ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಕಲಬುರಗಿ, ಕೊಪ್ಪಳ, ತುಮಕೂರು, ಶಿವಮೊಗ್ಗ, ಹಾವೇರಿ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯಕ್ಕೂ ಮೀರಿ ಆಸ್ತಿ ಗಳಿಕೆಯ ಆರೋಪದ ಹಿನ್ನೆಲೆಯಲ್ಲಿ ವಿವಿಧ ಅಧಿಕಾರಿಗಳ ನಿವಾಸ, ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ … Continued

ಶಾಲಾ-ಕಾಲೇಜು ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿದ ಕೆ ಎಸ್‌ ಆರ್ ಟಿ ಸಿ

ಬೆಂಗಳೂರು : ಕೆ ಎಸ್‌ ಆರ್ ಟಿ ಸಿಯು ರಾಜ್ಯದ ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿಯನ್ನು ಜೂನ್ 15ರ ವರೆಗೆ ವಿಸ್ತರಣೆ ಮಾಡಿದೆ. ಈ ಬಗ್ಗೆ ಕೆಎಸ್ ಆರ್ ಟಿಸಿ ಪ್ರಕಟಣೆ ಹೊರಡಿಸಿದ್ದು, 2023-24ನೇ ಸಾಲಿನ ವಿದ್ಯಾರ್ಥಿಗಳ ಉಚಿತ / ರಿಯಾಯಿತಿ ಬಸ್ ಪಾಸುಗಳನ್ನು ಇಡಿಸಿಎಸ್ ಇಲಾಖೆಯ ಸೇವಾಸಿಂಧು ತಂತ್ರಾಂಶದ ಮುಖಾಂತರ ಸಂಪೂರ್ಣ ಯಾಂತ್ರೀಕೃತವಾಗಿ … Continued

ಭಯೋತ್ಪಾದನಾ ಕೃತ್ಯಕ್ಕೆ ಹಣಬಳಕೆ ಆರೋಪ : ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಬೆಳ್ಳಂಬೆಳಿಗ್ಗೆ ಎನ್‌ಐಎ ದಾಳಿ

ಮಂಗಳೂರು : ಮಂಗಳೂರು, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು, ಬಂಟ್ವಾಳಗಳಲ್ಲಿ ಮನೆ, ಕಚೇರಿ, ಆಸ್ಪತ್ರೆಗಳು ಸೇರಿದಂತೆ 16 ಕಡೆಗಳಲ್ಲಿಇಂದು ಬೆಳಿಗ್ಗೆ  ಎನ್ ಐಎ ದಾಳಿ ನಡೆಸಿದೆ.. ಎನ್‌ಐಎ ಅಧಿಕಾರಿಗಳು ಹಲವು ದಾಖಲೆಗಳ ಪರಿಶೀಲನೆಯನ್ನು ನಡೆಸಿದ್ದು, ಈ ವೇಳೆ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಕೇರಳ, ಬಿಹಾರದಲ್ಲೂ ದಾಳಿ ನಡೆದಿದೆ ಎಂದು ವರದಿಯಾಗಿದೆ. ಬಿಹಾರದ ಫುಲ್ವಾರಿ ಶರೀಫಗೆ … Continued

ತಡರಾತ್ರಿ ಲಕ್ಷ್ಮಣ ಸವದಿ ಭೇಟಿ ಮಾಡಿದ ಡಿಸಿಎಂ ಶಿವಕುಮಾರ; ಕುತೂಹಲಕ್ಕೆ ಕಾರಣವಾದ ಬೆಳವಣಿಗೆ

ಬೆಳಗಾವಿ: ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವರಿ ಅವರನ್ನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ತಡರಾತ್ರಿ ಭೇಟಿ ಮಾಡಿದ್ದಾರೆ‌ ಬೆಳಗಾವಿಯ ಸದಾಶಿವನಗರದಲ್ಲಿರುವ ಲಕ್ಷ್ಮಣ ಸವದಿ ನಿವಾಸಕ್ಕೆ ತೆರಳಿದ ಶಿವಕುಮಾರ ಅವರು ಮಾತುಕತೆ ನಡೆಸಿದರು. ಸಚಿವ ಸ್ಥಾನ ಸಿಗದಿದ್ದಕ್ಕೆ ಸವದಿ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳ ನಡುವೆ ರಾತ್ರೋರಾತ್ರಿ ಸವದಿ ನಿವಾಸಕ್ಕೆ ಆಗಮಿಸಿದ ಶಿವಕುಮಾರ ಮಾತುಕತೆ ನಡೆಸಿದ್ದಾರೆ … Continued

ನಾಳೆಯಿಂದ ಸರ್ಕಾರಿ ನೌಕರರ ವರ್ಗಾವಣೆ: ಆಯಾ ಇಲಾಖೆ ಸಚಿವರಿಗೆ ಅಧಿಕಾರ

ಬೆಂಗಳೂರು: ನಾಳೆಯಿಂದ (ಜೂನ್‌ 1) 15 ದಿನಗಳೊಳಗೆ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾಡಲು ಆದೇಶಿಸಲಾಗಿದೆ. ರಾಜ್ಯ ಸರ್ಕಾರಿ ನೌಕರರ ಪ್ರಸಕ್ತ ಸಾಲಿನ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಜೂನ್ 1ರಿಂದ 15ರೊಳಗೆ ಪೂರ್ಣಗೊಳಿಸುವಂತೆ ಸರ್ಕಾರ ಸೂಚಿಸಿದೆ. ಗ್ರೂಪ್ ಎ, ಬಿ, ಸಿ, ಡಿ ಅಧಿಕಾರಿಗಳು, ನೌಕರರಿಗೆ ಅನ್ವಯವಾಗುವಂತೆ ಕಾರ್ಯನಿರತ ವೃಂದ ಬಲದ ಶೇಕಡ 6 ರಷ್ಟು … Continued

ಕುಸ್ತಿಪಟುಗಳು ತಮ್ಮ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯುವುದನ್ನು ತಡೆದ ರೈತ ನಾಯಕ ನರೇಶ್ ಟಿಕಾಯತ್‌, ಐದು ದಿನಗಳ ಕಾಲಾವಕಾಶ ಕೋರಿಕೆ

ನವದೆಹಲಿ: ರೈತ ಮುಖಂಡ ನರೇಶ್ ಟಿಕಾಯತ್‌ ಅವರು ಮಂಗಳವಾರ ಹರಿದ್ವಾರಕ್ಕೆ ಆಗಮಿಸಿ ಗಂಗಾ ನದಿಯಲ್ಲಿ ತಮ್ಮ ಪದಕಗಳನ್ನು ಮುಳುಗಿಸದಂತೆ ಕುಸ್ತಿಪಟುಗಳನ್ನು ತಡೆದಿದ್ದಾರೆ. ಲೈಂಗಿಕ ಕಿರುಕುಳ ಆರೋಪದ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಕುಸ್ತಿಪಟುಗಳು ಗಂಗಾನದಿಯಲ್ಲಿ ಪದಕಗಳನ್ನು ಎಸೆಯಲು ನಿರ್ಧರಿಸಿದ್ದರು. ಅದಕ್ಕಾಗಿ ಅವರು ಹರಿದ್ವಾರಕ್ಕೂ … Continued

ಬೆಳಗಾವಿ ಜಿಲ್ಲಾ ವಿಭಜನೆಗೆ ನಾವು ಬದ್ಧ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ : ನಾವು ಬೆಳಗಾವಿ ಜಿಲ್ಲಾ ವಿಭಜನೆಗೆ ಬದ್ಧರಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿ ವಿಭಜನೆಗೆ ನಾವು ಬದ್ಧರಿದ್ದೇವೆ. ಬೆಳಗಾವಿ ಜಿಲ್ಲೆ ದೊಡ್ಡದಿರುವುದರಿಂದ ವಿಭಜನೆ ಆಗಬೇಕು. ಜಿಲ್ಲಾ ವಿಭಜನೆ ಬಗ್ಗೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು. ಜಿಲ್ಲೆಯನ್ನು ಮೂರು … Continued

12ನೇ ತರಗತಿ ಪಠ್ಯಪುಸ್ತಕದಿಂದ ಖಾಲಿಸ್ತಾನ್”, “ಪ್ರತ್ಯೇಕ ಸಿಖ್ ರಾಷ್ಟ್ರ ಉಲ್ಲೇಖ ತೆಗೆದುಹಾಕಿದ ಎನ್‌ ಸಿಇಆರ್‌ಟಿ

ನವದೆಹಲಿ: ಖಾಲಿಸ್ತಾನ್ ಅಥವಾ ಪ್ರತ್ಯೇಕ ಸಿಖ್ ರಾಷ್ಟ್ರದ ಉಲ್ಲೇಖಗಳು ಇನ್ನು ಮುಂದೆ ಸಿಬಿಎಸ್‌ಇಯ 12 ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯಶಾಸ್ತ್ರ ಪಠ್ಯಪುಸ್ತಕದ ಭಾಗವಾಗಿರುವುದಿಲ್ಲ. “ಸಿಖ್ ಸಮುದಾಯದ ವಿರುದ್ಧ ಆಕ್ಷೇಪಾರ್ಹ ವಿಷಯ” ಎಂದು ಫ್ಲ್ಯಾಗ್ ಮಾಡಿದ ಉನ್ನತ ಸಿಖ್ ಮಂಡಳಿಯ (SGPC) ಆಕ್ಷೇಪಣೆಗಳನ್ನು ಅನುಸರಿಸಿ ಭಾಗಗಳನ್ನು ತೆಗೆದುಹಾಕಲಾಗಿದೆ. ದೂರಿನ ಪರಿಶೀಲನೆಗೆ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಅವರ ಶಿಫಾರಸಿನ … Continued

ಮದುವೆ ಮಂಟಪದಿಂದ ನಾಪತ್ತೆಯಾಗಿದ್ದ ವಧುವಿಗಾಗಿ ಮಂಟಪದಲ್ಲೇ 13 ದಿನ ಕಾದು ಕುಳಿತು ಅವಳನ್ನೇ ವಿವಾಹವಾದ ವರ…!!

ಪಾಲಿ : ಒಂದು ಅಸಾಮಾನ್ಯ ಪ್ರಕರಣವೊಂದರಲ್ಲಿ ವರನು ಮದುವೆ ಮಂಟಪದಿಂದ ಓಡಿ ಹೋದ ತನ್ನ ವಧುವಿಗಾಗಿ 13 ದಿನಗಳವರೆಗೆ ಮಂಟಪದಲ್ಲೇ ಕಾದು ಕುಳಿತು ನಂತರ ಅವಳನ್ನೇ ಮದುವೆಯಾಗಿದ್ದಾನೆ…! ವಧು ತನ್ನ ಮದುವೆಗಿಂತ ಸ್ವಲ್ಪ ಮೊದಲು ತನ್ನ ಪ್ರೇಮಿಯೊಂದಿಗೆ ಓಡಿಹೋಗಿದ್ದಳು ಮತ್ತು ಅಂತಿಮವಾಗಿ 13 ದಿನಗಳ ನಂತರ ತನಗೆ ನಿಶ್ಚಯವಾಗಿದ್ದ ಅದೇ ವರನನ್ನು ಅದೇ ಮದುವೆ ಮಂಟಪದಲ್ಲಿ … Continued

ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ತುಟ್ಟಿಭತ್ಯೆ ಹೆಚ್ಚಳ ಮಾಡಿದ ರಾಜ್ಯದ ನೂತನ ಸರ್ಕಾರ

ಬೆಂಗಳೂರು: ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ನೀಡಿದೆ. ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಶೇ. 4ರಷ್ಟು ಹೆಚ್ಚಿಸಿ ಆದೇಶಿಸಿದೆ. ಈ ಕುರಿತು ಆರ್ಥಿಕ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರುಗಳಿಗೆ ಈ ವರ್ಷದ ಜನವರಿ 1ರಿಂದ ಜಾರಿಗೆ … Continued