ಯಲ್ಲಾಪುರ: ತೂಗು ಸೇತುವೆ ಮೇಲೆ ಕಾರು ಚಾಲನೆ, ದರ್ಪದ ವರ್ತನೆಗೆ ಸ್ಥಳೀಯರ ಆಕ್ಷೇಪ | ವೀಕ್ಷಿಸಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿವಪುರ ಗ್ರಾಮಕ್ಕೆ ಅಡ್ಡಲಾಗಿ ಕೊಟ್ಟಿರುವ ತೂಗು ಸೇತುವೆ ಮೇಲೆ ಅಪರಿಚಿತರು ಸೋಮವಾರ ಕಾರನ್ನು ಚಲಾಯಿಸಿಕೊಂಉ ಬಂದಿದ್ದಲ್ಲದೆ ಇದಕ್ಕೆ ಆಕ್ಷೇಪಿಸದ ಸ್ಥಳೀಯರ ಜೊತೆ ದರ್ಪ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ರೀತಿ ಬಂದವರನ್ನು ವಾಪಸ್‌ ಕಳುಹಿಸಿದ್ದಾರೆ. ಹಾಗೂ ಯಾವುದೇ ಕಾರಣಕ್ಕೂ ತೂಗು ಸೇತುವೆ ಮೇಲೆ ಕಾರು ಮೊದಲಾದ … Continued

ಯಡಿಯೂರಪ್ಪ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ವಿಧಿಸಿದ್ದ ತಡೆಯನ್ನು ವಿಸ್ತರಿಸಿದೆ ಹಾಗೂ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲು ಸೋಮವಾರ ಅನುಮತಿಸಿರುವ ಸುಪ್ರೀಂ ಕೋರ್ಟ್‌ ಕರ್ನಾಟಕ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ ಮತ್ತು ಹಿಮಾ … Continued

ವೈಯಕ್ತಿಕ ಕಾನೂನಿಗಿಂತ ಪೋಕ್ಸೊ ಕಾಯಿದೆ ಪ್ರಮುಖವಾದದ್ದು ಎಂದ ಕರ್ನಾಟಕ ಹೈಕೋರ್ಟ್

ಬೆಂಗಳೂರು: ಮೊಹಮ್ಮದೀಯ ವೈಯಕ್ತಿಕ ಕಾನೂನಿನ ಪ್ರಕಾರ ಹೆಣ್ಣು ಮಕ್ಕಳು ಮೈ ನೆರೆಯುವುದನ್ನು ವಿವಾಹಕ್ಕೆ ಪರಿಗಣಿಸಲಾಗುತ್ತದೆ. 15ನೇ ವಯಸ್ಸನ್ನು ಮೈನೆರೆಯುವ ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಬಾಲ್ಯ ವಿವಾಹ ತಡೆ ಕಾಯಿದೆ ಅಡಿ ಅದು ಅಪರಾಧವಲ್ಲ ಎಂಬ ವಾದವನ್ನು ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್‌, ವಿಶೇಷ ಕಾಯಿದೆಯಾದ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯಿದೆಯು (ಪೋಕ್ಸೊ ಕಾಯಿದೆ) ವೈಯಕ್ತಿಕ … Continued

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರಗಳಲ್ಲಿ ಇಳಿಕೆ

ನವದೆಹಲಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರತಿ ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 115.50 ರೂ ಕಡಿತಗೊಳಿಸಲಾಗಿದೆ. ಗಮನಾರ್ಹವಾಗಿ, ಇದು ಜೂನ್‌ನಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಘಟಕದ ಬೆಲೆಯಲ್ಲಿ ಏಳನೇ ಕಡಿತವಾಗಿದೆ. ಅಂತಾರಾಷ್ಟ್ರೀಯ ಇಂಧನ ಬೆಲೆಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದರ ಬೆಲೆಗಳಲ್ಲಿ ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯಲ್ಲಿನ ಕಡಿತವು ದೆಹಲಿಯಲ್ಲಿ … Continued

ಶರಾಬಿ ಕೋತಿ…: ಮದ್ಯದಂಗಡಿಗೆ ನುಗ್ಗಿ ಕ್ಯಾನ್‌ನಿಂದ ಗಟಗಟನೆ ಬೀಯರ್‌ ಕುಡಿಯುವ ಈ ಮಂಗ | ವೀಕ್ಷಿಸಿ

ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕೋತಿಯೊಂದು ಬಿಯರ್ ಕುಡಿಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ ಮಂಗವೊಂದು ಕ್ಯಾನ್‌ನಿಂದ ಬಿಯರ್ ಕುಡಿಯುತ್ತಿರುವುದು ಕಂಡು ಬಂದಿದೆ. ಈ ಕೋತಿ, ಹತ್ತಿರದ ವೈನ್ ಶಾಪ್‌ನಿಂದ ಪಾನೀಯಗಳನ್ನು ಖರೀದಿಸುವವರಿಂದ ಮದ್ಯವನ್ನು ಕಸಿದುಕೊಳ್ಳುತ್ತದೆ. ಆಜ್‌ ತಕ್ ವರದಿಗಳ ಪ್ರಕಾರ, ಅಂಗಡಿಯವನು ಕೋತಿಯ ವರ್ತನೆಯಿಂದ ಬೇಸತ್ತಿದ್ದಾನೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಕೋತಿಯು … Continued

ಭಾರತದ ಉಕ್ಕಿನ ಮನುಷ್ಯ ಖ್ಯಾತಿಯ ಜಮ್ಶೆಡ್ ಜೆ ಇರಾನಿ ನಿಧನ

ಜೆಮ್‌ಶೆಡ್‌ಪುರ: ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಜಮ್ಶೆಡ್ ಜೆ ಇರಾನಿ ಸೋಮವಾರ ತಡರಾತ್ರಿ ಜೆಮ್‌ಶೆಡ್‌ಪುರದಲ್ಲಿ ನಿಧನರಾಗಿದ್ದಾರೆ ಎಂದು ಟಾಟಾ ಸ್ಟೀಲ್ ತಿಳಿಸಿದೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಭಾರತದ ಉಕ್ಕಿನ ಮನುಷ್ಯ ನಿಧನರಾಗಿದ್ದಾರೆ. ಪದ್ಮಭೂಷಣ ಡಾ ಜಮ್ಶೆಡ್ ಜೆ ಇರಾನಿ ಅವರ ನಿಧನದ ಬಗ್ಗೆ ಟಾಟಾ ಸ್ಟೀಲ್ ತೀವ್ರ ದುಃಖದಿಂದ ತಿಳಿಸುತ್ತದೆ” ಎಂದು ಟಾಟಾ … Continued

ಪ್ರಪಂಚದಾದ್ಯಂತ ಇನ್ಸ್ಟಾಗ್ರಾಂನಲ್ಲಿ ಸಮಸ್ಯೆ : ಖಾತೆಗಳ ಅಮಾನತು ಸಂದೇಶ, ಫಾಲೋವರ್ಸ್‌ ಕಳೆದುಕೊಳ್ಳುತ್ತಿರುವ ಬಳಕೆದಾರರು…!

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‌ (WhatsApp) ಕೆಲವು ಗಂಟೆಗಳ ಕಾಲ ಸ್ಥಗಿತಗೊಂಡ ಕೆಲವೇ ದಿನಗಳಲ್ಲಿ, ಮೆಟಾ(Meta)ಮತ್ತೊಂದು ಅಪ್ಲಿಕೇಶನ್ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದೆ. ಪ್ರಪಂಚದಾದ್ಯಂತದ ಬಳಕೆದಾರರು ಇನ್ಸ್ಟಾಗ್ರಾಂ(Instagram)ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಹಲವಾರು ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ಟ್ವಿಟರ್ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ತಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ ಅಥವಾ ಅವರು ಅಪ್ಲಿಕೇಶನ್ ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ … Continued

ಕೋವಿಡ್ ನಿರ್ಬಂಧ: ಚೀನಾದ ಅತಿದೊಡ್ಡ ಐಫೋನ್ ಕಾರ್ಖಾನೆಯಿಂದ ಪಲಾಯನ ಮಾಡುತ್ತಿರುವ ಕಾರ್ಮಿಕರು | ವೀಕ್ಷಿಸಿ

ಅಕ್ಟೋಬರ್ 31 ರಂದು ಚೀನಾದಲ್ಲಿ ಕೋವಿಡ್ -19 ಪ್ರಕರಣಗಳು 2,500 ಕ್ಕೆ ಏರಿದೆ, ಇದು 80 ದಿನಗಳಲ್ಲಿ ಗರಿಷ್ಠ ಏಕದಿನ ಹೆಚ್ಚಳವನ್ನು ಫ್ಲ್ಯಾಗ್ ಮಾಡಿದೆ. ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ, ಆಪಲ್‌ನ ಐಫೋನ್ ಉತ್ಪಾದನಾ ಸೌಲಭ್ಯದಿಂದ ಸಾಮೂಹಿಕ ನಿರ್ಗಮನವನ್ನು ತೋರಿಸುವ ವೀಡಿಯೊಗಳು ಹೊರಹೊಮ್ಮಿವೆ. ನೂರಾರು ಕಾರ್ಮಿಕರು ಕಳಪೆ ಜೀವನ ಪರಿಸ್ಥಿತಿಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು … Continued

ಇಂದಿನಿಂದ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇಳಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 40 ಪೈಸೆ ಇಳಿಕೆಯಾಗಿದೆ. ಹೊಸ ಬೆಲೆಗಳು ಮಂಗಳವಾರ (ನವೆಂಬರ್ 1) ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಪೆಟ್ರೋಲ್ ಬೆಲೆ 96.72 ರೂ. ಮತ್ತು ಡೀಸೆಲ್ ದರ ಲೀಟರ್‌ಗೆ 89.62 ರೂ. ಇತ್ತು. ವಾಣಿಜ್ಯ ನಗರಿ ಮುಂಬೈನಲ್ಲಿ 106.31 ರೂ. ಮತ್ತು … Continued

ರಾಜ್ಯ ಸರ್ಕಾರದಿಂದ 8 ಐಎಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರವು ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಐಎಎಸ್ ಅಧಿಕಾರಿ ಶೆಟ್ಟೆಣ್ಣನವರ್ ಎಸ್. ಬಿ. ಅವರನ್ನು ಹಟ್ಟಿ ಗೋಲ್ಡ್ ಮೈನಿಂಗ್ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಮಂಜುನಾಥ್ ಜೆ ಅವರನ್ನು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಅನ್ನೀಸ್ ಕಣ್ಮಣಿ ಜೋಯ್ ಅವರನ್ನು ಬೆಂಗಳೂರಿನ ಕಮರ್ಷಿಯಲ್ ಟ್ಯಾಕ್ಸ್‌ನ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಿದೆ. ಚಾರುಲತಾ … Continued