ಬೆಂಗಳೂರಲ್ಲಿ ಮೊದಲ ಬಾರಿಗೆ ‘ಅಪ್ಪೆಮಿಡಿ’ ಮೇಳ

ಬೆಂಗಳೂರು: ರಾಜ್ಯದ ಮಲೆನಾಡಿನಲ್ಲಿ ದೊರೆಯುವ ‘ಅಪ್ಪೆಮಿಡಿ’ ಗಳನ್ನು (ಮಾವಿನ ಕಾಯಿಯ ತಳಿ) ನಾಡಿನ ಜನರಿಗೆ ಅದರಲ್ಲೂ ರೈತರಿಗೆ ಪರಿಚಯಿಸಲು ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (IIHR)ಮುಂದಾಗಿದೆ. ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (ಐಐಎಚ್ಆರ್) ಮೊಟ್ಟ ಮೊದಲ ಬಾರಿಗೆ ‘ಅಪ್ಪೆಮಿಡಿ’ ಮೇಳವನ್ನು ಏಪ್ರಿಲ್ 12 ಮತ್ತು 13ರಂದು ಆಯೋಜಿಸಿದೆ. ಅಪ್ಪೆ ಮಿಡಿ ಕರ್ನಾಟಕದ … Continued

ಅಪರೂಪದ ಬೇಟೆ..: ಮರದಿಂದ ಮರಕ್ಕೆ ಜಿಗಿಯುತ್ತಲೇ ಮಂಗನ ಬೇಟೆಯಾಡಿದ ಚಿರತೆ | ವೀಕ್ಷಿಸಿ

ಚಿರತೆಗಳು ಬೇಟೆಯಾಡಲು, ವೇಗವಾಗಿ ಓಡುವ ವಿಶೇಷ ಸಾಮರ್ಥ್ಯ ಹೊಂದಿರುತ್ತವೆ. ಅವುಗಳು ಮರ ಏರುವುದರಲ್ಲಿಯೂ ಚತುರ ಪ್ರಾಣಿಗಳು. ದೈತ್ಯಾಕಾರದ ಮರ ಏರಿ ಬೇಟೆಯಾಡುವುದನ್ನು ನಾವು ನೋಡಿರುತ್ತೇವೆ. ಸಾಮಾನ್ಯವಾಗಿ ಮಂಗಗಳು, ಸಿಂಗಳೀಕಗಳು ಮರದಿಂದ ಮರಕ್ಕೆ ಜಿಗಿಯುವುದರಲ್ಲಿ ನಿಪುಣ ಪ್ರಾಣಿಗಳು ಹಾಗೂ ಹೆಚ್ಚಾಗಿ ಮರದಲ್ಲಿಯೇ ವಾಸಿಸುತ್ತವೆ. ಆದರೆ ಚಿರತೆ ಮರದಿಂದ, ಮರಕ್ಕೆ ಮಂಗನಂತೆ ಜಿಗಿದು ಬೇಟೆಯಾಡುವುದನ್ನು ನೋಡಿದ್ದೀರಾ..? ಈ ವೀಡಿಯೊ … Continued

ಕೇಜ್ರಿವಾಲ್‌ಗೆ ಗುಜರಾತ್ ಹೈಕೋರ್ಟ್ ದಂಡ ವಿಧಿಸಿದ ಕೆಲವು ದಿನಗಳ ನಂತರ ʼನಿಮ್ಮ ಪದವಿ ತೋರಿಸಿ’ ಎಎಪಿ ಅಭಿಯಾನ ಆರಂಭ

ನವದೆಹಲಿ: ಆಮ್ ಆದ್ಮಿ ಪಕ್ಷ (ಎಎಪಿ) ಪ್ರದಾನಿ ಮೋದಿಗೆ ‘ನಿಮ್ಮ ಪದವಿ ತೋರಿಸಿ’ ಎಂಬ ಅಭಿಯಾನ ಆರಂಭಿಸಿದ್ದು, ಬಿಜೆಪಿ ನಾಯಕರಿಗೂ ಇದೇ ರೀತಿ ಸವಾಲು ಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗಳ ವಿವರಗಳು ಸಾರ್ವಜನಿಕ ಡೊಮೇನ್‌ನಲ್ಲಿರುವಾಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಗುಜರಾತ್ ಹೈಕೋರ್ಟ್ ₹ 25,000 ದಂಡ ವಿಧಿಸಿದ ಒಂದು ವಾರದ ನಂತರ … Continued

ಹುಬ್ಬಳ್ಳಿ: ಕಾಂಗ್ರೆಸ್‌ಗೆ ಗುಡ್‌ ಬೈ, ಬಿಜೆಪಿಗೆ ಸೇರ್ಪಡೆಯಾದ ನಾಗರಾಜ ಛಬ್ಬಿ

ಹುಬ್ಬಳ್ಳಿ:  ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡದ ಕಾರಣಕ್ಕೆ ಅಸಮಾಧಾನಗೊಂಡ ವಿಧಾನ ಪರಿಷತ್‌ ಮಾಜಿ ಸದಸ್ಯ ಗರಾಜ ಛಬ್ಬಿ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು, ಸಚಿವ ಗೋವಿಂದ ಕಾರಜೋಳ ಸಮ್ಮುಖದಲ್ಲಿ ಅವರು ಇಂದು, ಭಾನುವಾರ ದೆಹಲಿಯಲ್ಲಿ ಬಿಜೆಪಿಗೆ … Continued

ಗೆಹ್ಲೋಟ್ Vs ಪೈಲಟ್: ರಾಜಸ್ಥಾನ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಮತ್ತೆ ಭುಗಿಲೆದ್ದ ರಾಜಕೀಯ ಯುದ್ಧ…!

ಜೈಪುರ: ರಾಜಸ್ಥಾನದಲ್ಲಿ ಚುನಾವಣೆಗೆ ತಿಂಗಳುಗಳ ಮೊದಲು, ರಾಜ್ಯ ಕಾಂಗ್ರೆಸ್ ಘಟಕದಲ್ಲಿನ ಭಿನ್ನಮತದ ಗೆರೆಗಳು ಭಾನುವಾರ ಮುನ್ನೆಲೆಗೆ ಬಂದವು. ಪಕ್ಷದ ನಾಯಕ ಸಚಿನ್ ಪೈಲಟ್ ಅವರು ತಮ್ಮ ಪ್ರತಿಸ್ಪರ್ಧಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಮೇಲೆ ಹೊಸ ವಾಗ್ದಾಳಿ ನಡೆಸಿದ್ದಾರೆ. ಹಾಗೂ ಮಂಗಳವಾರ ಭ್ರಷ್ಟಾಚಾರದ ವಿರುದ್ಧ ಒಂದು ದಿನದ ಉಪವಾಸ ಕುಳಿತುಕೊಳ್ಳುವುದಾಗಿ ಘೋಷಿಸಿದರು. ವಸುಂಧರಾ ರಾಜೆ ನೇತೃತ್ವದ … Continued

ಭಾರತದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣ

ಮೈಸೂರು : ಭಾರತದಲ್ಲಿ ಜನಪ್ರಿಯವಾಗಿರುವ ಹುಲಿ 2022 ರಲ್ಲಿ 3,167 ಆಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿ ಬಿಡುಗಡೆ ಮಾಡಿದ ಇತ್ತೀಚಿನ ಹುಲಿ ಗಣತಿ ಡೇಟಾ ಬಹಿರಂಗಪಡಿಸಿದ್ದಾರೆ. ಅಂಕಿಅಂಶಗಳ ಪ್ರಕಾರ, 2006 ರಲ್ಲಿ 1,411, 2010 ರಲ್ಲಿ 1,706, 2014 ರಲ್ಲಿ 2,226, 2018 ರಲ್ಲಿ 2,967 ಮತ್ತು 2022 ರಲ್ಲಿ … Continued

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ 600ಕ್ಕೂ ಹೆಚ್ಚು ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಖಾಲಿ ಇರುವ ಜ್ಯೂನಿಯರ್ ಅಸಿಸ್ಟೆಂಟ್, ಎಸ್‌ಡಿಎ, ಅಸಿಸ್ಟೆಂಟ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿವರವಾದ ಅಧಿಸೂಚನೆ 15-4-2023ರಂದು ಪ್ರಕಟವಾಗಲಿದೆ. ಆನ್‌ಲೈನ್ ಮೂಲಕ 17-4-2023 ರಿಂದ 17-5-2023ರ ವರೆಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ. ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು … Continued

ನಾಳೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ : ಸಿಎಂ ಬೊಮ್ಮಾಯಿ

ನವದೆಹಲಿ: ದೆಹಲಿಯಲ್ಲಿ ಮಹತ್ವದ ಸಭೆಗಳ ನಡುವೆ ಸೋಮವಾರ (ಏಪ್ರಿಲ್ 10) ರಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಿದೆ. ನವದೆಹಲಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೋಮವಾರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ. ಶನಿವಾರ ಸಂಸದೀಯ ಮಂಡಳಿ ಸಭೆಯಲ್ಲಿ ಟಿಕೆಟ್ ನೀಡುವುದಕ್ಕೆ ಸಂಬಂಧಪಟ್ಟಂತೆ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು … Continued

ಬಂಡೀಪುರದಲ್ಲಿ ಸಫಾರಿ ಮಾಡಿದ ಪ್ರಧಾನಿ ಮೋದಿ, ಹುಲಿ ದರ್ಶನ… ದಿ ಎಲಿಫೆಂಟ್ ವಿಸ್ಪರರ್ಸ್’ನ ಬೊಮ್ಮನ್‌-ಬೆಳ್ಳಿ ದಂಪತಿಗೆ ಸನ್ಮಾನ | ವೀಕ್ಷಿಸಿ

ಮೈಸೂರು: “ಪ್ರಾಜೆಕ್ಟ್ ಟೈಗರ್” 50 ವರ್ಷಗಳ ಅಂಗವಾಗಿ 20 ಕಿಲೋಮೀಟರ್ ಸಫಾರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ತಲುಪಿದರು. ಹುಲಿ ಯೋಜನೆಗೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಭೇಟಿ ನೀಡಿದ್ದಾರೆ. … Continued

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಬಿ.ಎನ್. ಚಂದ್ರಪ್ಪ ನೇಮಕ

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ 2023ಕ್ಕೆ ಮುಂಚಿತವಾಗಿ, ಕಾಂಗ್ರೆಸ್ ಪಕ್ಷವು ತಕ್ಷಣವೇ ಜಾರಿಗೆ ಬರುವಂತೆ ಬಿ.ಎನ್. ಚಂದ್ರಪ್ಪ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ. ಪಕ್ಷದ ಅಧಿಕೃತ ಹೇಳಿಕೆಯ ಪ್ರಕಾರ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಚಂದ್ರಪ್ಪ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ … Continued