ತನ್ನ ಮದುವೆಯಲ್ಲಿ ತಾನೇ ಪುರೋಹಿತನಾಗಿ ವೇದಮಂತ್ರ ಹೇಳಿ ವಿವಾಹದ ವಿಧಿವಿಧಾನ ನೆರವೇರಿಸಿದ ಮದುಮಗ..! ವೀಡಿಯೊ ವೈರಲ್‌

ಹರಿದ್ವಾರದ ಕುಂಜಾ ಬಹದ್ದೂರಪುರದಲ್ಲಿ ಇತ್ತೀಚೆಗೆ ನಡೆದ ಮದುವೆಯೊಂದರಲ್ಲಿ ಸಹರಾನಪುರದ ರಾಂಪುರ ಮಣಿಹರನ್‌ ಪ್ರದೇಶದ ಮದುಮಗ ತನ್ನದೇ ವಿವಾಹದಲ್ಲಿ ವಿಧಿವಿಧಾನ ನೆರವೇರಿಸುವಾಗ ವೈದಿಕ ಮಂತ್ರಗಳನ್ನು ತಾನೇ ಪಠಿಸಿದ್ದು ಅತಿಥಿಗಳನ್ನು ವಿಸ್ಮಯಗೊಳಿಸಿದೆ. ಈ ವಿಶಿಷ್ಟ ಮತ್ತು ಸ್ಮರಣೀಯ ಕಾರ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಾಂಪುರ ಮಣಿಹರನ್‌ನ ವಿವೇಕಕುಮಾರ ಎಂಭವರ ಮದುವೆಯ ಮೆರವಣಿಗೆ ಹರಿದ್ವಾರವನ್ನು ತಲುಪಿದ ನಂತರ ವರನಾದ ವಿವೇಕಕುಮಾರ ತಮ್ಮ ಮದುವೆಯ ವೇದಮಂತ್ರಗಳನ್ನು ಪುರೋಹಿತರಂತೆ ತಾವೇ ಮಂತ್ರ ಪಠಿಸುವ ಮೂಲಕ ವಧು, ಪುರೋಹಿತರು ಹಾಗೂ ಅತಿಥಿಗಳನ್ನು ಬೆರಗುಗೊಳಿಸಿದ್ದಾರೆ. ಈ ಅವರು ಮಂತ್ರ ಪಠಿಸುತ್ತಿರುವ ಕೆಲ ಕ್ಷಣಗಳ ವೀಡಿಯೊ ಈಗ ವೈರಲ್‌ ಆಗಿದೆ.

ಲೈವ್ ಹಿಂದೂಸ್ತಾನ್ ಪ್ರಕಾರ, ಮದುಮಗ ತಾನು ಓದುತ್ತಿರುವಾಗಲೇ ವೇದ ಮಂತ್ರಗಳನ್ನು ಕಲಿತಿದ್ದೇನೆ ಮತ್ತು ವೇದ ಮಂತ್ರಗಳು ಗೊತ್ತಿರುವುದರಿಂದಲೇ ತನ್ನ ಮದುವೆಯಲ್ಲಿ ಪವಿತ್ರ ವಿಧಿಗಳ ಮಂತ್ರಗಳನ್ನು ತಾನೇ ಪಠಣ ಮಾಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ವಧುವಿನ ಜೊತೆ ಅಗ್ನಿಕುಂಡದ ಮುಂದೆ ಕುಳಿತ ವರನು ಮಂತ್ರ ಘೋಷಗಳನ್ನು ಪಠಿಸುತ್ತಾ ಅಗ್ನಿಗೆ ತುಪ್ಪವನ್ನು ಅರ್ಪಿಸುತ್ತಾ, ತನ್ನ ಮದುವೆಯ ಶಾಸ್ತ್ರ ಸಂಪ್ರದಾಯಗಳನ್ನು ತಾವೇ ನಿರ್ವಹಿಸಿದ್ದು ಕಂಡುಬಂದಿದೆ..
ಗುರುಕುಲ ಕಾಂಗ್ರಿ ವಿಶ್ವವಿದ್ಯಾನಿಲಯದ ಬಿ.ಫಾರ್ಮಾ ಓದಿರುವ ವಿವೇಕಕುಮಾರ ಅವರು ತನಗಿರುವ ಧಾರ್ಮಿಕ ಆಚರಣೆಗಳ ಮೇಲಿನ ಶ್ರದ್ಧೆಯೇ ಮಂತ್ರಗಳನ್ನು ಕಲಿಯಲು ಕಾರಣವಾಯಿತು ಎಂದು ಹೇಳಿದ್ದಾರೆ. ಆರ್ಯ ಸಮಾಜದೊಂದಿಗೆ ತಮ್ಮ ಕುಟುಂಬದ ಬಲವಾದ ಸಂಪರ್ಕವು ತನ್ನ ಉನ್ನತಿಯ ಅವಿಭಾಜ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ, ವಿವೇಕ ಆಗಾಗ್ಗೆ ಆರ್ಯ ಸಮಾಜಕ್ಕೆ ಭೇಟಿ ನೀಡುತ್ತಿದ್ದರು, ಅಲ್ಲಿ ಅವರು ವೇದ ಮಂತ್ರಗಳನ್ನು ಕಲಿಯಲು ಪ್ರಾರಂಭಿಸಿದರು

12ನೇ ತರಗತಿಯನ್ನು ಮುಗಿಸಿದ ನಂತರ ವಿವೇಕ ಅವರು, ಆಚಾರ್ಯ ವೀರೇಂದ್ರ ಶಾಸ್ತ್ರಿಯವರಲ್ಲಿ ವೇದಾಧ್ಯಯನವನ್ನು ಮುಂದುವರೆಸಿದರು. ಆರ್ಯ ಸಮಾಜದ ಸಂಪ್ರದಾಯಗಳೊಂದಿಗಿನ ನನ್ನ ಬಲವಾದ ಸಂಬಂಧವು ನನ್ನದೇ ವಿವಾಹದ ಕಾರ್ಯಕ್ರಮದಲ್ಲಿ ನನಗೆ ಮಂತ್ರಗಳನ್ನು ಪಠಿಸಲು ಪ್ರೇರೇಪಿಸಿತು ಎಂದು ಅವರು ನಂಬುತ್ತಾರೆ. “ನಾವು ಆಧುನಿಕ ಕಲಿಕೆಯನ್ನು ಅಳವಡಿಸಿಕೊಳ್ಳುವಾಗ, ನಮ್ಮ ಸಾಂಸ್ಕೃತಿಕ ಬೇರುಗಳನ್ನು ಮರೆಯಬಾರದು ಎಂಬುದನ್ನು ಮಂತ್ರಗಳನ್ನು ಪಠಿಸುವ ಮೂಲಕ ಎಲ್ಲರಿಗೂ ನೆನಪಿಸಲು ನಾನು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಹಲವಾರು ವಿವಾಹಗಳಿಗೆ ನಿರ್ವಹಿಸಿರುವ ವಹಿಸಿರುವ ವಿವೇಕಕುಮಾರ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಸಂದೇಶವನ್ನು ಕಳುಹಿಸಲು ಇದು ಗೆಸ್ಚರ್ ಆಗಿದೆ ಎಂದು ಹೇಳಿದ್ದಾರೆ. ಅವರ ಕಾರ್ಯವು ನಿಸ್ಸಂಶಯವಾಗಿ ಅನೇಕರನ್ನು ಪ್ರತಿಧ್ವನಿಸಿದೆ ಎಂದು ಹೇಳುತ್ತಾರೆ. ಈ ವೀಡಿಯೊ ಇಂದಿನ ವೇಗದ ಜಗತ್ತಿನಲ್ಲಿ ಪರಂಪರೆಯನ್ನು ಸಂರಕ್ಷಿಸುವುದರ ಕುರಿತು ಪ್ರೇರೇಪಿಸುತ್ತದೆ.

ಪ್ರಮುಖ ಸುದ್ದಿ :-   ಭಾರತದ ಆಪರೇಷನ್ ಸಿಂಧೂರ ದಾಳಿಯಲ್ಲಿ ಈ ಐವರು ನೊಟೊರಿಯಸ್‌ ಭಯೋತ್ಪಾದಕರ ಹತ್ಯೆ ; ಆದ್ರೆ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ನೀಡಿದ ಪಾಕ್‌..!

5 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement