ಅಮೆರಿಕ-ಇರಾನ್‌ ಸಂಘರ್ಷ : ಮಧ್ಯಪ್ರಾಚ್ಯಕ್ಕೆ ಸೈನ್ಯ ಜಮಾವಣೆಗೆ ಬೃಹತ್ “ವೈಮಾನಿಕ ಸೇತುವೆ” ನಿರ್ಮಿಸಿದ ಅಮೆರಿಕ

ಇರಾನ್ ಜೊತೆಗಿನ ಪರಮಾಣು ಒಪ್ಪಂದದ ಮಾತುಕತೆಗಳು ಅನಿಶ್ಚಿತತೆಯಲ್ಲಿರುವ ಬೆನ್ನಲ್ಲೇ, ಅಮೆರಿಕವು ಮಧ್ಯಪ್ರಾಚ್ಯದತ್ತ ತನ್ನ ಮಿಲಿಟರಿ ವಿಮಾನಗಳ ಸಂಚಾರವನ್ನು ತೀವ್ರಗೊಳಿಸಿದೆ. ಫ್ಲೈಟ್ ಟ್ರ್ಯಾಕಿಂಗ್ ಡೇಟಾ ಪ್ರಕಾರ, ಯುದ್ಧೋಪಕರಣಗಳು ಮತ್ತು ಸೈನಿಕರನ್ನು ಹೊತ್ತ ವಿಮಾನಗಳು ನಿರಂತರವಾಗಿ ಈ ಪ್ರದೇಶದತ್ತ ಸಾಗುತ್ತಿವೆ.
ಫ್ಲೈಟ್‌ ರಾಡಾರ್ ವಿಡಿಯೋಗಳು ಅಮೆರಿಕದ ನೆಲೆಗಳಿಂದ ಹೊರಟ ಫೈಟರ್ ಜೆಟ್ ಮತ್ತು ಟ್ಯಾಂಕರ್ ವಿಮಾನಗಳು ಅಟ್ಲಾಂಟಿಕ್ ಸಾಗರ, ಯುರೋಪ್ ಮತ್ತು ಮೆಡಿಟರೇನಿಯನ್ ಮೂಲಕ ಸಾಗುತ್ತಿರುವುದನ್ನು ತೋರಿಸಿವೆ. ಇದನ್ನು ‘ಡಿಜಿಟಲ್ ಏರ್ ಬ್ರಿಡ್ಜ್’ (ವೈಮಾನಿಕ ಸೇತುವೆ) ಎಂದು ಬಣ್ಣಿಸಲಾಗಿದೆ. ಏರ್‌ ಬ್ರಿಡ್ಜ್‌ (Air Bridge) ಎಂದರೆ ವಿಮಾನಗಳ ಮೂಲಕ ನಿರಂತರವಾಗಿ ಸೇನಾ ಪಡೆ ಅಥವಾ ಸಾಮಗ್ರಿಗಳನ್ನು ಸಾಗಿಸುವ ವ್ಯವಸ್ಥೆ ಎಂದರ್ಥ.

ನಿಯೋಜಿಸಲಾದ ಪ್ರಮುಖ ಯುದ್ಧ ವಿಮಾನಗಳು:
F-16 ಫೈಟಿಂಗ್ ಫಾಲ್ಕನ್ಸ್ ಯುದ್ಧ ವಿಮಾಗಳು ಜರ್ಮನಿಯ ಸ್ಪ್ಯಾಂಗ್‌ಡಾಹ್ಲೆಮ್, ಇಟಲಿಯ ಅವಿಯಾನೋ ಮತ್ತು ದಕ್ಷಿಣ ಕೆರೊಲಿನಾದ ಮೆಕ್‌ಎಂಟೈರ್ ನೆಲೆಗಳಿಂದ ಮಧ್ಯಪ್ರಾಚ್ಯದ ಕಡೆ ಸಾಗಿವೆ. F-15E ಸ್ಟ್ರೈಕ್ ಈಗಲ್ಸ್ ಯುದ್ಧ ವಿಮಾನವು ಬ್ರಿಟನ್‌ನ RAF ಲೇಕನ್‌ಹೀತ್‌ನಿಂದ ರವಾನೆಯಾಗಿದೆ.
F-22 ರಾಪ್ಟರ್ಸ್ ವಿಮಾನವು ವರ್ಜೀನಿಯಾದ ಲ್ಯಾಂಗ್ಲಿ-ಯೂಸ್ಟಿಸ್ ನೆಲೆಯಿಂದ ರವಾನೆಯಾಗಿದೆ. ಇವು ಕಳೆದ ವರ್ಷದ ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಸೇರಿದಂತೆ ಇರಾನ್ ಪರಮಾಣು ತಾಣಗಳ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದವು.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

