ಪ್ರಧಾನಿ ಮೋದಿ ಅಮೆರಿಕ ಭೇಟಿ ಸಮಯದಲ್ಲಿ ಸಹಿ ಹಾಕಿದ ಪ್ರಮುಖ ಒಪ್ಪಂದಗಳಿಂದ ಭಾರತ ಸೆಮಿಕಂಡಕ್ಟರ್ ಸೂಪರ್ ಪವರ್ ಆಗಬಹುದು: ಯಾವೆಲ್ಲ ಒಪ್ಪಂದಗಳು ಆಗಿವೆ..?

ಸಹಯೋಗದ ಆವಿಷ್ಕಾರದ ಹೊಸ ಯುಗಕ್ಕೆ ನಾಂದಿ ಹಾಡುವ ಮೂಲಕ, ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕದ ಭೇಟಿಯ ಸಮಯದಲ್ಲಿ ಭಾರತದ ಸೆಮಿಕಂಡಕ್ಟರ್ ಮಿಷನ್ (ISM) ಅನ್ನು ವೇಗಗೊಳಿಸಲು ಅಮೆರಿಕದ ಅಗ್ರ ಸೆಮಿಕಂಡಕ್ಟರ್ ಕಂಪನಿಗಳು ಕೆಲವು ಪ್ರಮುಖ ಹೂಡಿಕೆಗಳನ್ನು ಘೋಷಿಸಿವೆ. ಗುರುವಾರ ವಾಷಿಂಗ್ಟನ್‌ನಲ್ಲಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡುವಿನ ಮಾತುಕತೆಯ ನಂತರ ಉಭಯ … Continued

36 ವರ್ಷಗಳ ಕಾಲ ‘ಗರ್ಭಿಣಿ’ಯಾಗಿ ಅವಳಿಗಳನ್ನು ಹೊತ್ತುಕೊಂಡಿದ್ದ ನಾಗ್ಪುರದ ಈ ವ್ಯಕ್ತಿ…!

ಮಹಾರಾಷ್ಟ್ರದ ನಾಗ್ಪುರದ ವ್ಯಕ್ತಿಯೊಬ್ಬ ತನ್ನ ಹೊಟ್ಟೆಯ ಉಬ್ಬುವಿಕೆಯಿಂದಾಗಿ “ಗರ್ಭಿಣಿ ಮನುಷ್ಯ” ಎಂದು ಅಡ್ಡಹೆಸರು ಹೊಂದಿದ್ದ, ಇದು 36 ವರ್ಷಗಳಿಗೂ ಹೆಚ್ಚು ಕಾಲ ತನಗೆ ಗೊತ್ತಿಲ್ಲದೆ ಅವಳಿ ಮಕ್ಕಳ ಭ್ರೂಣವನ್ನು ಹೊಟ್ಟೆಯೊಳಗೆ ಇಟ್ಟುಕೊಂಡಿದ್ದ…! ಮೂರು ದಶಕಗಳಿಗೂ ಹೆಚ್ಚು ಕಾಲ ಉಬ್ಬುವ ಹೊಟ್ಟೆಯೊಂದಿಗೆ ಬದುಕುತ್ತಿರುವ 60 ವರ್ಷದ ನಾಗ್ಪುರದ ವ್ಯಕ್ತಿಯೊಬ್ಬರಲ್ಲಿ ಅಪರೂಪದ ವೈದ್ಯಕೀಯ ಸ್ಥಿತಿ ಪತ್ತೆಹಚ್ಚಿದ್ದಾರೆ. ಈ ಅಪರೂಪದ … Continued

ಗಡಿಯಾಚೆಗಿನ ಭಯೋತ್ಪಾದನೆ ಖಂಡಿಸಿದ ಭಾರತ-ಅಮೆರಿಕ : ತನ್ನ ನೆಲದಲ್ಲಿ ಭಯೋತ್ಪಾದನೆಗೆ ಆಶ್ರಯ ನಿರಾಕರಿಸಲು ಪಾಕಿಸ್ತಾನಕ್ಕೆ ಕರೆ

