ಟಿ20 ವಿಶ್ವಕಪ್ 2026 : ಸೂಪರ್ 8ರ ಪಂದ್ಯಗಳ ವೇಳಾಪಟ್ಟಿಯ ವಿವರ

ಕೊಲಂಬೊ: ಬುಧವಾರ ಕೊಲಂಬೊದಲ್ಲಿ ನಡೆದ ತನ್ನ ಕೊನೆಯ ಗ್ರೂಪ್ ಎ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನಮೀಬಿಯಾವನ್ನು ಸೋಲಿಸಿದ ನಂತರ ಟಿ20 ವಿಶ್ವಕಪ್ ಸೂಪರ್ 8 ಹಂತ ಪ್ರವೇಶಿಸಿದ ತಂಡಗಳು ನಿರ್ಧಾರವಾಗಿದೆ.
ಗ್ರೂಪ್ ಎ ಯಿಂದ,  ಹಾಲಿ ಚಾಂಪಿಯನ್ ಭಾರತ ಮತ್ತು ಪಾಕಿಸ್ತಾನ ಸೂಪರ್‌ 8ರ ಹಂತ ಪ್ರವೇಶಿವೆ. ಗ್ರೂಪ್ ಬಿ ಯಿಂದ ಶ್ರೀಲಂಕಾ ಮತ್ತು ಜಿಂಬಾಬ್ವೆ ಅರ್ಹತೆ ಪಡೆದರೆ. ಗ್ರೂಪ್ ಸಿ ಯಿಂದ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಸೂಪರ್ 8 ತಂಡ ಪ್ರವೇಶಿಸಿವೆ, ಗ್ರೂಪ್ ಡಿ ಯಿಂದ, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಸೂಪರ್‌ 8 ಹಂತಕ್ಕೆ ಅರ್ಹತೆ ಪಡೆದಿವೆ.
ಅರ್ಹ ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ ಪ್ರವೇಶಿಸುತ್ತವೆ.
ಗುಂಪು 1: ಭಾರತ, ಜಿಂಬಾಬ್ವೆ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ತಂಡಗಳಿವೆ.
ಗುಂಪು 2: ಪಾಕಿಸ್ತಾನ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳಿವೆ.
ಗುಂಪು 1ರ ವೇಳಾಪಟ್ಟಿ
ಫೆಬ್ರವರಿ 22: ಭಾರತ- ದಕ್ಷಿಣ ಆಫ್ರಿಕಾ ಪಂದ್ಯ, ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್ (ಸಂಜೆ 7 )
ಫೆಬ್ರವರಿ 23: ಜಿಂಬಾಬ್ವೆ -ವೆಸ್ಟ್ ಇಂಡೀಸ್ ಪಂದ್ಯ, ವಾಂಖೆಡೆ ಕ್ರೀಡಾಂಗಣ, ಮುಂಬೈ (ಸಂಜೆ 7)
ಫೆಬ್ರವರಿ 26: ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್, ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್ (ಮಧ್ಯಾಹ್ನ 3 )
ಫೆಬ್ರವರಿ 26: ಭಾರತ-ಜಿಂಬಾಬ್ವೆ, ಎಂಎ ಚಿದಂಬರಂ ಕ್ರೀಡಾಂಗಣ, ಚೆನ್ನೈ (ಸಂಜೆ 7 )
ಮಾರ್ಚ್ 1: ಜಿಂಬಾಬ್ವೆ -ದಕ್ಷಿಣ ಆಫ್ರಿಕಾ, ಅರುಣ ಜೇಟ್ಲಿ ಕ್ರೀಡಾಂಗಣ, ದೆಹಲಿ (ಮಧ್ಯಾಹ್ನ 3)
ಮಾರ್ಚ್ 1: ಭಾರತ -ವೆಸ್ಟ್ ಇಂಡೀಸ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ (ಸಂಜೆ 7 )
ಗುಂಪು 2ರ ವೇಳಾಪಟ್ಟಿ
ಫೆಬ್ರವರಿ 21: ನ್ಯೂಜಿಲೆಂಡ್-ಪಾಕಿಸ್ತಾನ ಪಂದ್ಯ, ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣ (ಸಂಜೆ 7 )
ಫೆಬ್ರವರಿ 22: ಇಂಗ್ಲೆಂಡ್-ಶ್ರೀಲಂಕಾ, ಪಲ್ಲೆಕೆಲೆ ಕ್ರಿಕೆಟ್ ಕ್ರೀಡಾಂಗಣ, ಕ್ಯಾಂಡಿ (ಮಧ್ಯಾಹ್ನ 3)
ಫೆಬ್ರವರಿ 24: ಇಂಗ್ಲೆಂಡ್-ಪಾಕಿಸ್ತಾನ, ಪಲ್ಲೆಕೆಲೆ ಕ್ರಿಕೆಟ್ ಕ್ರೀಡಾಂಗಣ, ಕ್ಯಾಂಡಿ (ಸಂಜೆ 7)
ಫೆಬ್ರವರಿ 25: ನ್ಯೂಜಿಲೆಂಡ್-ಶ್ರೀಲಂಕಾ, ಆರ್. ಪ್ರೇಮದಾಸ ಕ್ರೀಡಾಂಗಣ, ಕೊಲಂಬೊ (ಸಂಜೆ 7)
ಫೆಬ್ರವರಿ 27: ಇಂಗ್ಲೆಂಡ್ -ನ್ಯೂಜಿಲೆಂಡ್, ಆರ್. ಪ್ರೇಮದಾಸ ಕ್ರೀಡಾಂಗಣ, ಕೊಲಂಬೊ (ಸಂಜೆ 7)
ಫೆಬ್ರವರಿ 28: ಪಾಕಿಸ್ತಾನ ವಿರುದ್ಧ ಶ್ರೀಲಂಕಾ, ಪಲ್ಲೆಕೆಲೆ ಕ್ರಿಕೆಟ್ ಕ್ರೀಡಾಂಗಣ, ಕ್ಯಾಂಡಿ (ಸಂಜೆ 7)
2026 ರ ಐಸಿಸಿ ಪುರುಷರ ಟಿ 20 ವಿಶ್ವಕಪ್‌ನ ಸೂಪರ್ ಎಂಟು ಹಂತಕ್ಕೆ ಅರ್ಹತೆ ಪಡೆದಿರುವ ತಂಡಗಳು 2028 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್‌ ಆವೃತ್ತಿಯ ಪಂದ್ಯಾವಳಿಗೆ ಅರ್ಹತೆಯನ್ನು ಪಡೆದುಕೊಂಡಿವೆ.
ಅರ್ಹತಾ ಮಾನದಂಡಗಳ ಪ್ರಕಾರ, 2028ರ ಟೂರ್ನಿಯನ್ನು ಜಂಟಿಯಾಗಿ ಆಯೋಜಿಸುತ್ತಿರುವ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಈಗಾಗಲೇ ಸ್ಥಾನ ಖಚಿತಪಡಿಸಿಕೊಂಡಿವೆ.
ಮಾರ್ಚ್ 9ರ ಐಸಿಸಿ ರ್ಯಾಂಕಿಂಗ್ ಆಧಾರದ ಮೇಲೆ ಮುಂದಿನ ಮೂರು ತಂಡಗಳು ಅರ್ಹತೆ ಪಡೆಯಲಿವೆ. ಪ್ರಸ್ತುತ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಇವುಗಳ ಸ್ಥಾನ ಬಹುತೇಕ ಖಚಿತವಾಗಿದೆ.
ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ಆ ಸ್ಥಾನಗಳನ್ನು ಭದ್ರಪಡಿಸಿಕೊಳ್ಳಲಿವೆ, ಕಟ್-ಆಫ್ ದಿನಾಂಕದ ಮೊದಲು ಅವರ ಶ್ರೇಯಾಂಕಗಳನ್ನು ಬದಲಾಯಿಸಬಹುದಾದ ಯಾವುದೇ ಮುಂಬರುವ ಅಂತರರಾಷ್ಟ್ರೀಯ ಪಂದ್ಯಗಳನ್ನು ನಿಗದಿಪಡಿಸಲಾಗಿಲ್ಲ.
ಒಟ್ಟು 20 ತಂಡಗಳು ಪಾಲ್ಗೊಳ್ಳಯವ , 2028ರ ಈ ಟೂರ್ನಿಯಲ್ಲಿ ಉಳಿದ 8 ಸ್ಥಾನಗಳನ್ನು ಪ್ರಾದೇಶಿಕ ಅರ್ಹತಾ ಸುತ್ತಿನ (Regional Qualifiers) ಮೂಲಕ  ನಿರ್ಧರಿಸಲಾಗುತ್ತದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement