ಹರತಾಳದ ವೇಳೆ ಆದ ನಷ್ಟವನ್ನು ಪಿಎಫ್‌ಐನಿಂದ ವಸೂಲಿ ಮಾಡಲು ವಿಳಂಬ ಮಾಡುತ್ತಿರುವುದಕ್ಕೆ ಕೇರಳ ಹೈಕೋರ್ಟ್ ಅಸಮಾಧಾನ

ತಿರುವನಂತಪುರಂ: ಇದೀಗ ನಿಷೇಧವಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕರೆ ನೀಡಿದ್ದ ಹರತಾಳದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ರಾಜ್ಯದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಸಂಬಂಧಿಸಿದಂತೆ ವಸೂಲಾತಿಯಲ್ಲಿನ ವಿಳಂಬದ ಬಗ್ಗೆ ಕೇರಳ ಹೈಕೋರ್ಟ್ ಸೋಮವಾರ, ಡಿಸೆಂಬರ್ 19 ರಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಹಾಗೂ ವಸೂಲಾತಿಯನ್ನು 2023ರ ಜನವರಿಯೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು. … Continued

ತೆಲಂಗಾಣದಲ್ಲಿ ಯುವತಿ ‘ಅಪಹರಣ’ಕ್ಕೆ ಸಿನಿಮೀಯ ಟ್ವಿಸ್ಟ್: ತಾನು ಲವರ್‌ ಜೊತೆ ಓಡಿಹೋಗಿ ಮದುವೆಯಾದೆ ಎಂದ ಯುವತಿ

ತೆಲಂಗಾಣದಲ್ಲಿ 18 ವರ್ಷದ ಯುವತಿಯ “ಅಪಹರಣ” ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಯುವತಿಯೇ ತನ್ನ 24 ವರ್ಷದ ಗೆಳೆಯನೊಂದಿಗೆ ಓಡಿಹೋಗಲು ಅಪಹರಣದ ಡ್ರಾಮಾ ನಾಟಕ ರಚಿಸಿದ್ದಾಳೆ ಮತ್ತು ನಂತರ ಅವರು ದೇವಸ್ಥಾನದಲ್ಲಿ ಮದುವೆಯಾದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ನಾಲ್ವರು ಸೇರಿ ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದ ವೀಡಿಯೊ ಹೊರಬಿದ್ದ ಕೆಲವೇ ಗಂಟೆಗಳ ನಂತರ … Continued

ರಾಜಕೀಯ ಜಾಹೀರಾತುಗಳಿಗೆ ದೆಹಲಿ ಸರ್ಕಾರ ಖರ್ಚು ಮಾಡಿದ 97 ಕೋಟಿ ರೂ.ಗಳನ್ನು ಎಎಪಿಯಿಂದ ವಸೂಲಿ ಮಾಡಲು ದೆಹಲಿ ಎಲ್‌ಜಿ ಸೂಚನೆ

ನವದೆಹಲಿ : ಆಮ್ ಆದ್ಮಿ ಪಕ್ಷವು ಸರ್ಕಾರಿ ಜಾಹೀರಾತುಗಳ ಸೋಗಿನಲ್ಲಿ ಪ್ರಕಟಿಸಿದ ರಾಜಕೀಯ ಜಾಹೀರಾತುಗಳಿಗಾಗಿ 97 ಕೋಟಿ ರೂಪಾಯಿಗಳನ್ನು ಎಎಪಿಯಿಂದ ವಸೂಲಿ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ. ಇತ್ತೀಚಿನ ಆದೇಶದಲ್ಲಿ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು … Continued

ತಂದೆಯ ಸಮ್ಮುಖದಲ್ಲೇ ಮುಸುಕುಧಾರಿಗಳಿಂದ ತೆಲಂಗಾಣ ಯುವತಿ ಅಪಹರಣ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಮಂಗಳವಾರ (ಡಿಸೆಂಬರ್ 20) ಅಪರಿಚಿತ ವ್ಯಕ್ತಿಗಳು ಯುವತಿಯೊಬ್ಬಳನ್ನು ಅಪಹರಿಸಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಂದೂರ್ತಿ ಮಂಡಲದ ಮೂಡಪಲ್ಲಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ 5:20ರ ಸುಮಾರಿಗೆ ಯುವತಿ ಮತ್ತು ಆಕೆಯ ತಂದೆ ದೇವಸ್ಥಾನಕ್ಕೆ ಭೇಟಿ ನೀಡಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಸಿಸಿಟಿವಿ … Continued

ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ

ಬೆಳಗಾವಿ: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಇಂದು. ಮಂಗಳವಾರ ವಿಧಾನಪರಿಷತ್ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ , ಸಚಿವರಾದ ಜೆ.ಸಿ. ಮಾಧುಸ್ವಾಮಿ, ಗೋವಿಂದ ಕಾರಜೋಳ, ಸರ್ಕಾರದ ಮುಖ್ಯ ಸಚೇತಕ ವೈ.ಎನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಇದ್ದರು. … Continued

ಕಾಂಗ್ರೆಸ್ ಅಧ್ಯಕ್ಷರ “ನಾಯಿ” ಹೇಳಿಕೆಗೆ ಗದ್ದಲ : ಕ್ಷಮೆಯಾಚನೆಗೆ ಬಿಜೆಪಿ ಪಟ್ಟು, ನಿರಾಕರಿಸಿದ ಖರ್ಗೆ

ನವದೆಹಲಿ: ಆಡಳಿತಾರೂಢ ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಇಂದು, ಮಂಗಳವಾರ ಸಂಸತ್ತಿನಲ್ಲಿ ಭಾರಿ ಗದ್ದಲ ಉಂಟಾಯಿತು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯನ್ನು “ಭಾರತ್ ತೋಡೋ (ಭಾರತವನ್ನು ವಿಭಜಿಸಿ)” ಎಂದು ಲೇವಡಿ ಮಾಡಿದ್ದಕ್ಕಾಗಿ ಬಿಜೆಪಿಗೆ ತಿರುಗೇಟು ನೀಡುವ ಸಂದರ್ಭದಲ್ಲಿ ಮಲ್ಲುಕಾರ್ಜುನ ಖರ್ಗೆ ಮಾಡಿದ ಕಾಮೆಂಟ್ಈಗ … Continued

ಕಾರವಾರ: ಕಾರಿನಲ್ಲಿ ಬರುತ್ತಿದ್ದಾಗ ಬಾನೆಟ್‌ ಒಳಗೆ ನುಗ್ಗಿದ ಕಾಳಿಂಗ ಸರ್ಪ, 4 ತಾಸು ಕಾರ್ಯಾಚರಣೆ ನಂತರ ಕೊನೆಗೂ ಸೆರೆ | ವೀಕ್ಷಿಸಿ

ಕಾರವಾರ: ಕೈಗಾದಿಂದ ಬರುತ್ತಿದ್ದಾಗ ಕಾರಿನ ಬಾನೆಟ್‌ ಒಳಗೆ ಅಚಾನಕ್‌ ನುಗ್ಗಿ ಆತಂಕ ಸೃಷ್ಟಿಸಿದ್ದ ಕಾಳಿಂಗ ಸರ್ಪವನ್ನು ಅರಣಯ ಇಲಾಖೆ ಸಿಬ್ಬಂದಿ ನಾಲ್ಕು ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಅದನ್ನು ಕಾಡಿಗೆ ಬಿಟ್ಟ ವಿದ್ಯಮಾನ ವರದಿಯಾಗಿದೆ. ಕೈಗಾದಿಂದ ಕಾರವಾರದ ಮಲ್ಲಾಪುರಕ್ಕೆ ಜೈ ಸಿಂಗ್‌ ಎಂಬವರು ಕಾರಿನಲ್ಲಿ ಬರುತ್ತಿದ್ದರು. ಅವರು ಕುಚೇಗಾರ್‌ ಸಮೀಪ ಬರುತ್ತಿರುವಾಗ ಅಚಾನಕ್‌ … Continued

ಚೀನಾದಲ್ಲಿ ಕೋವಿಡ್ ಭಯಾನಕ : ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು-ಸ್ಮಶಾನಗಳು ; ಚೀನಾದ ಕೋವಿಡ್ ಸಂಕಟ, ಮತ್ತೆ ಜಾಗತಿಕ ಎಚ್ಚರಿಕೆಯ ಗಂಟೆ …!

ಬೀಜಿಂಗ್: ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿದ ನಂತರ, ಚೀನಾದಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರೀ ಏರಿಕೆಯನ್ನು ಕಾಣುತ್ತಿದೆ. ಚೀನಾದಲ್ಲಿ ಆಸ್ಪತ್ರೆಗಳು ಸಂಪೂರ್ಣವಾಗಿ ತುಂಬಿ ಹೋಗಿವೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಆರೋಗ್ಯ ಅರ್ಥಶಾಸ್ತ್ರಜ್ಞ ಎರಿಕ್ ಫೀಗಲ್-ಡಿಂಗ್ ವರದಿ ಮಾಡಿದ್ದಾರೆ. ಮುಂದಿನ 90 ದಿನಗಳಲ್ಲಿ ಚೀನಾದ ಶೇಕಡಾ 60ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ 10 ಪ್ರತಿಶತದಷ್ಟು … Continued

ಬೆಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್​​ನ ಮನೆಯೊಂದರಲ್ಲಿ ವಾಸವಾಗಿದ್ದ ತಾಯಿ, ಮಗಳು ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮಹಾಲಕ್ಷ್ಮಿ ಲೇಔಟ್​​​ನ ವೆಸ್ಟ್ ಆಪ್ ಕಾರ್ಡ್ ರಸ್ತೆಯಲ್ಲಿರುವ ಅಪಾರ್ಟ್​​ಮೆಂಟ್​​ನಲ್ಲಿ ಈ ಘಟನೆ ನಡೆದಿದ್ದು, ಯಶೋಧಾ(70), ಸುಮನ್(41), ನರೇಶ್ ಗುಪ್ತಾ(36) ಎಂಬ ತಾಯಿ, ಮಗಳು ಹಾಗೂ ಮಗ ಮೂವರು ಆತ್ಮಹತ್ಯೆಗೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ … Continued

ಫಿಫಾ ವಿಶ್ವಕಪ್ 2022 :ಅರ್ಜೆಂಟೀನಾ ಗೆಲುವನ್ನು ಮೊದಲೇ ಊಹಿಸಿದ ‘ಮಾರ್ಬಲ್ ಟೆಸ್ಟ್’ನ ಅಪರೂಪದ ವೀಡಿಯೊ ಹಂಚಿಕೊಂಡ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ | ವೀಕ್ಷಿಸಿ

ಭಾನುವಾರ ನಡೆದ 2022ರ ಫೀಫಾ (FIFA) ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾವು ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ಫ್ರಾನ್ಸ್ ಅನ್ನು 4-2 ಗೋಲುಗಳಿಂದ ಸೋಲಿಸಿತು. ಹೆಚ್ಚುವರಿ ಸಮಯದ ನಂತರ ಪಂದ್ಯವು 3-3 ರಲ್ಲಿ ಸಮವಾಯಿತು. ಲಿಯೋನೆಲ್ ಮೆಸ್ಸಿ ಎರಡು ಮತ್ತು ಫ್ರಾನ್ಸ್‌ನ ಕೈಲಿಯನ್ ಎಂಬಪ್ಪೆ ಹ್ಯಾಟ್ರಿಕ್ ಗೋಲು ಗಳಿಸಿದರು. ಲಿಯೋನೆಲ್ ಮೆಸ್ಸಿ ಅಂತಿಮವಾಗಿ ವಿಶ್ವಕಪ್ ಟ್ರೋಫಿಗೆ … Continued