ಸತತ ವಿದ್ಯುತ್ ಕಡಿತಕ್ಕೆ ಆಕ್ರೋಶ: ವಿದ್ಯುತ್‌ ಇಲಾಖೆ ಅಧಿಕಾರಿಗಳ ಮನೆಯ ವಿದ್ಯುತ್‌ ಕಟ್ ಮಾಡಿದ ಶಾಸಕ…!

ಹರಿದ್ವಾರ : ಸತತ ವಿದ್ಯುತ್ ಕಡಿತದಿಂದ ಆಕ್ರೋಶಗೊಂಡ ಹರಿದ್ವಾರ ಜಿಲ್ಲೆಯ ಜಬ್ರೇಡಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಅವರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸ್ವತಃ ವಿದ್ಯುತ್ ಕಂಬ ಏರಿದ ಶಾಸಕರು, ವಿದ್ಯುತ್‌ ಇಲಾಖೆಯ ಮೂವರು ಉನ್ನತ ಅಧಿಕಾರಿಗಳ ನಿವಾಸದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ವಿದ್ಯುತ್ ಇಲಾಖೆಯು ರೂರ್ಕಿ ಸಿವಿಲ್ ಲೈನ್ಸ್ … Continued

ವೀಡಿಯೊ…| ಭೂ ಕುಸಿತ : ಬೈಕ್‌ನಲ್ಲಿದ್ದ ಮೂವರು ಕೂದಲೆಳೆ ಅಂತರದಲ್ಲಿ ಪಾರು

ಹರಿದ್ವಾರ : ಮಂಗಳವಾರ ಹರಿದ್ವಾರದಲ್ಲಿ ಸಂಭವಿಸಿದ ಹಠಾತ್ ಭೂಕುಸಿತದಿಂದ ಬೆಟ್ಟದ ಇಳಿಜಾರಿನಲ್ಲಿ ಬಂಡೆಗಳು ಕುಸಿದು ಬಿದ್ದಿದ್ದು, ಮೋಟಾರ್ ಸೈಕಲ್ ಸವಾರಿ ಮಾಡುತ್ತಿದ್ದ ಮೂವರು ಯುವಕರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಉತ್ತರಕಾಶಿಯಲ್ಲಿ ಭಾರೀ ಮಳೆ ಮತ್ತು ಭಾರಿ ಮೇಘಸ್ಫೋಟದ ನಡುವೆ ಈ ನಾಟಕೀಯ ಕ್ಷಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಟ್ಟದ ಇಳಿಜಾರಿನತ್ತ ಬರುತ್ತಿದ್ದ ಪಾದಚಾರಿಗಳು ಮತ್ತು ಬೈಕ್‌ನಲ್ಲಿ … Continued

ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ : 6 ಮಂದಿ ಸಾವು, ಹಲವರಿಗೆ ಗಾಯ

ಹರಿದ್ವಾರ : ಉತ್ತರಾಖಂಡದ ಪವಿತ್ರ ನಗರ ಹರಿದ್ವಾರದಲ್ಲಿರುವ ಮಾನಸ ದೇವಿ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಆರು ಜನರು ಸಾವಿಗೀಡಾಗಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ. ಮುಖ್ಯ ದೇವಾಲಯಕ್ಕೆ ಹೋಗುವ ದೇವಾಲಯದ ರಸ್ತೆಯಲ್ಲಿರುವ ಮೆಟ್ಟಿಲುಗಳ ಮೇಲೆ ಕಾಲ್ತುಳಿತ ಸಂಭವಿಸಿದೆ ಎಂದು ಗರ್ವಾಲ್ ವಿಭಾಗ ಆಯುಕ್ತ ವಿನಯ ಶಂಕರ ಪಾಂಡೆ ದೃಢಪಡಿಸಿದ್ದಾರೆ. ಕಾಲ್ತುಳಿತ ಸಂಭವಿಸಿದಾಗ ಮಾನಸ ದೇವಿ ದೇವಾಲಯದಲ್ಲಿ ಭಾರಿ … Continued

ತನ್ನ ಮದುವೆಯಲ್ಲಿ ತಾನೇ ಪುರೋಹಿತನಾಗಿ ವೇದಮಂತ್ರ ಹೇಳಿ ವಿವಾಹದ ವಿಧಿವಿಧಾನ ನೆರವೇರಿಸಿದ ಮದುಮಗ..! ವೀಡಿಯೊ ವೈರಲ್‌

ಹರಿದ್ವಾರದ ಕುಂಜಾ ಬಹದ್ದೂರಪುರದಲ್ಲಿ ಇತ್ತೀಚೆಗೆ ನಡೆದ ಮದುವೆಯೊಂದರಲ್ಲಿ ಸಹರಾನಪುರದ ರಾಂಪುರ ಮಣಿಹರನ್‌ ಪ್ರದೇಶದ ಮದುಮಗ ತನ್ನದೇ ವಿವಾಹದಲ್ಲಿ ವಿಧಿವಿಧಾನ ನೆರವೇರಿಸುವಾಗ ವೈದಿಕ ಮಂತ್ರಗಳನ್ನು ತಾನೇ ಪಠಿಸಿದ್ದು ಅತಿಥಿಗಳನ್ನು ವಿಸ್ಮಯಗೊಳಿಸಿದೆ. ಈ ವಿಶಿಷ್ಟ ಮತ್ತು ಸ್ಮರಣೀಯ ಕಾರ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಂಪುರ ಮಣಿಹರನ್‌ನ ವಿವೇಕಕುಮಾರ ಎಂಭವರ ಮದುವೆಯ ಮೆರವಣಿಗೆ ಹರಿದ್ವಾರವನ್ನು ತಲುಪಿದ ನಂತರ ವರನಾದ … Continued

ಗೇಟ್‌ ಮುರಿದು ಹರಿದ್ವಾರ ನ್ಯಾಯಾಲಯದ ಆವರಣಕ್ಕೆ ನುಗ್ಗಿದ ಕಾಡಾನೆ | ವೀಕ್ಷಿಸಿ

ಬುಧವಾರ ಹರಿದ್ವಾರದಲ್ಲಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಮತ್ತು ನ್ಯಾಯಾಲಯ ಸಂಕೀರ್ಣದ ಆವರಣಕ್ಕೆ ಕಾಡಾನೆಯೊಂದು ನುಗ್ಗಿದ ನಂತರ ಅವ್ಯವಸ್ಥೆ ಉಂಟಾಗಿಯಿತು ಹಾಗೂ ಸಿಬ್ಬಂದಿ ಹಾಗೂ ನೆರೆದಿದ್ದವರಲ್ಲಿ ಆತಂಕ ಮೂಡಿಸಿತು. ಬುಧವಾರ ಸಂಜೆ 4:45 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಕೇವಲ 150 ಮೀಟರ್ ದೂರದಲ್ಲಿರುವ ಮುಖ್ಯ ದ್ವಾರವನ್ನು ಭೇದಿಸಿದ ಆನೆ … Continued