ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ: ಬಿಜೆಪಿ-ಕಾಂಗ್ರೆಸ್‌-ಆಪ್‌ ಇವರಲ್ಲಿ ಗೆಲ್ಲುವವರು ಯಾರು..? ಆರಂಭಿಕ ಎಕ್ಸಿಟ್ ಪೋಲ್ ಭವಿಷ್ಯ ಇಲ್ಲಿದೆ

ನವದೆಹಲಿ: ಆರಂಭಿಕ ಮುನ್ಸೂಚನೆಗಳ ಪ್ರಕಾರ, ಸೋಮವಾರ ಸಮೀಕ್ಷೆಗಳು ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತದ ಭವಿಷ್ಯ ನುಡಿದಿವೆ. ಬಹುತೇಕ ಎಲ್ಲ ಸಮೀಕ್ಷೆಗಳು ಗುಜರಾತ್‌ನಲ್ಲಿ ಬಿಜೆಪಿಗೆ ಭರ್ಜರಿ ಜಯಸಿಗಲಿದೆ ಎಂದು ಹೇಳಿದ್ದರೆ ಬಹುತೇಕ ಸಮೀಕ್ಷೆಗಳು ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಲೀಡ್‌ ನೀಡಿದ್ದರೂ ಕಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಅಂತರವನ್ನು ಬಹಳ ಕಡಿಮೆ … Continued

ಆಸ್ತಿ ಕಬಳಿಕೆಗೆ ಯತ್ನ : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ವಿರುದ್ಧ ಖ್ಯಾತ ಗಾಯಕ ಲಕ್ಕಿ ಅಲಿ ಆರೋಪ

ಬೆಂಗಳೂರು: ತಮ್ಮ ಸ್ವಾಧೀನದಲ್ಲಿರುವ ಫಾರ್ಮ್‌ ಹೌಸ್‍ಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಅತಿಕ್ರಮವಾಗಿ ನುಗ್ಗಿ ಆಸ್ತಿ ಕಬಳಿಸಲು ಯತ್ನಿಸಿದ್ದಾರೆ ಎಂದು ಗಾಯಕ ಲಕ್ಕಿ ಆಲಿ ಆರೋಪಿಸಿದ್ದಾರೆ. ಖ್ಯಾತ ಹಿಂದಿ ನಟ ಮೊಹಮ್ಮದ್ ಆಲಿ ಅವರ ಪುತ್ರ ಲಕ್ಕಿ ಅಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸರಣಿ ಟ್ವೀಟ್‍ಗಳ ಮೂಲಕ ಈ ಬಗ್ಗೆ ದೂರಿದ್ದಾರೆ. ತುರ್ತು … Continued

ವಿದ್ಯಾರ್ಥಿಗಳ ಗಮನಕ್ಕೆ….ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ‌ಪ್ರಕಟ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ (SSLC Exam) ಅಂತಿಮ ವೇಳಾಪಟ್ಟಿಯನ್ನು ಪ್ರಕಟ ಮಾಡಿದೆ. ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆಗಳು ನಡೆಯಲಿದೆ. ಈಗಾಗಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ಪ್ರಕಟಿತ ಪಟ್ಟಿಗೆ … Continued

ಮತಗಟ್ಟೆಗೆ ತೆರಳಿ ಮತಚಲಾಯಿಸಿದ 100ನೇ ವರ್ಷಕ್ಕೆ ಕಾಲಿಟ್ಟಿರುವ ಪ್ರಧಾನಿ ಮೋದಿ ತಾಯಿ

ಗಾಂಧಿನಗರ; 2022ರ ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ಸಂದರ್ಭದಲ್ಲಿ 100 ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಸೋಮವಾರ ರೇಸಾನ್ ಗ್ರಾಮದ (ಗಾಂಧಿನಗರದ ಸಮೀಪ) ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಜೂನ್‌ನಲ್ಲಿ 100 ನೇ ವರ್ಷಕ್ಕೆ ಕಾಲಿಟ್ಟ ಹೀರಾಬೆನ್ – ಕುಟುಂಬ ಸದಸ್ಯರ ಸಹಾಯದಿಂದ … Continued

ಕನ್ನಡದ ಹಿರಿಯ ನಟ ಮನದೀಪ ರಾಯ್‌ಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಮನದೀಪ​ ರಾಯ್​ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಬೆಂಗಳೂರಿನ ಶೇಷಾದ್ರಿಪುರದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಮೂರು ದಿನಗಳ ಹಿಂದೆ ಹೃದಯಾಘಾತ ಸಂಭವಿಸಿದ್ದು, ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. 500ಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ಪಾತ್ರಗಳು ಹಾಗೂ ಹಾಸ್ಯ ಪಾತ್ರಗಳಲ್ಲಿ ನಟಿಸಿರುವ ಮನದೀಪ ರಾಯ್‌ ಅವರ ಆಪ್ತರು ಆಸ್ಪತ್ರೆಗೆ … Continued

ಕೋವಿಡ್ -19 ವೈರಸ್‌ ಮಾನವ ನಿರ್ಮಿತ ವೈರಸ್, ಪ್ರಯೋಗಾಲಯದಿಂದ ಸೋರಿಕೆ: ಹೊಸ ಪುಸ್ತಕದಲ್ಲಿ ಬಹಿರಂಗ ಪಡಿಸಿದ ವುಹಾನ್ ಲ್ಯಾಬ್‌ನಲ್ಲಿ ಕೆಲಸ ಮಾಡಿದ ವಿಜ್ಞಾನಿ

ನವದೆಹಲಿ: ಆಶ್ಚರ್ಯಕರವಾದ ಬಹಿರಂಗಪಡಿಸುವಿಕೆಯಲ್ಲಿ, ಚೀನಾದ ವುಹಾನ್‌ನ ವಿವಾದಾತ್ಮಕ ಸಂಶೋಧನಾ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ ಅಮೆರಿಕ ಮೂಲದ ವಿಜ್ಞಾನಿ, ಕೋವಿಡ್ -19 ವೈರಸ್‌ “ಮಾನವ ನಿರ್ಮಿತ ವೈರಸ್” ಹಾಗೂ ಅದು ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂದು ಹೇಳಿದ್ದಾರೆ ಎರಡು ವರ್ಷಗಳ ಹಿಂದೆ ಸರ್ಕಾರಿ ಮತ್ತು ಧನಸಹಾಯದ ಸಂಶೋಧನಾ ಸೌಲಭ್ಯವಾದ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಡಬ್ಲ್ಯುಐವಿ) ಯಿಂದ ಕೋವಿಡ್ … Continued

ಡ್ರಮ್‌ನಲ್ಲಿ ಮಹಿಳೆಯ ದೇಹದ ಭಾಗಗಳು ಪತ್ತೆ : ಒಂದು ವರ್ಷದ ಹಿಂದೆ ಕೊಲೆ ಮಾಡಿರುವ ಶಂಕೆ

ಹೈದರಾಬಾದ್: ಕಳೆದ ತಿಂಗಳು ದೆಹಲಿಯಲ್ಲಿ ತನ್ನ ಪ್ರೇಯಸಿ ಶ್ರದ್ಧಾ ವಾಕರ್ ಅವರನ್ನು ಕೊಂದು ದೇಹವನ್ನು 35 ಭಾಗಗಳಾಗಿ ಕತ್ತರಿಸಿದ ಆರೋಪದ ಮೇಲೆ ಅಫ್ತಾಬ್ ಅಮೀನ್ ಪೂನಾವಾಲಾನನ್ನು ಬಂಧಿಸಿದ ನಂತರ, ದೇಶಾದ್ಯಂತಇದೇ ರೀತಿಯ ಹಲವಾರು ಪ್ರಕರಣಗಳು ವರದಿಯಾಗಿವೆ. ಈಗ ಬೆಳಕಿಗೆ ಬಂದ ಮತ್ತೊಂದು ಪ್ರಕರಣವೊಂದರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೀಗ ಹಾಕಿದ ಬಾಡಿಗೆ ಮನೆಯೊಳಗೆ ಇರಿಸಲಾಗಿದ್ದ ಡ್ರಮ್‌ನಲ್ಲಿ ಮಹಿಳೆಯ … Continued

ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆ ಇಂದು

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಂದು ಸೋಮವಾರ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ಬೆಟ್ಟದ ಹನುಮ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಇಂದು(ಡಿಸೆಂಬರ್‌ 5) ಹನುಮ ಮಾಲಾಧಾರಿಗಳು ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳು, ಹೊರರಾಜ್ಯಗಳಿಂದ ಭಕ್ತರು ಭಾನುವಾರವೇ ಬಂದಿದ್ದಾರೆ. ಒಂದೂವರೆಯಿಂದ ಎರಡು ಲಕ್ಷ ಹನುಮ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಹೀಗಾಗಿ ಗಂಗಾವತಿ ನಗರದಿಂದ ನಡೆಯಲಿರುವ … Continued

2022ರಲ್ಲಿ ವಿದೇಶಗಳಲ್ಲಿರುವ ಭಾರತೀಯ ವಲಸೆ ಕಾರ್ಮಿಕರಿಂದ ಭಾರತಕ್ಕೆ ದಾಖಲೆ ಪ್ರಮಾಣದ 100 ಶತಕೋಟಿ ಡಾಲರ್‌ಗಳಷ್ಟು ಹಣ ರವಾನೆ : ವಿಶ್ವ ಬ್ಯಾಂಕ್ ವರದಿ

ನವದೆಹಲಿ: ಕಳೆದ ವಾರ ಬಿಡುಗಡೆಯಾದ ವಿಶ್ವಬ್ಯಾಂಕ್ ವರದಿಯ ಪ್ರಕಾರ, ಭಾರತದ ವಲಸೆ ಕಾರ್ಮಿಕರಿಂದ ಕಳುಹಿಸಲಾದ ಹಣವು ಈ ವರ್ಷ 12% ರಷ್ಟು ಹೆಚ್ಚಳಗೊಂಡು ದಾಖಲೆಯ $ 100 ಬಿಲಿಯನ್ ತಲುಪುವ ನಿರೀಕ್ಷೆಯಿದೆ. ಇದು ಮೆಕ್ಸಿಕೋ ($60 ಶತಕೋಟಿ), ಚೀನಾ ($51 ಶತಕೋಟಿ), ಫಿಲಿಪೈನ್ಸ್ ($38 ಶತಕೋಟಿ), ಈಜಿಪ್ಟ್ ($32 ಶತಕೋಟಿ) ಮತ್ತು ಪಾಕಿಸ್ತಾನ ($29 ಶತಕೋಟಿ) … Continued

ಮದುವೆ ಹಾರ ಬದಲಾಯಿಸಿದ ಕ್ಷಣಾರ್ಧದಲ್ಲಿ ಮಂಟಪದಲ್ಲೇ ಕುಸಿದುಬಿದ್ದು ಮದುಮಗಳು ಸಾವು

ಲಕ್ನೋ: ಶನಿವಾರ(ಡಿಸೆಂಬರ್ 3)ದಂದು ಲಕ್ನೋದ ಮಲಿಹಾಬಾದ್‌ನಲ್ಲಿ 21 ವರ್ಷದ ವಧು ವೇದಿಕೆಯಲ್ಲಿ ಹಾರ ವಿನಿಮಯದ ವೇಳೆ ಕುಸಿದುಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಹೃದಯಾಘಾತದಿಂದ ವಧು ಮೃತಪಟ್ಟಿದ್ದಾಳೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ. ಶುಕ್ರವಾರ ಸಂಜೆ ಲಕ್ನೋದ ಹೊರವಲಯದಲ್ಲಿರುವ ಮಲಿಹಾಬಾದ್‌ನ ಭದ್ವಾನಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವರದಿಗಳ ಪ್ರಕಾರ, ರಾಜ್‌ಪಾಲ್ ಅವರ ಮಗಳು 21 ವರ್ಷದ … Continued