ಉತ್ತರ ಹಿಂದೂ ಮಹಾಸಾಗರದಲ್ಲಿ 1977ರ ನಂತರ ಬಿಪೋರ್‌ ಜಾಯ್ ಚಂಡಮಾರುತದ ಜೀವಿತಾವಧಿಯೇ ಅತ್ಯಂತ ದೀರ್ಘ

ನವದೆಹಲಿ : ಈ ತಿಂಗಳ ಆರಂಭದಲ್ಲಿ ಗುಜರಾತ್‌ನಲ್ಲಿ ವಿನಾಶಕ್ಕೆ ಕಾರಣವಾದ ಬಿಪೋರ್‌ ಜೋಯ್ ಚಂಡಮಾರುತವು 1977ರ ನಂತರ ಉತ್ತರ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಅತಿ ಹೆಚ್ಚು ದೀರ್ಘಾವಧಿಯ ಚಂಡಮಾರುತವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಹೇಳಿದೆ. ಈ ವರ್ಷ ಅರಬ್ಬಿ ಸಮುದ್ರದ ಮೇಲಿನ ಮೊದಲ ಚಂಡಮಾರುತವಾದ ಬಿಪೋರ್‌ ಜೋಯ್, ಜೂನ್ 6 ರಂದು … Continued

ಸಲ್ಮಾನ್ ಖಾನ್ ನಮ್ಮ ಮುಂದಿನ ಟಾರ್ಗೆಟ್‌ : ಬಾಲಿವುಡ್‌ ನಟನಿಗೆ ಮತ್ತೆ ಜೀವ ಬೆದರಿಕೆ ಹಾಕಿದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್

ಕೆನಡಾ ಮೂಲದ ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಬಾಲಿವುಡ್ ನಟ ಸಲ್ಮಾನ್ ಖಾನ್‌ “ನಮ್ಮ ಟಾರ್ಗೆಟ್‌” ಎಂದು ಜೀವ ಬೆದರಿಕೆ ಹಾಕಿದ್ದಾನೆ. ಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ “ಕರುಣೆ ತೋರಿಸಬಹುದು ಎಂದು ಆತ ಹೇಳಿದ್ದಾನೆ. ಇಂಡಿಯಾ ಟುಡೇ ಜೊತೆಗಿನ ಸಂದರ್ಶನದಲ್ಲಿ ಬ್ರಾರ್‌ ಈ ರೀತಿ ಹೇಳಿದ್ದಾನೆ. ” ಸಲ್ಮಾನ್‌ ಖಾನ್‌ ಖಂಡಿತವಾಗಿಯೂ ನಮ್ಮ … Continued

“ನಾವು ಬಿಜೆಪಿ ವಿರುದ್ಧ ಮೈತ್ರಿ ಪ್ರಯತ್ನಿಸುತ್ತಿದ್ದೇವೆ, ಆದರೆ ಕಾಂಗ್ರೆಸ್, ಸಿಪಿಐ(ಎಂ)…” : ಮಮತಾ ಬ್ಯಾನರ್ಜಿ ವಾಗ್ದಾಳಿ

ಕೂಚ್ ಬೆಹಾರ (ಪಶ್ಚಿಮ ಬಂಗಾಳ): ಪಾಟ್ನಾದಲ್ಲಿ ನಡೆದ ಬೃಹತ್ ಪ್ರತಿಪಕ್ಷಗಳ ಸಭೆಯ ನಂತರ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ಅನ್ನು ಟೀಕಿಸಿದ್ದಾರೆ. ನಾವು ಕೇಂದ್ರದಲ್ಲಿ ಬಿಜೆಪಿ ವಿರುದ್ಧ ಮಹಾಮೈತ್ರಿ ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಬಂಗಾಳದಲ್ಲಿ ಬಿಜೆಪಿಯೊಂದಿಗೆ ಕೆಲಸ ಮಾಡಲು ಪ್ರಯತ್ನಿಸುತ್ತಿವೆ. ನಾನು ಬಂಗಾಳದಲ್ಲಿ ಈ ಅಪವಿತ್ರ … Continued

ಸಿದ್ದರಾಮಯ್ಯ ಮೊಬೈಲ್ ಬಳಸುತ್ತಿಲ್ಲವಂತೆ : ಅದಕ್ಕೆ ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಯಾಕೆ ಮೊಬೈಲ್ ಉಪಯೋಗ ಮಾಡುತ್ತಿಲ್ಲ ಎಂಬ ವಿಷಯದ ಹಿಂದಿನ ಕಾರಣ ಬಹಿರಂಗ ಪಡಿಸಿದ್ದಾರೆ. ಬೆಂಗಳೂರಿನ ನೆಲಮಂಗಲದ ಕ್ಷೇಮವನದಲ್ಲಿ ಇಂದಿನಿಂದ ಆರಂಭವಾದ ನೂತನ ಶಾಸಕರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ. ಅವರು ಅಲ್ಲಿ ನೂತನ ಶಾಸಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ತಮ್ಮ ರಾಜಕೀಯ ಜೀವನದ … Continued

ತಮಿಳಿನ ಖ್ಯಾತ ನಟ ವಿಜಯ ವಿರುದ್ಧ ಪೊಲೀಸ್ ದೂರು ದಾಖಲು

ತಮಿಳು ಸಿನೆಮಾ ರಂಗದ ಖ್ಯಾತ ನಟ ವಿಜಯ ಅವರ ನೂತನ ಸಿನೆಮಾದ ʼನಾ ರೆಡಿʼ ಎಂಬ ಹಾಡಿನಲ್ಲಿ ಮಾದಕ ವಸ್ತು ಸೇವನೆಗೆ (Drug Abuse) ಾವರು ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಪೊಲೀಸ್ ದೂರು ದಾಖಲಾಗಿದೆ. ವಿಜಯ ಅವರ ಮುಂಬರುವ ತಮಿಳು ಚಿತ್ರ ಲಿಯೋ ಚಿತ್ರದ ಹಾಡಿನಲ್ಲಿ ಮಾದಕ ವಸ್ತು ಸೇವನೆಗೆ ಪ್ರಚಾರ … Continued

ಕೆಸಿಆರ್ ಪಕ್ಷಕ್ಕೆ ಆಘಾತ : ಕಾಂಗ್ರೆಸ್‌ ಸೇರಿದ 12ಕ್ಕೂ ಹೆಚ್ಚು ಮಾಜಿ ಸಚಿವರು, ಶಾಸಕರು

ಹೈದರಾಬಾದ್‌ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ಯ 12 ಕ್ಕೂ ಹೆಚ್ಚು ಮಾಜಿ ಶಾಸಕರು, ಸಚಿವರು ಮತ್ತು ಪದಾಧಿಕಾರಿಗಳು ಸೋಮವಾರ ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಈ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ … Continued

ಗೋಮಾಂಸ ಕಳ್ಳಸಾಗಣೆ ಆರೋಪ : ವ್ಯಕ್ತಿಯೊಬ್ಬನ ಹತ್ಯೆ, 11 ಜನರ ಬಂಧನ

ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಗೋಮಾಂಸ ಸಾಗಿಸುತ್ತಿದ್ದ ಆರೋಪದ ಮೇಲೆ 32 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆಗೈಯಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಘಟನೆಯು ನಾಸಿಕದ ಇಗತ್‌ಪುರಿ ಪ್ರದೇಶದ ಘೋಟಿ-ಸಿನ್ನಾರ್ ರಸ್ತೆಯ ಗಂಭೀರವಾಡಿ ಬಳಿ ಶನಿವಾರ ಸಂಜೆ 5:30 ರ ಸುಮಾರಿಗೆ ನಡೆದಿದೆ. ಈ ಸಂಬಂಧ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ ಎಂದು ಘೋಟಿ ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿ … Continued

ಕರ್ನಾಟಕದ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 670 ಹುದ್ದೆಗಳಿಗೆ ನೇರ ನೇಮಕಾತಿ: ಅರ್ಜಿ ಸಲ್ಲಿಕೆ ಆರಂಭ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examination Authority) ಖಾಲಿ ಇರುವ 670 ಹುದ್ದೆಗಳಿಗೆ ಹುದ್ದೆಗಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯದಲ್ಲಿನ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದ್ದು, . ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ … Continued

ಹೊಸ ಮೈಲಿಗಲ್ಲು ; ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಮೂತ್ರ, ಬೆವರಿನಿಂದ 98%ರಷ್ಟು ಕುಡಿಯುವ ನೀರು ಉತ್ಪಾದಿಸಿದ ನಾಸಾ | ವೀಡಿಯೊ

ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಗಗನಯಾತ್ರಿಗಳು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಬಾಹ್ಯಾಕಾಶದಲ್ಲಿ ನಾಸಾ ಗಗನಯಾತ್ರಿಗಳು ಮೂತ್ರ ಮತ್ತು ಬೆವರಿನಿಂದ ಶೇಕಡಾ 98 ರಷ್ಟು ಕುಡಿಯುವ ನೀರು ಮರುಉತ್ಪಾದಿಸುವ ಗುರಿ ಸಾಧಿಸಿದ್ದಾರೆ. ಇದು ಬಾಹ್ಯಾಕಾಶದಲ್ಲಿ ನೀರಿನ ಕೊರತೆ ನೀಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ನಾಸಾ ಆಹಾರ, ಗಾಳಿ ಮತ್ತು ನೀರಿನಂತಹ ಉಪಭೋಗ್ಯ ವಸ್ತುಗಳನ್ನು ಪುನರುತ್ಪಾದಿಸುವ ಅಥವಾ … Continued

ಹಾಡಹಗಲೇ ಜನನಿಬಿಡ ನಡುರಸ್ತೆಯಲ್ಲಿ ಕಾರನ್ನು ಅಡ್ಡಗಟ್ಟಿ, ಗನ್ ತೋರಿಸಿ ಹಣ ದೋಚಿದ ದುಷ್ಕರ್ಮಿಗಳು : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜನದಟ್ಟಣೆಯ ಸುರಂಗ ಮಾರ್ಗದಲ್ಲಿ ಹಾಡಹಗಲೇ ದರೋಡೆ ನಡೆದಿದೆ. ಇಂಡಿಯಾ ಗೇಟ್‌ನಿಂದ ರಿಂಗ್ ರೋಡ್‌ಗೆ ಸಂಪರ್ಕ ಕಲ್ಪಿಸುವ ಪ್ರಗತಿ ಮೈದಾನದ ಸುರಂಗ ಮಾರ್ಗದಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಡೆಲಿವರಿ ಏಜೆಂಟನ ಕಾರು ಅಡ್ಡಗಟ್ಟಿ ಗನ್ ತೋರಿಸಿ ಕಾರಿನಲ್ಲಿದ್ದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ. ಸಜನಕುಮಾರ ಪಟೇಲ್‌ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಅವರು … Continued