ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹೊರಹಾಕಲ್ಪಟ್ಟ ಪ್ರಕರಣ : ಪಾಕ್‌ ಬಲೆಗೆ ಬಿದ್ದ ಬಾಂಗ್ಲಾದೇಶ ಕ್ರಿಕೆಟ್ ಮುಖ್ಯಸ್ಥ ; ಬಿಸಿಬಿ ಮಾಜಿ ಸಿಇಒ

ಢಾಕಾ: ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಿರುವ 2026ರ ಟಿ20 ವಿಶ್ವಕಪ್‌ ನಲ್ಲಿ  ಐಸಿಸಿ (ICC) ಜೊತೆಗಿನ ಸಂಘರ್ಷದ ಪರಿಣಾಮವಾಗಿ ಬಾಂಗ್ಲಾದೇಶ ತಂಡವು ವಿಶ್ವಕಪ್‌ನಿಂದ ಹೊರಬಿದ್ದಿದ್ದು, ಇದರ ಹಿಂದೆ ಪಾಕಿಸ್ತಾನದ ಕುತಂತ್ರವಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
 ವಿಶ್ವಕಪ್‌ ಪಂದ್ಯಗಳನ್ನು ಆಡಲು ಸಹ ಆತಿಥೇಯ ಭಾರತಕ್ಕೆ ಪ್ರಯಾಣಿಸಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) “ಭದ್ರತಾ ಕಾರಣ” ನೀಡಿ ನಿರಾಕರಿಸಿತ್ತು. ಬಾಂಗ್ಲಾದೇಶದ ಈ ನಿರ್ಧಾರವನ್ನು ಬೆಂಬಲಿಸಿ ಪಾಕಿಸ್ತಾನ ಕೂಡ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ನಾಟಕವಾಡಿತ್ತು. ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ಕಾರಣಕ್ಕೆ ಐಸಿಸಿ ಬಾಂಗ್ಲಾದೇಶವನ್ನು ಟೂರ್ನಿಯಿಂದಲೇ ಹೊರಹಾಕಿತ್ತು.
ಪಾಕ್ ಬಲೆಗೆ ಬಿದ್ದ ಬಾಂಗ್ಲಾ: ಸೈಯದ್ ಅಶ್ರಫುಲ್ ಹಕ್ ಸ್ಫೋಟಕ ಹೇಳಿಕೆ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮಾಜಿ ಸಿಇಒ ಸೈಯದ್ ಅಶ್ರಫುಲ್ ಹಕ್ ಅವರು ‘ರೆವ್‌ಸ್ಪೋರ್ಟ್ಸ್’ಗೆ ನೀಡಿದ ಸಂದರ್ಶನದಲ್ಲಿ ಬಾಂಗ್ಲಾದೇಶದ ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.
“ಬಾಂಗ್ಲಾ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಅಮಿನುಲ್ ಇಸ್ಲಾಂ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮೊಹ್ಸಿನ್ ನಖ್ವಿ ಅವರ ಮಾತಿಗೆ ಮರುಳಾಗಿ ದಾರಿ ತಪ್ಪಿರಬಹುದು ಎಂದು ಹೇಳಿದ್ದಾರೆ.
“ಬಾಂಗ್ಲಾದೇಶದ ನಿರ್ಧಾರವನ್ನು ಪ್ರಚೋದಿಸುವಲ್ಲಿ ಪಾಕಿಸ್ತಾನದ ಪಾತ್ರವಿದೆ ಎಂದು ನೀವು ಭಾವಿಸುತ್ತೀರಾ?” ಎಂದು ಅಶ್ರಫುಲ್ ಅವರನ್ನು ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರಿಸಿದ ಅವರು, “ಬಹುಶಃ, ನಾನು ರಾಜಕೀಯದ ಬಗ್ಗೆ ಚರ್ಚಿಸಲು ಇಷ್ಟಪಡುವುದಿಲ್ಲ. ಕ್ರಿಕೆಟ್ ಆಡಳಿತಾಧಿಕಾರಿಯಾಗಿ, ನಾನು ಪ್ರಾಮಾಣಿಕತೆ ಮತ್ತು ಬದ್ಧತೆಯ ಮೇಲೆ ಕೇಂದ್ರೀಕರಿಸುತ್ತೇನೆ. ಅಮೀನುಲ್ ಇಸ್ಲಾಂ, ಬಹುಶಃ ಮುಗ್ಧರಾಗಿರಬಹುದು, ಪ್ರಸ್ತುತ ಏಶಿಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಅವರಿಂದ ಪ್ರಭಾವಿತರಾಗಿದ್ದರು, ಅವರು ಅಮೀನುಲ್ ಇಸ್ಲಾಂ ಅವರನ್ನು ಜೊತೆಯಾಗಿ ಹೋಗಲು ಮನವೊಲಿಸಿದರು. ದಿನದ ಕೊನೆಯಲ್ಲಿ, ಯಾರು ಗೆದ್ದರು?” ಅವರು ಉತ್ತರಿಸಿದರು.
ಬಾಂಗ್ಲಾದೇಶವು ಭಾರತ ಪ್ರವಾಸ ಮಾಡದೇ ಇರಲು ತೆಗೆದುಕೊಂಡ ನಿರ್ಧಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೈಯದ್ ಅಶ್ರಫುಲ್ ಹಕ್,  “ಆ ಸಮಯದಲ್ಲಿ ಬಾಂಗ್ಲಾದೇಶ ಸರ್ಕಾರ ತೆಗೆದುಕೊಂಡ ನಿರ್ಧಾರ, ವಿಶೇಷವಾಗಿ ಆಗಿನ ಕ್ರೀಡಾ ಸಲಹೆಗಾರ (ಆಸಿಫ್ ನಜ್ರುಲ್) ತೆಗೆದುಕೊಂಡ ನಿರ್ಧಾರವು ಅಕಾಲಿಕವಾಗಿತ್ತು ಎಂದು ನಾನು ಯಾವಾಗಲೂ ನಂಬಿದ್ದೆ. ಮುಸ್ತಾಫಿಜುರ್ ರೆಹಮಾನ್ ಅವರನ್ನು ಭಾರತದಲ್ಲಿ ಐಪಿಎಲ್‌ನಲ್ಲಿ ಆಡಲು ಅನುಮತಿಸದ ಕಾರಣ ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಯಾವುದೇ ಸಮರ್ಥನೆ ಇರಲಿಲ್ಲ” ಎಂದು ಹಕ್ ಹೇಳಿದ್ದಾರೆ.
“ಬಿಸಿಸಿಐ ಮತ್ತು ಅಗತ್ಯವಿದ್ದರೆ ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಲು ನಮಗೆ ಸಾಕಷ್ಟು ಸಮಯವಿತ್ತು. ಐಸಿಸಿ ಪಂದ್ಯಾವಳಿಯನ್ನು ಆಯೋಜಿಸಿ ಭದ್ರತೆಯನ್ನು ಒದಗಿಸಿತು, ಅದನ್ನು ಅವರು ಮಾಡಿದರು. ನಮಗೆ ಇನ್ನೂ ಆತಂಕಗಳಿದ್ದರೆ, ಸರ್ಕಾರವು ಆಟಗಾರರ ಸುರಕ್ಷತೆಯ ಬಗ್ಗೆ ಹೆಚ್ಚುವರಿ ಭರವಸೆಗಳನ್ನು ಕೋರಬಹುದಿತ್ತು” ಎಂದು ಅವರು ಹೇಳಿದರು.
ಬಿಸಿಬಿ ಅಧ್ಯಕ್ಷ ಅಮೀನುಲ್ “ಬಲೆಗೆ ಬಿದ್ದರು” ಮತ್ತು ಅದರಿಂದ ಆಟಗಾರರು ಹೇಗೆ ಬಳಲಿದರು ಎಂಬುದನ್ನು ಹಕ್ ವಿವರಿಸಿದರು.
“ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ರಾಜತಾಂತ್ರಿಕತೆಯ ಬಗ್ಗೆ ತಿಳಿವಳಿಕೆಯ ಕೊರತೆ ಇದೆ. ಅವರು ಬಲೆಗೆ ಬಿದ್ದರು. ದೇಶದ ಶ್ರೇಷ್ಠ ಆಸ್ತಿಯಾಗಿರುವ ತಮ್ಮ ಆಟಗಾರರನ್ನು ರಕ್ಷಿಸುವ ಬದಲು ಸರ್ಕಾರವನ್ನು ಸಂತೋಷಪಡಿಸುವ ಬಗ್ಗೆ ಹೆಚ್ಚು ಕಾಳಜಿ ವಹಿಸಿದರು” ಎಂದು ಅವರು ಹೇಳಿದರು.
“ಲಿಟನ್ ದಾಸ್, ಮುಸ್ತಾಫಿಜುರ್ ರೆಹಮಾನ್ ಮತ್ತು ನಜ್ಮುಲ್ ಶಾಂಟೊ ಅವರಂತಹ ಆಟಗಾರರು 30ರ ವಯಸ್ಸಿನ ಆರಂಭದಲ್ಲಿದ್ದಾರೆ. ಈ ವಿಶ್ವಕಪ್ ಅನ್ನು ಕಳೆದುಕೊಳ್ಳುವುದು ಅವರಿಗೆ ಮತ್ತು ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳಿಗೆ ಅನ್ಯಾಯವಾಗಿದೆ. ಭಾರತದ ನಂತರ, ಬಾಂಗ್ಲಾದೇಶ ಬಹುಶಃ ಅತ್ಯಂತ ಕ್ರಿಕೆಟ್ ಗೀಳು ಹೊಂದಿರುವ ರಾಷ್ಟ್ರ  ಮತ್ತು ವಿಶ್ವಕಪ್‌ನಲ್ಲಿ  ಅಭಿಮಾನಿಗಳಿಗೆ ತಮ್ಮ ತಂಡವನ್ನು ನೋಡುವುದನ್ನು ವಂಚಿತಗೊಳಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ ಮತ್ತು ನಿರಾಶೆಯಾಗಿದೆ” ಎಂದು ಹೇಳಿದರು.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement