ಉತ್ತರ ಪ್ರದೇಶ: ಒಬಿಸಿ ಮೀಸಲಾತಿ ಇಲ್ಲದೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ

ಲಕ್ನೊ: ಉತ್ತರ ಪ್ರದೇಶ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯನ್ನು ಅಲಹಾಬಾದ್ ಹೈಕೋರ್ಟ್ ಮಂಗಳವಾರ ರದ್ದುಗೊಳಿಸಿದೆ ಮತ್ತು ಒಬಿಸಿ ಮೀಸಲಾತಿ ಇಲ್ಲದೆ ಚುನಾವಣೆಯನ್ನು ನಡೆಸುವಂತೆ ಆದೇಶಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗಾಗಿ ಡಿಸೆಂಬರ್ 5 ರಂದು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ … Continued

ಕರ್ನಾಟಕದ 865 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರ್ಪಡೆ ವಿಚಾರ: ಕೇಂದ್ರ ಸರ್ಕಾರ ಒತ್ತಾಯಿಸುವ ನಿರ್ಣಯಕ್ಕೆ ಮಹಾರಾಷ್ಟ್ರದ ವಿಧಾನಸಭೆ ಅಂಗೀಕಾರ

ನಾಗ್ಪುರ : ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಭಾಲ್ಕಿ ಸಹಿತ ಕರ್ನಾಟಕದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಇಂದು ಮಂಗಳವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿರುವ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಲಾಯಿತು. ಅಧಿವೇಶನದಲ್ಲಿ ಗಡಿವಿವಾದ ಕುರಿತು ಚರ್ಚೆ ನಡೆಯಿತು. ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಕರ್ನಾಟಕದ ಗಡಿಭಾಗದಲ್ಲಿ … Continued

ಮೈಸೂರು: ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ; ಪ್ರಹ್ಲಾದ ಮೋದಿ, ಪುತ್ರ, ಸೊಸೆಗೆ ಗಾಯ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ ಮೋದಿ ಕುಟುಂಬ ಸಮೇತವಾಗಿ ಪ್ರಯಾಣಿಸುತ್ತಿದ್ದ ಕಾರು ಮೈಸೂರಿನ ಕಡಕೊಳ‌ ಬಳಿ ಮಂಗಳವಾರ ಮಧ್ಯಾಹ್ನ ಅಪಘಾತ ಅಪಘಾತಕ್ಕೀಡಾಗಿದೆ. ಪ್ರಹ್ಲಾದ ಮೋದಿ, ಅವರ ಪುತ್ರ ಹಾಗೂ ಸೊಸೆಗೆ ಗಾಯಗಳಾಗಿವೆ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕರ್ನಾಟಕಕ್ಕೆ ಪ್ರವಾಸಕ್ಕೆ ಬಂದಿದ್ದ ಪ್ರಹ್ಲಾದ ಮೋದಿ, ಮೈಸೂರಿನಿಂದ ಚಾಮರಾಜನಗರದ ಬಂಡೀಪುರಕ್ಕೆ (Bandipur) ತೆರಳುತ್ತಿದ್ದರು. ಪ್ರಹ್ಲಾದ್ ಮೋದಿ … Continued

ಹೊನ್ನಾವರ: ಮಹಿಳೆಯ ಮೊಬೈಲ್ ಹ್ಯಾಕ್‌ ಮಾಡಿ ಅಶ್ಲೀಲವಾಗಿ ಫೋಟೋ ಎಡಿಟ್‌ ಮಾಡಿದ ಪ್ರಕರಣ, ಚಂದಾವರ ವ್ಯಕ್ತಿ ಬಂಧಿಸಿದ ಹರ್ಯಾಣ ಪೊಲೀಸರು

ಹೊನ್ನಾವರ: ಹರ್ಯಾಣದ ಮಹಿಳೆಯೊಬ್ಬಳ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿ ಅವಳ ಫೋಟೋಗಳನ್ನು ಎಡಿಟ್ ಮಾಡಿ ಅವಳ ಮೊಬೈಲ್ ಸಂಖ್ಯೆಯಿಂದಲೇ ಆಕೆಯ ಸ್ನೇಹಿತರಿಗೆ ಕಳುಹಿಸಿ ಮಾನಹಾನಿ ಮಾಡುತ್ತಿದ್ದ ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣಾ ಪೊಲೀಸರು ಉತ್ತರ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರದ ಇಮಾದ್‌ (ಇಮ್ದಾದ್‌)  ಸಾಬ್ ಮುಲ್ಲಾ ಎಂಬ … Continued

ಭಾರತ ಬಯೋಟೆಕ್‌ನ ಮೂಗಿನ ಲಸಿಕೆ ದರ ಅಂದಾಜು 800 ರೂ.

ನವದೆಹಲಿ: ಭಾರತ ಬಯೋಟೆಕ್‌ನ ಇಂಟ್ರಾನಾಸಲ್ ಲಸಿಕೆ iNCOVACCನ ಒಂದು ಡೋಸ್ ಅನ್ನು ಕಳೆದ ವಾರ ಭಾರತದ ಕೋವಿಡ್ -19 ಇಮ್ಯುನೈಸೇಶನ್ ಪ್ರೋಗ್ರಾಂಗೆ ಸೇರಿಸಲು ಅನುಮೋದಿಸಲಾಗಿದೆ, ಖಾಸಗಿ ಆಸ್ಪತ್ರೆಗಳಲ್ಲಿ ಇದರ ದರ 5%ರಷ್ಟು ಜಿಎಸ್‌ಟಿ ಹೊರತುಪಡಿಸಿ ತಲಾ 800 ರೂಪಾಯಿ ಆಗಬಹುದು ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರವು ಮೂಗಿನ ಲಸಿಕೆಯನ್ನು ಅನುಮೋದಿಸಿದೆ. ಇದನ್ನು ಹೆಟೆರೊಲಾಜಸ್ ಬೂಸ್ಟರ್ … Continued

ಆಸ್ಪತ್ರೆಯ ಐಸಿಯುವಿನಲ್ಲಿ ಮದುವೆಯಾಗಿ ಅಸ್ವಸ್ಥ ತಾಯಿಯ ಕೊನೆಯ ಆಸೆ ಈಡೇರಿಸಿದ ಮಗಳು : ಹೃದಯಸ್ಪರ್ಶಿ ವೀಡಿಯೊ ವೈರಲ್‌

ಗಯಾ: ಅತ್ಯಂತ ಭಾವನಾತ್ಮಕ ಮತ್ತು ಹೃದಯಸ್ಪರ್ಶಿ ಘಟನೆಯೊಂದರಲ್ಲಿ, ಬಿಹಾರದ ಗಯಾದ ಯುವತಿಯೊಬ್ಬರು ತಮ್ಮ ತೀವ್ರ ಅಸ್ವಸ್ಥರಾಗಿರುವ ತಾಯಿಯ ಕೊನೆಯ ಆಸೆಯನ್ನು ಪೂರೈಸಿದ್ದಕ್ಕಾಗಿ ಎಲ್ಲೆಡೆಯಿಂದ ಪ್ರಶಂಸೆ ಗಳಿಸುತ್ತಿದ್ದಾರೆ. ಯುವತಿಯ ತಾಯಿಯ ಕೊನೆಯ ಆಸೆ ತನ್ನ ಮುಂದೆ ತನ್ನ ಮಗಳನ್ನು ಮದುವೆಯಾಗುವುದನ್ನು ನೋಡಬೇಕು ಎಂಬುದು. ಅದು ಅಕ್ಷರಶಃ ಈಡೇರಿತು. ತನ್ನ ತಾಯಿ ದಾಖಲಾಗಿದ್ದ ಖಾಸಗಿ ಆಸ್ಪತ್ರೆಯೊಂದರ ಐಸಿಯು ಹೊರಗೆ … Continued

ತಂತಿ ಬೇಲಿ ಮೇಲೆ ಜಿಗಿದು ಕಾರಿನ ಮೇಲೆ ದಾಳಿ ಮಾಡಿದ ಚಿರತೆ : ದಾಳಿಗೆ 3 ಅರಣ್ಯ ಸಿಬ್ಬಂದಿ ಸೇರಿ 13 ಮಂದಿಗೆ ಗಾಯ | ವೀಕ್ಷಿಸಿ

ಅಸ್ಸಾಂನ ಜೋರ್ಹತ್ ಜಿಲ್ಲೆಯಲ್ಲಿ ಸೋಮವಾರ ಚಿರತೆ ದಾಳಿಗೆ ಮೂವರು ಅರಣ್ಯ ಸಿಬ್ಬಂದಿ ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳ ಪ್ರಕಾರ, ಚೆನಿಜಾನ್‌ನಲ್ಲಿರುವ ರೈನ್ ಫಾರೆಸ್ಟ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಐಸಿಎಫ್‌ಆರ್‌ಇ) ಸುತ್ತಮುತ್ತ ಈ ಘಟನೆ ನಡೆದಿದೆ. ಚಿರತೆ ಇನ್ಸ್ಟಿಟ್ಯೂಟಿನ ಅರಣ್ಯದಿಂದ ಹೊರಬಂದು ಯಾವುದೇ ಪ್ರಚೋದನೆಯಿಲ್ಲದೆ ಜನರ ಮೇಲೆ ದಾಳಿ ಮಾಡಲು … Continued

ಫಾರ್ಮಾ ಕಂಪನಿ ಲ್ಯಾಬ್‌ನಲ್ಲಿ ಬೆಂಕಿ ಅನಾಹುತ : 4 ಮಂದಿ ಸಾವು, ಒಬ್ಬರಿಗೆ ಗಾಯ

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಅನಕಾಪಲ್ಲಿಯಲ್ಲಿರುವ ಪರವಾಡ ಲಾರಸ್ ಫಾರ್ಮಾ ಲ್ಯಾಬ್ಸ್ ಲಿಮಿಟೆಡ್ ಕಂಪನಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸೋಮವಾರ ತಡರಾತ್ರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾರ, ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಿರ್ವಹಣಾ ಕಾಮಗಾರಿ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. … Continued

ಹಿಮ ಚಂಡಮಾರುತಕ್ಕೆ ಅಮೆರಿಕದಲ್ಲಿ ಸಾವಿನ ಸಂಖ್ಯೆ 60ಕ್ಕೆ ಏರಿಕೆ : 15000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು

ಪಟ್ಟುಬಿಡದ ಬಾಂಬ್‌ ಚಂಡಮಾರುತ ಎಂದೇ ಕರೆಯಲ್ಪಡುವ ‘ಶತಮಾನದ ಹಿಮಪಾತ’ ಎಂದು ಅಧಿಕಾರಿಗಳು ಹೇಳಿರುವ ಹಿಮ ಗಾಳಿಯು ಕ್ರಿಸ್‌ಮಸ್ ವಾರಾಂತ್ಯದಲ್ಲಿ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಜನಜೀವನದ ಪಾರ್ಶ್ವವಾಯುವಿಗೆ ಕಾರಣವಾಯಿತು. ಈವರೆಗೆ, ಹಿಮ ಚಂಡಮಾರುತಕ್ಕೆ ನ್ಯೂಯಾರ್ಕ್‌ನಲ್ಲಿ 27 ಜನರು ಸೇರಿದಂತೆ ಅಮೆರಿಕದಾದ್ಯಂತ ಕನಿಷ್ಠ 60 ಜನರು ಸಾವಿಗೀಡಾಗಿದ್ದಾರೆ. ಅಮೆರಿಕದಾದ್ಯಂತ 15,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಬಫಲೋ ಸುತ್ತಮುತ್ತಲಿನ ಹಿಮದಿಂದ … Continued

ಕೋವಿಡ್‌-19: ಚೀನಾ ‘ಕೊರೊನಾ ಉಲ್ಬಣʼ ಎದುರಿಸುತ್ತಿರುವಾಗ ಇದೇ ಮೊದಲ ಬಾರಿಗೆ ಮಾತನಾಡಿದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೋಮವಾರ (ಡಿಸೆಂಬರ್ 26) ದೇಶದಲ್ಲಿ ಪ್ರಸ್ತುತ ಕೊರೊನಾ ವೈರಸ್ (COVID-19) ಪರಿಸ್ಥಿತಿಯ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ರಾಷ್ಟ್ರವು ಕೆಲವು ಕಠಿಣ ಕ್ರಮಗಳನ್ನು ಸರಾಗಗೊಳಿಸಿದ ನಂತರ ಚೀನಾ ಕೋವಿಡ್ ಪ್ರಕರಣಗಳ ಹೊಸ ಅಲೆಯೊಂದಿಗೆ ಹೋರಾಡುತ್ತಿದೆ. ಜೀವಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕ್ಸಿ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. … Continued