ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಖಾನಾಪುರ : ತೆಂಗಿನಕಾಯಿ ಕೊಯ್ಯುವಾಗ ವಿದ್ಯುತ್ ತಂತಿ ತಗುಲಿ ಪತಿ-ಪತ್ನಿ ಸಾವು

ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಸಂಗರಗಾಳಿ ಗ್ರಾಮದಲ್ಲಿ ಮನೆಯ ತೋಟದಲ್ಲಿ ತೆಂಗಿನಕಾಯಿ ಕೊಯ್ಯುವಾಗ ಕಬ್ಬಿಣದ ಪೈಪ್ ಹೈವೋಲ್ವೇಜ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಪತಿ-ಪತ್ನಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ದುರ್ಘಟನೆಯಲ್ಲಿ ಶಾಹು ಸಾವೇರ ಮಸ್ಕರಿನ್ ( 70) ಹಾಗೂ ಅವರ ಪತ್ನಿ ಮಿಲಾಗ್ರಾನ್ ಶಾಹು ಮಸ್ಕರಿನ್ ( 65) ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲಭ್ಯ ಮಾಹಿತಿ ಪ್ರಕಾರ, ಶಾಲು ಮಸ್ಕರಿನ್ ಅವರು ತೆಂಗಿನಕಾಯಿಯನ್ನು ಕೊಯ್ಯುವಾಗ ಆಯತಪ್ಪಿ ಅವರ ಕೈಯಲ್ಲಿದ್ದ ಕಬ್ಬಿಣದ ಪೈಪ್ ಮರದ ಸಮೀಪ ಹಾದು ಹೋಗಿದ್ದ ಹೆಸ್ಕಾಂನ 11 ಸಾವಿರ ವೋಲ್ಟ್ ಹೈವೋಲ್ವೇಜ್ ವಿದ್ಯುತ್ ತಂತಿಗೆ ತಗುಲಿದೆ. ಇದರಿಂದ ಅವರಿಗೆ ತೀವ್ರ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃತರಾದರು.
ಪತಿಗೆ ವಿದ್ಯುತ್ ಶಾಕ್ ತಗುಲಿರುವುದನ್ನು ಕಂಡ ಅವರ ಪತ್ನಿ ತಕ್ಷಣವೇ ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಅವರಿಗೂ ವಿದ್ಯುತ್ ಶಾಕ್ ತಗುಲಿದೆ, ದುರದೃಷ್ಟವಶಾತ್ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement