ಜೈಲು ವಾರ್ಡನ್‌ಗೆ ಮೂವರು ಸಹೋದ್ಯೋಗಿಗಳಿಂದ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿತ : ದೃಶ್ಯ ಸಿಸಿಟಿಯಲ್ಲಿ ಸೆರೆ…ಕಾರಣ ಇಲ್ಲಿದೆ

ರಾಯಬರೇಲಿ: ಉತ್ತರ ಪ್ರದೇಶದ ಜೈಲು ವಾರ್ಡನ್‌ಗೆ ಆತನ ಸಹೋದ್ಯೋಗಿಗಳು ಅಮಾನುಷವಾಗಿ ಥಳಿಸಿದ್ದಾರೆ. ಈಗ ಇವರೆಲ್ಲರನ್ನು ಉತ್ತರ ಪ್ರದೇಶದ ರಾಯ್ಬರೇಲಿಯ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಆಹಾರದ ಅವ್ಯವಸ್ಥೆ ಬಗ್ಗೆ ಉಂಟಾದ ವಾದ ವಿವಾದವು ಉತ್ತರ ಪ್ರದೇಶದ ಜೈಲು ವಾರ್ಡನ್‌ಗೆ ಅವರ ಸಹೋದ್ಯೋಗಿಗಳು ತೀವ್ರವಾಗಿ ಥಳಿಸಲು ಕಾರಣವಾಯಿತು. ಜೈಲ್‌ ವಾರ್ಡನ್‌ ಅವರು ತಮ್ಮ ಕ್ಯಾಂಟೀನ್ ವ್ಯವಹಾರಕ್ಕೆ ಹಾನಿ ಮಾಡುತ್ತಿದ್ದಾರೆ … Continued

ಜಮ್ಮು-ಕಾಶ್ಮೀರದ ಸಿದ್ರಾದಲ್ಲಿ ಎನ್‌ಕೌಂಟರ್‌ನಲ್ಲಿ 3 ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಿದ್ರಾದಲ್ಲಿ ಅಡಗಿಕೊಂಡಿದ್ದ ಮೂವರು ಭಯೋತ್ಪಾದಕರು ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ. ಗುಂಡಿನ ಚಕಮಕಿ ನಡೆದಾಗ ಟ್ರಕ್‌ನಲ್ಲಿ ಭಯೋತ್ಪಾದಕರು ಇದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಎಡಿಜಿಪಿ ಹೇಳಿದ್ದಾರೆ. ಇದೀಗ ಮೂವರೂ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಎನ್‌ಕೌಂಟರ್ ಸ್ಥಳದಿಂದ ಒಬ್ಬ ಭಯೋತ್ಪಾದಕನ ಶವವನ್ನು ಹೊರತೆಗೆಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ … Continued

ಈ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ದೇಶದ ಒಟ್ಟು ಸಾಲ 147 ಲಕ್ಷ ಕೋಟಿ ರೂ.ಗಳಿಗೆ ಏರಿಕೆ : ಸರ್ಕಾರದ ವರದಿ

ನವದೆಹಲಿ: ಸಾರ್ವಜನಿಕ ಸಾಲದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸರ್ಕಾರದ ಸಾಲವು ಜೂನ್‌ನಲ್ಲಿ 145.72 ಲಕ್ಷ ಕೋಟಿ ರೂಪಾಯಿಗಳಿಂದ ಈ ಹಣಕಾಸು ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು 147.19 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಸಾಲ ನಿರ್ವಹಣೆಯ ಕುರಿತು ನಿಯಮಿತವಾಗಿ ತ್ರೈಮಾಸಿಕ ವರದಿಯನ್ನು ಹೊರತರುವ ಬಜೆಟ್ ವಿಭಾಗದ ಸಾರ್ವಜನಿಕ ಸಾಲ ನಿರ್ವಹಣಾ ಕೋಶ (ಪಿಡಿಎಂಸಿ) ಮಂಗಳವಾರ ತನ್ನ … Continued

ಗಡಿ ವಿವಾದ: ಮಹಾರಾಷ್ಟ್ರ ನಿರ್ಣಯಕ್ಕೆ ಸಿಎಂ ಬೊಮ್ಮಾಯಿ ಖಂಡನೆ

ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದ ನಿರ್ಣಯವನ್ನು ಖಂಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳವಾರ ಸುವರ್ಣಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಪುನರ್ ರಚನಾ ಕಾಯ್ದೆ 1956 ರಲ್ಲಿ ರೂಪಿಸಿ ಇಷ್ಟು ವರ್ಷಗಳಾಗಿವೆ. ಎರಡೂ ಕಡೆಯ ಜನ ನೆಮ್ಮದಿಯಿಂದಿದ್ದಾರೆ. ಮಹಾರಾಷ್ಟ್ರದ ನಾಯಕರು ರಾಜಕಾರಣಕ್ಕಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ … Continued

ಭಾರತ -ಶ್ರೀಲಂಕಾ ಸರಣಿ : ಏಕದಿನದ ಸರಣಿಗೆ ಭಾರತ ತಂಡಕ್ಕೆ ಮರಳಿದ ರೋಹಿತ್ ಶರ್ಮಾ, ರಿಷಬ್ ಪಂತಗೆ ವಿಶ್ರಾಂತಿ

ನವದೆಹಲಿ: ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತದ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ವಿಕೆಟ್ ಕೀಪರ್‌ ರಿಷಬ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ವೇಗಿ ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಶ್ರೀಲಂಕಾ ಸರಣಿಗಾಗಿನ ಏಕ ದಿನ ಪಂದ್ಯಾವಳಿ(ODI)ಗೆ ತಂಡದಿಂದ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ಶುಭಮನ್ ಗಿಲ್ … Continued

ಜನವರಿ 2ರಿಂದ 50 ಲಕ್ಷ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಅಭಿಯಾನ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಳಗಾವಿ: ರಾಜ್ಯ ಬಿಜೆಪಿ ವತಿಯಿಂದ ಜನವರಿ 2ರಿಂದ ಜನವರಿ 12ರ ವರೆಗೆ ‘ಬೂತ್ ವಿಜಯ ಅಭಿಯಾನ’ ಆಯೋಜಿಸಲಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಬೆಳಗಾವಿ ಸುವರ್ಣ ಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಇಂದು, ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 58,156 … Continued

‘ಖಿನ್ನತೆಗೆ ಒಳಗಾದ’ ಪುತಿನ್ ಟೀಕಾಕಾರ ಒಡಿಶಾದ ಹೊಟೇಲಿನ 3ನೇ ಮಹಡಿಯಿಂದ ಬಿದ್ದು ಸಾವು ; ವಾರದಲ್ಲಿ 2ನೇ ರಷ್ಯಾ ಪ್ರವಾಸಿಗನ ಸಾವು

ನವದೆಹಲಿ: ಒಂದೇ ವಾರದಲ್ಲಿ ಒಡಿಶಾ ಹೋಟೆಲ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರ ಟೀಕಾಕಾರ ಸೇರಿದಂತೆ ರಷ್ಯಾದ ಪ್ರವಾಸಿಗರಿಬ್ಬರು ಸಾವಿಗೀಡಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. ಉಕ್ರೇನ್ ಯುದ್ಧದ ಬಗ್ಗೆ ರಷ್ಯಾದ ಅಧ್ಯಕ್ಷ ಪುತಿನ್ ಅವರನ್ನು ಟೀಕಿಸಿದ ರಷ್ಯಾದ ಶಾಸಕ ಪಾವೆಲ್ ಆಂಟೊವ್ ಅವರು ಒಡಿಶಾದ ರಾಯಗಡ ಪ್ರದೇಶದ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಷ್ಯಾದ ಸುದ್ದಿ … Continued

ಅತ್ತ ಮಹಾರಾಷ್ಟ್ರದಿಂದ ಗಡಿ ಠರಾವು ; ಇತ್ತ ಸಿಎಂ ಬೊಮ್ಮಾಯಿ ಭೇಟಿಗೆ ಬೆಳಗಾವಿಗೆ ಬಂದ ಮಹಾರಾಷ್ಟ್ರದ ಗಡಿ ಭಾಗದ ಕನ್ನಡಿಗರು

ಬೆಳಗಾವಿ: ನಾಗ್ಪುರದಲ್ಲಿ ನಡೆಯುತ್ತಿರುವ ಮಹಾರಾಷ್ಟ್ರ ವಿಧಾನ ಮಂಡಲದ ಅಧಿವೇಶನಲ್ಲಿ ಮಂಗಳವಾರ ಕರ್ನಾಟಕದ ಮಹಾರಾಷ್ಟ್ರ ಸರ್ಕಾರ ವಿರುದ್ಧ ಗಡಿ ಠರಾವು ಅಂಗೀಕರಿಸಿದೆ. ಕರ್ನಾಟಕದ 865 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಠರಾವು ವಿಧಾನಸಭೆಯಲ್ಲಿ ಅಂಗೀಕಾರವಾದರೆ ಇತ್ತ ಮಹಾರಾಷ್ಟ್ರಕ್ಕೆ ಸೇರಿರುವ ಜತ್ತ ತಾಲೂಕಿನ ಕನ್ನಡಿಗರು ಬೆಳಗಾವಿಗೆ ಆಗಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೂಲಕ ನೆರವಿಗೆ ಒತ್ತಾಯಿಸಿದ್ದಾರೆ. ಕರ್ನಾಟಕ … Continued

ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ

ಬೆಳಗಾವಿ: ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ವಿಧೇಯಕವು ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರವಾಯಿತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಂಡಿಸಿದ್ದ ವಿಧೇಯಕವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದ ಪರ್ಯಾಲೋಚನೆಗೆ ಹಾಕಿದರು. ನಂತರ ವಿಧೇಯಕವು ಧ್ವನಿಮತದ ಮೂಲಕ ಅಂಗೀಕಾರಗೊಂಡಿತು. ಬೆಂಗಳೂರು ಮಹಾನಗರದ ಭೂಸಾರಿಗೆ ಸಂಚಾರದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಒಂದೇ ಸಂಸ್ಥೆ … Continued

ಯಲ್ಲಾಪುರ: ಪಿಕ್ನಿಕ್‌ಗೆ ಹೋಗಿದ್ದ ವಿದ್ಯಾರ್ಥಿ ಗಂಗಾವಳಿ ನದಿಯಲ್ಲಿ ಮುಳುಗಿ ಸಾವು

ಯಲ್ಲಾಪುರ: ಶಾಲೆಯ ವತಿಯಿಂದ ಪಿಕ್ನಿಕ್‌ಗೆ ಹೋದ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಗಂಗಾವಳಿ ನದಿಯಲ್ಲಿ ಮುಳುಗಿ ಹೋಗಿ ಸಾವು ಕಂಡ ಧಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಗುಳ್ಳಾಪುರ ಸರ್ಕಾರಿ ಪ್ರೌಢಶಾಲೆಯ ಪ್ರಕಾಶ ವಿಠ್ಠು ಪಟಕಾರೆ (೧೬) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಗುಳ್ಳಾಪುರ ಸರ್ಕಾರಿ ಪ್ರೌಢಶಾಲೆಯ ಮಕ್ಕಳು … Continued