ಸುರತ್ಕಲ್ ಹತ್ಯೆ ಪ್ರಕರಣ: ನಾಲ್ಕು‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಮಂಗಳೂರು : ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದ ಫ್ಯಾನ್ಸಿ ಸ್ಟೋರ್ ಮಾಲಕ ಜಲೀಲ್ ಹತ್ಯೆ ಪ್ರಕರಣd ನಂತರ ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್, ಬಜಪೆ ಕಾವೂರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಸೆಕ್ಷನ್ 144 ಹಾಗೂ ಮದ್ಯ ಮಾರಾಟ ನಿಷೇಧ ಜಾರಿಗೊಳಿಸಲಾಗಿದೆ. ಈ ಕುರಿತು ಮಂಗಳೂರು ನಗರ ಪೊಲೀಸ್ … Continued

ಭಾರತದಲ್ಲಿ ಈ ಕೋವಿಡ್‌ ರೂಪಾಂತರಿಯಿಂದ ಉಲ್ಬಣದ ಸಾಧ್ಯತೆ ಕಡಿಮೆ: ಚೀನಾದಲ್ಲಿ ಕೋವಿಡ್‌ ಉಲ್ಬಣಕ್ಕೆ BF.7 ರೂಪಾಂತರಿ ಬಗ್ಗೆ ವೈರಾಲಜಿಸ್ಟ್‌ ಡಾ.ಗಗನ್‌ದೀಪ್ ಕಾಂಗ್

ಚೀನಾದಲ್ಲಿ ಕೋವಿಡ್-19 ಪ್ರಕರಣಗಳ ಉಲ್ಬಣದ ಹಿಂದಿನ ಕೋವಿಡ್‌ ರೂಪಾಂತರಗಳಾದ XBB ಮತ್ತು BF.7 ಕೆಲ ಸಮಯದಿಂದ ಭಾರತದಲ್ಲಿವೆ ಮತ್ತು ಅವುಗಳಿಂದ ಹೊಸ ಪ್ರಕರಣಗಳ ಅಲೆಯನ್ನು ಭಾರತದಲ್ಲಿ ನಿರೀಕ್ಷಿಸಲಾಗುವುದಿಲ್ಲ ಎಂದು ವೈರಾಲಜಿಸ್ಟ್ ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಜಠರಗರುಳಿನ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಗಗನ್‌ದೀಪ್ ಕಾಂಗ್ ಹೇಳಿದ್ದಾರೆ. ಸರಣಿ ಟ್ವೀಟ್‌ಗಳಲ್ಲಿ, ಭಾರತದಲ್ಲಿ ಪರಿಸ್ಥಿತಿ ಆತಂಕಕಾರಿಯಾಗಿಲ್ಲ … Continued

ಧಾರವಾಹಿ ಸೆಟ್‌ನಲ್ಲಿ 20 ವರ್ಷದ ನಟಿ ತುನಿಶಾ ಶರ್ಮಾ ಸಾವಿನ ಪ್ರಕರಣ : ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ, ಸಹ ನಟನ ಬಂಧನ

ಮುಂಬೈ: ದೂರದರ್ಶನ ನಟಿ 20 ವರ್ಷದ ತುನಿಶಾ ಶರ್ಮಾ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಎಂಬಲ್ಲಿ ಧಾರಾವಾಹಿಯೊಂದರ ಸೆಟ್‌ನಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಅವರ ಸಹ ನಟ ಶೀಜಾನ್ ಮೊಹಮ್ಮದ್ ಖಾನ್ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಬಂದಿದೆ. ಪೊಲೀಸರು   ಶೀಜಾನ್ ಮೊಹಮ್ಮದ್ ಖಾನ್ ಅನ್ನು ಭಾರತೀಯ ದಂಡ ಸಂಹಿತೆಯ … Continued

ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಕೆಂಪಣ್ಣ ಬಂಧನ

ಬೆಂಗಳೂರು: ಬಿಜೆಪಿ (BJP) ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರನ್ನು ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹಾಗೂ ಇತರ 18 ಮಂದಿ ಗುತ್ತಿಗೆದಾರರ … Continued

5, 8ನೇ ತರಗತಿ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಯಾರನ್ನೂ ಅನುತ್ತೀರ್ಣ ಮಾಡಲ್ಲ: ಸಚಿವ ನಾಗೇಶ

ತುಮಕೂರು: ಇದೇ ಮೊದಲ ಬಾರಿಗೆ ರಾಜ್ಯದಲ್ಲಿ 5ನೇ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತಿದ್ದು, ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣ (ಫೇಲ್) ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ರುಪ್ಸಾ ಸಂಘಟನೆಯಿಂದ ಹಮ್ಮಿಕೊಂಡಿದ್ದಂತ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಮೌಲ್ಯ ಮಾಪನ ಉದ್ದೇಶದಿಂದ … Continued

ಮಂಡ್ಯದಲ್ಲಿ ಡಿಸೆಂಬರ್‌ 30ರಂದು ಬಿಜೆಪಿ ಸಮಾವೇಶ : ಅಮಿತ್ ಶಾ ಆಗಮನ

ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಕಮಲ ಅರಳಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಡಿಸೆಂಬರ್‌ 30ರಂದು ಮಂಡ್ಯದಲ್ಲಿ ಸಮಾವೇಶ ಆಯೋಜಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿದ್ದಾರೆ. ಮನ್‍ಮುಲ್‍ನ ಮೆಗಾ ಡೈರಿ ಉದ್ಘಾಟನೆಯನ್ನು ಅಮಿತ್ ಶಾ ನೆರವೇರಿಸುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂಡ್ಯಕ್ಕೆ ಬರುತ್ತಿರುವ ಅಮಿತ್ ಶಾ ಪಕ್ಷದ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ. ಮಂಡ್ಯದ ಬಾಲಕರ ಕಾಲೇಜು … Continued

ಉತ್ತರಾಖಂಡ: ‘ಮತಾಂತರ’ ಆರೋಪದ ಮೇಲೆ ಕ್ರಿಸ್‌ಮಸ್ ಆಚರಣೆಗೆ ಅಡ್ಡಿಪಡಿಸಿದ ಗುಂಪು

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಪುರೋಲಾ ಗ್ರಾಮದಲ್ಲಿ ಶುಕ್ರವಾರ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಬಲವಂತದ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಕನಿಷ್ಠ 30 ಯುವಕರ ತಂಡವೊಂದು ದೊಣ್ಣೆ ಹಿಡಿದು ದಾಳಿ ನಡೆಸಿದೆ ಎಂದು ವರದಿಯಾಗಿದೆ. ಹಿಂದೂ ಸಂಘಟನೆಯೆಂದು ಹೇಳಿಕೊಳ್ಳುವ ವ್ಯಕ್ತಿಗಳಿಂದ ಹಲ್ಲೆಗೊಳಗಾದ ಪಾಸ್ಟರ್ ಲಾಜರಸ್ ಕಾರ್ನೆಲಿಯಸ್ ಮತ್ತು ಅವರ ಪತ್ನಿ ಸುಷ್ಮಾ ಕಾರ್ನೇಲಿಯಸ್ ಸೇರಿದಂತೆ ಆರು ಜನರನ್ನು … Continued

ನೋಂದಾಯಿತ ಕಟ್ಟಡ -ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಹೊಸ ಬಸ್‌ ಪಾಸ್‌ ವಿತರಣೆ

ಹುಬ್ಬಳ್ಳಿ : ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಡಿಸೆಂಬರ್‌ 23ರಿಂದ ಮೂರು ತಿಂಗಳ ಅವಧಿಗಾಗಿ ಉಚಿತ ಹೊಸ ಪಾಸುಗಳನ್ನು ವಿತರಿಸಲು ಪ್ರಾರಂಭಿಸಿದ್ದು, ಈ ಪಾಸುಗಳನ್ನು ಪಡೆದು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ರಾಜ್ಯಾದ್ಯಂತ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಬಸ್‌ ಪಾಸ್ ಯೋಜನೆಯನ್ನು ರಾಜ್ಯ … Continued

ಫೆಬ್ರವರಿಯಲ್ಲಿ ರಾಜ್ಯ ಬಜೆಟ್ ಮಂಡನೆ : ಸಿಎಂ ಬೊಮ್ಮಾಯಿ

ಹಾವೇರಿ: 2023-24ನೇ ಸಾಲಿನ ರಾಜ್ಯ ಬಜೆಟ್ 2023ರ ಫೆಬ್ರವರಿಯಲ್ಲಿ ಮಂಡನೆಯಾಗಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಹಣಕಾಸು ಇಲಾಖೆಯೊಂದಿಗೆ ಎರಡು ಸುತ್ತಿನ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಳಗಾವಿ ಅಧಿವೇಶನದ ನಂತರ ಎಲ್ಲಾ ಇಲಾಖೆಗಳು ಮತ್ತು ಸಂಘ/ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುವುದು. ಮುಂದಿನ ತಿಂಗಳು ಬಜೆಟ್ ಪೂರ್ವ ಸಭೆಗೆ ಸಿದ್ಧತೆ ಆರಂಭಿಸಲಾಗುವುದು ಎಂದು ಅವರು … Continued

ತನ್ನ ಕಾರ್ಯಕ್ರಮದ ಸೆಟ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡ 20 ವರ್ಷದ ನಟಿ ತುನಿಶಾ ಶರ್ಮಾ

ಮುಂಬೈ: 20 ವರ್ಷ ವಯಸ್ಸಿನ ನಟಿ ತುನಿಶಾ ಶರ್ಮಾ ಅವರು ತಮ್ಮ ಟಿವಿ ಕಾರ್ಯಕ್ರಮದ ಸೆಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ನಟಿ ಮೇಕಪ್ ರೂಂ ಒಂದರಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ನಟಿ ಸತ್ತಿದ್ದಾರೆ ಎಂದು ಘೋಷಿಸಲಾಯಿತು ವರದಿಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ಸೆಟ್‌ನಲ್ಲಿ … Continued