ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಬೆಂಗಳೂರು : ತನ್ನ ಲಿವ್‌-ಇನ್‌ ಸಂಗಾತಿಯ ಮಗನ ಕೊಲೆ ಮಾಡಿ ಆಕೆಯನ್ನೂ 3 ದಿನ ಕೋಣೆಯಲ್ಲಿ ಕೂಡಿಹಾಕಿದ ವ್ಯಕ್ತಿ

ಬೆಂಗಳೂರು: ತಾಯಿಯೊಂದಿಗೆ ಲಿವ್‌-ಇನ್‌ ಸಂಬಂಧದಲ್ಲಿದ್ದ ವ್ಯಕ್ತಿಯೊಬ್ಬ ಆಕೆಯ 18 ವರ್ಷದ ಮಗನನ್ನು ಸುತ್ತಿಗೆಯಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಬಳಿಕ ತಾಯಿಯ ಮೇಲೆಯೂ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಆತ, ಆಕೆಯನ್ನು ಮನೆಯ ಕೋಣೆಯೊಂದರಲ್ಲಿ ಕೂಡಿಹಾಕಿ ನಾಲ್ಕು ದಿನಗಳ ಕಾಲ ಹೊರಬರದಂತೆ ಮಾಡಿದ ಬೆಂಗಳೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಪದ್ಮನಾಭನಗರದ ರಾಘವೇಂದ್ರ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನವೆಂಬರ್ 16ರ ರಾತ್ರಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ಸೋಹಂ ದಾಸ್ (18) ಎಂದು ಗುರುತಿಸಲಾಗಿದೆ. ಆತನ ತಾಯಿ ಸೀಮಾ ದಾಸ್ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಸುದೀಪ ಎಂದು ಗುರುತಿಸಲಾಗಿದೆ. ಮೂವರೂ ಅಪಾರ್ಟ್‌ಮೆಂಟ್‌ನ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.
ಮನೆ ಮಾಲೀಕರು ನೀಡಿರುವ ಮಾಹಿತಿಯಂತೆ, ಸೀಮಾ ದಾಸ್ ಮತ್ತು ಸುದೀಪ 2024ರ ಅಕ್ಟೋಬರ್‌ನಿಂದ ಈ ಮನೆಯಲ್ಲಿ ವಾಸವಾಗಿದ್ದರು. ಕಳೆದ ಆರು ತಿಂಗಳಿನಿಂದ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮನೆಯಲ್ಲಿನ ಗಲಾಟೆ ಮತ್ತು ಕೂಗಾಟದ ಬಗ್ಗೆ ಅಕ್ಕಪಕ್ಕದ ನಿವಾಸಿಗಳು ಹಲವು ಬಾರಿ ಮನೆ ಮಾಲೀಕರಿಗೆ ದೂರು ನೀಡಿದ್ದರು.

ನವೆಂಬರ್ 16ರ ರಾತ್ರಿ ಕೂಡ ಮನೆಯಲ್ಲಿ ಜಗಳ ನಡೆಯುತ್ತಿದೆ ಎಂದು ಮನೆ ಮಾಲೀಕರಿಗೆ ಕರೆ ಬಂದಿತ್ತು. ಈ ಬಗ್ಗೆ ಅವರು ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿಯನ್ನು ವಿಚಾರಿಸಿದ್ದರು. ಆದರೆ, ಸುಮಾರು ಒಂದು ಗಂಟೆಯ ಬಳಿಕ ಮನೆ ಶಾಂತವಾಗಿದ್ದು, ಯಾವುದೇ ಗಲಾಟೆಯ ಸದ್ದು ಕೇಳಿಸುತ್ತಿಲ್ಲ ಎಂದು ಭದ್ರತಾ ಸಿಬ್ಬಂದಿ ತಿಳಿಸಿದ್ದರು.
ನಾಲ್ಕು ದಿನಗಳ ಬಳಿಕ, ನವೆಂಬರ್ 19ರಂದು ಮನೆ ಮಾಲೀಕರು ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ್ದರು. ಆದರೆ, ಹಲವು ಬಾರಿ ಕರೆಗಂಟೆ ಒತ್ತಿ ಬಾಗಿಲು ಬಡಿದರೂ ಒಳಗಿನಿಂದ ಯಾರೂ ಪ್ರತಿಕ್ರಿಯಿಸಲಿಲ್ಲ. ಅನುಮಾನಗೊಂಡ ಅವರು ಅಕ್ಕಪಕ್ಕದ ನಿವಾಸಿಗಳನ್ನು ವಿಚಾರಿಸಿದಾಗ, ಮಹಿಳೆಯ ಸ್ನೇಹಿತೆಯೊಬ್ಬರ ದೂರವಾಣಿ ಸಂಖ್ಯೆ ಸಿಕ್ಕಿದೆ. ಕೂಡಲೇ ಆಕೆಯ ಸ್ನೇಹಿತೆಯನ್ನು ಸಂಪರ್ಕಿಸಿದ ಮನೆ ಮಾಲೀಕರು, ಬಳಿಕ ಇಬ್ಬರೂ ಪೊಲೀಸರನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ. ನಂತರ ಪೊಲೀಸರೊಂದಿಗೆ ಅಪಾರ್ಟ್‌ಮೆಂಟ್‌ಗೆ ತೆರಳಿ, ಬೀಗ ತೆಗೆಯುವ ವ್ಯಕ್ತಿಯ ಸಹಾಯದಿಂದ ರಾತ್ರಿ ಸುಮಾರು 11 ಗಂಟೆಗೆ ಮನೆಯ ಬಾಗಿಲು ತೆರೆಸಿದ್ದಾರೆ.

ಪ್ರಮುಖ ಸುದ್ದಿ :-   ಮುಧೋಳ : ನೇಣಿಗೆ ಶರಣಾದ ದಂಪತಿ, ಮಕ್ಕಳು ಅನಾಥ

ಮನೆಯೊಳಗೆ ಕಾಲಿಟ್ಟಾಗ ನೆಲ ಮತ್ತು ಗೋಡೆಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ. ಇದೇ ವೇಳೆ ಒಳಗಿನ ಕೋಣೆಯೊಂದರಿಂದ ಮಹಿಳೆಯ ಕಿರುಚಾಟ ಕೇಳಿಸಿದೆ. ಪೊಲೀಸರು ಕೋಣೆಯ ಬಾಗಿಲು ತೆರೆದು ನೋಡಿದಾಗ ಸೀಮಾ ದಾಸ್ ಒಳಗೆ ಕೂಡಿಹಾಕಲ್ಪಟ್ಟಿರುವುದು ಗೊತ್ತಾಗಿದೆ.
ಕೋಣೆಯಿಂದ ಹೊರಬಂದ ಸೀಮಾ ದಾಸ್ ಪೊಲೀಸರಿಗೆ ಘಟನೆಯ ವಿವರ ನೀಡಿದ್ದಾರೆ. ತನ್ನ ಲಿವ್‌-ಇನ್‌ ಸಂಗಾತಿ ಸುದೀಪ ಚಾಕು ಮತ್ತು ಸುತ್ತಿಗೆಯಿಂದ ತನ್ನ ಹಾಗೂ ಮಗ ಸೋಹಂ ದಾಸ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಗನನ್ನು ಕೊಲೆ ಮಾಡಿ, ತನ್ನನ್ನೂ ಕೊಲ್ಲಲು ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಬಳಿಕ ಪೊಲೀಸರು ಮನೆಯ ಶೌಚಾಲಯದಲ್ಲಿ ಸೋಹಂ ದಾಸ್‌ನ ಮೃತದೇಹವನ್ನು ಪತ್ತೆಹಚ್ಚಿದ್ದಾರೆ.
ನವೆಂಬರ್ 16ರ ರಾತ್ರಿ 9ರಿಂದ 11 ಗಂಟೆಯ ನಡುವಿನ ಅವಧಿಯಲ್ಲಿ ಸುದೀಪ ಈ ಕೃತ್ಯ ಎಸಗಿದ್ದಾನೆ ಎಂದು ಸೀಮಾ ದಾಸ್ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಗನನ್ನು ಕೊಲೆ ಮಾಡಿದ ಬಳಿಕ ತನ್ನ ಮೇಲೆಯೂ ಹಲ್ಲೆ ನಡೆಸಿ, ಕೋಣೆಯೊಳಗೆ ಕೂಡಿಹಾಕಿದ್ದ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌), 2023ರ ಸೆಕ್ಷನ್ 103(1)ರ ಅಡಿಯಲ್ಲಿ ಕೊಲೆ ಮತ್ತು ಸೆಕ್ಷನ್ 109(1)ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸುಪ್ರೀಂ ಕೋರ್ಟ್ ಸಮ್ಮತಿ ; ರಾಜ್ಯ ಸರ್ಕಾರದ ಮೇಲ್ಮನವಿ ವಜಾ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement