ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಅನಂತ ನಾಗ್‌ ಗೈರು: ಕುತೂಹಲ ಮೂಡಿಸಿದ ನಟನ ನಡೆ

 ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಮತ್ತು ಮಾಜಿ ಸಚಿವ ಅನಂತ ನಾಗ್ ಅವರು ಇಂದು, ಬುಧವಾರ ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿತ್ತು, ಆದರೆ ಕಾರಣಾಂತರದಿಂದ ಅವರು ಬಿಜೆಪಿ ಸೇರ್ಪಡೆ ಕಾರ್ಯಕ್ರಮಕ್ಕೆ ಅವರು ಆಗಮಿಸಲಿಲ್ಲ ಎಂದು ವರದಿಯಾಗಿದೆ. ನಟ ಅನಂತ ನಾಗ್ ಅವರು ಇಂದು, ಬುಧವಾರ ಸಂಜೆ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಸಂಜೆ 4:30ಕ್ಕೆ … Continued

ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲೂ ಶ್ರೀಲಂಕಾದ ಬಳಿ ಹಣವಿಲ್ಲ…!

ಕೋಲಂಬೊ : ಮಾರ್ಚ್ 9ರಂದು ನಡೆಯಬೇಕಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ತನ್ನ ಬಳಿ ಹಣವಿಲ್ಲ ಎಂದು ಶ್ರೀಲಂಕಾದ ಚುನಾವಣಾ ಆಯೋಗ ದೇಶದ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಬ್ಲೂಮ್‌ಬರ್ಗ್ ವರದಿ ಪ್ರಕಾರ, ಆಯೋಗದ ಮುಖ್ಯಸ್ಥ ನಿಮಲ್ ಪುಂಚಿಹೆವಾ ಅವರು ಚುನಾವಣಾ ಸಂಸ್ಥೆಯು ಹಣಕಾಸಿನ ಸಂಪನ್ಮೂಲಗಳನ್ನು ಪಡೆದಿಲ್ಲ ಮತ್ತು ಚುನಾವಣೆಯನ್ನು ನಡೆಸಲು ಸರ್ಕಾರಿ ಮುದ್ರಕ ಮತ್ತು ಪೋಲೀಸ್ … Continued

ಐದು ವರ್ಷಗಳಿಗೊಮ್ಮೆ ನಡೆಯುವ ಬಮ್ಮಿಗಟ್ಟಿ ಗ್ರಾಮದೇವಿಯರ ಜಾತ್ರೆಗೆ ಚಾಲನೆ

ಕಲಘಟಗಿ : ಐದು ವರ್ಷಗಳಿಗೊಮ್ಮೆ ನಡೆಯುವ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಬುಧವಾರ ವಿಧ್ಯುಕ್ತ ಚಾಲನೆ ನೀಡಲಾಯಿತು. ಕಲಘಟಗಿಯ ಹನ್ನೆರಡು ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಆಲದಕಟ್ಟಿ ಗ್ರಾಮಸ್ಥರಿಂದ ಗ್ರಾಮದೇವಿಯರಿಗೆ ತವರು‌ ಮನೆಯ ಉಡಿ ತುಂಬುವ ಮೂಲಕ ಜಾತ್ರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಬಮ್ಮಿಗಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಉಡಿ … Continued

ಶಿಂಧೆ ಬಣಕ್ಕೆ ಶಿವಸೇನೆ ಹೆಸರು-ಚಿಹ್ನೆ ನೀಡಿದ ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಏಕನಾಥ್ ಶಿಂಧೆ ಅವರಿಗೆ ಶಿವಸೇನೆ ಹೆಸರು ಮತ್ತು ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ನೀಡುವ ಭಾರತದ ಚುನಾವಣಾ ಆಯೋಗದ ನಿರ್ಧಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. “ಅವರು (ಶಿಂಧೆ ಬಣ) ಈಗಾಗಲೇ ಚುನಾವಣಾ ಆಯೋಗದ ಮುಂದೆ ಯಶಸ್ವಿಯಾಗಿದ್ದಾರೆ. ನಾವು ಈಗ ಆದೇಶವನ್ನು ತಡೆಹಿಡಿಯಲು ಸಾಧ್ಯವಿಲ್ಲ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ … Continued

ಇಫ್ಕೋದಿಂದ ಬೆಳೆ ಪೋಷಕಾಂಶ ಗೊಬ್ಬರಗಳ ಬೆಲೆ 14% ರಷ್ಟು ಕಡಿತ..?

ನವದೆಹಲಿ: ಭಾರತದ ಅತಿದೊಡ್ಡ ರಸಗೊಬ್ಬರ ತಯಾರಕರಾದ ಇಫ್ಕೋ (IFFCO) ಲಿಮಿಟೆಡ್, ವ್ಯಾಪಕವಾಗಿ ಬಳಸಿದ ಬೆಳೆ ಪೋಷಕಾಂಶಗಳ (ಗೊಬ್ಬರ) ಬೆಲೆಯನ್ನು ಸುಮಾರು 14% ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಕಂಪನಿಯ ಕಾರ್ಯನಿರ್ವಾಹಕರ ಪ್ರಕಾರ, ಈ ಕ್ರಮವು ಜಾಗತಿಕ ಆಹಾರ ಬಿಕ್ಕಟ್ಟಿನ ವರ್ಷದಲ್ಲಿ ಕೃಷಿ ವೆಚ್ಚಗಳು ಮತ್ತು ಸಬ್ಸಿಡಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು … Continued

ಎಎಪಿಯ ಶೆಲ್ಲಿ ಒಬೆರಾಯ್ ದೆಹಲಿಯ ನೂತನ ಮೇಯರ್, ಮೊಹಮ್ಮದ್ ಇಕ್ಬಾಲ್ ಉಪಮೇಯರ್‌

ನವದೆಹಲಿ: ದೆಹಲಿ ಮುನ್ಸಿಪಲ್‌ ಕಾರ್ಪೋರೇಶನ್‌ ಮೇಯರ್‌ ಚುನಾವಣೆಯಲ್ಲಿ ಮೂರು ವಿಫಲ ಪ್ರಯತ್ನಗಳ ನಂತರ, ಆಮ್ ಆದ್ಮಿ ಪಕ್ಷದ ನಾಯಕಿ ಶೆಲ್ಲಿ ಒಬೆರಾಯ್ ಅವರು 150 ಮತಗಳೊಂದಿಗೆ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಅವರು ಬುಧವಾರ ಬಿಜೆಪಿಯ ರೇಖಾ ಗುಪ್ತಾ ಅವರನ್ನು 34 ಮತಗಳಿಂದ ಸೋಲಿಸಿದರು. ಆಮ್ ಆದ್ಮಿ ಪಕ್ಷ (ಎಎಪಿ)ದ ಮೊಹಮ್ಮದ್ ಇಕ್ಬಾಲ್ ಬುಧವಾರ ದೆಹಲಿಯ ನೂತನ … Continued

ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು

ಚೆನ್ನೈ: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಖ್ಯಾತ ನಟ ಪ್ರಭು ಅವರನ್ನು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ತಪಾಸಣೆ ನಡೆಸಿದ್ದು, ಕಿಡ್ನಿಯಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ. ವರದಿಗಳ ಪ್ರಕಾರ, ಪ್ರಬು ಅವರನ್ನು ತಕ್ಷಣವೇ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಯಿತು ಮತ್ತು ಅವರಿಗೆ ಲೇಸರ್ ಎಂಡೋಸ್ಕೋಪಿ ಮಾಡಲಾಯಿತು. ಇದೀಗ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವರದಿಯಾಗಿದೆ. ಒಂದೆರಡು ದಿನಗಳಲ್ಲಿ … Continued

ಜಾತಿ ತಾರತಮ್ಯವನ್ನು ಕಾನೂನುಬಾಹಿರ ಎಂದು ಘೋಷಿಸಿದ ಅಮೆರಿಕದ ಮೊದಲ ನಗರವಾದ ಸಿಯಾಟಲ್

ವಾಷಿಂಗ್ಟನ್: ಸಿಯಾಟಲ್ ಜಾತಿ ತಾರತಮ್ಯವನ್ನು ಕಾನೂನುಬಾಹಿರಗೊಳಿಸಿದ ಅಮೆರಿಕದ ಮೊದಲ ನಗರವಾಗಿದೆ. ಕ್ಷಮಾ ಸಾವಂತ್ ಅವರು ಮಂಡಿಸಿದ ನಿರ್ಣಯವನ್ನು ಸಿಯಾಟಲ್ ಸಿಟಿ ಕೌನ್ಸಿಲ್ 6-1 ಮತದಿಂದ ಅನುಮೋದಿಸಿತು. ಮತದಾನದ ಫಲಿತಾಂಶಗಳು ಅಮೆರಿಕದಲ್ಲಿ ಜಾತಿ ತಾರತಮ್ಯದ ವಿಷಯದ ಮೇಲೆ ದೂರಗಾಮಿ ಪರಿಣಾಮಗಳನ್ನು ಬೀರಬಹುದು. ಇದು ಅಧಿಕೃತವಾಗಿದೆ: ನಮ್ಮ ಚಳವಳಿಯು ಸಿಯಾಟಲ್‌ನಲ್ಲಿ ಜಾತಿ ತಾರತಮ್ಯದ ಮೇಲೆ ಐತಿಹಾಸಿಕ, ರಾಷ್ಟ್ರದ ಮೊದಲ … Continued

ಅಮೆರಿಕದ 2024ರ ಅಧ್ಯಕ್ಷ ಸ್ಥಾನಕ್ಕೆ ಬಿಡ್ ಘೋಷಿಸಿದ ಭಾರತೀಯ ಮೂಲದ ಅಮೆರಿಕನ್ ಟೆಕ್‌ ಉದ್ಯಮಿ ವಿವೇಕ್ ರಾಮಸ್ವಾಮಿ

ವಾಷಿಂಗ್ಟನ್‌: ಭಾರತೀಯ ಮೂಲದ ಅಮೆರಿಕನ್ ಟೆಕ್ ಉದ್ಯಮಿ ವಿವೇಕ ರಾಮಸ್ವಾಮಿ ಅವರು 2024ರ ಅಮೆರಿಕದ ಅಧ್ಯಕ್ಷ ಸ್ಥಾನದ ಬಿಡ್ (ಪ್ರಸ್ತಾವನೆ) ಪ್ರಾರಂಭಿಸಿದ್ದಾರೆ. ಮೆರಿಟ್‌ಗೆ ಆದ್ಯತೆ ನೀಡುವ ಮತ್ತು ಚೀನಾದ ಮೇಲಿನ ಅವಲಂಬನೆ ಕೊನೆಗೊಳಿಸುವ ಭರವಸೆಯೊಂದಿಗೆ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಬಿಡ್‌ ಪ್ರಾರಂಭಿಸಿದ್ದಾರೆ, ನಿಕ್ಕಿ ಹ್ಯಾಲೆ ನಂತರ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಪ್ರೈಮರಿ ಪ್ರವೇಶಿಸಿದ ಭಾರತೀಯ … Continued

ಪಿಯು ಪರೀಕ್ಷೆ ವೇಳೆ ಹಿಜಾಬ್‌ ಧರಿಸಲು ಅನುಮತಿ ಕೋರಿ ಅರ್ಜಿ: ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ

ನವದೆಹಲಿ: ಹಿಜಾಬ್ ಧರಿಸಿ ಪರೀಕ್ಷೆಗೆ ಕುಳಿತುಕೊಳ್ಳಲು ಅನುಮತಿ ಕೋರಿ ಕರ್ನಾಟಕದ ವಿದ್ಯಾರ್ಥಿನಿಯರ ಗುಂಪೊಂದು ಬುಧವಾರ ತಮ್ಮ ಅರ್ಜಿಯ ತುರ್ತು ವಿಚಾರಣೆಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಕರ್ನಾಟಕದಲ್ಲಿ ದ್ವಿತೀಯ ಪಿಯು ಪರೀಕ್ಷೆಗಳು ಮಾರ್ಚ್ 9 ರಂದು ಪ್ರಾರಂಭವಾಗಲಿದ್ದು. ಭಾರತದ ಮುಖ್ಯ ನ್ಯಾಯಮೂರ್ತಿ (CJI) DY ಚಂದ್ರಚೂಡ ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ಅರ್ಜಿದಾರರಿಗೆ ಭರವಸೆ ನೀಡಿದರು. … Continued