ಅಮೆರಿಕ ಮತ್ತು ಭಾರತ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಯೋತ್ಪಾದಕರ ಪ್ರಾಕ್ಸಿಗಳ ಬಳಕೆಯನ್ನು ಬಲವಾಗಿ ಖಂಡಿಸಿವೆ ಮತ್ತು ತನ್ನ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶವನ್ನು ಭಯೋತ್ಪಾದಕ ದಾಳಿಗೆ ಬಳಸದಂತೆ ಖಚಿತಪಡಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಕರೆ ನೀಡಿದೆ ಎಂದು ಅಮೆರಿಕ-ಭಾರತ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಲ್-ಖೈದಾ, ಐಸಿಸ್/ದಾಯೆಶ್, ಲಷ್ಕರ್ ಇ ತಯ್ಯಿಬಾ (ಎಲ್‌ಇಟಿ), ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು … Continued

ಇಲೆಕ್ಟ್ರಿಕ್‌ ಕಾರು ತಯಾರಿಕಾ ಘಟಕ ಸ್ಥಾಪನೆ: ರಾಜ್ಯಕ್ಕೆ ಟೆಸ್ಲಾ ಕಂಪನಿ ಆಹ್ವಾನಿಸಿದ ಸಚಿವ ಎಂ.ಬಿ ಪಾಟೀಲ

ಬೆಂಗಳೂರು : ಎಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಟೆಸ್ಲಾ ಕಂಪನಿಯು ರಾಜ್ಯದಲ್ಲಿ ಉತ್ಪಾದನಾ ಘಟಕ ಸ್ಥಾಪಿಸುವುದನ್ನು ಪರಿಗಣಿಸಿ ಘಟಕ ಸ್ಥಾಪಿಸಲು ನಿರ್ಧರಿಸಿದರೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಟೆಸ್ಲಾ ಕಂಪನಿಯು ತನ್ನ ಉದ್ಯಮವನ್ನು … Continued

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ; ಕಾನೂನು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡುವ ಬಗ್ಗೆ ಬಜೆಟ್ ಅಧಿವೇಶನದ ನಂತರ ಕಾನೂನು ಹಾಗೂ ಸಂವಿಧಾನ ತಜ್ಞರೊಂದಿಗೆ ಸಭೆ ಕರೆದು ಸಂವಿಧಾನಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಪಂಚಮಸಾಲಿ ಸಮುದಾಯವನ್ನು 2ಎ ಪಟ್ಟಿಗೆ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಸೇರಿಸಲು ಜಯ ಮೃತ್ಯುಂಜಯ … Continued

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ –ಜೆಡಿಎಸ್ ಮೈತ್ರಿ ಸುಳಿವು ನೀಡಿದ ಮಾಜಿ ಸಚಿವ ಸಿ.ಪಿ ಯೋಗೇಶ್ವರ

ರಾಮನಗರ : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ರಾಜ್ಯದಲ್ಲಿ ಬಿಜೆಪಿಯು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಎಂಬ ಊಹಾಪೋಹದ ಮಧ್ಯೆ ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ ಈ ಬಗ್ಗೆ ಸುಳಿವು ನೀಡಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ಮುಂದೆ ಮಹತ್ವದ ಬದಲಾವಣೆಯಾಗಬಹುದು. ಜೆಡಿಎಸ್ ಜೊತೆ ಹೊಂದಾಣಿಕೆ ಆಗಬಹುದು. … Continued

ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ‘ಬಹಳ ಕಷ್ಟ’: ಪಾಟ್ನಾ ಪ್ರತಿಪಕ್ಷಗಳ ಸಭೆಯ ನಂತರ ರಾಜಕೀಯ ಬಾಂಬ್‌ ಸಿಡಿಸಿದ ಎಎಪಿ…!

ನವದೆಹಲಿ : ಪಾಟ್ನಾದಲ್ಲಿ ನಡೆದ 16 ಪಕ್ಷಗಳ ಸಭೆಯ ನಂತರ ಪಕ್ಷಗಳ ಒಗ್ಗಟ್ಟಿನ ಕುರಿತು ಪ್ರತಿಪಕ್ಷಗಳ ಪತ್ರಿಕಾಗೋಷ್ಠಿ ನಡೆಯುತ್ತಿರುವಾಗಲೇ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ಆಡಳಿತಾತ್ಮಕ ಸೇವೆಗಳ ನಿಯಂತ್ರಣದ ಮೇಲೆ ಕೇಂದ್ರದ ವಿವಾದಾತ್ಮಕ ಸುಗ್ರೀವಾಜ್ಞೆಯನ್ನು ಕಾಂಗ್ರೆಸ್‌ ವಿರೋಧಿಸುವವರೆಗೆ ಕಾಂಗ್ರೆಸ್ ಅನ್ನು ಒಳಗೊಂಡಿರುವ ಯಾವುದೇ ಪ್ರತಿಪಕ್ಷಗಳ ಸಭೆಗಳಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಬಾಂಬ್ … Continued

ಒಟ್ಟಿಗೆ ಚುನಾವಣೆ ಎದುರಿಸಲು ಎಲ್ಲ ಪಕ್ಷಗಳು ಒಪ್ಪಿವೆ “: ಮಹತ್ವದ ಸಭೆಯಲ್ಲಿ ಕಾಂಗ್ರೆಸ್ -ಎಎಪಿ ಜಗಳದ ನಂತರ ಹೇಳಿದ ವಿಪಕ್ಷಗಳ ಮುಖಂಡರು

ಪಾಟ್ನಾ: ಎಲ್ಲಾ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಲು ಒಪ್ಪಿಕೊಂಡಿವೆ, ಆದರೆ ವಿವರಗಳನ್ನು ಅಂತಿಮಗೊಳಿಸಲು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಂದಿನ ತಿಂಗಳು ಮತ್ತೊಂದು ಸಭೆ ನಡೆಯಲಿದೆ ಎಂದು 16 ಪಕ್ಷಗಳ ಬೃಹತ್ ಪ್ರತಿಪಕ್ಷ ಸಭೆಯ ನಂತರ ನೇತೃತ್ವ ವಹಿಸಿದ್ದ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಹೇಳಿದ್ದಾರೆ. ನಾಲ್ಕು ಗಂಟೆಗಳ ಕಾಲ ನಡೆದ ಸಭೆ ನಡೆದ ನಂತರ ಆಮ್ ಆದ್ಮಿ … Continued

ಗೃಹಲಕ್ಷ್ಮೀ ಯೋಜನೆಯನ್ನ ಸದ್ಯಕ್ಕೆ ನಾನೇ ತಡೆಹಿಡಿದಿದ್ದೇನೆ: ಇದಕ್ಕೆ ಕಾರಣ ನೀಡಿದ ಡಿಸಿಎಂ ಡಿಕೆ ಶಿವಕುಮಾರ

ಬೆಂಗಳೂರು: ಗೃಹಿಣಿಯರಿಗೆ 2 ಸಾವಿರ ರೂ. ನೆರವು ನೀಡುವ ಗೃಹಲಕ್ಷ್ಮೀ ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದ ಬಳಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತನಾಡಿ ಗೃಹಲಕ್ಷ್ಮಿ ಯೋಜನೆ ಜಾರಿಯನ್ನು ಸದ್ಯಕ್ಕೆ ತಡೆ ಹಿಡಿದಿದ್ದೇನೆ. ಗೃಹಜ್ಯೋತಿ ಯೋಜನೆ ಅರ್ಜಿ ವಿಚಾರವಾಗಿ ಸರ್ವರ್‌ ಸಮಸ್ಯೆ … Continued

ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌-ಏಕದಿನ ಪಂದ್ಯಗಳಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ: ಯಶಸ್ವಿ ಜೈಸ್ವಾಲಗೆ ಅವಕಾಶ, ಚೇತೇಶ್ವರ ಪೂಜಾರಗೆ ಕೊಕ್

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಟೆಸ್ಟ್ ಹಾಗೂ ಮೂರು ಏಕದಿನ ಪಂದ್ಯಗಳಿಗೆ ಭಾರತದ ತಂಡವನ್ನು ಬಿಸಿಸಿಐ ಶುಕ್ರವಾರ ಪ್ರಕಟಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ ಯಶಸ್ವಿ ಜೈಸ್ವಾಲ್ ಇದೇ ಮೊದಲ ಬಾರಿಗೆ ಭಾರತದ ತಂಡದಲ್ಲಿ ಸ್ಥಾನ ನೀಡಲಾಗಿದೆ. ವೇಗಿ ಮುಖೇಶಕುಮಾರ ಅವರ ಮೊದಲ ಟೆಸ್ಟ್ ಸ್ಥಾನ ಪಡೆದಿದ್ದಾರೆ. ಮತ್ತೊಂದು … Continued