ಇದಲ್ಲದೆ ಯುದ್ಧ ವಿಮಾನಗಳ ಜೊತೆಗೆ ಅಮೆರಿಕ ಅದಕ್ಕೆ ಸಪೋರ್ಟ್‌ ವ್ಯವಸ್ಥೆಗಳನ್ನೂ ಕಳುಹಿಸಿದೆ.
RC-135 ರಿವೆಟ್ ಜಾಯಿಂಟ್ ಎಂಬ ವಿಮಾನವನ್ನು ಗುಪ್ತಚರ ಮಾಹಿತಿ ಸಂಗ್ರಹಣೆಗಾಗಿ ಇವುಗಳನ್ನು ಫ್ಲೋರಿಡಾದಿಂದ ಗ್ರೀಸ್‌ನ ಕ್ರೀಟ್ ದ್ವೀಪಕ್ಕೆ ನಿಯೋಜಿಸಲಾಗಿದೆ. P-8 ಪೋಸಿಡಾನ್ ಎಂಬ ಕಡಲ ಗಸ್ತ ವಿಮಾನಗಳನ್ನು ನಿಯೋಜಿಸಲಾಗಿದೆ. ಇಂಧನ ಮರುಪೂರಣ ವಿಮಾನಗಳು (Refuelling aircraft) ಮತ್ತು ವೈಮಾನಿಕ ಕಮಾಂಡ್ ಅಂಡ್ ಕಂಟ್ರೋಲ್ ವಿಮಾನಗಳು ಈ ಪಟ್ಟಿಯಲ್ಲಿವೆ.
ನೌಕಾಪಡೆಯ ಬಲವರ್ಧನೆ
ಅಮೆರಿಕದ ನೌಕಾಪಡೆಯೂ ತನ್ನ ಉಪಸ್ಥಿತಿಯನ್ನು ಹೆಚ್ಚಿಸಿದೆ ಎಂದು ‘ಹಾರೆಟ್ಜ್’ ವರದಿ ಮಾಡಿದೆ. ಯುಎಸ್‌ಎಸ್‌ (USS) ಅಬ್ರಹಾಂ ಲಿಂಕನ್ ನೌಕಾಪಡೆಯ ಹಡಗು ಅರೇಬಿಯನ್ ಸಮುದ್ರದಲ್ಲಿದ್ದು, ಇದರಲ್ಲಿ F-35C ಮತ್ತು EA-18 ವಿಮಾನಗಳು ಬೀಡುಬಿಟ್ಟಿದೆ.
ಯುಎಸ್‌ಎಸ್‌ (USS) ಜೆರಾಲ್ಡ್ ಆರ್ ಫೋರ್ಡ್ ನೌಕೆಯು ಕೆರಿಬಿಯನ್‌ನಿಂದ ಪೂರ್ವ ಮೆಡಿಟರೇನಿಯನ್ ಪ್ರದೇಶಕ್ಕೆ ಚಲಿಸುತ್ತಿದೆ.

ಸಂಘರ್ಷದ ಹಿನ್ನೆಲೆ ಮತ್ತು ಎಚ್ಚರಿಕೆ
ಇರಾನ್‌ನ ಯುರೇನಿಯಂ ಪುಷ್ಟೀಕರಣವನ್ನು ಸಂಪೂರ್ಣವಾಗಿ ನಿಷೇಧಿಸುವ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸುತ್ತಿದ್ದಾರೆ. ಇತ್ತ ಇರಾನ್ ಮಾತುಕತೆ ನಡೆಯುತ್ತಿದೆ ಎಂದು ಹೇಳಿದರೂ ಯಾವುದೇ ನಿರ್ಣಾಯಕ ಒಪ್ಪಂದವಾಗಿಲ್ಲ.
ಒಂದು ವೇಳೆ ಆದೇಶ ಬಂದರೆ, ಇರಾನ್‌ನ ಭದ್ರತಾ ಕೇಂದ್ರಗಳು ಅಥವಾ ನಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಅಥವಾ ಆಡಳಿತ ಬದಲಾವಣೆ (Regime change) ಮಾಡಲು ಅಮೆರಿಕ ಸೇನೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ಯಾವುದೇ ದಾಳಿ ನಡೆದರೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಇರಾನ್ ಎಚ್ಚರಿಸಿದೆ.

ಪ್ರಮುಖ ಸುದ್ದಿ :-   ಕ್ರಿಕೆಟ್ ದಂತಕತೆ ಸರ್ ಗ್ಯಾರಿ ಸೋಬರ್ಸ್ ನಿಧನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement