ಪರಾರಿಯಾದ ಅಮೃತಪಾಲ್ ಸಿಂಗ್ ಸಹಾಯಕನ ಬಂಧನ : ಇಬ್ಬರೂ ಒಟ್ಟಿಗೆ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದರು

ನವದೆಹಲಿ: ಪರಾರಿಯಾಗಿರುವ ಮೂಲಭೂತವಾದಿ ಸಿಖ್ ಧರ್ಮ ಪ್ರಚಾರಕ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಪಪ್ಪಲ್‌ ಪ್ರೀತ್‌ ಸಿಂಗ್ ನನ್ನು ಪಂಜಾಬ್ ಪೋಲೀಸರ ಗುಪ್ತಚರ ಘಟಕವು ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಇಂದು, ಸೋಮವಾರ ಬಂಧಿಸಿದೆ. ಕಳೆದ ತಿಂಗಳು ಜಲಂಧರ್‌ನಲ್ಲಿ ಪೋಲೀಸರ ಬಲೆಯಿಂದ ನಾಟಕೀಯವಾಗಿ ತಪ್ಪಿಸಿಕೊಂಡ ನಂತರ ಇಬ್ಬರೂ ಒಟ್ಟಿಗೆ ಪರಾರಿಯಾಗಿದ್ದರು. ನಂತರ ಇಬ್ಬರು ಹೋಶಿಯಾರ್‌ಪುರ ತಲುಪಿದ ನಂತರ ತಪ್ಪಿಸಿಕೊಳ್ಳಲು … Continued

ಅಮೆರಿಕ ಪಾರ್ಕ್‌ನಲ್ಲಿ ಕ್ಯಾಮೆರಾದಲ್ಲಿ ಸೆರೆಯಾದ ‘ನಿಗೂಢ ಪ್ರಾಣಿ’ : ವನ್ಯಜೀವಿ ಅಧಿಕಾರಿಗಳು ಸ್ಟಂಪ್ಡ್‌

ಅಮೆರಿಕದ ದಕ್ಷಿಣ ಟೆಕ್ಸಾಸ್‌ನ ರಿಯೊ ಗ್ರಾಂಡೆ ಕಣಿವೆಯಲ್ಲಿ ವಿಚಿತ್ರವಾಗಿ ಕಾಣುವ ಪ್ರಾಣಿಯೊಂದು ಉದ್ಯಾನವನದ ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿದೆ. ಕ್ಯಾಮರಾದಲ್ಲಿ ಸೆರೆಯಾದ ‘ಮಿಸ್ಟರಿ ಪ್ರಾಣಿ’ಯನ್ನು ಗುರುತಿಸಲು ಪಾರ್ಕ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಟೆಕ್ಸಾಸ್ ಪಾರ್ಕ್ಸ್ ಮತ್ತು ವನ್ಯಜೀವಿಗಳ ಬೆಂಟ್ಸೆನ್-ರಿಯೊ ಗ್ರಾಂಡೆ ವ್ಯಾಲಿ ಸ್ಟೇಟ್ ಪಾರ್ಕ್‌ನ ಅಧಿಕಾರಿಗಳು ಫೇಸ್‌ಬುಕ್‌ನಲ್ಲಿ ಪ್ರಾಣಿಯ ಸ್ನ್ಯಾಪ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ, ಅದನ್ನು ಗುರುತಿಸಲು ಸಹಾಯ ಮಾಡಲು … Continued

ಕರ್ನಾಟಕ ವಿಧಾನಸಭಾ ಚುನಾವಣೆ | ಇಂದು 170-180 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ : ಯಡಿಯೂರಪ್ಪ

ಬೆಂಗಳೂರು: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ತನ್ನ 170 ರಿಂದ 180 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು, ಸೋಮವಾರ (ಎಪ್ರಿಲ್‌ 10) ಸಂಜೆ ಬಿಡುಗಡೆ ಮಾಡಲಿದೆ ಎಂದು ಪಕ್ಷದ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇಂದು, ಸೋಮವಾರ ಸಂಜೆಯೊಳಗೆ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮಾಜಿ … Continued

ಸಂಸದರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ಕೇರಳದ ವಯನಾಡಿಗೆ ರಾಹುಲ್‌ ಗಾಂಧಿ ನಾಳೆ ಭೇಟಿ ಸಾಧ್ಯತೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್ ಸದಸ್ಯರಾಗಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ಏಪ್ರಿಲ್ 11 ರಂದು ತಮ್ಮ ಹಿಂದಿನ ಕ್ಷೇತ್ರ ಕೇರಳದ ವಯನಾಡಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷ ಶಿಕ್ಷೆಗೆ ಒಳಗಾದ ನಂತರ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿತ್ತು. ಸೂರತ್ ನ್ಯಾಯಾಲಯವು 2019 ರಲ್ಲಿ … Continued

ಇಂದಿನಿಂದ 2 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು ; ಇಂದಿನಿಂದ 2 ದಿನಗಳ ಕಾಲ ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಲಾಗಿದೆ. ಮುನ್ಸೂಚನೆ ಪ್ರಕಾರ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿ ಕೆಲವು ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ ಮಳೆಯಾಗಲಿದೆ. ಶುಕ್ರವಾರದಿಂದ ರಾಜ್ಯದಲ್ಲಿ ತಾಪಮಾನದಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ಗುಡುಗು ಸಹಿತ … Continued

ದೇವಸ್ಥಾನದ ಬಳಿಯಿದ್ದ ಬೃಹತ್ ಮರ ಉರುಳಿ 7 ಮಂದಿ ಸಾವು, 5 ಮಂದಿಗೆ ಗಾಯ

ಅಕೋಲಾ (ಮಹಾರಾಷ್ಟ್ರ) : ಮಹಾರಾಷ್ಟ್ರದ ಅಕೋಲಾದಲ್ಲಿ ಭಾನುವಾರ ಟಿನ್ ಶೆಡ್‌ನ ಮೇಲೆ ಬೃಹತ್ ಮರವೊಂದು ಬಿದ್ದು ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ರಾತ್ರಿ 7 ಗಂಟೆ ಸುಮಾರಿಗೆ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಹಳೆಯ ಬೇವಿನ ಮರವೊಂದು ತಗಡಿನ ಶೆಡ್‌ನ … Continued

ಕರ್ನಾಟಕ ವಿಧಾನಸಭೆ ಚುನಾವಣೆ 2023 : 10 ದಿನಗಳಲ್ಲಿ 100 ಕೋಟಿ ರೂ. ಮೌಲ್ಯದ ನಗದು, ವಸ್ತುಗಳು ಜಪ್ತಿ

ಬೆಂಗಳೂರು: ಕಳೆದ 10 ದಿನಗಳಲ್ಲಿ ಚುನಾವಣಾ ಆಯೋಗ ಸುಮಾರು 100 ಕೋಟಿ ರೂ.ಗಳಷ್ಟು ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದೆ. ದೈನಂದಿನ ಬುಲೆಟಿನ್ ಪ್ರಕಾರ, ಮಾರ್ಚ್ 29 ರಿಂದ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಗೆ ಬಂದಾಗಿನಿಂದ 99.18 ಕೋಟಿ ರೂ. ಮೌಲ್ಯದ ನಗದು ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದರಿ ನೀತಿ ಸಂಹಿತೆ (ಎಂಸಿಸಿ) … Continued

ಇವು ಸಮಸ್ಯೆಗಳೇ? ಪ್ರಮುಖ ವಿಷಯದ ಬಗ್ಗೆ ಚರ್ಚಿಸದೆ ಸಮಯ ವ್ಯರ್ಥ ಮಾಡ್ತಿದ್ದಾರೆ : ಪ್ರಧಾನಿ ಮೋದಿ ಪದವಿ ವಿವಾದಕ್ಕೆ ಶರದ್ ಪವಾರ್ ಆಕ್ಷೇಪ

ಮುಂಬೈ: ನಾಯಕರ ಶೈಕ್ಷಣಿಕ ಅರ್ಹತೆಯ ವಿಷಯವನ್ನು ಎತ್ತುತ್ತಿರುವವರು ಪ್ರಶ್ನೆ ಎತ್ತಲೇಬೇಕಾದ ಮಹತ್ವದ ವಿಷಯಗಳ ಕುರಿತಾಗಿನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಟೀಕಿಸಿದ್ದಾರೆ. ದೇಶವು ಗಮನಹರಿಸಬೇಕಾದ ಹೆಚ್ಚು ನಿರ್ಣಾಯಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂಥ ಸಮಯದಲ್ಲಿ ಅಷ್ಟೊಂದು ಪ್ರಾಮುಖ್ಯವಲ್ಲದ ನಾಯಕರ ಶೈಕ್ಷಣಿಕ ಅರ್ಹತೆಯ ವಿಷಯದ ಬಗ್ಗೆ ಪದೇಪದೇ ಪ್ರಸ್ತಾಪಿಸುತ್ತಿರುವುದಕ್ಕೆ … Continued

ʼಕಾಂಗ್ರೆಸ್ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ’: ಪಕ್ಷೇತರನಾಗಿ ಸ್ಪರ್ಧಿಸಲು ವೈಎಸ್‌ವಿ ದತ್ತ ನಿರ್ಧಾರ

ಚಿಕ್ಕಮಗಳೂರು: ಇತ್ತೀಚೆಗೆ ಕಾಂಗ್ರೆಸ್ ಸೇರಿ, ಟಿಕೆಟ್‌ ಸಿಗದೆ ಬೇಸರಗೊಂಡಿರುವ ಮಾಜಿ ಶಾಸಕ ವೈ.ಎಸ್‌.ವಿ. ದತ್ತ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಡೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕಡೂರು ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂದಿರದಲ್ಲಿ ಭಾನುವಾರ ನಡೆದ ಅಭಿಮಾನಿಗಳ ಸಭೆಯಲ್ಲಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ನೀಡದೆ ವಂಚಿಸಿ ಸ್ವಾಭಿಮಾನಕ್ಕೆ ಪೆಟ್ಟು ನೀಡಿದೆ, ಈ … Continued

ಭದ್ರಾ ನದಿಯಲ್ಲಿ ಮುಳುಗಿ ತಂದೆ, ಮಗ ಸಾವು

ಚಿಕ್ಕಮಗಳೂರು: ಜಿಲ್ಲೆಯ ಮಾಗುಂಡಿ ಬಳಿ ಭದ್ರಾ ನದಿಯಲ್ಲಿ ಮುಳುಗಿ ತಂದೆ ಮಗ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಮೂಡಿಗೆರೆ ಸಮೀಪದ ಹಂಡುಗುಳಿ ಗ್ರಾಮದ ಲೋಕೇಶ(40 ವರ್ಷ) ಮತ್ತು ಅವರ ಮಗ ಸಾತ್ವಿಕ(13 ವರ್ಷ) ಎಂದು ಗುರುತಿಸಲಾಗಿದೆ. ಮಾಗುಂಡಿ ಸಮೀಪದ ಹುಯ್ಗೆರೆ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಮನೆಗೆ ಸುಗ್ಗಿ ಹಬ್ಬಕ್ಕೆಂದು ಲೋಕೇಶ ತನ್ನ ಪತ್ನಿ ಹಾಗೂ ಮೂವರು … Continued