ಕೂಡಲಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸಚಿವ ನಿರಾಣಿ ಸವಾಲು

ಬಾಗಲಕೋಟೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬಾರದು ಎಂದು ನಾನು ಹೇಳಿದ್ದೇನೆಂದು ನನ್ನ ಮೇಲೆ ಮಾಡಿರುವ ಆರೋಪ ಸಾಬೀತು ಮಾಡಿದರೆ ಇಂದೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ, ಸಾಬೀತು ಮಾಡಲು ಸಾಧ್ಯವಾಗದಿದ್ದರೆ ಪೀಠ ತೊರೆದು ರಾಜಕೀಯಕ್ಕೆ ಬರಲಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ಸಚಿವ ಮುರಗೇಶ ನಿರಾಣಿ ಸವಾಲು ಹಾಕಿದ್ದಾರೆ. ಶನಿವಾರ … Continued

ವೀಡಿಯೊಕಾನ್ ಸಾಲ ಪ್ರಕರಣ: ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚರ್, ಪತಿ ದೀಪಕ ಕೊಚ್ಚರ್‌ ಗೆ 3 ದಿನಗಳ ಸಿಬಿಐ ಕಸ್ಟಡಿ

ಮುಂಬೈ : ವೀಡಿಯೋಕಾನ್ ಗ್ರೂಪ್‌ಗೆ ಬ್ಯಾಂಕ್ ಮಂಜೂರು ಮಾಡಿದ ಸಾಲದಲ್ಲಿ ವಂಚನೆ ಮತ್ತು ಅಕ್ರಮಗಳಿಗೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ ಕೊಚ್ಚರ್ ಅವರನ್ನು (ಸಿಬಿಐ) ಮುಂಬೈ ವಿಶೇಷ ನ್ಯಾಯಾಲಯ ಶನಿವಾರ ಮೂರು ದಿನಗಳ ಸಿಬಿಐ ಕಸ್ಟಡಿಗೆ ನೀಡಿದೆ. ಸಾಲ ವಂಚನೆ ಪ್ರಕರಣದಲ್ಲಿ ಚಂದಾ ಕೊಚ್ಚರ್ ಮತ್ತು … Continued

ಆಮ್ಲಜನಕ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳ ಸಿದ್ಧತೆ ಮೇಲೆ ಕೇಂದ್ರೀಕರಿಸಿ: ರಾಜ್ಯಗಳಿಗೆ ಕೇಂದ್ರದ ಕೋವಿಡ್ ಸಲಹೆ

ನವದೆಹಲಿ: ಚೀನಾದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಉಲ್ಬಣ 3.7 ಕೋಟಿ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ ವರದಿಗಳ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಶನಿವಾರ ರಾಜ್ಯಗಳಿಗೆ ಆರು ಅಂಶಗಳ ಕೋವಿಡ್ ಸಲಹೆಯನ್ನು ನೀಡಿದೆ. ಭವಿಷ್ಯದಲ್ಲಿ ಉದ್ಭವಿಸುವ ಯಾವುದೇ ಸವಾಲುಗಳನ್ನು ಎದುರಿಸಲು ಕೇಂದ್ರವು ರಾಜ್ಯಗಳಿಗೆ ಕೋವಿಡ್ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಕೋವಿಡ್ … Continued

ಚೀನಾದ ಕೋವಿಡ್ ಉಲ್ಬಣದ ಹಿಂದಿರುವ BF.7 ಎಂಬ ಒಮಿಕ್ರಾನ್ ಉಪ-ರೂಪಾಂತರಿ ವೈರಸ್‌ : ಭಾರತದಲ್ಲಿ ಇದು ಯಾಕೆ ಕಳವಳಕ್ಕೆ ಕಾರಣವಾಗಿದೆ..?

ನವದೆಹಲಿ: 2020ರಲ್ಲಿ ಜಗತ್ತನ್ನು ತಲ್ಲಣಗೊಳಿಸಿದ ಕೋವಿಡ್‌-19 ಸಾಂಕ್ರಾಮಿಕವು ಎರಡು ವರ್ಷಗಳ ನಂತರ ಮತ್ತೆ ಆತಂಕಕ್ಕೆ ಕಾರಣವಾಗಿದೆ. ಪ್ರಸ್ತುತ, ಚೀನಾದಲ್ಲಿ ಕೋವಿಡ್‌-19 ಸೋಂಕುಗಳ ಉಲ್ಬಣವು ದಾಖಲಾಗುತ್ತಿದೆ. ಈ ಸಂಖ್ಯೆಯ ಏರಿಕೆಗೆ ಕಾರಣವಾಗುವ ವೈರಸ್‌ನ ರೂಪಾಂತರವು BF.7 ಎಂದು ನಂಬಲಾಗಿದೆ. ಇದು ಒಮಿಕ್ರಾನ್ ಸ್ಟ್ರೈನ್ BA.5 ನ ರೂಪಾಂತರದ ರೂಪಾಂತರವಾಗಿದೆ. ಚೀನಾದಾದ್ಯಂತ ಕೋವಿಡ್‌-19 ಹರಡುವಿಕೆಗೆ “ಕಡಿಮೆ ಮಟ್ಟದ ರೋಗನಿರೋಧಕ … Continued

ಮಥುರಾ ಕೃಷ್ಣ ಜನ್ಮಭೂಮಿ ಪ್ರಕರಣ : ಜನವರಿ 2ರಿಂದ ಶಾಹಿ ಈದ್ಗಾ ಮಸೀದಿ ಸರ್ವೆ ಮಾಡಲು ಮಥುರಾ ಕೋರ್ಟ್ ಆದೇಶ

ಮಥುರಾ: ಉತ್ತರ ಪ್ರದೇಶದ ಮಥುರಾದ ನ್ಯಾಯಾಲಯವು ಶ್ರೀಕೃಷ್ಣ ಜನ್ಮಭೂಮಿ ಅಥವಾ ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾದ ಶಾಹಿ ಈದ್ಗಾ ಮಸೀದಿಯನ್ನು ಜನವರಿ 2ರಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಯಿಂದ ಸಮೀಕ್ಷೆ ಮಾಡಲು ಆದೇಶಿದೆ. ಹಾಗೂ ಜನವರಿ 20 ರ ನಂತರ ವರದಿ ಸಲ್ಲಿಸಲು ಸೂಚಿಸಿದೆ. ಹಿಂದೂ ಸೇನೆಯ ವಿಷ್ಣು ಗುಪ್ತಾ ಅವರು ಸಲ್ಲಿಸಿದ ಮೊಕದ್ದಮೆಯ … Continued

40 ಅಡಿ ಆಳದ ಹೊಂಡಕ್ಕೆ ಕಾರು ಉರುಳಿ ಬಿದ್ದು 8 ಅಯ್ಯಪ್ಪ ಭಕ್ತರು ಸಾವು

ತೇಣಿ: ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ, ಅಯಪ್ಪ ಭಕ್ತರು ಪ್ರಯಾಣಿಸುತ್ತಿದ್ದ ಕಾರು 40 ಅಡಿ ಆಳದ ಹೊಂಡಕ್ಕೆ ಉರುಳಿದ ಪರಿಣಾಮ ಕನಿಷ್ಠ ಎಂಟು ಅಯಪ್ಪ ಭಕ್ತರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರನ್ನು ರಕ್ಷಿಸಿದ್ದಾರೆ. ಭಕ್ತರು ಸನ್ಮುಗಸುಂದರಪುರಂ ಗ್ರಾಮದ ನಿವಾಸಿಗಳಾಗಿದ್ದು, ಶಬರಿಮಲೆಗೆ ಭೇಟಿ ನೀಡಿದ ನಂತರ ಮನೆಗೆ ಮರಳುತ್ತಿದ್ದರು. ಶುಕ್ರವಾರ ತಡರಾತ್ರಿ ಕಾರು ಪಲ್ಟಿಯಾಗಿದೆ.ಗಾಯಗೊಂಡ … Continued

ಕೋವಿಡ್ -19 : ಚೀನಾ, ಇತರ ದಕ್ಷಿಣ ಏಷ್ಯಾದ ದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ

ನವದೆಹಲಿ: ಚೀನಾದಲ್ಲಿ ಕೋವಿಡ್ -19 ಭಾರಿ ಉಲ್ಬಣದ ಸುದ್ದಿಯ ನಡುವೆ, ಭಾರತದ ಕೋವಿಡ್‌ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ದಕ್ಷಿಣ ಏಷ್ಯಾದ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮಾಂಡವಿಯಾ ಶನಿವಾರ ಪ್ರಕಟಿಸಿದ್ದಾರೆ. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್ ಮತ್ತು … Continued

ಲಾಟರಿಯಲ್ಲಿ ₹ 33 ಕೋಟಿ ಗೆದ್ದ ದುಬೈನಲ್ಲಿರುವ ಭಾರತೀಯ ಚಾಲಕ..!

ದುಬೈ: ಭಾರತದ ಮೂಲದ ದುಬೈ ಚಾಲಕ ಅಜಯ ಒಗುಲಾ ಅವರು ಎಮಿರೇಟ್ಸ್ ಡ್ರಾದಲ್ಲಿ 15 ಮಿಲಿಯನ್ ದಿರ್ಹಂ (₹ 33 ಕೋಟಿ) ಬಹುಮಾನ ಗೆದ್ದಿದ್ದಾರೆ. “ನಾನು ಜಾಕ್‌ಪಾಟ್ ಹೊಡೆದಿದ್ದೇನೆ ಎಂದು ನನಗೆ ಇನ್ನೂ ನಂಬಲಾಗುತ್ತಿಲ್ಲ” ಎಂದು ಲಾಟರಿ ಬಹುಮಾನವನ್ನು ಗೆದ್ದ ನಂತರ, ಅಜಯ ಒಗುಲಾ ಹೇಳಿದ್ದಾರೆ ಎಂದು ಯುಎಇ ದಿನಪತ್ರಿಕೆ ಖಲೀಜ್ ಟೈಮ್ಸ್ ವರದಿ ಮಾಡಿದೆ. … Continued

ಮುನಿರತ್ನರಿಂದ ಕ್ರಿಮಿನಲ್‌ ಮಾನಹಾನಿ ಮೊಕದ್ದಮೆ : ಕೆಂಪಣ್ಣ ಸೇರಿ 19 ಮಂದಿಗೆ ಜಾಮೀನುರಹಿತ ವಾರೆಂಟ್‌

ಬೆಂಗಳೂರು: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತೋಟಗಾರಿಕೆ ಮತ್ತು ಯೋಜನಾ ಸಚಿವ ವಿ.ಮುನಿರತ್ನ ಅವರು ಹೂಡಿರುವ ಕ್ರಿಮಿನಲ್‌ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೇರಿದಂತೆ 19 ಮಂದಿ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಜಾಮೀನುರಹಿತ ವಾರೆಂಟ್‌ ಹೊರಡಿಸಿದೆ. ವಕೀಲ ವಿವೇಕ ಸುಬ್ಬಾರೆಡ್ಡಿ ಅವರ ಮೂಲಕ ಸಲ್ಲಿಸಿರುವ ಕ್ರಿಮಿನಲ್‌ ಮಾನಹಾನಿ … Continued

ಕೋವಿಡ್‌-19 ಮುನ್ನೆಚ್ಚರಿಕೆ : ಬಿಎಂಟಿಸಿ, ಮೆಟ್ರೋದಲ್ಲಿ ಮಾಸ್ಕ್‌ ಧರಿಸುವುದು ಕಡ್ಡಾಯ

ಬೆಂಗಳೂರು: ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಕೋವಿಡ್‌ ಸೋಂಕು ಮತ್ತೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಸ್‌.ಸತ್ಯವತಿ, ಮಾಸ್ಕ್‌ ಹಾಕಿಕೊಳ್ಳದ ಪ್ರಯಾಣಿಕರಿಗೆ ಚಾಲನಾ ಸಿಬ್ಬಂದಿ ಜಾಗೃತಿ ಮೂಡಿಸಬೇಕು. ಚಾಲನಾ ಸಿಬ್ಬಂದಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್‌ … Continued