ಐತಿಹಾಸಿಕ ಭೇಟಿಗಾಗಿ ಅಮೆರಿಕಕ್ಕೆ ಪ್ರಯಾಣಿಸಿದ ಪ್ರಧಾನಿ ಮೋದಿ : ಲ್ಯಾಂಡ್‌ಮಾರ್ಕ್ ಭೇಟಿಯಲ್ಲಿ ರಕ್ಷಣೆ, ವ್ಯಾಪಾರಕ್ಕೆ ಒತ್ತು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಐತಿಹಾಸಿಕ ಭೇಟಿಗಾಗಿ ಇಂದು, ಮಂಗಳವಾರ ಅಮೆರಿಕಕ್ಕೆ ತೆರಳಿದ್ದಾರೆ. ಅವರಿಗೆ ಅತ್ಯಂತ ನಿಕಟ ಮಿತ್ರರಾಷ್ಟ್ರಗಳಿಗೆ ಮೀಸಲಾದ ಅತ್ಯುನ್ನತ ರಾಜತಾಂತ್ರಿಕ ಸ್ವಾಗತವನ್ನು ಅಮೆರಿಕ ನೀಡಲಿದೆ. ಭೇಟಿಯ ಸಮಯದಲ್ಲಿ ಜೆಟ್ ಎಂಜಿನ್ ತಂತ್ರಜ್ಞಾನ ವರ್ಗಾವಣೆಯ ಬಗ್ಗೆ ಅಭೂತಪೂರ್ವ ಒಪ್ಪಂದ ಆಗನಹುದು ಎಂದು ನಿರೀಕ್ಷಿಸಲಾಗಿದೆ. ಮುಂದಿನ ಮೂರು ದಿನಗಳ ಕಾಲ ಪ್ರಧಾನಿ ಮೋದಿಯವರ … Continued

ಮಾನವರಹಿತ ವೈಮಾನಿಕ ವಾಹನ ‘ತಪಸ್‌’ ಯಶಸ್ವಿ ಹಾರಾಟ ; ಕಾರವಾರ ನೌಕಾನೆಲೆ ಯುದ್ಧನೌಕೆಗೆ ಸುರಕ್ಷಿತವಾಗಿ ಲ್ಯಾಂಡಿಂಗ್‌

ಕಾರವಾರ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ನೌಕಾಪಡೆಯು ತಪಸ್ ಹೆಸರಿನ ಮಾನವರಹಿತ ವೈಮಾನಿಕ ವಾಹನದ (ಯುಎವಿ) ಕಮಾಂಡ್ ಮತ್ತು ಕಂಟ್ರೋಲ್ ಸಾಮರ್ಥ್ಯಗಳನ್ನು ಯಶಸ್ವಿಯಾಗಿ ಪ್ರದರ್ಶಿಸುವ ಮೂಲಕ ಕಾರವಾರದ ನೌಕಾನೆಲೆ (karwar naval base) ಗಮನಾರ್ಹ ಸಾಧನೆ ಮಾಡಿದೆ. ತಪಸ್‌ ಯುಎವಿ (TAPAS UAV) ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ATR) … Continued

ರಾಹುಲ್ ಗಾಂಧಿ ವೀಡಿಯೊ ಪೋಸ್ಟ್‌ : ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಐಟಿ ಸೆಲ್ ಮುಖ್ಯಸ್ಥ ಮಾಳವೀಯ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ದೂರು

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮತ್ತು ಬಿಜೆಪಿ ಚಂಡೀಗಢ ಅಧ್ಯಕ್ಷ ಅರುಣ ಸೂದ್ ವಿರುದ್ಧ ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ದೂರು ನೀಡಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ದುರುದ್ದೇಶಪೂರಿತ ಪೋಸ್ಟ್ ಮಾಡಿದ್ದಾರೆ, ವಿಶೇಷವಾಗಿ ಅನಿಮೇಟೆಡ್ ವೀಡಿಯೊವನ್ನು … Continued

500 ಏರ್‌ಬಸ್ ವಿಮಾನ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಇಂಡಿಗೋ : ಏರ್ ಇಂಡಿಯಾದ ದಾಖಲೆ ಮುರಿದ ವಿಮಾನಯಾನ ಸಂಸ್ಥೆ

ನವದೆಹಲಿ: ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ 500 ಏರ್‌ಬಸ್‌ ವಿಮಾನಗಳ ಖರೀದಿ ಒಪ್ಪಂದ ಪ್ರಕಟಿಸಿದ್ದು, ಇದು ವಾಯುಯಾನ ಇತಿಹಾಸದಲ್ಲಿಯೇ ದಾಖಲೆಯಾಗಿದೆ. ಏರ್ ಇಂಡಿಯಾ ಇತ್ತೀಚೆಗೆ ಸಹಿ ಮಾಡಿದ 470-ವಿಮಾನಗಳ ಖರೀದಿ ಒಪ್ಪಂದಕ್ಕಿಂತ ಈ ಒಪ್ಪಂದವು ದೊಡ್ಡ ಪ್ರಮಾಣದಲ್ಲಿದೆ. ಭಾರತದ ಬೆಳೆಯುತ್ತಿರುವ ಫ್ಲೈಯರ್‌ಗಳು ಮತ್ತು ಅಪಾರ ವಲಸಿಗ ಜನಸಂಖ್ಯೆಯ ಲಾಭ ಪಡೆಯಲು ಇಂತಹ ನಿರ್ಧಾರ ತೆಗೆದುಕೊಂಡಿದೆ. … Continued

31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ; ಯಾವ ಜಿಲ್ಲೆಗೆ ಯಾರು? ಇಲ್ಲಿದೆ ಪಟ್ಟಿ

ಬೆಂಗಳೂರು: ರಾಜ್ಯ ಸರ್ಕಾರವು ಎಲ್ಲ 31 ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಮ್ಮ ಹೊಣೆಗಾರಿಕೆ ನೀಡಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಸರ್ಕಾರದ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಬೇಕು, ಜಿಲ್ಲೆಯ ಅಭಿವೃದ್ಧಿ ಯೋಜನೆಗಳು ಹಾಗೂ ಜಿಲ್ಲೆ ಪರಿಸ್ಥಿತಿ ಬಗ್ಗೆ ಪರಿಶೀಲಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಲು … Continued

14 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರವು 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ (IAS Officers Transfer) ಮಾಡಿ ಸೋಮವಾರ ಆದೇಶಿಸಿದೆ. ಈ ಆದೇಶಕ್ಕೂ ಕೆಲವೇ ಕ್ಷಣಗಳ ಮುನ್ನ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳನ್ನಾಗಿ ಐಎಎಸ್ ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ವರ್ಗಾವಣೆಗೊಂಡಿರುವ 14 ಮಂದಿ ಐಎಎಸ್ ಅಧಿಕಾರಿಗಳು ಜಾವೇದ್ ಅಖ್ತರ್-ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ … Continued

ಬಿಹಾರದ ನಿತೀಶಕುಮಾರ ಸರ್ಕಾರಕ್ಕೆ ಬೆಂಬಲ ಹಿಂಪಡೆದ ಮಾಜಿ ಸಿಎಂ ಜಿತನ್ ಮಾಂಝಿ ಪಕ್ಷ

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ಪಕ್ಷವು ಸೋಮವಾರ ರಾಜ್ಯದಲ್ಲಿ ನಿತೀಶಕುಮಾರ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದೆ. ಮಾಂಝಿ ಅವರ ಪುತ್ರ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸಂತೋಷ ಸುಮನ್ ಅವರು, ಬೆಂಬಲ ಹಿಂತೆಗೆದುಕೊಳ್ಳುವ ಪತ್ರವನ್ನು ಹಸ್ತಾಂತರಿಸಲು ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರೊಂದಿಗೆ ಅಪಾಯಿಂಟ್ಮೆಂಟ್ ಕೇಳಿದ್ದಾರೆ … Continued

ನಟಿ ರಶ್ಮಿಕಾಗೆ ಆಪ್ತ ಸಹಾಯಕನಿಂದಲೇ ₹80 ಲಕ್ಷ ವಂಚನೆ…?

