ಪರಿಶೀಲಿಸಿದ ಕಂಪನಿಗಳಿಗೆ ಉದ್ಯೋಗ ಪಟ್ಟಿಯ ವೈಶಿಷ್ಟ್ಯ ಪರಿಚಯಿಸಲಿರುವ ಟ್ವಟರ್‌ : ವರದಿ

ಲಿಂಕ್ಡ್‌ಇನ್ ಗೆ ಸ್ಪರ್ಧೆ ನೀಡುವ ಕ್ರಮದಲ್ಲಿ, ಎಲೋನ್ ಮಸ್ಕ್ ನೇತೃತ್ವದ ಟ್ವಿಟರ್ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪರಿಶೀಲಿಸಿದ ಸಂಸ್ಥೆಗಳಿಗೆ ಉದ್ಯೋಗ ಪಟ್ಟಿಗಳನ್ನು ಪೋಸ್ಟ್ ಮಾಡಲು ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ಈವರೆಗೆ ಟ್ವಟರಿನಿಂದ ಯಾವುದೇ ಔಪಚಾರಿಕ ಪ್ರಕಟಣೆಯಿಲ್ಲದಿದ್ದರೂ, ಟೆಕ್‌ಕ್ರಂಚ್‌ ವರದಿಯ ಪ್ರಕಾರ, ಕೆಲವು ಪರಿಶೀಲಿಸಿದ ಖಾತೆಗಳಿಗೆ ವೈಶಿಷ್ಟ್ಯವನ್ನು ಈಗಾಗಲೇ ಹೊರತರಲಾಗಿದೆ. ಪಟ್ಟಿಗಳನ್ನು ಟ್ವಿಟರ್‌(Twitter)ನಲ್ಲಿ ಕಂಪನಿಯ ಖಾತೆಯ ಬಯೋ ಅಡಿಯಲ್ಲಿ ಇರಿಸಲಾಗುತ್ತದೆ. … Continued

ಎಲ್ಲವೂ ಪ್ರೀತಿಗಾಗಿ….: ತನ್ನ ಪ್ರಿಯಕರನ ಭೇಟಿಯಾಗಲು ಇಡೀ ಹಳ್ಳಿಯ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದ್ದ ಯುವತಿ : ಆದ್ರೆ ಮುಂದಾಗಿದ್ದು..?

ಬೆಟ್ಟಿಯಾ: ಇತ್ತೀಚಿನ ದಿನಗಳಲ್ಲಿ ಅಸಾಮಾನ್ಯ ಪ್ರೀತಿಯ ಅದ್ಭುತ ಕಥೆಗಳು ಮುನ್ನೆಲೆಗೆ ಬರುತ್ತಿವೆ. ಇಂತಹದ್ದೇ ಘಟನೆ ಬಿಹಾರದಲ್ಲಿ ನಡೆದ ವರದಿಯಾಗಿದೆ. ಬಿಹಾರದ ಬೆಟ್ಟಿಯಾದಲ್ಲಿ ಪ್ರೇಯಸಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಆತ ಬರುವ ಸಮಯದಲ್ಲಿ ಇಡೀ ಹಳ್ಳಿಯ ವಿದ್ಯುತ್ ಪೂರೈಕೆಯನ್ನೇ ಕಡಿತ ಮಾಡುತ್ತಿದ್ದ ವಿದ್ಯಮಾನ ವರದಿಯಾಗಿದೆ…! ಆದರೆ ಒಂದು ದಿನ ಪ್ರೇಮಿ ತನ್ನ ಪ್ರೇಮಿಕಾಳ ಭೇಟಿಯಾಗಲು ಬಂದಾಗ ಗ್ರಾಮಸ್ಥರ … Continued

ಶರದ್ ಪವಾರಗೆ ಹಿನ್ನಡೆ : ಅಜಿತ್ ಪವಾರಗೆ ಬೆಂಬಲ ಘೋಷಿಸಿದ ನಾಗಾಲ್ಯಾಂಡಿನ ಎಲ್ಲ 7 ಎನ್‌ಸಿಪಿ ಶಾಸಕರು

ನವದೆಹಲಿ: ಮಹಾರಾಷ್ಟ್ರದಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಯಲ್ಲಿ ನಡೆಯುತ್ತಿರುವ ಅಧಿಕಾರದ ಜಗಳದ ನಡುವೆ, ನಾಗಾಲ್ಯಾಂಡ್‌ನ ಎಲ್ಲಾ ಏಳು ಪಕ್ಷದ ಶಾಸಕರು ಬಂಡಾಯ ನಾಯಕ ಹಾಗೂ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ ಪವಾರಗೆ ಬೆಂಬಲ ಘೋಷಿಸಿದ್ದಾರೆ. ಚರ್ಚೆ ಮತ್ತು ಸಮಾಲೋಚನೆಯ ನಂತರ, ನಾಗಾಲ್ಯಾಂಡ್ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಸಂಪೂರ್ಣ ರಾಜ್ಯ ಕಾರ್ಯಕಾರಿಣಿ ಮತ್ತು ಜಿಲ್ಲೆಗಳ ಪದಾಧಿಕಾರಿಗಳು ಅಜಿತ ಪವಾರ್ … Continued

ಜೈಪುರದಲ್ಲಿ ಅರ್ಧ ತಾಸಿನಲ್ಲಿ 3 ಬಾರಿ ಭೂಕಂಪನದ ಅನುಭವ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಜೈಪುರ: ಜೈಪುರದಲ್ಲಿ ಶುಕ್ರವಾರ ಮುಂಜಾನೆ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಸಲ ಭೂಕಂಪಗಳ ಅನುಭವವಾಗಿದೆ. 3.4 ರ ತೀವ್ರತೆಯ ಇತ್ತೀಚಿನ ಭೂಕಂಪನವು ಬೆಳಿಗ್ಗೆ 4:25 ರ ಸುಮಾರಿಗೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ. NCS ಪ್ರಕಾರ, ಇದು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ರಾಜಸ್ಥಾನದ ಜೈಪುರದಲ್ಲಿ ಸುಮಾರು 10 ಕಿಮೀ … Continued

ʼಮೈಸೂರು ಪಾಕʼ ವಿಶ್ವದ 14ನೇ ಅತ್ಯುತ್ತಮ ಸ್ಟ್ರೀಟ್ ಫುಡ್ ಸಿಹಿತಿನಿಸು : ಈ ಪಟ್ಟಿಯಲ್ಲಿ ಇನ್ನೂ 2 ಭಾರತೀಯ ಸಿಹಿತಿನಿಸುಗಳಿಗೆ ಸ್ಥಾನ

ಸಾಂಪ್ರದಾಯಿಕ ಆಹಾರಕ್ಕಾಗಿ ಪ್ರಾಯೋಗಿಕ ಆನ್‌ಲೈನ್ ಟ್ರಾವೆಲ್ ಗೈಡ್ ಟೇಸ್ಟ್‌ ಅಟ್ಲಾಸ್‌ (TasteAtlas) ಇತ್ತೀಚೆಗೆ ತನ್ನ ‘ವಿಶ್ವದ ಟಾಪ್ 50 ಅತ್ಯುತ್ತಮ ಬೀದಿ ಆಹಾರದ ಸಿಹಿತಿಂಡಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ ಮೈಸೂರಿನ ಮೈಸೂರು ಪಾಕ 14ನೇ ಸ್ಥಾನ ಪಡೆದುಕೊಂಡಿದೆ. ಬೇಳೆ ಹಿಟ್ಟು, ಸಕ್ಕರೆ ಮತ್ತು ತುಪ್ಪದಿಂದ ಮಾಡುವ ಈ ಸಿಹಿಭಕ್ಷ್ಯವನ್ನು ಮೊದಲು ರಾಜಮನೆತನದ ಅಡುಗೆಮನೆಯಲ್ಲಿ … Continued

ಮಣಿಪುರ : ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಗುಂಪಿನ ಪ್ರಮುಖ ಆರೋಪಿ ಮನೆಗೆ ಬೆಂಕಿ ಹಚ್ಚಿದ ಮಹಿಳೆಯರು..

