ನಡ್ಡಾ ಭೇಟಿಯಿಂದ ಸಮಾಧಾನವಾಗಿದೆ, ಎರಡು ದಿನದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ: ಜಗದೀಶ ಶೆಟ್ಟರ್

ನವದೆಹಲಿ : ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬುಧವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದರು. ನಡ್ಡಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಶೆಟ್ಟರ್ ಅವರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಇದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರೊಂದಿಗೆ ಧನಾತ್ಮಕ ಚರ್ಚೆ ನಡೆದಿದ್ದು, … Continued

ಕೈತಪ್ಪಿದ ಕಾಂಗ್ರೆಸ್ ಟಿಕೆಟ್: ಮತ್ತೆ ಜೆಡಿಎಸ್ ಕದ ತಟ್ಟಿದ ವೈಎಸ್‌ವಿ ದತ್ತ

ಬೆಂಗಳೂರು : ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ನಂತರ ವೈ ಎಸ್ ವಿ ದತ್ತ ಅವರು ಮತ್ತೆ ಜೆಡಿಎಸ್ ಕದ ತಟ್ಟಿದ್ದಾರೆ ಎಂದು ವರದಿಯಾಗಿದೆ. ಇಂದು, ಬುಧವಾರ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ನಿವಾಸಕ್ಕೆ ವೈಎಸ್ ವಿ ದತ್ತ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದ್ದು, ಟಿಕೆಟ್ ನೀಡುವಂ ಅವರ ಬಳಿ ಮನವಿ … Continued

ಆನಂದ್‌ ಸಿಂಗ್‌ ಪುತ್ರನಿಗೆ ಬಿಜೆಪಿ ಟಿಕೆಟ್‌ : ರಾಣಿ ಸಂಯುಕ್ತ ತೀವ್ರ ಅಸಮಾಧಾನ, ಎರಡು ದಿನಗಳಲ್ಲಿ ಮುಂದಿನ ನಡೆ ಬಗ್ಗೆ ತೀರ್ಮಾನ

 ಹೊಸಪೇಟೆ : ಹೊಸಪೇಟೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ಹಾಗೂ ಟಿಕೆಟ್‌ ಆಕಾಂಕ್ಷಿಯಾಗಿದ್ದ ರಾಣಿ ಸಂಯುಕ್ತ ಅವರು ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಬೆಂಬಲಿಗರ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕೀಯದ ಪ್ರಸ್ತಾಪ ಮಾಡಿದ್ದು, ಸಚಿವ ಆನಂದ್‌ ಸಿಂಗ್ ಮತ್ತು ಅವರ … Continued

ತನ್ನ 40ನೇ ವಯಸ್ಸಿಗೆ 44 ಮಕ್ಕಳಿಗೆ ಜನ್ಮ ನೀಡಿದ ಈ ಮಹಾತಾಯಿ…!

ಮರಿಯಮ್ ನಬಟಾಂಜಿ ಎಂಬ ಮಹಿಳೆ ತನ್ನ ಮೊದಲ ಅವಳಿ ಮಕ್ಕಳಿಗೆ ತಾಯಿಯಾದಾಗ ಕೇವಲ 13 ವರ್ಷ ವಯಸ್ಸಿನವಳು. ಅವಳು 36 ವರ್ಷಕ್ಕೆ ಕಾಲಿಡುವ ಹೊತ್ತಿಗೆ, ಮರಿಯಮ್ 42 ಮಕ್ಕಳಿಗೆ ಜನ್ಮ ನೀಡಿದ್ದಳು; ಮತ್ತು 40 ನೇ ವಯಸ್ಸಿನಲ್ಲಿ, ಅವಳು 44 ಮಕ್ಕಳಿಗೆ ಜನ್ಮ ನೀಡಿದ್ದಾಳೆ…! ಆದರೆ ಈಗ, ತನ್ನ ಪತಿ ಈ ದೈತ್ಯ ಕುಟುಂಬ ಬಿಟ್ಟು … Continued

ಇಲಿ ಕೊಂದವನ ವಿರುದ್ಧ ಎಫ್‌ಐಆರ್ : ನ್ಯಾಯಾಲಯಕ್ಕೆ 30 ಪುಟಗಳ ಚಾರ್ಜ್‌ ಶೀಟ್ ಸಲ್ಲಿಕೆ…!

ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದ ‘ಇಲಿ ಹತ್ಯೆ’ ಪ್ರಕರಣವೊಂದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಇಲಿಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೊಲೀಸರು ಆರೋಪಿಗಳ ವಿರುದ್ಧ 30 ಪುಟಗಳ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಬರೇಲಿಯ ಐವಿಆರ್‌ಐ(IVRI)ನಲ್ಲಿ ಮರಣೋತ್ತರ ಪರೀಕ್ಷೆ ಮತ್ತು ಪ್ರಕರಣದ ಆರೋಪಪಟ್ಟಿಯು ದೇಶದ ಮೊದಲ ಈ ರೀತಿಯ … Continued

ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಇಂದು ರಾತ್ರಿ ಬಿಡುಗಡೆಯಾಗಬಹುದು, ಜಗದೀಶ್ ಶೆಟ್ಟರಗೆ ಟಿಕೆಟ್‌ ಸಿಗಬಹುದು : ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ನಿನ್ನೆ 189 ಸ್ಥಾನಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 125 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು. “ನಿನ್ನೆ ಘೋಷಣೆಯಾದ 189 ಸ್ಥಾನಗಳಲ್ಲಿ 52 ಹೊಸ ಮುಖಗಳನ್ನು ಆಯ್ಕೆ ಮಾಡಲಾಗಿದೆ. ನಿನ್ನೆ … Continued

ಬಿಜೆಪಿ ಟಿಕೆಟ್ ಸಿಗದಕ್ಕೆ ಅಸಮಾಧಾನ: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆರ್‌. ಶಂಕರ ರಾಜೀನಾಮೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ನಿನ್ನೆ 189 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಮಗೆ ಟಿಕೆಟ್ ನೀಡದ ಕಾರಣ ಅಸಮಾಧಾನಗೊಂಡಿರುವ ವಿಧಾನಪರಿಷತ್ ಸದಸ್ಯ ಆರ್ ಶಂಕರ್ ಇಂದು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಣೆಬೆನ್ನೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್.ಶಂಕರ್ ಬದಲಿಗೆ ಹಾಲಿ ಶಾಸಕ ಅರುಣಕುಮಾರ್‌ ಅವರಿಗೆ ಟಿಕೆಟ್ … Continued

ಬಾಗಿಲ ಚೌಕಟ್ಟಿನೊಳಗೆ ಗೆದ್ದಲುಗಳಿವೆ ಎಂದು ಭಾವಿಸಿದವರಿಗೆ ಕಂಡುಬಂದಿದ್ದು 39 ಹಾವುಗಳು…!

ಗೊಂಡಿಯಾ:ಮಹಾರಾಷ್ಟ್ರದ ಗೊಂಡಿಯಾ ನಗರದ ಶಾಸ್ತ್ರಿ ವಾರ್ಡ್ ಪ್ರದೇಶದಲ್ಲಿರುವ ಮನೆಯೊಂದರ ಬಾಗಿಲಿನ ಚೌಕಟ್ಟನ್ನು ತೆಗೆಯುವ ವೇಳೆ, ಒಂದಲ್ಲ ಎರಡಲ್ಲ, 39 ಹಾವುಗಳ ಮಕ್ಕಳು ಒಂದೊಂದಾಗಿ ಹೊರಬರುತ್ತಿರುವುದನ್ನು ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಸಂಜೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ 4 ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಮನೆಯ ಬಾಗಿಲಿನ ಚೌಕಟ್ಟಿನಿಂದ ಹಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರುತ್ತಿರುವುದನ್ನು … Continued

ಕಾಂಗ್ರೆಸ್‌ಗೆ ಮತ್ತೊಂದು ಶಾಕ್‌…: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಬಿಜೆಪಿ ಸೇರ್ಪಡೆ…!

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಜೋರಾಗಿದ್ದು, ಟಿಕೆಟ್​ ಕೈ ತಪ್ಪಿದ ಕಾರಣ ಬಂಡಾಯದ ಅಲೆಯೂ ಎದ್ದಿದೆ. ಇದೀಗ ಕಾಂಗ್ರೆಸ್​ಗೆ ಮತ್ತೊಂದು ಆಘಾತವಾಗಿದೆ. ಟಿಕೆಟ್​ ಸಿಗದ ಕಾರಣ ಪಕ್ಷದ ಹಿರಿಯ ನಾಯಕ, ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ. ರಾಜನಂದಿನಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ನೇತೃತ್ವದಲ್ಲಿ … Continued

ಸುಳ್ಯ: ಕೈ ತಪ್ಪಿದ ಟಿಕೆಟ್, ಬಿಜೆಪಿಯ ಎಸ್. ಅಂಗಾರ ಸಕ್ರಿಯ ರಾಜಕಾರಣಕ್ಕೆ ಗುಡ್‌ ಬೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಹಾಗೂ ಸಚಿವ ಎಸ್. ಅಂಗಾರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷ ಟಿಕೆಟ್ ನೀಡಿದ ಕುರಿತು ನನ್ನ ಅಸಮಾಧಾನವಿಲ್ಲ. ಆದರೆ ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಪಕ್ಷವು … Continued