ವಿಡಿಯೋ | ಹಂದಿಗಳನ್ನು ಓಡಿಸಲು ಬಂತು ರೋಬೋಟ್ ; ಕಾಡುಹಂದಿಗಳನ್ನು ಬೆನ್ನಟ್ಟಿ ಓಡಿಸಿದ ಮಾನವರೂಪಿ ರೋಬೋಟ್…!

ಹ್ಯೂಮನಾಯ್ಡ್ ರೋಬೋಟ್‌ಗಳು ಇನ್ನೂ ನಮ್ಮ ಮನೆಯ ಕೆಲಸಗಳನ್ನು ಮಾಡಲು ಸಂಪೂರ್ಣವಾಗಿ ಸಿದ್ಧವಾಗಿಲ್ಲದಿರಬಹುದು, ಆದರೆ ಮನರಂಜನಾ ಕ್ಷೇತ್ರದಲ್ಲಿ ಮಾತ್ರ ಅವು ಅಬ್ಬರಿಸುತ್ತಿವೆ. ಮಾರ್ಷಲ್ ಆರ್ಟ್ಸ್ ಸಾಹಸಗಳಿರಲಿ ಅಥವಾ ಟೆನಿಸ್ ಅಂಕಣದಲ್ಲಿನ ಆಟವಿರಲಿ, ಈ ಮಾನವ ರೂಪದ ರೋಬೋಟ್‌ಗಳು ದಿನದಿಂದ ದಿನಕ್ಕೆ ಪ್ರಗತಿ ಸಾಧಿಸುತ್ತಿವೆ. ಈಗ ಪೋಲೆಂಡ್‌ನ ವಾರ್ಸಾದಲ್ಲಿ ಕಂಡುಬಂದ ವಿಚಿತ್ರ ಸನ್ನಿವೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಯುನಿಟ್ರೀ G1 (Unitree G1) ಮಾದರಿಯ ಕಸ್ಟಮೈಸ್ ಮಾಡಿದ ರೋಬೋಟ್ ವಾರ್ಸಾದ ಬೀದಿಗಳಲ್ಲಿ ಕಂಡುಬಂದ ಕಾಡುಹಂದಿಗಳ ಹಿಂಡನ್ನು ಬೆನ್ನಟ್ಟುವ ದೃಶ್ಯ ವೈರಲ್ ಆಗಿದೆ. ಈ ರೋಬೋಟ್‌ಗೆ “ಎಡ್ವರ್ಡ್ ವಾರ್ಚೋಕಿ” ಎಂದು ಹೆಸರಿಡಲಾಗಿದೆ.

ವೈರಲ್ ವೀಡಿಯೊದಲ್ಲಿ, ಎಡ್ವರ್ಡ್ ಹಸಿರು ಹುಲ್ಲಿನ ಮೇಲೆ ಓಡುತ್ತಿದ್ದರೆ, ಕಾಡುಹಂದಿಗಳು ಅಲ್ಲಿಂದ ತಪ್ಪಿಸಿಕೊಳ್ಳಲು ಓಡುತ್ತಿರುವುದು ಕಂಡುಬಂದಿದೆ. ಆದಾಗ್ಯೂ, ಕಾಡುಹಂದಿಗಳ ವೇಗಕ್ಕೆ ಸಮನಾಗಿ ಮಾನವರೂಪಿ ರರೋಬೋಟ್‌ಗೆ ಓಡಲು ಸಾಧ್ಯವಾಗದಿದ್ದಾಗ, ಅದು ಹತಾಶೆಯಿಂದ ಆಕಾಶದತ್ತ ಕೈ ಬೀಸಿ ಆಕ್ರೋಶ ವ್ಯಕ್ತಪಡಿಸುವ ದೃಶ್ಯ ಕಂಡುಬಂದಿದೆ.
ಸದ್ಯ ವಾರ್ಸಾ ನಗರವು ಕಾಡುಹಂದಿಗಳ ಹಾವಳಿಯಿಂದ ತತ್ತರಿಸಿದೆ. ಈ ಎರಡು ಕಾಲಿನ ರೋಬೋಟ್‌ಗಳು ಅತಿ ವೇಗವಾಗಿ ಓಡಲು ವಿನ್ಯಾಸಗೊಂಡಿಲ್ಲದಿದ್ದರೂ, ಕಾಡುಹಂದಿಗಳನ್ನು ಬೆನ್ನಟ್ಟುವ ಈ ವಿಚಿತ್ರ ದೃಶ್ಯ ಸ್ಥಳೀಯರಿಗೆ ಭಾರಿ ಕುತೂಹಲ ಮೂಡಿಸಿದೆ.

ಯುನಿಟ್ರೀ ರೊಬೊಟಿಕ್ಸ್‌ನ ಕಮಾಲ್
ಕಳೆದ ವರ್ಷ ಯುನಿಟ್ರೀ ರೊಬೊಟಿಕ್ಸ್ ಸಂಸ್ಥೆಯು ತನ್ನ ‘R1’ ರೋಬೋಟ್ ಅನ್ನು ಅನಾವರಣಗೊಳಿಸಿತ್ತು. ಇದರ ಬೆಲೆ ಸುಮಾರು 5 ಲಕ್ಷ ರೂಪಾಯಿಗಳಿಗಿಂತ ($6,000) ಅಧಿಕವಾಗಿದೆ. ಸುಮಾರು 55 ಪೌಂಡ್ ತೂಕವಿರುವ ಈ ರೋಬೋಟ್, 26 ಕೀಲುಗಳನ್ನು (Joints) ಹೊಂದಿದ್ದು ಅತ್ಯಂತ ಸುಲಭವಾಗಿ ಚಲಿಸಬಲ್ಲದು. ಇದರಲ್ಲಿ ವಾಯ್ಸ್ ಮತ್ತು ಇಮೇಜ್ ರೆಕಗ್ನಿಷನ್ ಸೇರಿದಂತೆ ಮಲ್ಟಿಮೋಡಲ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಬಳಸಲಾಗಿದೆ.
ಕೇವಲ ಬಾಕ್ಸಿಂಗ್ ಮಾತ್ರವಲ್ಲದೆ, ನೆಲದ ಮೇಲೆ ಮಲಗಿದ ಸ್ಥಿತಿಯಿಂದ ಕೈಗಳ ಸಹಾಯವಿಲ್ಲದೆ ನೇರವಾಗಿ ಎದ್ದು ನಿಲ್ಲುವ ‘ಕಿಪ್-ಅಪ್’ (Kip-up) ಎಂಬ ಸಂಕೀರ್ಣ ಜಿಮ್ನಾಸ್ಟಿಕ್ ಸಾಹಸವನ್ನೂ ಈ ರೋಬೋಟ್ ಮಾಡಬಲ್ಲದು. ಸದ್ಯಕ್ಕೆ ‘ಎಡ್ವರ್ಡ್’ ಹಂದಿಗಳನ್ನು ಹಿಡಿಯುವಲ್ಲಿ ವಿಫಲವಾಗಿರಬಹುದು, ಆದರೆ ಭವಿಷ್ಯದ ತಂತ್ರಜ್ಞಾನಕ್ಕೆ ಇದು ಮುನ್ನುಡಿ ಬರೆದಿದೆ.

ಪ್ರಮುಖ ಸುದ್ದಿ :-   ಟ್ರಂಪ್ ಹತ್ಯೆ ಮಾಡಿದವರಿಗೆ ₹96 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿದ ಇರಾನ್ ಬೆಂಬಲಿತ ಇರಾಕಿನ ಬಂಡುಕೋರರ ಗುಂಪು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement