ಪರೀಕ್ಷೆಯಲ್ಲಿ ಉತ್ತರ ಪಡೆಯಲು ಚಾಟ್‌ಜಿಪಿಟಿ ಬಳಕೆ: ಪ್ರಾಧ್ಯಾಪಕರಿಗೆ ಸಿಕ್ಕಿಬಿದ್ದ ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ
ಮುಂಬೈ: ಪರೀಕ್ಷೆಯ ವೇಳೆ ಮೊಬೈಲ್ ಫೋನ್ ಬಳಸಿ ಚಾಟ್‌ಜಿಪಿಟಿ (ChatGPT) ಮೂಲಕ ಉತ್ತರಗಳನ್ನು ಪಡೆಯಲು ಯತ್ನಿಸಿದ ಆರೋಪಕ್ಕೆ ಒಳಗಾಗಿದ್ದ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ಬಾಂಬೆಯ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬರು ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಳೆದ ಏಳು ತಿಂಗಳ ಅವಧಿಯಲ್ಲಿ ಐಐಟಿ ಪವಾಯಿ ಕ್ಯಾಂಪಸ್‌ನಲ್ಲಿ ವರದಿಯಾದ ಮೂರನೇ ಆತ್ಮಹತ್ಯೆ ಪ್ರಕರಣ ಇದಾಗಿದೆ. … Continued