ದೇಶದ ಟಾಪ್‌-12 ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕದ ಐದು ಹುಲಿ ಸಂರಕ್ಷಿತ ಪ್ರದೇಶಗಳಿಗೆ ಸ್ಥಾನ

ಬೆಂಗಳೂರು: ಕರ್ನಾಟಕದ ಪ್ರಾಜೆಕ್ಟ್ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣಾ ಪರಿಣಾಮಕಾರಿತ್ವದ ಮೌಲ್ಯಮಾಪನದಲ್ಲಿ (MEE) ಹೆಚ್ಚಿನ ಅಂಕಗಳನ್ನು ಗಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಬಿಡುಗಡೆ ಮಾಡಿದ ಭಾರತೀಯ ಹುಲಿ ಸಂರಕ್ಷಿತ ವರದಿಯ ಐದನೇ ಮ್ಯಾನೇಜ್‌ಮೆಂಟ್ ಎಫೆಕ್ಟಿವ್‌ನೆಸ್ ಮೌಲ್ಯಮಾಪನ (MEE) ನಲ್ಲಿ ಕರ್ನಾಟಕದ ಎಲ್ಲ ಐದು ಹುಲಿ ಸಂರಕ್ಷಿತ ಪ್ರದೇಶಗಳು ಅಗ್ರ 12 ರಲ್ಲಿ ಸ್ಥಾನ … Continued

ಎನ್‌ಸಿಪಿ, ಟಿಎಂಸಿ, ಸಿಪಿಐ ಪಕ್ಷಗಳು ರಾಷ್ಟ್ರೀಯ ಪಕ್ಷದ ಸ್ಥಾನಮಾನ ಕಳೆದುಕೊಂಡಿದ್ದು ಯಾಕೆ..?

ನವದೆಹಲಿ: ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಾಷ್ಟ್ರೀಯ ಪಕ್ಷವೆಂದು ಗುರುತಿಸಿದೆ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಹಿಂಪಡೆದಿದೆ. ಉತ್ತರ ಪ್ರದೇಶದಲ್ಲಿ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ), ಆಂಧ್ರಪ್ರದೇಶದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್), ಮಣಿಪುರದಲ್ಲಿ … Continued

ಏಪ್ರಿಲ್‌ 18ರಿಂದ ಒಂದು ವಾರ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್ಎನ್ ಡಿಎಂಸಿ) ಏಪ್ರಿಲ್‌ 18ರಿಂದ 26ರ ವರೆಗೆ ರಾಜ್ಯದ ಐದು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದೆ. ಕೆಎಸ್ಎನ್ ಡಿಎಂಸಿ ಪ್ರಕಟಣೆಯ ಪ್ರಕಾರ, ಏಪ್ರಿಲ್‌ 18ರಿಂದ 26ರವರೆಗೆ ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ತಾಲೂಕು, … Continued

ಅಮೆರಿಕದ ಕೆಂಟುಕಿ ಬ್ಯಾಂಕಿನಲ್ಲಿ ಗುಂಡಿನ ದಾಳಿ: 4 ಸಾವು, 8 ಮಂದಿಗೆ ಗಾಯ

ಕೆಂಟುಕಿಯ ಲೂಯಿಸ್‌ವಿಲ್ಲೆ ಡೌನ್‌ಟೌನ್‌ನಲ್ಲಿ ಬ್ಯಾಂಕ್ ಗುರಿಯಾಗಿಸಿಕೊಂಡು ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಾವಿಗೀಡಾಗಿದ್ದಾರೆ ಮತ್ತು ಕನಿಷ್ಠ ಎಂಟು ಜನರು ಗಾಯಗೊಂಡಿದ್ದಾರೆ ಎಂದು ಅಮೆರಿಕ ಪೊಲೀಸರು ಹೇಳಿದ್ದಾರೆ. ಗುಂಡು ಹಾರಿಸಿದವನನ್ನು ಮಾಜಿ ಉದ್ಯೋಗಿ ಎಂದು ಶಂಕಿಸಲಾಗಿದೆ. ಆತನೂ ದಾಳಿಯಲ್ಲಿ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದಕ್ಷಿಣ ರಾಜ್ಯದ ಅತಿದೊಡ್ಡ ನಗರವಾದ ಲೂಯಿಸ್‌ವಿಲ್ಲೆಯಲ್ಲಿರುವ ಓಲ್ಡ್ ನ್ಯಾಷನಲ್ ಬ್ಯಾಂಕ್‌ನಲ್ಲಿ … Continued

ಪಿಎಸ್‌ಐ ಪ್ರಕರಣ: ಹಗರಣದಲ್ಲಿ ಭಾಗಿಯಾದವರ ಬಗ್ಗೆ ವರದಿ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ, ಹಾಲಿ ಅರ್ಜಿದಾರರಾಗಿರುವ 145 ಮಂದಿ ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ. ಜೂನ್‌ 15ರ ಒಳಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶ ಮಾಡಿದೆ. ರಾಜ್ಯ ಸರ್ಕಾರದ ಮರು ಪರೀಕ್ಷೆ ಆದೇಶ … Continued

ಸಿಮ್ ಏಕಾಏಕಿ ಬ್ಲಾಕ್: ಉದ್ಯಮಿಯ ಖಾತೆಯಿಂದ 72 ಲಕ್ಷ ರೂ.ಮಂಗಮಾಯ..! ಸಿಮ್ ಸ್ವಾಪ್ ವಂಚನೆ ಬಗ್ಗೆ ಬೇಕಿದೆ ಜಾಗ್ರತೆ

ನವದೆಹಲಿ: ಆನ್‌ಲೈನ್ ಸಿಮ್ ಸ್ವಾಪ್ ವಂಚನೆಯ ಮತ್ತೊಂದು ಪ್ರಕರಣದಲ್ಲಿ ಕೋಲ್ಕತ್ತಾ ಮೂಲದ ಉದ್ಯಮಿಯೊಬ್ಬರ ಬ್ಯಾಂಕ್‌ ಖಾತೆಯಿಂದ 72 ಲಕ್ಷ ರೂ. ಖಾಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಟೆಲಿಗ್ರಾಫ್ ಇಂಡಿಯಾ ಪ್ರಕಟಿಸಿದ ವರದಿಯ ಪ್ರಕಾರ, ಸೈಬರ್ ಕ್ರಿಮಿನಲ್‌ಗಳು ಉದ್ಯಮಿಯ ಸಿಮ್ ಕಾರ್ಡ್‌ಗೆ ಮೋಸದಿಂದ ಪ್ರವೇಶವನ್ನು ಪಡೆದರು ಮತ್ತು ಅವರ ಬ್ಯಾಂಕ್ ಖಾತೆಯಿಂದ 72 ಲಕ್ಷ ರೂ.ಗಳಿಗೂ … Continued

ರಾಷ್ಟ್ರೀಯ ಪಕ್ಷದ ಸ್ಥಾಮಾನ ಪಡೆದ ಎಎಪಿ : ಎನ್‌ಸಿಪಿ, ಸಿಪಿಐ, ಟಿಎಂಸಿಗೆ ಹಿನ್ನಡೆ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಚುನಾವಣಾ ಆಯೋಗ ಸೋಮವಾರ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದೆ. ಶರದ್ ಪವಾರ್ ಅವರ ಶರದ್‌ ಪವಾರ್‌ ಎನ್‌ಸಿಪಿ, ಸಿಪಿಐ ಮತ್ತು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನ ಕಳೆದುಕೊಂಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಏಪ್ರಿಲ್ … Continued

ಹಾರಾಟದ ವೇಳೆ ಕ್ಯಾಬಿನ್ ಸಿಬ್ಬಂದಿಗೆ ಹೊಡೆದ ಪ್ರಯಾಣಿಕ : ದೆಹಲಿ ನಿಲ್ದಾಣಕ್ಕೆ ವಾಪಸ್ಸಾದ ಏರ್ ಇಂಡಿಯಾ ವಿಮಾನ

ನವದೆಹಲಿ: ದೆಹಲಿಯಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಹಾರಾಟದ ವೇಳೆ ಪ್ರಯಾಣಿಕರೊಬ್ಬರು ಸಿಬ್ಬಂದಿಯೊಂದಿಗೆ ಜಗಳವಾಡಿದ ನಂತರ ವಿಮಾನವು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾಪಸ್‌ ಮರಳಿದ ಘಟನೆ ಸೋಮವಾರ ನಡೆದ ವರದಿಯಾಗಿದೆ. ಏರ್ ಇಂಡಿಯಾ ದೆಹಲಿ-ಲಂಡನ್ (AI-111) ವಿಮಾನವು ‘ಅಶಿಸ್ತಿನ’ ಪ್ರಯಾಣಿಕನ ಕಾರಣದಿಂದ ದೆಹಲಿಯಿಂದ ಹೊರಟ ವಿಮಾನ ಹಾರಾಟದ ವೇಳೆಯೇ ವಾಪಸ್‌ ಮರಳಿದೆ ಮತ್ತು … Continued

ವಿಶ್ವದ ಶ್ರೀಮಂತರು ಬಡವರಾಗಿದ್ದರೆ ಹೇಗೆ ಕಾಣುತ್ತಿದ್ದರು ಎಂದು ಕಲ್ಪಿಸಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ರಚಿತ ಚಿತ್ರಗಳಿಗೆ ಬೆರಗಾದ ಇಂಟರ್ನೆಟ್

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಚಿತ್ರಗಳು ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸುತ್ತಿವೆ. ಇದು ಬಹುಶಃ ಕಲಾವಿದನ ಕಲ್ಪನೆಗೆ ರೆಕ್ಕೆಗಳನ್ನು ನೀಡಿದೆ ಮತ್ತು ಈಗ, ಮಿಡ್‌ ಜರ್ನಿಯಂತಹ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಮಾಡಿದ ಕೆಲವು ನಿಜವಾಗಿಯೂ ಸೃಜನಶೀಲ ಚಿತ್ರಗಳನ್ನು ಇಂಟರ್ನೆಟ್‌ನಲ್ಲಿ ನಾವು ಪ್ರತಿ ದಿನವೂ ನೋಡಬಹುದು. ಇಂತಹ ಗಂಭೀರ ಚರ್ಚೆ ಒಂದೆಡೆ ನಡೆಯುತ್ತಿದ್ದರೆ, ಇವುಗಳನ್ನು ಬಳಸಿಕೊಂಡು ಹಲವು ತಮಾಷೆಯ ಚಟುವಟಿಕೆಗಳೂ ನಡೆಯುತ್ತಿವೆ. … Continued

ಕಾಂಗ್ರೆಸ್ 3ನೇ ಪಟ್ಟಿ ಗೊಂದಲ : ದಿಢೀರ್ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ, ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ 3ನೇ ಲಿಸ್ಟ್ ಗೊಂದಲದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದಿಢೀರ್ ದೆಹಲಿಗೆ ತೆರಳಿದ್ದಾರೆ. ಮೂರನೇ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಇಬ್ಬರೂ ನಾಯಕರು ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ … Continued