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು. ಈ ಗೌರವವು ಕ್ಲಬ್ನ ಪ್ರತಿಯೊಬ್ಬ ಸದಸ್ಯರದ್ದೇ ಆಗಿದ್ದು, ಒಟ್ಟಾಗಿ ಸೇವೆ, ಒಟ್ಟಾಗಿ ಬೆಳಕು ಎಂಬ ಧ್ಯೇಯದೊಂದಿಗೆ ರೋಟರಿ ಕ್ಲಬ್ ಕುಮಟಾ ಮುಂದುವರಿಯಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಪ್ರಶಸ್ತಿ ಪದಾನ ಸಮಾರಂಭದಲ್ಲಿ ರೊ ಅತುಲ್ ಕಾಮತ, ರೊ. ಸಿಎ ವಿನಾಯಕ ಹೆಗಡೆ, ರೊ. ಕಿರಣ ನಾಯಕ, ರೊ. ಜಯಶ್ರೀ ಕಾಮತ, ರೊ. ಗುರುರಾಜ ಶೆಟ್ಟಿ, ರೋಟರಿ ಅಸಿಸ್ಟ್ಂಟ್ ಗವರ್ನರ್ ಚೇತನ ಶೇಟ್, ರೊ. ಗಣೇಶ ನಾಯ್ಕ, ಏನ್ಸ್‌ ದೀಪಾ ನಾಯಕ, ರೊ. ನಿಖಿಲ್ ಕ್ಷೇತ್ರಪಾಲ, ರೊ. ಗುರುಪ್ರಸಾದ ಕಾಮತ, ಏನ್ಸ್ ದೀಪ್ತಿ ಚೇತನ ಶೇಟ್, ಮೊದಲಾದವರು ಉಪಸ್ಥಿತರಿದ್ದರೆಂದು ರೋಟರಿಯ ಮಾಧ್ಯಮ ಸಲಹೆಗಾರ ಎನ್. ಆರ್. ಗಜು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement