ಹೈದರಾಬಾದ್ : ನಾಲ್ವರು ಮುಸುಕುಧಾರಿ ವ್ಯಕ್ತಿಗಳು ಎಟಿಎಂ ಕಿಯೋಸ್ಕ್‌ಗೆ ನುಗ್ಗಿ, ಯಂತ್ರವನ್ನು ಕಟ್ ಮಾಡಿ ಸುಮಾರು 30 ಲಕ್ಷ ರೂ.ಗಳನ್ನು ಕೇವಲ ನಾಲ್ಕು ನಿಮಿಷಗಳಲ್ಲಿ ತೆಗೆದುಕೊಂಡು ಮಾಡಿ ಪರಾರಿಯಾಗಿದ್ದಾರೆ.
ಭಾನುವಾರ ಮುಂಜಾನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಈ ಕಳ್ಳತನ ನಡೆದಿದೆ.
ಭಾನುವಾರ ಬೆಳಗಿನ ಜಾವ 1:56ಕ್ಕೆ ವ್ಯಕ್ತಿಯೊಬ್ಬ ಕಾರಿನಿಂದ ಇಳಿದ ಮುಸುಕುಧಾರಿಗಳು ಕಿಯೋಸ್ಕ್‌ನತ್ತ ಆರಾಮವಾಗಿ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ನಂತರ ಗೇಟ್‌ನಲ್ಲಿದ್ದ ಸಿಸಿಟಿವಿ ಕ್ಯಾಮರಾಕ್ಕೆ ಏನನ್ನೋ ಸ್ಪ್ರೇ ಮಾಡಿ ಪತ್ತೆ ಆಗದಂತೆ ನೋಡಿಕೊಂಡಿದ್ದಾರೆ.
ಮುಸುಕುಧಾರಿ ಕಳ್ಳರು ತುರ್ತು ಸೈರನ್ ಹೊಡೆಯುವ ತಂತಿಗಳನ್ನು ಸಹ ಕತ್ತರಿಸಿದ್ದಾರೆ. ಆದರೆ ದರೋಡೆಕೋರರು ಕಿಯೋಸ್ಕ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾವನ್ನು ಮುಚ್ಚಲು ಮಾತ್ರ ವಿಫಲರಾಗಿದ್ದಾರೆ. ಇದು ಸಂಪೂರ್ಣ ಕಳ್ಳತನದ ಘಟನೆಯನ್ನು ಸೆರೆ ಹಿಡಿದಿದೆ.
ಕಬ್ಬಿಣದ ರಾಡ್ ಮತ್ತು ಗ್ಯಾಸ್ ಕಟ್ಟರ್ ಜೊತೆ ಶಸ್ತ್ರಸಜ್ಜಿತ ಮೂವರು ಪುರುಷರು ಎಟಿಎಂ ಯಂತ್ರವನ್ನು ಕತ್ತರಿಸುತ್ತಿರುವಾಗ ಅವರಲ್ಲಿ ಒಬ್ಬ ಹೊರಗೆ ಕಾವಲು ಕಾಯುತ್ತಿದ್ದ. ನಂತರ ಅವರು 29.69 ಲಕ್ಷ ರೂಪಾಯಿ ನಗದು ತೆಗೆದುಕೊಂಡು ಮಧ್ಯರಾತ್ರಿ 2 ಗಂಟೆಗೆ ಎಟಿಎಂ ಕೇಂದ್ರದಿಂದ ಪರಾರಿಯಾಗಿದ್ದಾರೆ. 4 ನಿಮಿಷಗಳಲ್ಲಿ ಅವರು ಎಟಿಂ ಯಂತ್ರ ಕಟ್ ಮಾಡಿ ಅದರಲ್ಲಿನ ಹಣ ದರೋಡೆ ಮಾಡಿದ್ದಾರೆ.
ಕಳ್ಳರು ಸಾಗಿದ ಮಾರ್ಗದಲ್ಲಿನ ಅನೇಕ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದು, ಅದರಲ್ಲಿ ಕಾರನ್ನು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಐದು ಜನರಿದ್ದರು. ಕಾರಿನಲ್ಲಿ ಒಬ್ಬ, ಒಬ್ಬ ಹೊರಗೆ ಮತ್ತು ಮೂವರು ಒಳಗೆ ಕಾಯುತ್ತಿದ್ದರು. ಅವರು ಎಟಿಎಂ ಯಂತ್ರವನ್ನು ಒಡೆದು ಅದರಲ್ಲಿನ ಹಣ ಕಳ್ಳತನ ಮಾಡಲು ಗ್ಯಾಸ್ ಕಟ್ಟರ್ ಮತ್ತು ಕಬ್ಬಿಣದ ರಾಡ್‌ಗಳನ್ನು ತಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