ಎಂಜಿನಿಯರ್‌ಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಶಾಸಕಿ | ವೀಕ್ಷಿಸಿ

ಮುಂಬೈ : ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳಾ ಶಾಸಕಿಯೊಬ್ಬರು ಸಿವಿಲ್‌ ಎಂಜಿನಿಯರ್‌ಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ವೀಡಿಯೊ ವೈರಲ್ ಆಗಿದೆ. ಥಾಣೆ ಜಿಲ್ಲೆಯ ಮೀರಾ ಭಯಂದರ್‌ನ ಶಾಸಕಿ ಗೀತಾ ಜೈನ್ ಅವರು ಕೆಲವು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ವಿಚಾರವಾಗಿ ಮುನ್ಸಿಪಲ್ ಕಾರ್ಪೊರೇಷನ್‌ನ ಇಬ್ಬರು ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಥಾಣೆ ಜಿಲ್ಲೆಯ ಮೀರಾ ಭಾಯಂದರ್‌ನ ಶಾಸಕಿ … Continued

ಅಪ್ಪನಿಂದಲೇ ಅಧಿಕಾರ ಸ್ವೀಕರಿಸಿದ ಮಗಳು: ಮಂಡ್ಯ ಸೆಂಟ್ರಲ್ ಪೊಲೀಸ್‌ ಠಾಣೆಯಲ್ಲಿ ಅಪರೂಪದ ವಿದ್ಯಮಾನ

ಮಂಡ್ಯ: ತಂದೆಯಿಂದಲೇ ಮಗಳು ಪೋಲಿಸ್‌ ಠಾಣೆಯಲ್ಲಿ ಅಧಿಕಾರ ಸ್ವೀಕಾರ ಮಾಡಿದ ಅಪರೂಪದ ಘಟನೆಗೆ ಮಂಡ್ಯ ಸೆಂಟ್ರಲ್ ಠಾಣೆ ಸಾಕ್ಷಿಯಾಗಿದೆ. ಇಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಬ್‌ ಇನ್ಸ್ಪೆಕ್ಟರ್‌ ಬಿ‌.ಎಸ್.ವೆಂಕಟೇಶ ಅವರು ಬೇರೆ ಠಾಣೆಗೆ ವರ್ಗಾವಣೆ ಆಗಿದ್ದಾರೆ, ಅವರು ವರ್ಗಾವಣೆಯಾದ ಜಾಗಕ್ಕೆ ಅವರ ಮಗಳಾದ ಬಿ.ವಿ.ವರ್ಷಾ ಅವರು ನೂತನ ಎಸ್ಐ ಆಗಿ ಅದೇ ಠಾಣೆಗೆ ಬಂದಿದ್ದಾರೆ. ಮಗಳಿಗೆ ಅಧಿಕಾರ … Continued

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಣದಿಂದ ಮಗನ ಮದುವೆ ಮಾಡಿದ್ದೇನೆ, ಮನೆ ಕಟ್ಟಿದ್ದೇನೆ: ಬಿಜೆಪಿ ಸಂಸದನ ಹೇಳಿಕೆ ವೈರಲ್‌…!

ಹೈದರಾಬಾದ್ : ತೆಲಂಗಾಣ ಬಿಜೆಪಿ ಸಂಸದ ಸೋಯಮ್ ಬಾಪು ರಾವ್ ಅವರದ್ದು ಎನ್ನಲಾದ ವೀಡಿಯೊ ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ವೀಡಿಯೊದಲ್ಲಿ ಸೋಯಮ್ ಬಾಪುರಾವ್ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಪಿಎಲ್‌ಎಡಿ) ಯೋಜನೆಯ ಹಣದಲ್ಲಿ (ಸರ್ಕಾರದ ಹಣ) ಜನಪರ ಅಭಿವೃದ್ಧಿ ಕಾರ್ಯ ಮಾಡುವ ಬದಲು ತನಗಾಗಿ ಮನೆ ನಿರ್ಮಿಸಿಕೊಂಡಿದ್ದೇನೆ ಹಾಗೂ ಮಗನ ಮದುವೆ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವ … Continued

ತನ್ನನ್ನು ‘ಮೋದಿ ಅಭಿಮಾನಿ’ ಎಂದು ಕರೆದುಕೊಂಡ ಎಲೋನ್ ಮಸ್ಕ್ : ಭೇಟಿಯ ನಂತರ ಪ್ರಧಾನಿ ಮೋದಿ ಹೊಗಳಿದ ವಿಶ್ವದ ನಂ.1 ಶ್ರೀಮಂತ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನ್ಯೂಯಾರ್ಕ್‌ನಲ್ಲಿ ಟ್ವಿಟರ್ ಸಿಇಒ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದಾರೆ. ಪ್ರಧಾನಿ ಮೋದಿ ಮೂರು ದಿನಗಳ ಅಮೆರಿಕ ಪ್ರವಾಸದಲ್ಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಎಲೋನ್ ಮಸ್ಕ್ ಅವರು ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ. … Continued

26/11 ಮುಂಬೈ ಭಯೋತ್ಪಾದಕ ದಾಳಿ ಆರೋಪಿ ಸಾಜಿದ್ ಮಿರ್ ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ವಿಶ್ವಸಂಸ್ಥೆಯಲ್ಲಿನ ಪ್ರಸ್ತಾಪ ತಡೆದ ಚೀನಾ

ನವದೆಹಲಿ: 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಸಾಜಿದ್ ಮಿರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕ ಮಾಡಿದ ಪ್ರಸ್ತಾಪವನ್ನು ಚೀನಾ ಮಂಗಳವಾರ ತಡೆಹಿಡಿದಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267ರ ಅಲ್ ಖೈದಾ ನಿರ್ಬಂಧಗಳ ಸಮಿತಿಯಡಿಯಲ್ಲಿ ಜಾಗತಿಕ ಭಯೋತ್ಪಾದಕ ಎಂದು ಮಿರ್‌ನನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು … Continued

470 ವಿಮಾನಗಳ ಖರೀದಿಗೆ ಏರ್‌ಬಸ್, ಬೋಯಿಂಗ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಏರ್ ಇಂಡಿಯಾ

ನವದೆಹಲಿ: ಏರ್ ಇಂಡಿಯಾ ಮಂಗಳವಾರ ಏರ್‌ಬಸ್ ಮತ್ತು ಬೋಯಿಂಗ್‌ನೊಂದಿಗೆ 470 ವಿಮಾನಗಳನ್ನು ಖರೀದಿಗೆ ಅಂದಾಜು $70 ಬಿಲಿಯನ್‌ ಒಪ್ಪಂದಗಳಿಗೆ ಸಹಿ ಹಾಕಿದೆ. ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ಈ ವರ್ಷದ ಫೆಬ್ರವರಿಯಲ್ಲಿ ಬೃಹತ್‌ ವಿಮಾನಗಳು ಸೇರಿದಂತೆ 470 ವಿಮಾನಗಳನ್ನು ಖರೀದಿಸುವುದಾಗಿ ಘೋಷಿಸಿತ್ತು. ಸಂಸ್ಥೆಯ ಆರ್ಡರ್‌ಗಳಲ್ಲಿ 34 A350-1000, 6 A350-900, 20 ಬೋಯಿಂಗ್ 787 ಡ್ರೀಮ್‌ಲೈನರ್‌ಗಳು … Continued

ಮುಕ್ತ ಮಾರುಕಟ್ಟೆಯಿಂದ ಅಕ್ಕಿ ಖರೀದಿಸಲು ಕರ್ನಾಟಕ ಮುಕ್ತವಾಗಿದೆ ; ಪಿಯೂಷ್ ಗೋಯಲ್

ನವದೆಹಲಿ: ಮುಕ್ತ ಮಾರುಕಟ್ಟೆಯಲ್ಲಿ ಧಾನ್ಯದ ಬೆಲೆ ಏರಿಕೆಯಾಗದಂತೆ ನೋಡಿಕೊಳ್ಳಲು ಮತ್ತು ಜನರು ಅದನ್ನು ಕೈಗೆಟುಕುವ ದರದಲ್ಲಿ ಪಡೆಯುವುದನ್ನು ಮುಂದುವರಿಸಲು ಕೇಂದ್ರವು ತನ್ನ ದಾಸ್ತಾನುಗಳಿಂದ ಹಲವಾರು ರಾಜ್ಯಗಳಿಗೆ ಅಕ್ಕಿ ನೀಡಲು ನಿರಾಕರಿಸಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಕರ್ನಾಟಕಕ್ಕೆ ಅಕ್ಕಿ ಪೂರೈಕೆ ನಿರಾಕರಣೆ ಕುರಿತು ರಾಜಕೀಯ ಗದ್ದಲದ ನಡುವೆ ಮಂಗಳವಾರ ಅವರು ಹೇಳಿಕೆ ಬಂದಿದೆ. … Continued

ವಿಷಬೀಜ ಸೇವಿಸಿ ಶಾಲೆಯ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಕಾರವಾರ: ಶಾಲೆಯ ಆವರಣದಲ್ಲಿದ್ದ ವಿಷಕಾರಿ ಬೀಜ ಸೇವಿಸಿ 10ಕ್ಕೂ ಅಧಿಕ ಮಕ್ಕಳು ಅಸ್ವಸ್ಥರಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗುಂಡೊಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಶೇಂಗ ಬೀಜವೆಂದು ಭಾವಿಸಿ ಮಕ್ಕಳು ಶಾಲೆಯ ಆವರಣದಲ್ಲಿ ಬೆಳದಿದ್ದ ಕಾಡು ಜಾತಿಯ ಗಿಡದ ಬೀಜ ತಿಂದಿದ್ದಾರೆ. ತಿಂದ ಕೆಲ ಸಮಯದಲ್ಲಿಯೇ ಮಕ್ಕಳಿಗೆ … Continued

ಅಪರಿಚಿತ ಸ್ಪ್ಯಾಮ್ ಕರೆಗಳಿಂದ ರಕ್ಷಣೆ ಪಡೆಯಲು ಹೊಸ ಫೀಚರ್‌ ಪರಿಚಯಿಸಿದ ವಾಟ್ಸಾಪ್

ಅಪರಿಚಿತರ ಅನಾಮಿಕ ಸ್ಪ್ಯಾಮ್‌ ಕರೆಗಳಿಂದ ರಕ್ಷಣೆ ಪಡೆಯಲು ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರಿಂದ ವಾಟ್ಸಾಪ್‌ ಬಳಕೆದಾರರು ಒಳಬರುವ ಅಪರಿಚಿತ ಕರೆಗಳು ಬಾರದಂತೆ ತಡೆಯಬಹುದಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಮಂಗಳವಾರ ಇದನ್ನು ಘೋಷಿಸಿದ್ದಾರೆ. ಸೆಟ್ಟಿಂಗ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಆನ್ ಮಾಡುವ ಮೂಲಕ WhatsApp ಬಳಕೆದಾರರು ಈಗ ಅಪರಿಚಿತ ಕರೆಗಳು ಅಥವಾ ಸ್ಪ್ಯಾಮ್ ಕರೆಗಳನ್ನು ತಡೆಯಲು … Continued

ಆಶ್ರಮದಲ್ಲಿ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಆಂಧ್ರಪ್ರದೇಶದ ಸ್ವಾಮೀಜಿ ಬಂಧನ

ವಿಶಾಖಪಟ್ಟಣಂ : ತಾನು ನಡೆಸುತ್ತಿದ್ದ ಆಶ್ರಮದಲ್ಲಿ ಹಲವು ತಿಂಗಳುಗಳಿಂದ 15 ವರ್ಷದ ಅನಾಥ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆಂಧ್ರಪ್ರದೇಶದ ಸ್ವಾಮೀಜಿಯೊಬ್ಬರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ವಿಜಯವಾಡದಲ್ಲಿ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ವಿಶಾಖಪಟ್ಟಣಂನ ವೆಂಕೋಜಿಯಲ್ಲಿರುವ ಜ್ಞಾನಾನಂದ ಆಶ್ರಮದ ಆಡಳಿತಾಧಿಕಾರಿ ಪೂರ್ಣಾನಂದ ಸರಸ್ವತಿ ಅವರನ್ನು ಬಂಧಿಸಲಾಗಿದೆ. ಪೋಲೀಸರ ಪ್ರಕಾರ, ಪೂರ್ಣಾನಂದ ಸರಸ್ವತಿ … Continued