ಇಂಫಾಲ: ಮಣಿಪುರದಲ್ಲಿ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೀಡಿಯೊ ವೈರಲ್ ಆದ ಎರಡು ದಿನಗಳ ನಂತರ, ಪ್ರಮುಖ ಆರೋಪಿ ಹುಯಿರೆಮ್ ಹೆರೋದಾಸ್ ಮೈತೆಯ್ ಎಂಬಾತನ ಮನೆಯನ್ನು ಗುರುವಾರ ಸುಟ್ಟು ಹಾಕಲಾಗಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ಪ್ರತಿಭಟನಾಕಾರರು, ಹೆಚ್ಚಾಗಿ ಮಹಿಳೆಯರು ಪ್ರಮುಖ ಆರೋಪಿಯ ಮನೆಗೆ ಬೆಂಕಿ ಹಚ್ಚುವುದನ್ನು ದೃಶ್ಯಗಳು ತೋರಿಸಿದೆ. ಮಣಿಪುರದ … Continued

ಜುಲೈ 27ರಂದು ಖಾಸಗಿ ಬಸ್‌, ಆಟೋ, ಟ್ಯಾಕ್ಸಿ ಸೇವೆಗಳು ಸ್ಥಗಿತ

ಬೆಂಗಳೂರು : ಖಾಸಗಿ ಬಸ್, ಆಟೋ ರಿಕ್ಷಾ, ಟ್ಯಾಕ್ಸಿಗಳುಜುಲೈ 27ರಂದು ರಸ್ತೆಗೆ ಇಳಿಯುವುದಿಲ್ಲ. ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜುಲೈ 27ಕ್ಕೆ ಖಾಸಗಿ ಬಸ್‌, ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಶಕ್ತಿಯೋಜನೆ ಜಾರಿಗೆ ತಂದ ನಂತರದಿಂದ ಆಟೋ, … Continued

ದೆಹಲಿ ಅಧಿಕಾರಶಾಹಿಗಳ ಮೇಲೆ ಅಧಿಕಾರ: ಕೇಂದ್ರದ ಸುಗ್ರೀವಾಜ್ಞೆ ಪ್ರಶ್ನಿಸಿದ ದೆಹಲಿ ಸರ್ಕಾರದ ಅರ್ಜಿಯನ್ನು ಸಂವಿಧಾನ ಪೀಠಕ್ಕೆ ಉಲ್ಲೇಖಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಅಧಿಕಾರಶಾಹಿಗೆ ಸಂಬಂಧಿಸಿದಂತೆ ಲೆಫ್ಟಿನೆಂಟ್ ಗವರ್ನರ್‌ಗೆ ವ್ಯಾಪಕ ಅಧಿಕಾರವನ್ನು ನೀಡಿದ ದೆಹಲಿ ಸೇವಾ ಸುಗ್ರೀವಾಜ್ಞೆ, 2023 ಅನ್ನು ಪ್ರಶ್ನಿಸಿ ದೆಹಲಿ ಸರ್ಕಾರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ಈ ವಿಷಯದ ಅಂತಿಮ ತೀರ್ಪಿಗಾಗಿ ಸಂವಿಧಾನ ಪೀಠಕ್ಕೆ ಉಲ್ಲೇಖಿಸಿದೆ. ನಾವು ಅದನ್ನು ಸಂವಿಧಾನ ಪೀಠಕ್ಕೆ ಉಲ್ಲೇಖಿಸುತ್ತೇವೆ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ತ್ರಿಸದಸ್ಯ … Continued

ಮಣಿಪುರದಲ್ಲಿ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಹೇಯ ಘಟನೆ: ಗುಂಪನ್ನು ನಿರ್ದೇಶಿಸಿದ ವ್ಯಕ್ತಿ ಸೇರಿ 4 ಮಂದಿ ಬಂಧನ

ಇಂಫಾಲ: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಮೇ 4 ರ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆಯೇ ಗುರುವಾರ ನಾಲ್ವರನ್ನು ಬಂಧಿಸಲಾಗಿದೆ. ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಸಂಜೆ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ಗಂಟೆಗಳ … Continued

ಕುರುಬ ಸಮುದಾಯ ಎಸ್‌ಟಿಗೆ ಸೇರಿಸಲು ಕೋರಿ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಶಿಫಾರಸು

ಬೆಂಗಳೂರು: ಕುರುಬ ಸಮುದಾಯವನ್ನು (Kuruba Community) ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿಸಲು ಕೋರಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಮಾಡಲಾಗಿದ್ದು, ಈ ಕುರಿತು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಕೇಂದ್ರದ ಬುಡಕಟ್ಟು ಸಮುದಾಯಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಈ … Continued