ಖ್ಯಾತ ನಟಿ ರಶ್ಮಿಕಾ ಮಂದಣ್ಣ ತಮ್ಮ ಆಪ್ತ ಸಹಾಯಕನಿಂದಲೇ ವಂಚನೆಗೊಳಗಾಗಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಕಳೆದ ಕೆಲ ವರ್ಷಗಳಿಂದ ನಟಿಗೆ ಆಪ್ತ ಸಹಯಾಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬರೋಬ್ಬರಿ 80 ಲಕ್ಷ ರೂಪಾಯಿ ಹಣವನ್ನು ವಂಚಿಸಿದ್ದಾನೆ ಎಂದು ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. 2016ರಲ್ಲಿ ತೆರೆಕಂಡಿದ್ದ ಕನ್ನಡದ ʼಕಿರಿಕ್‌ ಪಾರ್ಟಿʼ ಸಿನಿಮಾ ಮೂಲಕ … Continued

ವಿಧಾನ ಪರಿಷತ್ ಚುನಾವಣೆ: ಜಗದೀಶ್ ಶೆಟ್ಟರ ಸೇರಿ ಮೂವರು ಅಭ್ಯರ್ಥಿಗಳ ಹೆಸರು ಘೋಷಿಸಿದ ಕಾಂಗ್ರೆಸ್‌

ಬೆಂಗಳೂರು: ಮೂರು ವಿಧಾನಪರಿಷತ್ ಸ್ಥಾನಗಳಿಗೆ ಜೂನ್ 30 ಎಂದು‌ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ, ಸಚಿವ ಬೋಸರಾಜ ಹಾಗೂ ಕಲಬುರಗಿಯ ಹಿರಿಯ ಕಾಂಗ್ರೆಸ್ ನಾಯಕ ತಿಪ್ಪನ್ನಪ್ಪ ಕಮಕ್ನೂರು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.ಮಂಗಳವಾರ *ಜೂನ್‌ 20 ವಿಧಾನ ಪರಿಷತ್ ಉಪ ಚುನಾವಣೆಗೆ  ನಾಮಪತ್ರ ಸಲ್ಲಿಸಲು ಕೊನೆಯ … Continued

ಗಾಂಧಿ ಶಾಂತಿ ಪ್ರಶಸ್ತಿ ವಿವಾದದ ನಡುವೆ 1 ಕೋಟಿ ನಗದು ಬಹುಮಾನ ಸ್ವೀಕರಿಸುವುದಿಲ್ಲ ಎಂದ ಗೀತಾ ಪ್ರೆಸ್

ನವದೆಹಲಿ : ವಿಶ್ವದ ಅತಿದೊಡ್ಡ ಪ್ರಕಾಶಕನ ಸಂಸ್ಥೆಗಳಲ್ಲಿ ಒಂದಾದ ಗೋರಖ್‌ಪುರದ ಗೀತಾ ಪ್ರೆಸ್, ತಮ್ಮ ಪ್ರಕಾಶನ ಸಂಸ್ಥೆಯನ್ನು 2021ರ ಗಾಂಧಿ ಶಾಂತಿ ಪ್ರಶಸ್ತಿಗೆ ನೀಡುವುದು ಅತ್ಯಂತ ಗೌರವದ ಸಂಗತಿಯಾಗಿದೆ ಎಂದು ಹೇಳಿದೆ. ಆದರೆ, ಗೌರವಕ್ಕೆ ಆಯ್ಕೆಯಾದ ಬಗ್ಗೆ ಎದ್ದ ವಿವಾದದ ನಡುವೆ ಪ್ರಕಾಶಕನ ಸಂಸ್ಥೆ 1 ಕೋಟಿ ರೂಪಾಯಿ ನಗದು ಬಹುಮಾನ ಸ್ವೀಕರಿಸುವುದಿಲ್ಲ ಎಂದು ಹೇಳಿದೆ. … Continued