ಕೆಜಿಎಫ್‌-2 ಹಾಡು ಬಳಕೆ ಆರೋಪ : ರಾಹುಲ್‌ ಗಾಂಧಿ ವಿರುದ್ಧದ ಎಫ್‌ಐಆರ್‌ ವಜಾ ಮಾಡಲು ಹೈಕೋರ್ಟ್‌ ನಕಾರ

ಬೆಂಗಳೂರು : ಭಾರತ್ ಜೋಡೋ ಯಾತ್ರೆಯ ಪ್ರಚಾರದ ವೀಡಿಯೊಕ್ಕೆ ಕೆಜಿಎಫ್‌-2 ಕನ್ನಡ ಸಿನಿಮಾದ ಮುದ್ರಿತ ಸಂಗೀತವನ್ನು ಬಳಕೆ ಮಾಡುವ ಮೂಲಕ ಕೃತಿಚೌರ್ಯ ಎಸಗಲಾಗಿದೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆಯು ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಜೈರಾಮ ರಮೇಶ ಮತ್ತು ಸುಪ್ರಿಯಾ ಶ್ರೀನಾಥೆ ಅವರ ವಿರುದ್ಧ ಬೆಂಗಳೂರಿನ ಯಶವಂತಪುರ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ ವಜಾ ಮಾಡಲು … Continued

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಮೇಲೆ ಗುಂಡಿನ ದಾಳಿ

ಸಹರಾನಪುರ : ಇಂದು ಬುಧವಾರ (ಜೂನ್‌ 28) ಉತ್ತರ ಪ್ರದೇಶದ ಸಹರಾನಪುರದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಭೀಮ್ ಆರ್ಮಿ ಮುಖ್ಯಸ್ಥರು ಬೆಂಬಲಿಗರ ಮನೆಯಲ್ಲಿ ನಡೆದ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಹರಾನ್‌ಪುರದಲ್ಲಿದ್ದರು. ಆಜಾದ್ ತನ್ನ … Continued

ಜುಲೈ 13 ರಂದು ಚಂದ್ರಯಾನ-3 ಭಾರತದ ಅತ್ಯಂತ ಭಾರವಾದ ರಾಕೆಟ್ ಮೂಲಕ ಉಡಾವಣೆ

ನವದೆಹಲಿ: ವರದಿಗಳ ಪ್ರಕಾರ ಚಂದ್ರಯಾನ-3 ಮಿಷನ್ ಜುಲೈ 13 ರಂದು ಉಡಾವಣೆಯಾಗಲಿದೆ, ಇಸ್ಟ್ರೋ ಮುಖ್ಯಸ್ಥ ಎಸ್ ಸೋಮನಾಥ ಮಿಷನ್‌ ಉಡಾವಣೆಗೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಜುಲೈ 13 ರಂದು ಮಧ್ಯಾಹ್ನ 2:30 ರ ಸುಮಾರಿಗೆ ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಯಾನ-3 ಮಿಷನ್ ಜಿಯೋಸಿಂಕ್ರೋನಸ್ ಲಾಂಚ್ ವೆಹಿಕಲ್ ಮಾರ್ಕ್-IIIರಲ್ಲಿ … Continued

ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹಿಜಾಬ್? : ಪರ್ಯಾಯ ಆಯ್ಕೆ ಕೇಳಿ ಪತ್ರ ಬರೆದ 7 ಎಂಬಿಬಿಎಸ್‌ ವಿದ್ಯಾರ್ಥಿನಿಯರು

ತಿರುವನಂತಪುರ : ತಿರುವನಂತಪುರ ವೈದ್ಯಕೀಯ ಕಾಲೇಜಿನ ಏಳು ವಿದ್ಯಾರ್ಥಿನಿಯರ ಗುಂಪು ಆಪರೇಷನ್ ಥಿಯೇಟರ್‌ಗಳಲ್ಲಿ ಹಿಜಾಬ್ ಧರಿಸಲು ಅನುಮತಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಹಾಗೂ ಆಪರೇಷನ್ ಥಿಯೇಟರ್‌ನೊಳಗೆ ಉದ್ದತೋಳಿನ ಸ್ಕ್ರಬ್ ಜಾಕೆಟ್‌ಗಳು (ಶಸ್ತ್ರಚಿಕಿತ್ಸಕರು ಧರಿಸಿರುವ ವಿಶೇಷ ನೈರ್ಮಲ್ಯ ಉಡುಪು) ಮತ್ತು ಸರ್ಜಿಕಲ್ ತಲೆಗವಸುಗಳನ್ನು ಧರಿಸಲು ಪ್ರಾಂಶುಪಾಲರಿಂದ ಅನುಮತಿ ಕೋರಿದ್ದಾರೆ. ವಿದ್ಯಾರ್ಥಿಗಳ ಪ್ರಕಾರ ಹಿಜಾಬ್‌ ತಮ್ಮ ಧಾರ್ಮಿಕ ನಂಬಿಕೆಯ … Continued

ʼಅನ್ನಭಾಗ್ಯʼ ಯೋಜನೆ : ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಹಣ ನೀಡಲು ರಾಜ್ಯ ಸರ್ಕಾರದ ತೀರ್ಮಾನ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆ ಜಿ ಅಕ್ಕಿ ನೀಡುವುದಾಗಿ ಘೋಷಿಸಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗ ಹೆಚ್ಚುವರಿ ಅಕ್ಕಿ ಹೊಂದಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ನೀಡಲು ನಿರ್ಧರಿಸಿದೆ. ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯನ್ನು ಬಿಪಿಎಲ್ ಕುಟುಂಬಗಳಿಗೆ ಈಗಾಗಲೇ ಉಚಿತವಾಗಿ ನೀಡಲಾಗುತ್ತಿದ್ದು, ಉಳಿದ ಹೆಚ್ಚುವರಿ … Continued

ಮರ್ಯಾದಾ ಹತ್ಯೆ: ಪ್ರೀತಿಯಲ್ಲಿ ಬಿದ್ದ ಮಗಳನ್ನೇ ಕೊಂದ ತಂದೆ, ಸುದ್ದಿ ಕೇಳಿ ಪ್ರಿಯತಮನೂ ಆತ್ಮಹತ್ಯೆ

ಕೋಲಾರ : ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿದ ʼಮರ್ಯಾದ ಹತ್ಯೆʼ ಘಟನೆ ನಡೆದಿದ್ದು, ಇದೇವೇಳೆ ಪ್ರೇಯಸಿ ಸಾವಿನಿಂದ ಮನನೊಂದು ಪ್ರಿಯಕರನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಕಾಮಸಮುದ್ರ ಹೋಬಳಿ ಬೋಡಗುರ್ಕಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, … Continued

ಬೆಂಗಳೂರು-ಧಾರವಾಡ ‘ವಂದೇ ಭಾರತ’ ರೈಲಿನ ದರ ಪರಿಷ್ಕರಣೆ : ಹೊಸ ದರ ಹೀಗಿದೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಜೂನ್ 27) ಧಾರವಾಡ-ಬೆಂಗಳೂರು ವಂದೇ ಭಾರತ ಎಕ್ಸ್​ಪ್ರೆಸ್​ ರೈಲು ಸೇರಿದಂತೆ ಐದು ವಂದೇ ಭಾರತ ಎಕ್ಸ್​ಪ್ರೆಸ್​ ರೈಲಿಗೆ ಚಾಲನೆ ನೀಡಿದ್ದರು. ಈಗ ನೈಋುತ್ಯ ರೈಲ್ವೆಯು ಬೆಂಗಳೂರು-ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲಿನ ಟಿಕೆಟ್​ ದರವನ್ನು ಪರಿಷ್ಕರಣೆ ಮಾಡಿದೆ. ಪರಿಷ್ಕರಣೆಯಲ್ಲಿ ಎಕ್ಸಿಕ್ಯೂಟಿವ್‌ ಕ್ಲಾಸ್‌ ಟಿಕೆಟ್​ ದರ ಹೆಚ್ಚಿಸಿದ್ದರೆ, ಎಸಿ ಕಾರ್‌ಚೇರ್‌ ಟಿಕೆಟ್​ … Continued

ಬೆಳ್ಳಂಬೆಳಿಗ್ಗೆ ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು : ಇಂದು ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆ ಪರಿಶೀಲನೆ ನಡೆಯುತ್ತಿದೆ. ಭ್ರಷ್ಟಾಚಾರ ಆರೋಪಗಳು ಹಾಗೂ ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದು, ದಾಖಲೆಗಳನ್ನು ಪರಿಶೀಲನೆ … Continued

14 ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಸರ್ಕಾರ 14 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ನವೀನರಾಜ ಸಿಂಗ್-ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಜ್ವಲಕುಮಾರ ಘೋಷ್- ಬಾಗಲಕೋಟೆಯ ಭೂ ಸ್ವಾದಿನ ಇಲಾಖೆ ಸುಷ್ಮಾ ಗೋಡ್ಬೋಲೆ-ಮುಖ್ಯ ಮೌಲ್ಯಂಕ ಪ್ರಾಧಿಕಾರದ ಅಧಿಕಾರಿ ಯಶ್ವಂತ ವಿ. ಗುರುಕಾರ-ಎಕ್ಸಿಕ್ಯುಟಿವ್ ಡೈರೆಕ್ಟರ್ ಸ್ಮಾರ್ಟ್ ಗೌರ್ನೆನ್ಸ್ ರಮೇಶ್ ಡಿ.ಎಸ್. -ತೋಟಗಾರಿಕೆ ಇಲಾಖೆ ನಿರ್ದೇಶಕ ಪೊಮ್ಮಲ ಸುನೀಲಕುಮಾರ- … Continued

ರಾಜ್ಯಸಭೆಯ 10 ಸ್ಥಾನಗಳಿಗೆ ಜುಲೈ 24ರಂದು ಚುನಾವಣೆ

ನವದೆಹಲಿ: ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸೇರಿದಂತೆ ರಾಜ್ಯಸಭೆಯ 10 ಸದಸ್ಯರು ಜುಲೈ, ಆಗಸ್ಟ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ಆ ಸ್ಥಾನಗಳಿಗೆ ಜುಲೈ 24ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ. ಗೋವಾದಿಂದ ಒಬ್ಬರು, ಗುಜರಾತ್‌ನಿಂದ ಮೂವರು, ಪಶ್ಚಿಮ ಬಂಗಾಳದಿಂದ ಆರು ಸದಸ್ಯರು ನಿವೃತ್ತಿಯಾಗುತ್ತಿದ್ದು, ಈ ಆಯ್ಕೆಗೆ ಚುನಾವಣೆ ನಡೆಯಲಿದೆ. ಮಂಗಳವಾರ ಈ ಬಗ್ಗೆ ಘೋಷಣೆ … Continued