75ಕ್ಕೂ ಹೆಚ್ಚು ದೇಶಗಳ ಸರಕಿಗೆ ವಿಧಿಸಿದ್ದ ಸುಂಕ 90 ದಿನ ತಡೆಹಿಡಿದ ಟ್ರಂಪ್‌ ; ಆದ್ರೆ ಚೀನಾ ಸರಕುಗಳ ಮೇಲಿನ ಸುಂಕ 125%ಕ್ಕೆ ಹೆಚ್ಚಳ…!

ವಾಷಿಂಗ್ಟನ್‌ : ಜಾರಿಗೆ ಬಂದ ಕೇವಲ 24 ಗಂಟೆಗಳ ನಂತರ ಬುಧವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರತಿ ಸುಂಕ ವಿಧಿಸಿದ್ದನ್ನು 90 ದಿನಗಳ ಕಾಲ ತಡೆಹಿಡಿಯುವುದಾಗಿ ಘೋಷಿಸಿದ್ದಾರೆ.
ಇದು ಒಂದು ಪ್ರಮುಖ ವ್ಯಾಪಾರ ಯುದ್ಧದ ಭಯಕ್ಕೆ ಕಾರಣವಾಗಿ ಜಾಗತಿಕ ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು. ಜಾಗತಿಕ ಆರ್ಥಿಕ ಹಿಂಜರಿತದ ಬಗ್ಗೆ ಆತಂಕ ಸೃಷ್ಟಿಸಿತು. ಆದರೆ ಅವರು ಚೀನಾದ ಮೇಲಿನ ಸುಂಕವನ್ನು ತಕ್ಷಣದಿಂದಲೇ ಶೇ. 125 ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರು, ಒಂದು ದಿನದ ಹಿಂದೆ ಅವರು ಚೀನಾದ ಸರಕುಗಳ ಮೇಲೆ ಶೇ. 104ರಷ್ಟು ಸುಂಕ ಘೋಷಿಸಿದ್ದರು.
75 ಕ್ಕೂ ಹೆಚ್ಚು ದೇಶಗಳು ಅಮೆರಿಕ ವಿರುದ್ಧ ಪ್ರತೀಕಾರದ ಸುಂಕ ವಿಧಿಸಿಲ್ಲ. ಹೀಗಾಗಿ ಟ್ರಂಪ್‌ ಅಮೆರಿಕದೊಂದಿಗೆ ವ್ಯಾಪಾರ ಅಸಮತೋಲನ ನಿವಾರಿಸುವ ಕ್ರಮವಾಗಿ ಜಾರಿಗೆ ತಂದ ಪ್ರತಿ ಸುಂಕವನ್ನು 90 ದಿನಗಳ ಕಾಲ ತಡೆಹಿಡುವುದಕ್ಕೆ ಅನುಮೋದಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.

ಈ 90 ದಿನಗಳ ಅವಧಿಯಲ್ಲಿ, ಕೇವಲ 10 ಪ್ರತಿಶತದಷ್ಟು ಪ್ರತಿ ಸುಂಕವು ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದ್ದಾರೆ.
ಆದರೆ, ಅವರು ಚೀನಾದ ಮೇಲಿನ ಸುಂಕಗಳಲ್ಲಿ 104%ರಷ್ಟು ಏರಿಸಿದ್ದ ಚೀನಾ ಸರಕುಗಳ ಮೇಲಿನ ಸುಂಕವನ್ನು ಈಗ 125%ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಯಾಕೆಂದರೆ ಅಮೆರಿಕವು ಚೀನಾದ ಸರಕುಗಳ ಮೇಲೆ 104% ಸುಂಕ ವಿಧಿಸಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ಅಮೆರಿಕದ ಸರಕುಗಳ ಮೇಲೆ ಶೇ.84%ರಷ್ಟು ಸುಂಕ ಘೋಷಿಸಿತ್ತು.
ಹಲವಾರು ದೇಶಗಳ ಮೇಲೆ ವಿಧಿಸಲಾಗಿದ್ದು ಪ್ರತಿ ಸುಂಕವನ್ನು ಸದ್ಯಕ್ಕೆ ತಡೆಹಿದಿರುವುದಕ್ಕೆ ಅಮೆರಿಕದ ಸ್ಟಾಕ್‌ ಸೂಚ್ಯಂಕಗಳು ಏರಿಕೆ ಕಂಡವು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement