

ಬೆಂಗಳೂರು: ಕರ್ನಾಟಕ ಸರ್ಕಾರವು (Karnataka Government) 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು (General Holidays) ಮತ್ತು ಸರ್ಕಾರಿ ನೌಕರರ ಪರಿಮಿತ ರಜಾ ದಿನಗಳ (Restricted Holidays) ಅಧಿಕೃತ ಪಟ್ಟಿಯನ್ನು ಶನಿವಾರ (ನವೆಂಬರ್ 21) ಪ್ರಕಟಿಸಿದೆ. 2027ನೇ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 18 ಸಾರ್ವತ್ರಿಕ ರಜೆಗಳು ಹಾಗೂ 19 ಪರಿಮಿತ ರಜೆಗಳನ್ನು (RH) ಸರ್ಕಾರ ಪ್ರಕಟಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯದರ್ಶಿ ರವಿಕುಮಾರ ಎಸ್. ಅವರು ರಾಜ್ಯಪಾಲರ ಆದೇಶಾನುಸಾರ
ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಿಗೆ ಈ ಸಾರ್ವತ್ರಿಕ ರಜೆಗಳು ಅನ್ವಯವಾಗಲಿವೆ. ಸರ್ಕಾರಿ ನೌಕರರು ತಮ್ಮ ವಿವೇಚನೆಗೆ ತಕ್ಕಂತೆ ಪರಿಮಿತ ರಜೆಗಳ ಪಟ್ಟಿಯಿಂದ ನಿಗದಿತ ಸಂಖ್ಯೆಯ ರಜೆಗಳನ್ನು ಆಯ್ದುಕೊಳ್ಳಲು ಅವಕಾಶ ಇರುತ್ತದೆ.
2027ರ ಸಾರ್ವತ್ರಿಕ ರಜೆಗಳ ಪಟ್ಟಿ
ಜನವರಿ 15: ಮಕರ ಸಂಕ್ರಾಂತಿಜನವರಿ 26: ಗಣರಾಜ್ಯೋತ್ಸವ
ಮಾರ್ಚ್ 6: ಮಹಾ ಶಿವರಾತ್ರಿ
ಮಾರ್ಚ್ 10: ಖುತುಬ್-ಎ-ರಂಜಾನ್
ಮಾರ್ಚ್ 26: ಗುಡ್ ಫ್ರೈಡೇ
ಏಪ್ರಿಲ್ 7: ಚಾಂದ್ರಮಾನ ಯುಗಾದಿ
ಏಪ್ರಿಲ್ 14: ಡಾ. ಬಿ.ಆರ್. ಅಂಬೇಡ್ಕರ ಜಯಂತಿ
ಮೇ 1: ಕಾರ್ಮಿಕ ದಿನಾಚರಣೆ
ಮೇ 17: ಬಕ್ರೀದ್
ಜೂನ್ 16: ಮೊಹರಂ ಕಡೆ ದಿನ
ಸೆಪ್ಟೆಂಬರ್ 4: ಗಣೇಶ ಚತುರ್ಥಿ ಹಬ್ಬ
ಸೆಪ್ಟೆಂಬರ್ 29: ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 2: ಗಾಂಧಿ ಜಯಂತಿ
ಅಕ್ಟೋಬರ್ 15: ವಾಲ್ಮೀಕಿ ಜಯಂತಿ
ಅಕ್ಟೋಬರ್ 28: ನರಕ ಚತುರ್ದಶಿ
ಅಕ್ಟೋಬರ್ 30: ದೀಪಾವಳಿ
ನವೆಂಬರ್ 1: ಕನ್ನಡ ರಾಜ್ಯೋತ್ಸವ
ನವೆಂಬರ್ 16: ಕನಕದಾಸ ಜಯಂತಿ
2027ರ ಪರಿಮಿತ ರಜೆಗಳ (RH) ಪಟ್ಟಿ:
ಜನವರಿ 1: ನೂತನ ವರ್ಷಾರಂಭಫೆಬ್ರವರಿ 15: ಮಧ್ವ ನವಮಿ
ಮಾರ್ಚ್ 5: ಜುಮತ್-ಉಲ್-ವಿದಾ
ಏಪ್ರಿಲ್ 15: ರಾಮನವಮಿ
ಮೇ 10: ರಾಮಾನುಜಾಚಾರ್ಯ ಜಯಂತಿ
ಮೇ 11: ಶಂಕರಾಚಾರ್ಯ ಜಯಂತಿ
ಮೇ 20: ಬುದ್ಧಪೂರ್ಣಿಮ
ಆಗಸ್ಟ್ 13: ವರಮಹಾಲಕ್ಷ್ಮಿ ವ್ರತ
