ಮುಂಬೈ: ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಖಳನಾಯಕ ಮತ್ತು ವೈವಿಧ್ಯಮಯ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಖ್ಯಾತ ನಟ ಪ್ರದೀಪ ಸಿಂಗ್ ರಾವತ್ ಅವರು ಮಂಗಳವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ನಟ ಪ್ರದೀಪ ರಾವತ್ ಮಂಗಳವಾರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ನಟನನ್ನು ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 10 ದಿನಗಳ ಹಿಂದೆ ಭಿವಾಂಡಿಯ ಕ್ಯಾನ್ಸರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರು ಪತ್ನಿ ಮತ್ತು ಮಗ ವಿಕ್ರಮಾದಿತ್ಯ ಅವರನ್ನು ಅಗಲಿದ್ದಾರೆ.
ನಟ ಪ್ರದೀಪ ರಾವತ್ ಮಂಗಳವಾರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ನಟನನ್ನು ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 10 ದಿನಗಳ ಹಿಂದೆ ಭಿವಾಂಡಿಯ ಕ್ಯಾನ್ಸರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರು ಪತ್ನಿ ಮತ್ತು ಮಗ ವಿಕ್ರಮಾದಿತ್ಯ ಅವರನ್ನು ಅಗಲಿದ್ದಾರೆ.
1952ರಲ್ಲಿ ದೆಹಲಿಯಲ್ಲಿ ಜನಿಸಿದ್ದ ರಾವತ್, ಮೂರು ದಶಕಗಳಿಗೂ ಅಧಿಕ ಅವಧಿಯ ತಮ್ಮ ಸಿನಿ ಜೀವನದಲ್ಲಿ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ನೂರಾರು ಪಾತ್ರಗಳನ್ನು ನಿರ್ವಹಿಸಿದ್ದರು. ಜೊತೆಗೆ ದೂರದರ್ಶನದ ಹಲವು ಧಾರಾವಾಹಿಗಳಲ್ಲೂ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು. ವೃತ್ತಿಜೀವನದ ಆರಂಭದಲ್ಲಿ ಪ್ರಮುಖ ಖಳನಾಯಕನಾಗಿ ಹೆಸರು ಗಳಿಸಿದ ಅವರು, ನಂತರದ ದಿನಗಳಲ್ಲಿ ಅಷ್ಟೇ ಪರಿಣಾಮಕಾರಿ ಪಾತ್ರನಟನಾಗಿ ಹಲವು ವೈವಿಧ್ಯಮಯ ಪಾತ್ರಗಳ ಮೂಲಕ ಹೆಸರು ಮಾಡಿದ್ದರು.
ತಮಿಳಿನ ‘ಗಜಿನಿ’ (2005) ಚಿತ್ರದಲ್ಲಿ ಅವರು ನಿರ್ವಹಿಸಿದ ಕ್ರೂರ ಖಳನಾಯಕನ ಪಾತ್ರ ಅವರಿಗೆ ದೇಶವ್ಯಾಪಿ ಖ್ಯಾತಿ ತಂದುಕೊಟ್ಟಿತು. ಆ ಪಾತ್ರಕ್ಕೆ ಸಿಕ್ಕ ಅದ್ಭುತ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ, 2008ರಲ್ಲಿ ಬಿಡುಗಡೆಯಾದ ಆಮೀರ್ ಖಾನ್ ಅಭಿನಯದ ಹಿಂದಿ ರಿಮೇಕ್ ‘ಗಜಿನಿ’ಯಲ್ಲೂ ಅದೇ ಪಾತ್ರವನ್ನು ಅವರು ನಿರ್ವಹಿಸಿದರು. ಇದಕ್ಕೂ ಮುನ್ನ ಅವರು ಆಮೀರ್ ಖಾನ್ ಜೊತೆ ‘ಲಾಗಾನ್’ (2001) ಚಿತ್ರದಲ್ಲೂ ಅಭಿನಯಿಸಿದ್ದರು.
‘ಮಹಾಭಾರತ’ದ ಅಶ್ವತ್ಥಾಮ ಪಾತ್ರದಿಂದ ಮನೆಮಾತು
1985ರಲ್ಲಿ ಬಿಡುಗಡೆಯಾದ ‘ಮೇರಿ ಜಂಗ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರೂ, ಬಿ.ಆರ್. ಚೋಪ್ರಾ ಅವರ ಐತಿಹಾಸಿಕ ದೂರದರ್ಶನ ಧಾರಾವಾಹಿ ‘ಮಹಾಭಾರತ’ ದಲ್ಲಿ ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮ ಪಾತ್ರದಲ್ಲಿ ನಟಿಸಿದ ಬಳಿಕ ಅವರು ದೇಶಾದ್ಯಂತ ಮನೆಮಾತಾದರು.
ಪ್ರದೀಪ ಸಿಂಗ್ ರಾವತ್ ಅವರ ಸಿನಿ ಪಯಣ ಮೂರು ದಶಕಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದು, ಅವರು ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.
ಕನ್ನಡ ಸಿನೆಮಾದಲ್ಲಿಯೂ ಹೆಸರು...
ಕನ್ನಡ ಸಿನೆಮಾಗಳಲ್ಲಿಯೂ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದ ಅವರು, ‘ಪರೋಡಿ’ ಸಿನೆಮಾ ಅವರ ಮೊದಲ ಕನ್ನಡ ಸಿನೆಮಾ ಆಗಿತ್ತು.. ಆ ಬಳಿಕ ಗಜ, ಅಭಯ, ‘ಬಚ್ಚನ್’, ‘ಎಲೆಕ್ಷನ್’, ‘ಶಿವಲಿಂಗ’, ‘ಲಕ್ಷ್ಮಣ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದರು. 2022ರ ‘ಚಾಂಪಿಯನ್’ ಅವರ ಕೊನೆಯ ಕನ್ನಡ ಸಿನಿಮಾ ಆಗಿತ್ತು.
‘ಸ್ಯೇ’ ಚಿತ್ರದೊಂದಿಗೆ ಹೊಸ ಮೈಲಿಗಲ್ಲು
ಅವರ ಪ್ರಮುಖ ಚಿತ್ರಗಳಲ್ಲಿ ಸರಫರೋಶ್, ದಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ, ಸ್ಟಾಲಿನ್, ವೀರಂ, 1: ನೆನೊಕ್ಕಡಿನೆ, ಲೌಕ್ಯಂ, ನೆನು ಶೈಲಜಾ, ಸರೈನೋಡು, ನೆನೇ ರಾಜು ನೆನೇ ಮಂತ್ರಿ, ಆಯಿರತಿಲ್ ಇರುವರ್, ಮಾರ್ಕೆಟ್ ರಾಜಾ MBBS ಮತ್ತು ಮಿಸ್ ಮ್ಯಾಚ್ ಸೇರಿವೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಸ್ಯೇ’ ಚಿತ್ರವೇ ರಾವತ್ ಅವರ ತೆಲುಗು ಚಿತ್ರರಂಗದ ಪ್ರವೇಶಕ್ಕೆ ಕಾರಣವಾಗಿದ್ದು, ಇದೇ ಚಿತ್ರ ಅವರ ವೃತ್ತಿಜೀವನದ ಪ್ರಮುಖ ಮೈಲಿಗಲ್ಲುಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ತಮ್ಮ ಅದ್ಭುತ ಅಭಿನಯ, ವಿಶಿಷ್ಟ ವ್ಯಕ್ತಿತ್ವ ಮತ್ತು ಪ್ರಭಾವಿ ಖಳನಾಯಕ ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಳಿಯದ ಗುರುತು ಮೂಡಿಸಿರುವ ಪ್ರದೀಪ ಸಿಂಗ್ ರಾವತ್ ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