ಆಗಸ್ಟ್ 16: ಋಗ್ ಉಪಾಕರ್ಮ
ಆಗಸ್ಟ್ 17: ಯಜುರ್ ಉಪಾಕರ್ಮ
ಆಗಸ್ಟ್ 24: ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 3: ಸ್ವರ್ಣಗೌರಿ ವ್ರತ
ಸೆಪ್ಟೆಂಬರ್ 9: ಕನ್ಯಾ ಮರಿಯಮ್ಮ ಜಯಂತಿ
ಸೆಪ್ಟೆಂಬರ್ 14: ಅನಂತ ಪದ್ಮನಾಭ ವ್ರತ
ಸೆಪ್ಟೆಂಬರ್ 15: ಬ್ರಹ್ಮರ್ಷಿ ನಾರಾಯಣ ಗುರು ಜಯಂತಿ
ಸೆಪ್ಟೆಂಬರ್ 17: ವಿಶ್ವಕರ್ಮ ಜಯಂತಿ
ಅಕ್ಟೋಬರ್ 18: ತುಲಾ ಸಂಕ್ರಮಣ ಪುಣ್ಯಕಾಲ
ಡಿಸೆಂಬರ್ 13: ಹುತ್ತರಿ ಹಬ್ಬ
ಡಿಸೆಂಬರ್ 24: ಕ್ರಿಸ್ಮಸ್ ಈವ್
ಕೈಬಿಡಲಾದ ರಜೆಗಳು:
2027ರಲ್ಲಿ ಮಹಾವೀರ ಜಯಂತಿ (ಏಪ್ರಿಲ್ 18), ಬಸವೇಶ್ವರ ಜಯಂತಿ (ಮೇ 9), ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15), ಈದ್-ಮಿಲಾದ್ (ಸೆಪ್ಟೆಂಬರ್ 15) ಮತ್ತು ವಿಜಯದಶಮಿ (ಅಕ್ಟೋಬರ್ 10) ಭಾನುವಾರ ಬಂದಿವೆ. ಅಲ್ಲದೆ, ಮಹಾನವಮಿ/ಆಯುಧಪೂಜೆ (ಅಕ್ಟೋಬರ್ 9) ಎರಡನೇ ಶನಿವಾರ ಹಾಗೂ ಕ್ರಿಸ್ಮಸ್ (ಡಿಸೆಂಬರ್ 25) ನಾಲ್ಕನೇ ಶನಿವಾರ ಬಂದಿರುವುದರಿಂದ ಈ ರಜೆಗಳನ್ನು ಸಾರ್ವತ್ರಿಕ ರಜೆ ಪಟ್ಟಿಯಲ್ಲಿ ಪ್ರತ್ಯೇಕವಾಗಿ ತೋರಿಸಿಲ್ಲ ಎಂದು ತಿಳಿಸಲಾಗಿದೆ.
ಪಟ್ಟಿಯಲ್ಲಿ ಸೇರದ ಪರಿಮಿತ ರಜೆಗಳು
ಶಾಬೆ-ಬರಾತ್ (ಜ.24), ಶಬ್-ಎ-ಖಾದರ್ (ಮಾ.7), ಹೋಳಿ ಹಬ್ಬ (ಮಾ.21), ದೇವಾಂಗ ದಾಸಿಮಯ್ಯ ಜಯಂತಿ (ಏ.11), ತಿರು ಓಣಂ (ಸೆ.12) ಮತ್ತು ಗುರುನಾನಕ್ ಜಯಂತಿ (ನ.14) ಭಾನುವಾರದಂದು ಹಾಗೂ ಪವಿತ್ರ ಶನಿವಾರ (ಮಾ.27) ನಾಲ್ಕನೇ ಶನಿವಾರ ಬಂದಿರುವುದರಿಂದ ಪರಿಮಿತ ರಜೆ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಹೇಳಲಾಗಿದೆ.
ಕೊಡಗು ಜಿಲ್ಲೆಗೆ ಮಾತ್ರ ವಿಶೇಷ ರಜೆ:
ಇನ್ನು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸೆಪ್ಟೆಂಬರ್ 3 (ಶುಕ್ರವಾರ) ಕೈಲ್ ಮುಹೂರ್ತ, ಅಕ್ಟೋಬರ್ 18 (ಸೋಮವಾರ) ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 13 (ಸೋಮವಾರ) ಹುತ್ತರಿ ಹಬ್ಬದ ಪ್ರಯುಕ್ತ ಸ್ಥಳೀಯ ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದೆ.





ನಿಮ್ಮ ಕಾಮೆಂಟ್ ಬರೆಯಿರಿ